ಇಂದಿನ ದಿನಗಳಲ್ಲಿ ಹಿರಿಯರೂ, ಮಕ್ಕಳೂ ,ಎಲ್ಲರೂ ಡಿಜಿಟಲ್ ಸಾಧನಗಳ ಸೆಳೆಯುವ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. “ಒಂದೆರಡು ನಿಮಿಷ” ಎಂದೇ ಮೊಬೈಲ್ ಕೈಗೆತ್ತಿಕೊಳ್ಳುವದರಿಂದ, ಗಂಟೆಗಳ ಕಾಲ ಸಮಯ ವ್ಯರ್ಥವಾಗುವುದು ಸಾಮಾನ್ಯ. ಈ ಡಿಜಿಟಲ್ ವ್ಯಸನದಿಂದ ಮುಕ್ತಿಯಾಗಲು ಹಲವಾರು ಉಪಾಯಗಳು ಇದ್ದರೂ, ಫಲಿತಾಂಶ ಕಡಿಮೆಯೇ ಇರುತ್ತದೆ.
ಆದರೆ ‘Forest: Stay Focused’ ಎಂಬ ಆ್ಯಪ್ ಇದರ ಬದಲಿ ಪರಿಹಾರವಾಗಬಹುದು. ಇದರ ಮೂಲಕ ನೀವು ಮೊಬೈಲ್‌ನಿಂದ ದೂರವಿರುವಷ್ಟು ಸಮಯ ನಿಗದಿಪಡಿಸಬಹುದು.
ಆ್ಯಪ್ ಹೇಗೆ ಕೆಲಸ ಮಾಡುತ್ತದೆ?
- ನೀವು ಮೊಬೈಲ್ ಉಪಯೋಗಿಸದೆ ಇರಬೇಕಾದ ಸಮಯವನ್ನು ಆಯ್ಕೆಮಾಡಿ, ಆ ಸಮಯದಲ್ಲಿ ಒಂದು ಡಿಜಿಟಲ್ ಮರವನ್ನು ನೆಡಲಾಗುತ್ತದೆ.
- ನೀವು ಮೊಬೈಲ್ ಉಪಯೋಗಿಸಿದರೆ, ಆ ಗಿಡ ನಶಿಸುತ್ತೆ.
- ನೀವು ಮೊಬೈಲ್ ಸ್ಪರ್ಶವಿಲ್ಲದೇ ನಿರ್ದಿಷ್ಟ ಸಮಯವನ್ನೂ ಪೂರೈಸಿದರೆ, ಆ ಮರ ಬೆಳೆಯುತ್ತದೆ.
- ಮರಗಳನ್ನು ಬೆಳೆಯಿಸುತ್ತಾ ಹೋದಂತೆ, ನಿಮ್ಮ ‘ವರ್ಚುವಲ್ ಕಾಡು’ ಹರಡುತ್ತ ಹೋಗುತ್ತದೆ.
ಇದರ ವಿಶೇಷತೆ ಏನು?
ಹೆಚ್ಚು ಮರಗಳನ್ನು ಬೆಳೆಸಿದಂತೆ ಕಾಯಿನ್‌ಗಳು ಸಿಗುತ್ತವೆ. ಈ ಕಾಯಿನ್‌ಗಳನ್ನು ನಿಜವಾದ ಮರಗಳನ್ನು ನೆಡುವ ಪರಿಸರ ಪ್ರಾಜೆಕ್ಟ್‌ಗಳಿಗೆ ದಾನವಾಗಿ ಬಳಸಿ, ನಿಜಕ್ಕೂ ಗಿಡ ನೆಡುವ ಅವಕಾಶ ದೊರೆಯುತ್ತದೆ.
ಫಲಿತಾಂಶ?
- ಮೊಬೈಲ್ ವ್ಯಸನ ಕಡಿಮೆಯಾಗುತ್ತದೆ
- ಗಮನ ವೃದ್ಧಿಯಾಗುತ್ತದೆ
- ಪರಿಸರದ ರಕ್ಷಣೆಗೆ ಸಹಭಾಗಿಯಾಗುವ ಸಂತೋಷವೂ ಸಿಗುತ್ತದೆ
ಡಿಜಿಟಲ್ ಜಗತ್ತಿನಲ್ಲಿ ಕಾಲ ಕಳೆಯುವುದರ ಬದಲು, ಮರ ಬೆಳೆಯಿಸಿ, ಸಮಯವನ್ನು ಅರ್ಥಪೂರ್ಣವಾಗಿ ಕಳೆಯೋಣ.






