ಹೊಸ ಟ್ಯಾಟೋ ಮೂಲಕ ನಿತೀಶ್ ರೆಡ್ಡಿ ಸಂದೇಶ..!

ಟೀಮ್​ ಇಂಡಿಯನ್​ ಕ್ರಿಕೆಟರ್​​ಗಳಿಗೂ ಟ್ಯಾಟೂಗಳಿಗೂ ಒಂದು ರೀತಿ ವಿಶೇಷ ನಂಟಿದೆ. ವಿರಾಟ್​ ಕೊಹ್ಲಿ, ಕೆ.ಎಲ್. ರಾಹುಲ್​, ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್, ಶ್ರೇಯಸ್ ಅಯ್ಯರ್​, ರಿಂಕು ಸಿಂಗ್​, ಹೀಗೆ ಟ್ಯಾಟೂ ಪ್ರಿಯರ ದಂಡೇ ಇದೆ. ಟ್ಯಾಟೊ ಕ್ರೇಜ್​ ಹೊಂದಿರುವ ಕ್ರಿಕೆಟಿಗರು, ತಮ್ಮ ಕೈಗಳ ಮೇಲೆ, ದೇಹದ ಮೇಲೆ ವಿಶೇಷವಾದ ಹಚ್ಚೆ ಹಾಕಿಸಿಕೊಂಡಿದ್ದಿದೆ. ಈ ಪೈಕಿ ನಿತಿಶ್ ಕುಮಾರ್ ರೆಡ್ಡಿಯೂ ಒಬ್ಬರು.

ನಿತೀಶ್ ರೆಡ್ಡಿಗೆ ಟ್ಯಾಟೋ ಕ್ರೇಜ್​ ಇದೆ ಅನ್ನೋದು ಓಪನ್ ಸಿಕ್ರೇಟ್. ಆದ್ರೆ, ಇಂಜುರಿಯಿಂದ ಚೇರಿಸಿಕೊಳ್ಳುತ್ತಿರುವ ನಿತೀಶ್​ ರೆಡ್ಡಿ, ಎರಡು ಹೊಸ ಟ್ಯಾಟೋಗಳನ್ನು ಹಾಕಿಸಿಕೊಂಡಿದ್ದಾರೆ. ಪಕ್ಕೆಲುಬಿನ ಮೇಲೆ ಫಿನಿಕ್ಸ್​ ಹಕ್ಕಿಯ ಟ್ಯಾಟೋ ಹಾಕಿಸಿಕೊಂಡಿರುವ ನಿತೀಶ್ ರೆಡ್ಡಿ, ಬೆನ್ನ ಹಿಂದೆ ಕತ್ತಿಯ ಜೊತೆಗೆ ಹಕ್ಕಿಯ ರೆಕ್ಕೆಯ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಇದು ಕ್ರೇಜ್​ಗಾಗಿ ಮಾತ್ರವೇ ಹಾಕಿಸಿಕೊಂಡ ಟ್ಯಾಟೂಗಳು ಇವಲ್ಲ. ಟ್ಯಾಟೋಗಳ ಹಿಂದೆ ಒಂದು ಸಂದೇಶ ಇದೆ.

ಫಿನಿಕ್ಸ್​, ಕತ್ತಿ & ರೆಕ್ಕೆ ಟ್ಯಾಟೋ ಹಿಂದಿದೆ ವಿಶೇಷ ಅರ್ಥ..!

ಫಿನಿಕ್ಸ್​… ಇದು ಜನಪ್ರಿಯ ಪೌರಾಣಿಕ ಹಕ್ಕಿ. ಸತ್ತ ನಂತರವೂ ತನ್ನ ಬೂದಿಯಿಂದಲೇ ಮತ್ತೆ ಹುಟ್ಟಿ ಬರುವುದಕ್ಕೆ ಈ ಹಕ್ಕಿ ಹೆಸರುವಾಸಿ. ಸವಾಲುಗಳನ್ನ ಮೆಟ್ಟಿನಿಲ್ಲುವ ಸಾಮರ್ಥ್ಯ, ಹೋರಾಟದ ಪ್ರತಿರೂಪವೇ ಈ ಹಕ್ಕಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಸುರ್ಯೋದಯದ ಸಂಕೇತವೂ ಆಗಿದೆ. ಸದ್ಯ ಇಂಜುರಿಯಾಗಿರುವ ನಿತಿಶ್, ಫಿನಿಕ್ಸ್​ ಟ್ಯಾಟೋ ಮೂಲಕ ನೀಡಿರುವ ಸಂದೇಶವೇ ಟೀಮ್ ಇಂಡಿಯಾ ಕಮ್​ಬ್ಯಾಕ್​.

ನಿತೀಶ್ ರೆಡ್ಡಿ ಮೈ ಮೇಲೆ ಮತ್ತೆರೆಡು ಟ್ಯಾಟೋಗಳಿವೆ. ಈ ಪೈಕಿ ಒಂದು ಬಲಗೈ ತೋಳಿನ ಮೇಲ್ಭಾಗದಲ್ಲಿ ಘರ್ಜಿಸ್ತಿರುವ ಹುಲಿ ಇದೆ. ಕೆಳ ಭಾಗದಲ್ಲಿ ಯೋಧನ ಚಿತ್ರವಿದೆ. ಅಷ್ಟೇ ಅಲ್ಲ.! ಈ ಹಚ್ಚೆಯ ಪ್ರಾಮುಖ್ಯತೆ, ಈ ಟ್ಯಾಟೋಗಳು ಪ್ರಭಾವ ಬೀರಿದ ಅಂಶಗಳ ಬಗ್ಗೆ ಸ್ವತಃ ನಿತಿಶ್ ರೆಡ್ಡಿಯೇ ಉಲ್ಲೇಖಿಸಿದ್ದಿದೆ.

 

Related Posts

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಅರ್ಜುನ್ ತೆಂಡೂಲ್ಕರ್ ಸಾನಿಯಾ ಚಾಂದೋಕ್   ಅವರನ್ನು ವಿವಾಹವಾಗಿದ್ದಾರೆ. ಸಚಿನ್ ಪುತ್ರನ ಪತ್ನಿ ಸಾನಿಯಾ ಯಾರು, ಅವರ ಹಿನ್ನೆಲೆ, ಕುಟುಂಬದ ಸಂಪತ್ತು ಎಷ್ಟು ಎಂಬ ಕುತೂಹಲವಿದೆ. ಸಾನಿಯಾ ಖ್ಯಾತ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಅವರ ಕುಟುಂಬ ಬಾಸ್ಕಿನ್-ರಾಬಿನ್ಸ್ ಅನ್ನು ಭಾರತಕ್ಕೆ…

2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಈ ಮಹತ್ವದ ಆಯವ್ಯಯ ಮಂಡಿಸುತ್ತಿದ್ದಾರೆ. ಇದು ಕೇವಲ ಬಜೆಟ್ ಮಾತ್ರವಲ್ಲ, ರಾಜ್ಯದ ಇತಿಹಾಸದಲ್ಲೇ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 17ನೇ ಬಜೆಟ್ ಆಗಿದ್ದು, ಇದೊಂದು ಹೊಸ ಮೈಲುಗಲ್ಲಾಗಿದೆ.ಕರುನಾಡಿನ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಈಗ ಎಲ್ಲರ ಕಣ್ಣು…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!