ಪುಷ್ಪಾ ಹೇಳಿದ್ದೇನು? ಇತ್ತೀಚೆಗೆ ಅಶ್ವವೇಗ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡುವಾಗ, ದೀಪಿಕಾಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪುಷ್ಪಾ, ಅವರನ್ನು ಹೀಯಾಳಿಸಿದ್ದರು. ‘ದೀಪಿಕಾ ದಾಸ್ ಹಾಗೂ ನಮಗೆ ಆಗಿ ಬರಲ್ಲ. ಅವಳು ಯಾವ ಹೀರೋಯಿನ್ ಅಂತ ಆಯ್ಕೆ ಮಾಡಿಕೊಳ್ಳಬೇಕು? ಅವಳು ಏನು ಸಾಧನೆ ಮಾಡಿದ್ದಾಳೆ? ಅವರನ್ನು ನಾವು ದೂರದಲ್ಲೇ ಇಟ್ಟಿದ್ದೇವೆ’ ಎಂದು ಪುಷ್ಪಾ ಹೇಳಿದ್ದರು. ಟಿವಿ9 ಕನ್ನಡದ ಜೊತೆ ಮಾತನಾಡುವಾಗ, ‘ದೀಪಿಕಾಗೆ ನನ್ನ ಕಂಡರೆ ಭಯ. ಅವಳು ನನ್ನ ಹತ್ತಿರ ಹೆಚ್ಚು ಮಾತನಾಡಲ್ಲ’ ಎಂದಿದ್ದರು.
ದೀಪಿಕಾ ದಾಸ್ ಪ್ರತಿಕ್ರಿಯೆ ;ದೀಪಿಕಾ ದಾಸ್ ಅವರು ಕನ್ನಡ ಕಿರುತೆರೆ ನಟಿಯಾಗಿ ಗಮನ ಸೆಳೆದಿದ್ದಾರೆ. ಅವರು ‘ನಾಗಿಣಿ’ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಸಾಕಷ್ಟು ಗಮನ ಸೆಳೆದರು. ಅಲ್ಲದೆ, ಬಿಗ್ ಬಾಸ್ ಶೋಗೆ ಅವರು ಎರಡು ಬಾರಿ ಆಗಮಿಸಿದ್ದರು. ಈ ಮೂಲಕ ದೊಡ್ಡ ಹೆಸರು ಮಾಡಿದ್ದಾರೆ. ಅವರು ಈಗ ವಿವಾಹ ಆಗಿ ಸಂಸಾರದ ಕಡೆ ಗಮನ ಹರಿಸಿದ್ದಾರೆ. ಹೀಗಿರುವಾಗಲೇ ದೀಪಿಕಾ ಬಗ್ಗೆ ಪುಷ್ಪಾ ಈ ರೀತಿಯ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರೋ ದೀಪಿಕಾ ದಾಸ್, ‘ಹೊಸ ಕಲಾವಿದರನ್ನು ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದ್ದನ್ನು ಕಲಿತಿರಬೇಕು. ಇಲ್ಲಿವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ ಮುಂದೇನೂ ಬರಲ್ಲ. ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ. ವಿಥ್ ಡ್ಯೂ ರೆಸ್ಪೆಕ್ಟ್ ಸ್ಟಾರ್ ಆಫ್ ಅವರ್ ಇಂಡಸ್ಟ್ರಿ. ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’ ಎಂದು ದೀಪಿಕಾ ಎಚ್ಚರಿಸಿದ್ದಾರೆ.





