Muda ನೂತನ ಆಯುಕ್ತರಾಗಿ ರಘುನಂದನ್ ನಿಯೋಜನೆ… ಹಾಲಿ ಆಯುಕ್ತರಿಗೆ ಸ್ಥಳ ತೋರಿಸದೆ ಹೋಲ್ಡ್ …
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರನ್ನು ವರ್ಗ ಮಾಡಲಾಗಿದ್ದು. ಹೊಸ ಆಯುಕ್ತರನ್ನು ನೇಮಿಸಲಾಗಿದೆ. ಅಲ್ಲದೇ ಕಾರ್ಯದರ್ಶಿ ಅವರನ್ನು ಬದಲು ಮಾಡಿ ಅಲ್ಲಿಗೂ ಹೊಸ ಅಧಿಕಾರಿ ನಿಯೋಜಿಸಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಹಿರಿಯ ಕೆಎಎಸ್ ಅಧಿಕಾರಿ ಎ.ಎನ್.ರಘುನಂದನ್ ಅವರನ್ನು ನೇಮಕ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಮತ್ತೊಬ್ಬ ಕೆ.ಎ.ಎಸ್. ಅಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.





