ಮುಡಾ 50:50 ನಿವೇಶನ ಹಂಚಿಕೆ ಪ್ರಕರಣ: ನಿವೇಶನಗಳು ಅಮಾನತ್ತಿನಲ್ಲಿವೆ : ಸಿದ್ದರಾಮಯ್ಯ

ಬೆಂಗಳೂರು : ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆಗಿದೆಯೋ ಇಲ್ಲವೋ ಎಂದು ಪತ್ತೆ ಹಚ್ಚಲು ತನಿಖೆ ಮಾಡಲಾಗುತ್ತಿದ್ದು ಎಲ್ಲಾ ನಿವೇಶನಗಳನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಹಾಗಾಗಿ ಸರ್ಕಾರಕ್ಕೆ ನಷ್ಟವಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ ತೀರ್ಮಾನ ಈ ಬಗ್ಗೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂದು ಬಿಜೆಪಿ ಆರೋಪ ಮಾಡಿದ್ದು ಸಿಬಿಐ ಗೆ ಪ್ರಕರಣ ಹಸ್ತಾಂತರ ಮಾಡಲು ಒತ್ತಾಯಿಸಿರುವ ಬಗ್ಗೆ ಮಾತನಾಡಿ ಎಲ್ಲವನ್ನೂ ಸಿಬಿಐ ಗೆ ಹಸ್ತಾಂತರಿಸಲು ಏಕೆ ಹೇಳುತ್ತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐಗೆ ಹಸ್ತಾಂತರ ಮಾಡಿದ್ದರು ಎಂದು ಪ್ರಶ್ನಿಸಿದರು. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದೆ ಎಂದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರಕರಣದಲ್ಲಿ ನನ್ನ ಪಾತ್ರವೇನಿದೆ ಎಂದು ಪ್ರಶ್ನಿಸಿದರು. ಆರ್. ಅಶೋಕ್ ಕರ್ತವ್ಯ ಲೋಪವೆಸಗಿದ್ದಾರೆ ಎಂದರೆ ರಾಜಿನಾಮೆ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು. ಅವರ ಕಾಲದಲ್ಲಿ ಅಕ್ರಮ ಸಕ್ರಮ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ಆರೋಪ ಕೇಳಿ ಬಂದಾಗ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಅದಕ್ಕೆ ರಾಜಿನಾಮೆ ಕೊಡಿ ಅಂದರೆ ಕೊಡುತ್ತಾರೆಯೇ ಎಂದರು.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!