ಪಂಜಾಬ್ ಕಿಂಗ್ಸ್ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಪ್ರಿಯಾಂಶ್ ಆರ್ಯ 7, ಪ್ರಭಾಸಿಮ್ರಾನ್ ಸಿಂಗ್ 18 ರನ್ಗೆ ಔಟ್ ಆದರು. ನಂತರ ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 2 ರನ್ಗೆ ಡ್ರೆಸ್ಸಿಂಗ್ ರೂಮ್ನತ್ತ ಹೆಜ್ಜೆ ಹಾಕಿದರು. ಇವರ ಬೆನ್ನಲ್ಲೇ ಜೋಶ್ ಇಂಗ್ಲಿಷ್ ಕೇವಲ 4 ರನ್ಗೆ ವಿಕೆಟ್ ಕಳೆದುಕೊಂಡರು.
ಬ್ಯಾಟಿಂಗ್ ಮಾಡಲು ಕ್ರೀಸ್ಗೆ ಬಂದ ನೆಹಾಲ್ ವಧೇರಾ, ಯಶ್ ದಯಾಳ್ ಬೌಲಿಂಗ್ನಲ್ಲಿ ಬೋಲ್ಡ್ ಆದರು, ಸುಯಶ್ ಶರ್ಮಾ ಬೌಲಿಂಗ್ನಲ್ಲಿ ಶಶಾಂಕ್ ಸಿಂಗ್ 3, ಮುಶೀರ್ ಖಾನ್, ಮಾರ್ಕಸ್ ಸ್ಟೊಯಿನಿಸ್ ಔಟ್ ಆದರು. ಇದರಿಂದ ಪಂಜಾಬ್ ಕಿಂಗ್ಸ್ ಕೇವಲ 14.1 ಓವರ್ಗಳಲ್ಲಿ ಆಲೌಟ್ ಆಗಿ 102 ರನ್ಗಳ ಟಾರ್ಗೆಟ್ ಅನ್ನು ಆರ್ಸಿಬಿಗೆ ನೀಡಿತ್ತು.ಈ ಸುಲಭ ಟಾರ್ಗೆಟ್ ಅನ್ನು ಚೇಸ್ ಮಾಡಿದ ಆರ್ಸಿಬಿ 10 ಓವರ್ಗೆ ಎರಡು ವಿಕೆಟ್ ಕಳೆದುಕೊಂಡು 106 ರನ್ ಗಳಿಸುವ ಮೂಲಕ ಜಯ ಸಾಧಿಸಿತು.




