ಮೈಸೂರು: ರಾಹುಲ್ ಗಾಂಧಿ ಹೋರಾಟ ವಿಚಾರವಾಗಿ
ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ.”ಸೋತು ಕಂಗೆಟ್ಟಿರುವ ಕಾಂಗ್ರೆಸ್ ತರಾವರಿ ಆರೋಪ ಮಾಡುತ್ತಿದೆ.
ಇವಿಎಂ ಹಠಾವೋ ಚಳವಳಿಯನ್ನು ಕಾಂಗ್ರೆಸ್ ಶುರು ಮಾಡಿದೆ. ರಾಹುಲ್ ಗಾಂಧಿ ಮಾಡುವ ಆರೋಪಕ್ಕೆ ಸಾಕ್ಷಿ ಏನಿದೆ ? ಹೆಸರನ್ನೆ ಫ್ರಾಂಡ್ ಮಾಡಿದ ವಂಶ ನಿಮ್ಮದು.
ಫಿರೋಜ್ ಗಾಂಧಿ ಅನ್ನೋ ಹೆಸರನ್ನು ಫ್ಹಿರೋಜ್ ಗಾಂಧಿ ಅಂತಾ ಬದಲಾಯಿಸಿದ ವಂಶ ನಿಮ್ಮದು. ಫ್ರಾಂಡ್ ಮಾಡಿಕೊಂಡು ಗಾಂಧಿ ಅಂತಾ ಸರ್ ನೇಮ್ ಇಟ್ಟು ಕೊಂಡು ವಂಶ ನಿಮ್ಮದು.”
ಮತಗಳ್ಳತನ ವಿಚಾರ ಕುರಿತು ” ನೀವು ಗೆದ್ದ ಕಡೆಯಲೆಲ್ಲಾ ಮತಗಳ್ಳತನ ಆಗಿಲ್ವಾ? ಜನಕ್ಕಿಂತಾ ಜಾಸ್ತಿ ಮತದಾರರು ಇದ್ದಾರೆ ಅಂತಾ ಹೇಳುವ ನಿಮ್ಮ ಆರೋಪಕ್ಕೆ ಸಾಕ್ಷಿಯೆ ಇಲ್ಲ.
ವಿಧಾನಸಭೆಗೆ ಒಂದು ರೀತಿ ಮತ ಹಾಕುತ್ತಾರೆ. ಲೋಕಸಭೆಗೆ ಒಂದು ರೀತಿ ಮತ ಹಾಕುತ್ತಾರೆ. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸತ್ತವರು ಬಂದು ನನಗೆ ಮತ ಹಾಕಿದ್ದಾರೆ ಎಂದು ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದರು. ಚಾಮುಂಡೇಶ್ವರಿ ಉಪ ಚುನಾವಣೆ ಗೆ ಫಿಟರ್ ಅಂತಾ ಚುನಾವಣಾ ಅಧಿಕಾರಿ ಹಾಕಿಸಿ ಕೊಂಡು ಬಂದು ನೀವು ಹೇಗೆ ಗೆದ್ದಿರಿ ಗೊತ್ತಿದೆ. ಟಿ. ನರಸೀಪುರದಲ್ಲಿ ಡಿಕ್ಲೇರ್ ಆದ ಫಲಿತಾಂಶ ಉಲ್ಟಾ ಮಾಡಿ ಗೆದ್ದಿದ್ದು ಮಹದೇವಪ್ಪ. ಅಕ್ರಮ ಎನ್ನುವುದು ಕಾಂಗ್ರೆಸ್ ಗೆ ಜನ್ಮತಾ ಬಂದಿದೆ. ಚನ್ನಪಟ್ಟಣ, ಸಂಡೂರು, ರಾಮನಗರ ಉಪ ಚುನಾವಣೆ ಗೆದ್ದಾಗ ಅದು ನ್ಯಾಯ ಸಮ್ಮತ ಚುನಾವಣೆ ನಾ? ಸಿಎಂ ಕೂಡ ರಾಹುಲ್ ಗಾಂಧಿ ಥರ ಮಾತನಾಡಿದರೆ ನಾವು ಏನೂ ಹೇಳಬೇಕು. ಪ್ರಿಯಾಂಕ ಖರ್ಗೆ ಮೊದಲು ತನ್ನ ಕ್ಷೇತ್ರದ ಬಗ್ಗೆ ಮಾತಾಡಲಿ. ಪ್ರಿಯಾಂಕ ಖರ್ಗೆ ಅಂತೂ ಕಾಲೇಜ್ ಓದಲಿಲ್ಲ. ತಮ್ಮ ಕ್ಷೇತ್ರದ ಮಕ್ಕಳಾದರೂ ಓದೋಕೆ ಕಾಲೇಜ್ ಕಟ್ಟಿಸಲಿ ” ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ





