ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌– ಇರಾನಿನ 16 ಹಡಗುಗಳನ್ನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ.

ವಾಷಿಂಗ್ಟನ್‌: ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ ಈಗ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳು ಸಂಚರಿಸದಂತೆ ಸಮುದ್ರದ ಒಳಗಡೆ ಸ್ಫೋಟಕವನ್ನು ಇರಿಸಿದ ವಿಚಾರ ಬೆಳಕಿಗೆ ಬಂದಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪ್ರತಿಕ್ರಿಯಿಸಿ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಯಾವುದೇ ನೇವಲ್‌ ಮೈನ್ಸ್‌ ಹಾಕಿದ್ದರೆ ತಕ್ಷಣವೇ ತೆಗೆದು ಹಾಕಬೇಕು. ಒಂದು ವೇಳೆ ತೆಗೆಯದೇ ಇದ್ದರೆ ಹಿಂದೆಂದು ಕಾಣದ ರೀತಿಯಲ್ಲಿ ಇರಾನ್‌ ಮೇಲೆ ಮಿಲಿಟರಿ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.ಹಾರ್ಮುಜ್ ಜಲಸಂಧಿಯಲ್ಲಿ ನೇವಲ್‌ ಮೈನ್ಸ್‌ ಹಾಕುತ್ತಿದ್ದ ಇರಾನಿನ 16 ಹಡಗುಗಳನ್ನು ತಾನು ನಾಶ ಮಾಡಿರುವುದಾಗಿ ಅಮೆರಿಕದ ತಿಳಿಸಿದೆ

ಏನಿದು ನೇವಲ್‌ ಮೈನ್ಸ್‌?
ನಕ್ಸಲೈಟ್‌ಗಳು, ಉಗ್ರಗಾಮಿಗಳು ಭೂಮಿ ಒಳಗಡೆ ಬಾಂಬ್‌ ಇಡುವುದನ್ನು ನೀವು ಓದಿರಬಹುದು. ಈ ನೆಲಬಾಂಬ್‌ ಹುದುಗಿಸಿದ ಜಾಗದ ಮೇಲೆ ಕಾಲು ಇಟ್ಟಾಗ ಅಥವಾ ವಾಹನಗಳು ಸಂಚರಿಸಿದಾಗ ಒತ್ತಡದಿಂದ ಅದು ಸ್ಫೋಟಗೊಳ್ಳುತ್ತದೆ. ಅದೇ ರೀತಿಯಾಗಿ ನೀರಿನ ಒಳಗಡೆಯೂ ಸ್ಫೋಟಕಗಳನ್ನು ಇರಿಸಿ ಹಡಗುಗಳು, ಜಲಾಂತರ್ಗಾಮಿಗಳನ್ನು ನಾಶ ಮಾಡಲು ನೇವಲ್‌ ಮೈನ್ಸ್‌ ಬಳಕೆ ಮಾಡಲಾಗುತ್ತದೆ. ಹಡಗುಗಳು ಅವುಗಳ ಸಂಪರ್ಕಕ್ಕೆ ಬಂದಾಗ ಅಥವಾ ಅವುಗಳ ಹತ್ತಿರ ಸುಳಿದಾಗ ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿರುತ್ತದೆ.ಈ ಮೈನ್‌ಗಳನ್ನು ರಕ್ಷಣಾತ್ಮಕವಾಗಿ (ತನ್ನದೇ ಆದ ಹಡಗುಗಳನ್ನು ರಕ್ಷಿಸಲು) ಅಥವಾ ಆಕ್ರಮಣಕಾರಿಯಾಗಿ (ಶತ್ರುಗಳ ಹಡಗುಗಳ ಸಂಚಾರವನ್ನು ತಡೆಯಲು) ಬಳಸಲಾಗುತ್ತದೆ.

ಯಾವ ರೀತಿ ಇರುತ್ತೆ?
ಕೆಲವು ಮೈನ್‌ಗಳನ್ನು ಸಮುದ್ರದ ತಳಕ್ಕೆ ಹಾಕಿದ್ದರೆ, ಇನ್ನು ಕೆಲವು ನೀರಿನಲ್ಲಿ ತೇಲುತ್ತಿರುತ್ತವೆ. ಈ ಸ್ಫೋಟಕಗಳನ್ನು ತಾಗಿದಾಗ ಸ್ಫೋಟಗೊಳ್ಳುತ್ತದೆ. ಹಡಗು ಸಂಚರಿಸುತ್ತಿದ್ದಾಗ ಕಾಂತೀಯ ಕ್ಷೇತ್ರ, ಪ್ರೊಪೆಲ್ಲರ್‌ ಶಬ್ಧ ನೀರಿನ ಒತ್ತಡದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಿ ಸ್ಫೋಟಗೊಳ್ಳುವಂತೆ ರೂಪಿಸಲಾಗಿರುತ್ತದೆ.

ಇವುಗಳನ್ನು ವಿಶೇಷ ಹಡಗುಗಳು, ಜಲಾಂತರ್ಗಾಮಿಗಳು ಅಥವಾ ವಿಮಾನಗಳ ಮೂಲಕ ಸಮುದ್ರಕ್ಕೆ ಹಾಕಲಾಗುತ್ತದೆ. ಇವುಗಳು ಕ್ಷಿಪಣಿಗಳಿಗಿಂತ ಕಡಿಮೆ ವೆಚ್ಚದಾಯಕವಾಗಿದೆ ಮಾತ್ರವಲ್ಲ ಶತ್ರು ಹಡಗುಗಳಿಗೆ ಭಾರಿ ಹಾನಿ ಉಂಟುಮಾಡುತ್ತದೆ.

ಇರಾನ್‌ ದೇಶೀಯವಾಗಿ ನೇವಲ್‌ ಮೈನ್ಸ್‌ ತಯಾರಿಸುವ ಸಾಮರ್ಥ್ಯ ಹೊಂದಿದೆ. ಕೆಲವು ಸುಧಾರಿತ ವಿನ್ಯಾಸಗಳನ್ನು ರಷ್ಯಾ, ಚೀನಾ ಅಥವಾ ಉತ್ತರ ಕೊರಿಯಾದಲ್ಲಿ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳಿಂದ ಪಡೆದಿದೆ ಎನ್ನಲಾಗುತ್ತಿದೆ.
ಅಮೆರಿಕ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಸೆಕ್ಯುರಿಟಿಯ ಪ್ರಕಾರ ಇರಾನ್ ಸುಮಾರು 2,000 ರಿಂದ 5,000 ನೇವಲ್‌ ಮೈನ್ಸ್‌ ಹೊಂದಿರುವ ಸಾಧ್ಯತೆಯಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!