ಪೃಥ್ವಿ ಶಾ ಬಾಳಿಗೆ 3ನೇ ಗರ್ಲ್​ಫ್ರೆಂಡ್​​ ಎಂಟ್ರಿ..ನಿಧಿ ತಪಾಡಿಯಾ ಹೋದ್ಲು.. ಹೊಸ ಹುಡುಗಿ ಬಂದ್ಲು

ಟೀಮ್​ ಇಂಡಿಯಾಗೆ ಸಿಕ್ಕ ಅಪರೂಪದ ಟ್ಯಾಲೆಂಟೆಡ್​ ಕ್ರಿಕೆಟರ್​. ಭಾರತದ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯ ಎನಿಸಿಕೊಂಡ ಆಟಗಾರ. ಈತನ ಆಟ ನೋಡಿದ ದಿಗ್ಗಜರು, ಮರಿ ಸಚಿನ್, ಸೆಹ್ವಾಗ್ ಎಂದೇ ಗುಣಗಾನ ಮಾಡಿದ್ರು. 18ನೇ ವಯಸ್ಸಿನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​​ಗೆ ಗ್ರ್ಯಾಂಡ್​​ ಎಂಟ್ರಿ ನೀಡಿದ ಫೈರಿ ಓಪನರ್​ ಅಷ್ಟೇ ವೇಗವಾಗಿ ಮರೆಯಾಗಿ ಹೋದ್ರು. ಸ್ವಯಂಕೃತ ಅಪರಾಧಗಳು ಕರಿಯರ್​ಗೆ​ ಕೊಳ್ಳಿ ಇಟ್ವು.

ನಾನು ಕ್ರಿಕೆಟ್​​ಗಿಂತ ಬೇರೆಯದ್ದಕ್ಕೆ ಹೆಚ್ಚು ನಾನು ಟೈಮ್​ ನೀಡ್ತಿದ್ದೆ. ನನ್ನ ಕರಿಯರ್​ ಹಳ್ಳ ಹಿಡಿಯೋಕೆ ಇದು ಮುಖ್ಯ ಕಾರಣ ಎಂದಿದ್ದ ಪೃಥ್ವಿ ಶಾ ಇದೀಗ ಮತ್ತೆ ಅದೇ ದಾರಿಯಲ್ಲಿ ಸಾಗ್ತಿದ್ದಂತೆ ಕಾಣ್ತಿದ್ದಾರೆ. ಕ್ರಿಕೆಟ್​​​ ಕರಿಯರ್​​ಗೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಪೃಥ್ವಿ ಶಾ ಲವ್​ನಲ್ಲಿ ಬಿದ್ದ ಸುದ್ದಿ ಹೊರಬಿದ್ದಿತ್ತು. ನಟಿ ಪ್ರಾಚಿ ಸಿಂಗ್​ ಜೊತೆಗೆ ಪೃಥ್ವಿಯ ಹೆಸರು ಸಖತ್​ ಸೌಂಡ್​ ಮಾಡಿತ್ತು. ಅಷ್ಟೇ ವೇಗವಾಗಿ ಇಬ್ಬರ ಬ್ರೇಕ್​ ಅಪ್​ ಆಗಿತ್ತು.

 

ಪ್ರಾಚಿ ಸಿಂಗ್​ ಬಳಿಕ ಬಾಲಿವುಡ್​ ನಟಿ ನಿಧಿ ತಪಾಡಿಯಾ ಜೊತೆಗೆ ಪೃಥ್ವಿ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರ ನಡೆಗಳೂ ಕೂಡ ಲವ್​ ಗಾಸಿಪ್​ಗೆ ಮತ್ತಷ್ಟು ಪುಷ್ಠಿ ನೀಡಿದ್ವು. 2023ರ ಐಫಾ ಅವಾರ್ಡ್​ ಫಂಕ್ಷನ್​ ವೇಳೆ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ರು. ಅದಾಗಿ ಕೆಲವೇ ದಿನಕ್ಕೆ ಈ ಲವ್​ ಕಹಾನಿಯೂ ಮುರಿದು ಬಿದ್ದ ಸುದ್ದಿ ಹೊರಬಿದ್ದಿತ್ತು.

ನಿಧಿ ತಪಾಡಿಯಾ ದೂರಾದ ಬಳಿಕ ಪೃಥ್ವಿ ಲೈಫ್​ಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಆಕೆಯ ಹೆಸರೇ ಆಕೃತಿ ಅಗರ್​ವಾಲ್​. ಪೃಥ್ವಿ ಶಾ ಹಾಗೂ ಆಕೃತಿ ಅಗರ್​​ವಾಲ್​ ಇಬ್ಬರ ನಡುವೆ ಸಂಮ್​​ಥಿಂಗ್​-ಸಂಮ್​​ಥಿಂಗ್​ ಹ್ಯಾಪನಿಂಗ್​ ಅನ್ನೋ ಗಾಸಿಪ್​ ಬಹಳ ಹಿಂದಿನಿಂದ ಇತ್ತು. ಆ ಗಾಸಿಪ್​ಗೆ ಪುಷ್ಟಿ ಸಿಕ್ಕಿದೆ. ಪೃಥ್ವಿ ಶಾ- ಆಕೃತಿ ಅಗರ್​ವಾಲ್​ ಇಬ್ಬರೂ ಒಟ್ಟಾಗಿ ಗಣೇಶನ ಹಬ್ಬವನ್ನ ಆಚರಿಸಿದ್ದಾರೆ. ಹಬ್ಬದ ಸಂಭ್ರಮದ ಫೋಟೋಗಳನ್ನ ಆಕೃತ್ತಿ ತಮ್ಮ ಇನ್ಸ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಆಕೃತಿ ಅಗರ್​ವಾಲ್​ ಫೋಟೋಗಳನ್ನ ಹಂಚಿಕೊಂಡಿದ್ದೆ ತಡ ಫ್ಯಾನ್ಸ್​​ ಕಮೆಂಟ್​ಗಳ ಸುರಿಮಳೆ ಸುರಿಸಿದ್ದಾರೆ. ಕೆಲವರು ಲವ್​ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಪೃಥ್ವಿಗೆ ಇನ್ನೂ ಬುದ್ಧಿ ಬಂದಿಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರಿಯರ್​ ಮೇಲೆ ಗಮನವಹಿಸಿ ರೈಟ್​​ ಟ್ರ್ಯಾಕ್​ಗೆ ಮರಳೋಕೆ ಇನ್ನೂ ಅವಕಾಶ ಇದೆ. ಅದಕ್ಕೆ ಏನ್​ ಮಾಡಬೇಕೋ ಅದನ್ನ ಬಿಟ್ಟು ಉಳಿದಿರೋದ್ರ ಮೇಲೆ ಹೆಚ್ಚು ಗಮನವಹಿಸ್ತಿದ್ದೀರಾ ಎಂದು ಕಿಡಿಕಾರಿದ್ದಾರೆ.

 

ಒಟ್ಟಿನಲ್ಲಿ ಪೃಥ್ವಿ ಷಾ ಬದುಕಿಗೆ ಹೊಸ ಗೆಳತಿಯ ಎಂಟ್ರಿಯಾಗಿದೆ. ಹೊಸ ಗೆಳತಿಯರ ಎಂಟ್ರಿಯ ಬಳಿಕ ಹಲವು ಕ್ರಿಕೆಟರ್​ಗಳ ಕರಿಯರ್​ ಬದಲಾದ ಉದಾಹರಣೆಗಳಿವೆ. ಹೀಗಾಗಿ ಈ ಆಕೃತಿ ಅಗರ್​ವಾಲ್​ ಪೃಥ್ವಿ ಜೀವನಕ್ಕೆ ಅದೃಷ್ಟ ದೇವತೆಯಾಗ್ತಾರಾ? ಹಳಿ ತಪ್ಪಿರೋ ಪೃಥ್ವಿಯ ಕರಿಯರ್​​ನ ಸರಿದಾರಿಗೆ ತರಲು ಪ್ರಯತ್ನಿಸ್ತಾರಾ? ಕಾದು ನೋಡೋಣ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!