ಗಿಲ್ಲಿ & ರಕ್ಷಿತಾಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್

ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ. ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ.

ಗಿಲ್ಲಿ ಈ ವಾರದ ಟಾಸ್ಕ್‌ಗಳಲ್ಲಿ ಸೇಫ್‌ ಟೀಂನಲ್ಲಿದ್ದರೆ, ರಕ್ಷಿತಾ ನಾಮಿನೇಟೆಡ್‌ ಟೀಂನಲ್ಲಿದ್ದರು. ಆದರೆ ಯಾವಾಗ ನಾಮಿನೇಟೆಡ್‌ ಟೀಂ ವಿನ್‌ ಆಗಿ ತಮ್ಮ ಟೀಂನಿಂದ ಸೇಫ್‌ ಟೀಂಗೆ ಒಬ್ಬರನ್ನು ಕಳುಹಿಸಬೇಕು ಅಲ್ಲಿಂದ ಒಬ್ಬರನ್ನು ತಮ್ಮ ಟೀಂಗೆ ಕರೆಸಿಕೊಳ್ಳಬೇಕು ಎನ್ನುವ ಪ್ರಶ್ನೆ ಬಂದಿತ್ತೋ ಆಗ ರಕ್ಷಿತಾ ತಮ್ಮ ಟೀಂನ ನಿರ್ಧಾರದ ವಿರುದ್ಧವೇ ತಿರುಗಿ ಬಿದ್ದಿದ್ದರು. ಇದೇ ವೇಳೆ ಗಿಲ್ಲಿ ಕೂಡ ರಕ್ಷಿತಾ ತಮ್ಮ ವಂಶದ ಕುಡಿ ಹಾಗೆ ಸರಳವಾಗಿ ಸೋಲಲ್ಲ ಎಂದು ಹೇಳಿದ್ದರು.

ಇದು ನಾಮಿನೇಟೆಡ್‌ ಟೀಂನವರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಇನ್ನೊಂದು ಟಾಸ್ಕ್‌ನ ಆರಂಭಕ್ಕೂ ಮೊದಲೇ ಗಿಲ್ಲಿ ರಕ್ಷಿತಾ ಕಿವಿಯಲ್ಲಿ ಏನೋ ಹೇಳಿದ್ದು ಕೂಡ ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಇದನ್ನೇ ಇಟ್ಟುಕೊಂಡು ಸುದೀಪ್‌ ಶನಿವಾರದ ಎಪಿಸೋಡ್‌ನಲ್ಲಿ ಗಿಲ್ಲಿ ಹಾಗೂ ರಕ್ಷಿತಾಗೆ ಕ್ಲಾಸ್‌ ತಗೊಂಡಿದ್ದಾರೆ.

ಅವರ ನಡವಳಿಕೆಯನ್ನು ಸಮರ್ಥಿಸಿಕೊಳ್ಳೋಕೆ ಹೇಳಿದ್ದಾರೆ. ಅಲ್ಲದೇ ಇವರಿಬ್ಬರ ಈ ನಡವಳಿಕೆ ಒಂದು ಟೀಂ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನೂ ಹೇಳಿದ್ದಾರೆ. ಇಬ್ಬರಿಗೂ ಸರಿಯಾಗೇ ಕ್ಲಾಸ್‌ ತಗೊಂಡಿದ್ದು, ಇಲ್ಲಿವರೆಗೂ ಇನೋಸೆಂಟ್‌ ತರ ಕಾಣಿಸುತ್ತಿದ್ದ ರಕ್ಷಿತಾ ಮೊದಲ ಬಾರಿ ತಾವೇ ಮಾಡಿದ್ದ ಗುಂಡಿಗೆ ಬಿದ್ದ ಹಾಗೆ ಆಗಿದ್ದಾರೆ. ಇನ್ನಾದ್ರೂ ತಪ್ಪನ್ನು ಅರಿತುಕೊಂಡು ಇವರಿಬ್ಬರು ತಿದ್ದಿಕೊಳ್ತಾರಾ? ಮುಂದಿನ ದಿನಗಳಲ್ಲಿ ನೋಡಬೇಕಷ್ಟೆ.

 

Related Posts

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಉಡುಗೊರೆ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ, ರಾಜ್ಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 7 ಸಾವಿರ ಕೋಟಿ ಸರ್ಕಾರದ ಅನುದಾನವನ್ನು ಜಿಬಿಎ ಮೂಲಕ ಹಂಚಿಕೆ ಮಾಡಲು ಸೂಚನೆ, ಒಟ್ಟು 8 ಸಾವಿರ ಕೋಟಿ ಆಯವ್ಯಯಕ್ಕೆ ಜಿಬಿಎ ಅನುಮೋದನೆ…

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ಖ್ಯಾತ ದಳಪತಿ ವಿಜಯ್ ಮುಚ್ಚುಮರೆ ಇಲ್ಲದೇ ನಟಿ ತ್ರಿಷಾ ಕೃಷ್ಣನ್ ಜೊತೆ ತಿರುಗಾಡುತ್ತಿದ್ದಾರೆ. ಅವರ ಈ ವರ್ತನೆಯಿಂದ ಅಭಿಮಾನಿಗಳಿಗೆ ಮುಜುಗರ ಆಗಿದೆ. ಆದರೆ ಕೆಲವು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ತ್ರಿಷಾ ಜೊತೆಗಿನ ಒಟನಾಟದಿಂದ ತೊಂದರೆ ಆಗುವ…

You Missed

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು?

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!