ಗಡಿ ಜಿಲ್ಲೆಯ ಯುವಕರಿಗೆ “ಬೋಸ್” “ಲಾ” ಭಾಗ್ಯ!

  • ಸಂಸದ ಸುನೀಲ್ ಬೋಸ್ ಮನವಿಗೆ ಮನ್ನಣೆ 
  • ಚಾಮರಾಜನಗರಕ್ಕೆ ಲಾ ಕಾಲೇಜ್ ಮಂಜೂರು.
  • ಬೇಸಿಕ್ ಪೆಸಲಿಟಿ ಕೊಟ್ಟು ಲಾ ಕಾಲೇಜ್ ಅಪ್ರೂಲ್
  • ಚಾಮರಾಜ ನಗರ ಸಂಸದ ಸುನೀಲ್ ಬೋಸ್ ಶ್ರಮಕ್ಕೆ ಸಿಕ್ಕ ಪ್ರತಿಫಲ

ಚಾಮರಾಜನಗರ : ಚಾಮರಾಜನಗರದ ಸರಕಾರಿ ಕಾನೂನು ಕಾಲೇಜು ಆರಂಭಕ್ಕಾಗಿ ಅನುಮೋದನೆ ನೀಡುವಂತೆ ಲೋಕಸಭೆ ಸದಸ್ಯ ಸುನೀಲ್ ಬೋಸ್ ಹೊಸದಿಲ್ಲಿಯ బారా ಕೌನ್ಸಿಲ್ ಆಫ್ ಇಂಡಿಯಾಗೆ ಮಾಡಿದ್ದ ಮನವಿ ಪುರಸ್ಕೃತಗೊಂಡಿದ್ದು, ಪ್ರಸಕ್ತ ಸಾಲಿನಿಂದಲೇ ಮೂರು ವರ್ಷಗಳ ಪದವಿ ಕೋರ್ಸ್ ಪ್ರವೇಶಕ್ಕೆ ಅನುಮೋದನೆ ದೊರೆತಿದೆ.

ಮೂರು ವರ್ಷದ ಎಲ್‌ಎಲ್‌ಬಿ ಮತ್ತು ಐದು ವರ್ಷದ ಬಿಎ ಎಲ್ ಎಲ್‌ಬಿ ಕೋರ್ಸ್ಗೆ ಕರ್ನಾಟಕ ಸರಕಾರದ ಅನುಮತಿ ಪಡೆದುಕೊಂಡು ತಾತ್ಕಾಲಿಕವಾಗಿ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕಾನೂನು ಕಾಲೇಜು ಸ್ಥಾಪನೆಗೊಂಡಿತ್ತು.
ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಸಂಯೋಜನೆ ಪಡೆದುಕೊಳ್ಳಲಾಗಿತ್ತು. ಭಾರತೀಯ ವಕೀಲರ ಪರಿಷತ್ (ಬಾರ್ ಕೌನ್ಸಿಲ್ ಆಫ್ ಇಂಡಿಯಾ) ಅನುಮೋದನೆಗಾಗಿ ಶುಲ್ಕವನ್ನು ಪಾವತಿಸಲಾಗಿತ್ತು.  ಕಳೆದ ಏ. 21ರಂದು ಸಂಸದ ಸುನೀಲ್ ಬೋಸ್ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆದು ನಗರದಲ್ಲಿ ಸರಕಾರಿ ಕಾನೂನು ಕಾಲೇಜು ಸ್ಥಾಪನೆ ಮತ್ತು ಅನುಮೋದನೆಯ ತುರ್ತು ಅಗತ್ಯವನ್ನು ವಿವರವಾಗಿ ಮನದಟ್ಟು ಮಾಡಿದ್ದರು.

ಪ್ರಸ್ತುತ ಬಾರ್ ಕೌನ್ಸಿಲ್ ನಗರದ ಕಾನೂನು 2025-26 ಸರಕಾರಿ ಕಾಲೇಜಿಗೆ ಹಾಗೂ 2026-27ನೇ ಶೈಕ್ಷಣಿಕ ಅವಧಿಗೆ 60 ವಿದ್ಯಾರ್ಥಿಗಳ ಒಂದು ವಿಭಾಗದ ಪ್ರವೇಶ ದೊಂದಿಗೆ ಮೂರು ವರ್ಷಗಳ ಎಲ್‌ಎಲ್‌ ಬಿ ಪದವಿ ಕೋರ್ಸ್‌ಗೆ ಹೊಸ ಅನುಮೋದನೆ ನೀಡಲಾಗಿದೆ ಎಂದು ಜೂ. 2ರಂದು ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ನಗರದ ಸರಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಿಗೆ ಪತ್ರದ ಮೂಲಕ ತಿಳಿಸಿದೆ.

(ಲೋಕಸಭೆ ಸದಸ್ಯ ಸುನೀಲ್ ಬೋಸ್)

ಕಾನೂನು ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಸುನೀಲ್ ಬೋಸ್ ತಮ್ಮ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಯಿಂದ ಕಾನೂನು ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗಾಗಿ ಲಕ್ಷ ರೂ. ಒದಗಿಸಲು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು