ನನ್ನ ಬೇರುಗಳಿರುವುದು ಕೋಲಾರದ ಮಣ್ಣಿನಲ್ಲಿ : ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ : ಕೆ.ವಿ. ಪ್ರಭಾಕರ್

ನಾನು ನನಗೆ ಸಿಕ್ಕ ಅವಕಾಶಗಳ ಕಾರಣಕ್ಕೆ ಬಹಳ ಎತ್ತರಕ್ಕೆ ಬೆಳೆದಿದ್ದೇನೆ ಎಂದು ನಿಮಗೆಲ್ಲಾ ಅನ್ನಿಸಿರಬಹುದು ಆದರೆ, ನನ್ನ ಬೇರುಗಳಿರುವುದು ಕೋಲಾರದ ಮಣ್ಣಿನಲ್ಲಿ. ಇದೇ ಮಣ್ಣಿನಲ್ಲಿ ನನ್ನ ಬೇರುಗಳು ಆಳವಾಗಿ ಇಳಿದಿವೆ. ಆದ್ದರಿಂದಲೇ ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭಾವನಾತ್ಮಕವಾಗಿ ನುಡಿದರು.

ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಕಲ್ಯಾಣಕ್ಕೆ ಸರ್ಕಾರದಿಂದ 25 ಲಕ್ಷ ರೂ ಅನುದಾನ ಒದಗಿಸಿದಕ್ಕಾಗಿ ಸಂಘ ಮತ್ತು ನಾಗರಿಕ ಜನ ಸಂಘಟನೆಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನನ್ನ ಹುಟ್ಟು, ಬಾಲ್ಯ ಎಲ್ಲಾ ಕೋಲಾರ ಮಣ್ಣಿನಲ್ಲಿ ಬೆರೆತಿದೆ. ನನ್ನ ಪತ್ರಿಕಾ ವೃತ್ತಿ ಬದುಕನ್ನು ಮಾತ್ರವಲ್ಲ, ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೂ ಕೋಲಾರದ ಬೀದಿಗಳು ಎಂದು ಸ್ಮರಿಸಿದರು.

ಕಾರ್ಮಿಕ ಚಳವಳಿ, ದಲಿತ ಚಳವಳಿ, ಅಹಿಂದ ಹೋರಾಟ, ಪ್ರಗತಿಪರ ಚಳವಳಿಗಳ ನೆಲ ಕೋಲಾರ. ಈ ಎಲ್ಲಾ ಹೋರಾಟ, ಚಳವಳಿಗಳಿಗೆ ಸಾಕ್ಷಿಯಾಗಿ ನಾನು ಇಲ್ಲಿ ಬೆಳೆದಿದ್ದೇನೆ. 40 ವರ್ಷಗಳಲ್ಲಿ ಕೋಲಾರದ ಬದುಕು ಮತ್ತು ಬದಲಾವಣೆಗಳನ್ನು ನಾನು ನೋಡಿದ್ದೇನೆ. ಆದರೆ ಕೋಲಾರ ಜನರ ಹೃದಯ, ಪ್ರೀತಿ, ವಿಶ್ವಾಸ ಮಾತ್ರ 40 ವರ್ಷಗಳಿಂದ ಹಾಗೇ ಇದೆ. ಹೀಗಾಗಿ ಕೋಲಾರದ ಮಣ್ಣಿನ ಜೊತೆಗೆ ನನಗೆ ಭಾವನಾತ್ಮಕ ಬೆಸುಗೆ ಇದೆ. ಇವತ್ತು ನಾನು ಸ್ವೀಕರಿಸಿದ ಈ‌ ಅಭಿನಂದನೆ, ಗೌರವ ಎಲ್ಲವನ್ನೂ ಕೋಲಾರ ಜನರ ಹೃದಯಕ್ಕೆ, ಈ ಮಣ್ಣಿಗೆ ಅರ್ಪಿಸುತ್ತೇನೆ.

ನಾನು ಮುಖ್ಯಮಂತ್ರಿಗಳ ಸಲಹೆಗಾರನಾಗಿ, ಕ್ಯಾಬಿನೆಟ್ ದರ್ಜೆ ಪಡೆದು ಕೋಲಾರ ಪ್ರವೇಶಿಸಿದಾಗ ನನಗೆ ಮೊದಲು ನೆನಪಾಗಿದ್ದು ನಾನು ಓದಿದ ಶಾಲೆ, ನನ್ನನ್ನು ತಿದ್ದಿದ ಗುರುಗಳು ಮತ್ತು ನನಗೆ ಮೊದಲ ಸಂಬಳ ಕೊಟ್ಟ ನನ್ನ ಕೋಲಾರ ಪತ್ರಿಕೆ. ಹೀಗಾಗಿ ನಾನು ಓದಿದ ಶಾಲೆಗೆ ಮೊದಲು ಋಣ ತೀರಿಸುವ ಪ್ರಯತ್ನಕ್ಕೆ ಮುಂದಾದೆ. ಹೀಗೇ ಇಲ್ಲಿನ ಪತ್ರಿಕಾ ಸಮೂಹಕ್ಕೆ ಅನುದಾನವನ್ನು ಒದಗಿಸುವ ಸೌಭಾಗ್ಯ ಕೂಡ ನನಗೆ ಒದಗಿ ಬಂತು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕಾಗಿ ನಾನು ಕೇಳಿದ್ದೆಲ್ಲವನ್ನೂ ಒದಗಿಸಿದ್ದಾರೆ. ಅವರಿಗೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಮಾಸಿದ ಬಟ್ಟೆಯಲ್ಲಿ ನನ್ನ ಜೊತೆಗೆ ಓಡಾಡದ, ಆಡಿದ, ಒಡನಾಡಿದ ಗೆಳೆಯರು ಇಲ್ಲಿದ್ದಾರೆ. ಒಂದೇ ತಟ್ಟೆಯಲ್ಲಿ ತುತ್ತು ಹಂಚಿಕೊಂಡು ಊಟ ಮಾಡಿದ ಗೆಳೆಯರು ಇಲ್ಲಿದ್ದಾರೆ. ಮೊದಲ ಬಾರಿಗೆ ಒಟ್ಟೊಟ್ಟಿಗೇ ಪೆಗ್ ಹಾಕಿದ ಸ್ನೇಹಿತರೂ ಇಲ್ಲಿದ್ದಾರೆ. ಇವರೆಲ್ಲರೂ ನನ್ನ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ಲರಿಗೂ ನಾನು ಎದೆಯಾಳದಿಂದ ಅಭಿನಂದಿಸುತ್ತೇನೆ. ಕೋಲಾರ ನನ್ನ ಜನ್ಮ ಭೂಮಿ, ಕಾಯಕ ಭೂಮಿ, ಕರ್ಮ ಭೂಮಿ ಎಲ್ಲವೂ ಹೌದು. ಇದರ ಋಣ ನನ್ನ ಮೇಲಿದೆ. ಈ ಋಣ ತೀರಿಸುವುಕ್ಕಾಗಿ ನಾನು ನನಗೆ ಸಿಕ್ಕ ಅವಕಾಶಗಳೆಲ್ಲವನ್ನೂ ಬಳಸಿಕೊಳ್ಳುತ್ತೇನೆ ಎಂದು ಭರವಸೆ ನೀಡುತ್ತೇನೆ.

“ನಾವು ಖುಷಿಯಲ್ಲಿದ್ದಾಗ ಚಪ್ಪಾಳೆ ತಟ್ಟಲು ಹತ್ತು ಬೆರಳುಗಳಿರುತ್ತವೆ. ಕಣ್ಣೀರು ಬಂದಾಗ ಒರೆಸಲು ಬರುವುದು ಒಂದೇ ಬೆರಳು” ಎನ್ನುವ ಕೊಪ್ಪಳ ಗವಿ ಮಠದ ಶ್ರೀಗಳ ಮಾತನ್ನು ಉಲ್ಲೇಖಿಸಿ, ಪತ್ರಕರ್ತರ ಕುಟುಂಬಗಳ ಕಣ್ಣೀರು ಒರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿದ್ದಾರೆ. ನಾವೆಲ್ಲಾ ಅವರ ನೆರಳಲ್ಲಿ ನಾವಿದ್ದೀವಿ ಎಂದು ಸ್ಮರಿಸಿದರು. ತಮ್ಮ ವ್ಯಕ್ತಿತ್ವವನ್ನು ರೂಪಿಸಲು ಸಹಕರಿಸಿದ ಕೋಲಾರದ ಎಲ್ಲಾ ಹಿರಿಯ ಪತ್ರಕರ್ತರು ಮತ್ತು ತಮ್ಮ ಶಿಕ್ಷಕರುಗಳ ಹೆಸರಿಡಿದು ಸ್ಮರಿಸಿ ಎಲ್ಲರಿಗೂ ಧನ್ಯತೆ ಅರ್ಪಿಸಿದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ವಸತಿ ಸಚಿವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀನಾರಾಯಣ್, ಅಕಾಡೆಮಿ ಸದಸ್ಯರಾದ ಪತ್ರಕರ್ತ ಚಿದಾನಂದ ಪಟೇಲ್, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಿನಾಥ್ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ರಾಮ್‌ಚರಣ್‌, ಕಿಚ್ಚ ಸುದೀಪ್‌ ಬಾಡಿಗಾರ್ಡ್‌ಗಳ ನಂತರ ಈಗ ಯಶ್‌ ಅಂಗರಕ್ಷಕನ ಹವಾ!

ಚಿತ್ರರಂಗದಲ್ಲಿ ನೆಚ್ಚಿನ ನಟರ ಜೊತೆಗೆ ಅವರ ಪರ್ಸನಲ್‌ ಬಾಡಿಗಾರ್ಡ್‌ಗಳೂ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಖತ್ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ನಟ ರಾಮ್‌ ಚರಣ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾ ‘ಪೆದ್ದಿ’ ಪ್ರಚಾರದ ವೇಳೆಯಲ್ಲಿ ಅವರ ಪರ್ಸನಲ್ ಸೆಕ್ಯೂರಿಟಿ ಗಾರ್ಡ್, ಆಫ್ರಿಕಾ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!