
ಮೈಸೂರು ಮಹಾನಗರ ಪಾಲಿಕೆಯ ವಲಯ ಕಛೇರಿ-4 ರ ಕಂದಾಯ ಅಧಿಕಾರಿ ಎಂ.ಎನ್.ನಂದೀಶ್ ಮತ್ತು ಬಿಲ್ ಕಲೆಕ್ಟರ್ ರಜಾಕ್ ಲೋಕಾಯುಕ್ತ ಬಲೆಗೆ ಬಿದ್ದವರು.
ಇ-ಸ್ವತ್ತು ಮಾಡಿಕೊಡಲು ವ್ಯಕ್ತಿಯೊಬ್ಬರ ಬಳಿ ರೂ. 25,000/-(ಇಪ್ಪತ್ತೈದು ಸಾವಿರ ರೂಪಾಯಿಗಳು) ಲಂಚದ ಹಣಕ್ಕೆ ಇಬ್ಬರು ಬೇಡಿಕೆ ಇಟ್ಟಿದ್ದರು. ಈ ಸಂಬಂಧ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

ಇಂದು ಆರೋಪಿಗಳಾದ ಕಂದಾಯ ಅಧಿಕಾರಿ ಎಂ.ಎನ್.ನಂದೀಶ್ ಮತ್ತು ಬಿಲ್ ಕಲೆಕ್ಟರ್ ರಜಾಕ್ ಅವರು ವ್ಯಕ್ತಿಯಿಂದ ಲಂಚದ ಹಣವನ್ನು ಪಡೆದುಕೊಳ್ಳುವಾಗ ಮೈಸೂರು ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾರೆ.

ಪೊಲೀಸ್ ಮಹಾನಿರ್ದೇಶಕ ಮನೀಷ್ ಕರ್ಬೀಕರ್ ಮತ್ತು ಪೊಲೀಸ್ ಮಹಾನಿರೀಕ್ಷಕ ಸುಬ್ರಹ್ಮಣೇಶ್ವರರಾವ್ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಅಧೀಕ್ಷಕ ಉದೇಶ.ಟಿ.ಜೆ, ನೇತೃತ್ವದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಉಮೇಶ್.ಪಿ, ಲೋಕೇಶ್, ರವಿಕುಮಾರ್, ಸಿಬ್ಬಂದಿಯವರುಗಳಾದ ಲೋಕೇಶ್.ಆರ್.ಎನ್, ಗೋಪಿ.ಹೆಚ್.ಎನ್, ಲೋಕೇಶ್ ರಾಜೇ ಅರಸ್, ಕಾಂತರಾಜು, ಮೋಹನ್‌ಗೌಡ, ಮೋಹನ್ ಕುಮಾರ್, ಲೋಕೇಶ್, ದಿನೇಶ್, ಈ ಕಾರ್ಯಾಚರಣೆ ನಡೆದಿದೆ.





