
ಬೋರೆ ಆನಂದೂರು ಗ್ರಾಮದ ಶನಿವಾರೆಗೌಡ, ವೆಂಕಟೇಶ್ ಗೌಡ ಹಾಗು ಶ್ರೀನಿವಾಸಗೌಡ ಎಂಬುವವರ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಮನೆಗಳಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳದ ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಮೈಸೂರು ತಾಲ್ಲೂಕು ಇಲವಾಲ ಹೋಬಳಿ ಆನಂದೂರು ಗ್ರಾಮದಲ್ಲಿ ಬೆಂಕಿ ಅನಾಹುತ 3 ಮನೆಗಳು ಬೆಂಕಿಗೆ ಆಹುತಿ ಬೆಂಕಿಯ ನಾಲಿಗೆಗೆ ಮನೆಯಲ್ಲಿರುವ ದವಸ ಧಾನ್ಯ, ಬಟ್ಟೆ, ಪಾತ್ರೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿದ್ದಾರೆ

ಅಷ್ಟೇ ಅಲ್ಲದೆ ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ ಒಂದೊಂದು ಲಕ್ಷ ಪರಿಹಾರ ನೀಡಿದ ಶಾಸಕ ಜಿಟಿಡಿ ಘೋಷಣೆ ಮಾಡಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಸೆಸ್ಕಾಂ ಎಂ.ಡಿ. ಮುನಿಗೋಪಾಲ್ ರಾಜ್, ಎಸ್.ಸಿ.ಸುನೀಲ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಗಳೊಡನೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.





