ಚಿಕ್ಕಮಗಳೂರು ಗೋಣಿಬೀಡು ಬಳಿ 30ಕ್ಕೂ ಹೆಚ್ಚು ಕಾಡಾನೆಗಳ ದರ್ಬಾರ್ !

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಾಸನ ಜಿಲ್ಲೆಯ ಬೇಲೂರು ಮಾರ್ಗವಾಗಿ ಬಂದಿರುವ ಈ ಹಿಂಡು ಕಳೆದ ನಾಲ್ಕು ದಿನಗಳಿಂದ ವಿವಿಧ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿದೆ. ಕಸ್ಕೆಬೈಲು ಗ್ರಾಮದ ಸಮೀಪ ರಸ್ತೆಯಲ್ಲೇ ಕಾಡಾನೆಗಳು ತಂಗಿರುವುದರಿಂದ ವಾಹನ ಸವಾರರು ಭಯಭೀತರಾಗಿದ್ದಾರೆ. ಅಲ್ಲದೆ ಕಾಫಿ ತೋಟಗಳಲ್ಲಿಯೂ ಕಾಡಾನೆಗಳ ಸಂಚಾರ ಕಂಡುಬಂದಿದ್ದು, ಕಾರ್ಮಿಕರು ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಬೀಟಮ್ಮ, ಭುವನೇಶ್ವರಿ ಹಾಗೂ ಭೀಮಾ ಗ್ಯಾಂಗ್ ಎಂದು ಗುರುತಿಸಲ್ಪಟ್ಟಿರುವ ಈ ಕಾಡಾನೆಗಳ ಹಿಂಡು ಕಸ್ಕೆಬೈಲು, ಕಲ್ಲುಗುಡ್ಡ, ಗಡಿ ಚೌಕ, ಕಮ್ಮರಗೋಡು ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಓಡಾಟ ನಡೆಸುತ್ತಿವೆ. ಹಿಂಡಿನಿಂದ ಬೇರ್ಪಟ್ಟ ಕೆಲವು ಆನೆಗಳು ಅಲೆದಾಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಮೂಡಿಗೆರೆ ಅರಣ್ಯ ವಲಯ ಅಧಿಕಾರಿಗಳು ಸ್ಥಳದಲ್ಲೇ ಶಿಬಿರ ಹೂಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದಾರೆ. ಗ್ರಾಮಸ್ಥರು ಅನಾವಶ್ಯಕವಾಗಿ ಹೊರಗೆ ಸಂಚರಿಸಬಾರದು, ರಾತ್ರಿ ವೇಳೆಯಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

Related Posts

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಉಡುಗೊರೆ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ, ರಾಜ್ಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 7 ಸಾವಿರ ಕೋಟಿ ಸರ್ಕಾರದ ಅನುದಾನವನ್ನು ಜಿಬಿಎ ಮೂಲಕ ಹಂಚಿಕೆ ಮಾಡಲು ಸೂಚನೆ, ಒಟ್ಟು 8 ಸಾವಿರ ಕೋಟಿ ಆಯವ್ಯಯಕ್ಕೆ ಜಿಬಿಎ ಅನುಮೋದನೆ…

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ಖ್ಯಾತ ದಳಪತಿ ವಿಜಯ್ ಮುಚ್ಚುಮರೆ ಇಲ್ಲದೇ ನಟಿ ತ್ರಿಷಾ ಕೃಷ್ಣನ್ ಜೊತೆ ತಿರುಗಾಡುತ್ತಿದ್ದಾರೆ. ಅವರ ಈ ವರ್ತನೆಯಿಂದ ಅಭಿಮಾನಿಗಳಿಗೆ ಮುಜುಗರ ಆಗಿದೆ. ಆದರೆ ಕೆಲವು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ತ್ರಿಷಾ ಜೊತೆಗಿನ ಒಟನಾಟದಿಂದ ತೊಂದರೆ ಆಗುವ…

You Missed

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು?

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!