ಬ್ಲ್ಯಾಕ್ ಟೀ ಹಲವಾರು ಆರೋಗ್ಯ ಪ್ರಯೋಜನಾಗಳನ್ನು ಹೊಂದಿದೆ. ಇದು ಸಮೃದ್ಧ ಉತ್ಕರ್ಷಣ ನಿರೋಧಕ (Rich Antioxidant) ಅಂಶ ಮತ್ತು ಇತರ ಪ್ರಯೋಜನಕಾರಿ ಸಂಯುಕ್ತಗಳಿಂದ ಕೂಡಿದೆ. ಬ್ಲ್ಯಾಕ್ ಟೀ ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ. ಮೆದುಳಿನ ಕಾರ್ಯ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಕೆಲವು ಕ್ಯಾನ್ಸರ್ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ: ಬ್ಲ್ಯಾಕ್ ಟೀ ಕುಡಿಯುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಇದು ಹೃದಯ ರೋಗಗಳ ಅಪಾಯವನ್ನು ಶೇ.50 ರಷ್ಟು ಕಡಿಮೆ ಮಾಡುತ್ತದೆ.
ಮಧುಮೇಹ ನಿಯಂತ್ರಣ: ಇನ್ಸುಲಿನ್ ಸಂವೇದನಾಶೀಲತೆಯನ್ನು ಈ ಬ್ಲ್ಯಾಕ್ ಟೀ ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿನ ರಕ್ತದಲ್ಲಿ ಇರುವ ಸಕ್ಕರೆಯ ಮಟ್ಟವನ್ನು ಬ್ಯಾಲೆನ್ಸ್ ಮಾಡುತ್ತದೆ.
ಮೆದುಳಿನ ಕಾರ್ಯಕ್ಕೆ ಒಳ್ಳೆಯದು: ಕೆಫಿನ್ ಮತ್ತು ಎಲ್-ಥೈನಿನ್ (L-theanine) ಈ ಎರಡು ನಮ್ಮಲ್ಲಿನ ಅರಿವು ಹಾಗೂ ಜಾಗರೂಕತೆಯನ್ನು ಹೆಚ್ಚು ಮಾಡುತ್ತವೆ.
ಜೀರ್ಣಕ್ರಿಯೆಗೆ ಉತ್ತಮ: ಬ್ಲ್ಯಾಕ್ ಟೀ ಅಲ್ಲಿ ಟ್ಯಾನಿನ್ಸ್ (Tannins) ಎಂಬ ರಾಸಾಯನಿಕವಿದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತೆ: ಬ್ಲ್ಯಾಕ್ ಚಹಾದಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತವೆ. ದೇಹವನ್ನು ಇತರೆ ಸೋಂಕುಗಳಿಂದ ಕಾಪಾಡುತ್ತವೆ.





