ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ 7 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. 95 ರನ್ಗಳ ಸುಲಭ ಗುರಿ ಬೆನ್ನತ್ತಿದ ನಾಯಕ ರೋಹಿತ್ ಶರ್ಮಾ ಬಳಗ ಗೆಲುವು ಸಾಧಿಸಿತು. ಈ ಮೂಲಕ ಭಾರತ 2-0ದಿಂದ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿತು.
2ನೇ ಟೆಸ್ಟ್ ಆರಭವಾಗಿದ್ದ ವೇಳೆ 2 ದಿನ ಮಳೆಯಿಂದ ಪಂದ್ಯವನ್ನು ಸ್ಟಾಪ್ ಮಾಡಲಾಗಿತ್ತು. ಆದರೆ 4ನೇ ದಿನದಲ್ಲಿ ಟಿ20 ಶೈಲಿಯಲ್ಲಿ ಅಭಿಮಾನಿಗಳಿಗೆ ಭಾರತದ ಬ್ಯಾಟ್ಸ್ಮನ್ಗಳು ಮನರಂಜನೆ ನೀಡಿದರು. ಬಾಂಗ್ಲಾ ಮೊದಲ ಇನ್ನಿಂಗ್ಸ್ನಲ್ಲಿ 233 ರನ್ಗೆ ಆಲೌಟ್ ಆಗಿತ್ತು.

ಇನ್ನು ಭಾರತದ ಬ್ಯಾಟ್ಸ್ಮನ್ಗಳು ಮೊದಲ ಇನ್ನಿಂಗ್ಸ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿ 285 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿದ್ದರು. 2ನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾ 146 ರನ್ಗಳಿಗೆ ಆಲೌಟ್ ಆಗಿತ್ತು. ಇದರಿಂದ ಭಾರತಕ್ಕೆ 95 ರನ್ಗಳ ಟಾರ್ಗೆಟ್ ಫಿಕ್ಸ್ ಆಗಿತ್ತು. ಈ ಗುರಿ ಬೆನ್ನತ್ತಿದ ಭಾರತ ಗೆಲುವು ಸಾಧಿಸಿದೆ.





