2038ರ ವೇಳೆಗೆ ವಿಶ್ವದ 2ನೇ ಆರ್ಥಿಕತೆ ರಾಷ್ಟ್ರವಾಗುವ ಭಾರತ!

ಸದ್ಯ ವಿಶ್ವದಲ್ಲಿ 4ನೇ ಆರ್ಥಿಕತೆ ರಾಷ್ಟ್ರವಾಗಿರುವ ಭಾರತ
2038ರ ವೇಳೆಗೆ ವಿಶ್ವದ 2ನೇ ಆರ್ಥಿಕತೆಯ ರಾಷ್ಟ್ರವಾಗುವ ಭಾರತ!
ಆರ್ನೆಸ್ಟ್ ಯಂಗ್ ಎಕಾನಮಿ ವಾಚ್ ವರದಿಯಲ್ಲಿ ಉಲ್ಲೇಖ
ಭಾರತವು 2030ರ ವೇಳೆಗೆ 20.7 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲಿದ್ದು, 2038ರ ವೇಳೆಗೆ 34.2 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಆರ್ನೆಸ್ಟ್ ಯಂಗ್ ಎಕಾನಮಿ ವಾಚ್ ಆಗಸ್ಟ್ 2025ರ ಆವೃತ್ತಿಯ ವರದಿಯಲ್ಲಿ ಹೇಳಿದೆ. ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲವಾಗಿವೆ. ಜೊತೆಗೆ ದೇಶದ ಜನಸಂಖ್ಯೆಯೂ ಆರ್ಥಿಕ ಬೆಳವಣಿಗೆಗೆ ಅನುಕೂಲಕಾರಿಯಾಗಿದೆ. ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಆರ್ಥಿಕ ಸ್ವರೂಪದ ಸುಧಾರಣೆಗಳು ದೀರ್ಘಕಾಲದ ಬೆಳವಣಿಗೆಗೆ ಪೂರಕವಾಗಿವೆ ಎಂಬುದನ್ನು ಈ ವರದಿಯೂ ಸೂಚಿಸುತ್ತದೆ.
ಇನ್ನೂ ಜನರಲ್ಲಿ ಹಣದ ಉಳಿತಾಯ ಮಟ್ಟ ಹೆಚ್ಚಾಗುತ್ತಿದೆ, ಹೂಡಿಕೆಯ ರೇಟ್ ಹೆಚ್ಚಾಗುತ್ತಿದೆ. ಸರ್ಕಾರದ ಸಾಲ- ಜಿಡಿಪಿ ಅನುಪಾತದಲ್ಲಿ 2024ರಲ್ಲಿರುವ ಶೇ.81 ಕ್ಕಿಂತ 2030ರ ವೇಳೆಗೆ ಶೇ.75.8 ಕ್ಕೆ ಕುಸಿಯಲಿದೆ. ಇನ್ನೂ ಮುಂದಿನ 13 ವರ್ಷದಲ್ಲಿ ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಅರ್ನೆಸ್ಟ್ ಯಂಗ್ ಎಕಾನಮಿ ವಾಚ್ ಹೇಳಿದೆ. 2038ರ ವೇಳೆಗೆ ಭಾರತವು ವಿಶ್ವದ 2ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಲಿದೆ ಎಂದು ಆರ್ನೆಸ್ಟ್ ಯಂಗ್ ಎಕಾನಮಿ ವಾಚ್ ಹೇಳಿದೆ.
ಈಗ ಭಾರತವು ವಿಶ್ವದಲ್ಲಿ 4.19 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಿದ್ದು, ವಿಶ್ವದಲ್ಲಿ 4ನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ.
2030 ರ ನಂತರ, ಭಾರತ ಮತ್ತು ಅಮೆರಿಕಗಳು 2028 -2030 ರ ಅವಧಿಯಲ್ಲಿ ಕ್ರಮವಾಗಿ ಶೇ. 6.5 ಮತ್ತು ಶೇ. 2.1 ರ ಸರಾಸರಿ ಬೆಳವಣಿಗೆ ದರಗಳನ್ನು ಕಾಯ್ದುಕೊಂಡರೆ (IMF ಮುನ್ಸೂಚನೆಗಳ ಪ್ರಕಾರ), ಭಾರತವು 2038 ರ ವೇಳೆಗೆ PPP ಪರಿಭಾಷೆಯಲ್ಲಿ ಅಮೆರಿಕದ ಆರ್ಥಿಕತೆಯನ್ನು ಮೀರಿಸಬಹುದು ಎಂದು ವರದಿ

Related Posts

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವಿಸ್ತೃತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಆಯುಕ್ತರ ನೇತೃತ್ವದಲ್ಲಿ ನಡೆದ ಈ ತಪಾಸಣೆಯಲ್ಲಿ 200ಕ್ಕೂ ಹೆಚ್ಚು ದಾಖಲೆರಹಿತ ವಿದೇಶಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಮೂಲದವರು ಹೆಚ್ಚಿದ್ದು, ಅಗತ್ಯ…

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಪ್ರಕಟಿಸಿದೆ. ಈ ಮೂಲಕ ಅನುಜ್‌ ಅಗ್ನಿಹೋತ್ರಿಗೆ ದೇಶಕ್ಕೆ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದ್ದಾರೆ. 2025ರ ಆಗಸ್ಟ್ ತಿಂಗಳಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗಳು ನಡೆದಿದ್ದವು. ಇದೀಗ…

You Missed

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ರಜತ್ ವಿರುದ್ಧ ಮತ್ತೊಂದು ಕೇಸ್‌ – ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ

ರಜತ್  ವಿರುದ್ಧ ಮತ್ತೊಂದು ಕೇಸ್‌ – ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!