ಕೊಚ್ಚಿಯ ಲುಲು ಮ್ಯಾರಿಯಟ್ ಹೋಟೆಲ್‌ನಲ್ಲಿ ಚುನಾವಣೆ ನಡೆದಿದ್ದು, ಶ್ವೇತಾ ಮೆನನ್ 159 ಮತಗಳನ್ನು ಗಳಿಸಿದರೆ, ಹಿರಿಯ ನಟ ಮತ್ತು ಬಿಜೆಪಿ ನಾಯಕ ದೇವನ್ 132 ಮತಗಳನ್ನು ಪಡೆದರು. ಕುಕ್ಕು ಪರಮೇಶ್ವರನ್ 172 ಮತಗಳೊಂದಿಗೆ ಗೆಲುವು ಸಾಧಿಸಿದರು. ರವೀಂದ್ರನ್ 115 ಮತಗಳನ್ನು ಪಡೆದರು.
ಕಳೆದ ವರ್ಷ ಆಗಸ್ಟ್ ಸಂದರ್ಭ ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿತ್ತು. ಆ ಸಂದರ್ಭ, ಅಮ್ಮ ಅಧ್ಯಕ್ಷ, ನಟ ಮೋಹನ್ಲಾಲ್ ಸೇರಿದಂತೆ ಆಡಳಿತ ಮಂಡಳಿಯ 17 ಜನರು ರಾಜೀನಾಮೆ ನೀಡಿದ್ದರು. ಇದೀಗ ಆ ಸ್ಥಾನಗಳಿಗೆ ಚುನಾಚಣೆ ನಡೆದಿದೆ.

ನಟಿ ಲಕ್ಷ್ಮಿ ಪ್ರಿಯಾ 139 ಮತಗಳೊಂದಿಗೆ ಉಪಾಧ್ಯಕ್ಷ ಹುದ್ದೆಗಳಲ್ಲಿ ಒಂದನ್ನು ಗೆದ್ದುಕೊಂಡರು. ಜೊತೆಗೆ ಜಯನ್ ಚೆರ್ತಲಾ 267 ಮತಗಳೊಂದಿಗೆ ಮುನ್ನಡೆ ಸಾಧಿಸಿದರು. ನಟಿ ಅನ್ಸಿಬಾ ಹಾಸನ್ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರೆ, ನಟ ಉನ್ನಿ ಶಿವಪಾಲ್ 167 ಮತಗಳೊಂದಿಗೆ ಖಜಾಂಚಿ ಸ್ಥಾನವನ್ನು ಪಡೆದರು. ಹೊಸದಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯಲ್ಲಿ ಸಿಜೋಯ್ ವರ್ಗೀಸ್, ರೋನಿ ಡೇವಿಡ್, ಟಿನಿ ಟಾಮ್, ಸಂತೋಷ್ ಕೀಳತ್ತೂರು, ವಿನು ಮೋಹನ್ ಮತ್ತು ಜಾಯ್ ಮ್ಯಾಥ್ಯೂ ಇದ್ದಾರೆ. ಮಹಿಳಾ ಮೀಸಲು ಸ್ಥಾನಗಳನ್ನು ನೀನಾ ಕುರುಪ್, ಸರಯು ಮೋಹನ್, ಆಶಾ ಅರವಿಂದ್ ಮತ್ತು ಅಂಜಲಿ ನಾಯರ್ ಗೆದ್ದಿದ್ದಾರೆ. ಇದರಿಂದಾಗಿ ಆಡಳಿತ ಮಂಡಳಿಯಲ್ಲಿ ಒಟ್ಟು ಮಹಿಳೆಯರ ಸಂಖ್ಯೆ 8ಕ್ಕೆ ಏರಿದೆ.
ಐತಿಹಾಸಿಕ ಫಲಿತಾಂಶದ ಹೊರತಾಗಿಯೂ, ಮತದಾನದ ಪ್ರಮಾಣವು ಹಿಂದಿನ ವರ್ಷಗಳಿಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. 506 ಅರ್ಹ ಸದಸ್ಯರಲ್ಲಿ, ಕೇವಲ 298 ಮಂದಿ ಮಾತ್ರ ಮತ ಚಲಾಯಿಸಿದರು. ಇದು ಕಳೆದ ಚುನಾವಣೆಯಲ್ಲಿ ಚಲಾವಣೆಯಾದ 357 ಮತಗಳಿಗೆ ಹೋಲಿಸಿದರೆ ಕಡಿಮೆ ಎನ್ನಬಹುದು.
ಈ ಮಹತ್ವದ ಚುನಾವಣೆ ಹಲವು ತಿರುವುಗಳನ್ನು ಹೊಂದಿತ್ತು. ಹಿರಿಯ ನಟ ಜಗದೀಶ್ ಆರಂಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಆದರೆ ನಂತರ ಶ್ವೇತಾ ಮೆನನ್ ಅವರ ಉಮೇದುವಾರಿಕೆಯನ್ನು ತಿಳಿದ ನಂತರ ನಾಮಪತ್ರವನ್ನು ಹಿಂತೆಗೆದುಕೊಂಡರು. ಕುತೂಹಲಕಾರಿಯಾಗಿ, ದೇವನ್ ಸ್ವತಃ ಮಹಿಳೆಯೊಬ್ಬರು ಉನ್ನತ ಹುದ್ದೆಗೆ ಸ್ಪರ್ಧಿಸುವ ಸಮಯ ಬಂದಿದೆ ಎಂದು ಹೇಳಿದ್ದರು. ಚಲನಚಿತ್ರಗಳ ರಾಜ್ಯ ಸಚಿವರಾದ ಸಾಜಿ ಚೆರಿಯನ್ ಈ ವಿಜಯವನ್ನು ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ.





