1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗು ತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ವಾಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನು ರೈತರಿಗೆ ಕೊಡಲು ಸೂಚಿಸಿದ್ದೇವೆ ಎಂದರು.
50 ಲಕ್ಷ ಲೀಟರ್ ಮಾರಾಟ ಮಾಡುವುದಕ್ಕೆ ಮಾತ್ರ ನಮಗೆ ಹಣ ಬರುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದ ರೈತರಿಗೆಹಣ ಕೊಡುತ್ತಿದ್ದೇವೆ. ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು, ಈಗ ನಾವು ತುಪ್ಪಕ್ಕೆ ನಿಗದಿಮಾಡಿರುವ ದರ ಮಾರುಕಟ್ಟೆಗಿಂತ ಕಡಿಮೆಯಿದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ ಎಂದು ಡಿ.ಕೆ.ಸುರೇಶ್ ಹೇಳಿದರು.
ರಾಜ್ಯದಲ್ಲಿ ಬೆಲೆ ಏರಿಕೆಯ ಸರಮಾಲೆ
- ಬಸ್ ದರ ಶೇ.15ರಷ್ಟು ಹೆಚ್ಚಳ
- ಡೀಸೆಲ್ ದರ ಪ್ರತಿ ಲೀಗೆ 2 ರೂ. ಹೆಚ್ಚಳ
- ವಿದ್ಯುತ್ ದರದೊಂದಿಗೆ ಸೆಸ್ ಹೆಚ್ಚಳ
- ಆಸ್ತಿ ಮಾರ್ಗಸೂಚಿ ಮೌಲ್ಯ ಶೇ.15ರಿಂದ 30ರಷ್ಟರವರೆಗೆ ಹೆಚ್ಚಳ
- ಕೈಗಾರಿಕಾ ಬಳಕೆಗಾಗಿ ವಿದ್ಯುತ್, ನೀರು, ಇಂಧನದ ದರಗಳು ಹೆಚ್ಚಳ.
- ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಏರಿಕೆ.
- ರೂ. 25 ಲಕ್ಷ ಮೀರಿದ ವಿದ್ಯುತ್ ವಾಹನಗಳಿಗೆ ಶೇ.10ರಷ್ಟು ಲೈಫ್ರೆಮ್ ಟ್ಯಾಕ್ಸ್.
- ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ.71ರಷ್ಟು ಏರಿಕೆ.
- ಹಾಲು, ಮೊಸರು, ಮಜ್ಜಿಗೆ ವರಗಳಲ್ಲಿ ರೂ.4ರಷ್ಟು ಏರಿಕೆ.
- ಒಟಿಟಿ ಸೇವೆಗಳು, ಚಿತ್ರಮಂದಿರ ಟಿಕೆಟ್ಗಳಿಗೆ ಶೇ.2ರಷ್ಟು ಸೆಸ್.
- ವಾಸಸ್ಥಳ ಮತ್ತು ವ್ಯಾಪಾರಿಕ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ.
- ಕ್ವಾರಿ ಚಾರ್ಜ್ ಹೆಚ್ಚಳದಿಂದ ಕಟ್ಟಡ ನಿರ್ಮಾಣದ ವೆಚ್ಚ ಗಗನಕ್ಕೆ.
- ಬಾಡಿಗೆ ದಾಖಲೆಗಳ ಸ್ಟಾಂಪ್ ಡ್ಯೂಟಿ ಶೇ.200ರಿಂದ 500ರಷ್ಟು ಹೆಚ್ಚಳ.
- ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆಯೊಂದಿಗೆ ತ್ಯಾಜ್ಯ ಶುಲ್ಕ ಸೇರ್ಪಡೆ.
- ಹೊಸ ವಾಹನ ನೋಂದಣಿಗೆ ಹೆಚ್ಚುವರಿ ಶುಲ್ಕ
- ಮದ್ಯದ ದರ ಹೆಚ್ಚಳ
- ಆಹಾರ ಪದಾರ್ಥಗಳ ಬೆಲೆ ಏರಿಕೆ
- ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ
- ಆಸ್ಪತ್ರೆಗಳಲ್ಲಿ ಎಕ್ಸರೇ, ಔಟ್ ಪೇಸೆಂಟ್ ಶುಲ್ಕ ಶೇ.50ರಿಂದ 100ರಷ್ಟು ಹೆಚ್ಚಳ
- ಗಿಗ್ ವರ್ಕರ್ಸ್ ನಿಧಿಗೆ ಕಂಪನಿಗಳಿಂದ ಶೇ.5ರಷ್ಟು ಸೆಸ್.





