ಖ್ಯಾತ ಗಾಯಕಿ ಆಶಾ ಭೋಸ್ಲೆ ಮೊಮ್ಮಗಳು, ಸಿರಾಜ್​ಗೆ ರಾಖಿ ಕಟ್ಟಿ್ದ್ದಾರೆ.. ಇದಕ್ಕೆ ಬಲವಾದ ಕಾರಣವಿದೆ.

ರಕ್ಷಾ ಬಂಧನ ಸಹೋದರ- ಸಹೋದರಿಯರ ಸಂಬಂಧ ಬೆಸೆಯುವಂತಹ ಪವಿತ್ರವಾದ ಹಬ್ಬವಾಗಿದೆ. ಸಹೋದರಿಯೂ ತನ್ನ ಸಹೋದರನಿಗೆ ಆಯಸ್ಸು, ಆರೋಗ್ಯ, ಸಮೃದ್ಧಿ ಎಲ್ಲವೂ ಸಿಗಲಿ ಎಂದು ಹಾರೈಸುವುದು ಆಗಿದೆ. ರಕ್ಷಾ ಬಂಧನದ ಹಿನ್ನೆಲೆ ಕ್ರಿಕೆಟರ್ಸ್​, ಸೆಲೆಬ್ರಿಟಿಗಳು ತಮ್ಮ ಸಹೋದರಿಯಿಂದ ರಾಖಿ ಕಟ್ಟಿಸಿಕೊಂಡು ಖುಷಿ ಪಟ್ಟಿದ್ದಾರೆ. ಅದರಂತೆ ಸ್ಟಾರ್ ಕ್ರಿಕೆಟರ್​ ಮೊಹಮ್ಮದ್ ಸಿರಾಜ್ ಕೂಡ ರಾಖಿ ಕಟ್ಟಿಕೊಳ್ಳುವ ಮೂಲಕ ಆ ವದಂತಿಗಳಿಗೆ ಅಂತಿಮ ತೆರೆ ಎಳೆದಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟ್​, ಪೇಸ್ ಬೌಲರ್ ಆಗಿರುವ ಮೊಹಮ್ಮದ್ ಸಿರಾಜ್ ಅವರಿಗೆ ಆಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ ಅವರು ರಾಖಿ ಕಟ್ಟಿ, ಸಿಹಿ ತಿನಿಸಿದ್ದಾರೆ. ಜನೈ ಭೋಸ್ಲೆ ಅವರು ಸಿರಾಜ್ ಅವರ ಕೈಗೆ ರಾಖಿ ಕಟ್ಟಿ, ಸಿಹಿ ತಿನಿಸಿರುವ ವಿಡಿಯೋ, ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಜನೈ ಭೋಸ್ಲೆ ವಿಶೇಷವಾದ ಟ್ಯಾಗ್​ಲೈನ್ ಬರೆದಿದ್ದಾರೆ.

ಉತ್ತಮವಾದದ್ದನ್ನ ಕೇಳಲು ಆಗಲಿಲ್ಲ ಎಂದು ಜನೈ ಭೋಸ್ಲೆ ವಿಡಿಯೋಗೆ ಟ್ಯಾಗ್​ಲೈನ್ ಬರೆದಿದ್ದಾರೆ. ಅವರು ಈ ರೀತಿಯಾದ ಟ್ಯಾಗ್​ಲೈನ್ ಬರೆಯಲು ಬಲವಾದ ಕಾರಣವಿದೆ. ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಜನೈ ಭೋಸ್ಲೆ ಹಾಗೂ ಸಿರಾಜ್ ಬಗ್ಗೆ ಬೇರೆಯೇ ಅರ್ಥದಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು. ಆದರೆ ಇಬ್ಬರು ರಕ್ಷಾ ಬಂಧನ ಹಬ್ಬ ಆಚರಣೆ ಮಾಡುವ ಮೂಲಕ ಅದಕ್ಕೆ ತೆರೆ ಎಳೆಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಯಾವುದು ಸುಳ್ಳು, ಯಾವುದು ನಿಜ ಎನ್ನುವುದನ್ನು ನಂಬೋಕೆ ಆಗಲ್ಲ. ಏಕೆಂದರೆ ಆಶಾ ಬೋಸ್ಲೆ ಅವರ ಮೊಮ್ಮಗಳಾದ ಜನೈ ಭೋಸ್ಲೆ ಹಾಗೂ ಸಿರಾಜ್ ನಡುವೆ ಲವ್ ಇದೆ ಎಂದು ವದಂತಿ ಹಬ್ಬಿಸಲಾಗಿತ್ತು. ಇಬ್ಬರು ಯಾವುದೋ ಒಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ವೈರಲ್ ಮಾಡಲಾಗುತ್ತಿತ್ತು. ಇದರಿಂದ ಬೇಸತ್ತಿದ್ದ ಅವರು ಅಂತಿಮವಾಗಿ ಸ್ಪಷ್ಟನೆಯನ್ನು ರಕ್ಷಾ ಬಂಧನದ ಮೂಲಕ ನೀಡಿದ್ದಾರೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!