ಅವರು ವಿದೇಶಿ ಪ್ರಜೆಗಳು. ಮೆಡಿಕಲ್ ವಿಸಾದಲ್ಲಿ ಭಾರತಕ್ಕೆ ಬಂದಿದ್ದರು. ಬಂದ ಕೆಲಸ ಮುಗಿಸಿಕೊಂಡು ಹೋಗುವುದು ಬಿಟ್ಟು ಅಕ್ರಮ ಎಸಗಿ ಸಿಕ್ಕಿಬಿದ್ದಿದ್ದಾರೆ. ನೈಜೀರಿಯಾ ಪ್ರಜೆಗಳಿಬ್ಬರು ಹೊಲಸು ಬುದ್ದಿ ತೋರಿಸಿ ಪೊಲೀಸರ ವಶವಾಗಿದ್ದಾರೆ.

ರೆಡಿಮೇಡ್ ಬಟ್ಟೆಗಳ ಪ್ಯಾಕ್ಗಳಲ್ಲಿ ಬಚ್ಚಿಟ್ಟು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ಪೊಲೀಸರು ದಾಖಲೆ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರೆಡಿಮೇಡ್ ಬಟ್ಟೆಗಳ ಪ್ಯಾಕ್ಗಳಲ್ಲಿ ಡ್ರಗ್ಸ್ ಮಾರಾಟ! ನೈಜೀರಿಯಾ ಪ್ರಜೆಗಳಿಬ್ಬರು ಪೊಲೀಸ್ ವಶಕ್ಕೆ
ಬಂಧಿತ ನೈಜೀರಿಯಾ ಪ್ರಜೆಗಳು
ಬೆಂಗಳೂರು, ಜುಲೈ ರೆಡಿಮೇಡ್ ಬಟ್ಟೆಗಳ ಪ್ಯಾಕ್ಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರನ್ನು ಬೆಂಗಳೂರಿನ ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 4.50 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಲಾಸೊನ್ಯೆ ಪೀಟರ್ ಒಬಿಯೋಮಾ ಹಾಗೂ ಸಂಡೇ ವಿನ್ಡಮ್ ಎಂದು ಗುರುತಿಸಲಾಗಿದೆ.

ಇವರು ಮೆಡಿಕಲ್ ವಿಸಾದಲ್ಲಿ ದೆಹಲಿಗೆ ಬಂದಿದ್ದರು. ದೆಹಲಿಯಿಂದ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದು ನೆಲೆಸಿದ್ದರು. ಬೇರೆಯವರ ಹೆಸರಲ್ಲಿ ಮನೆ ಬಾಡಿಗೆ ಪಡೆದು ಏರ್ಪೋರ್ಟ್ ಬಳಿ ಸೆಕ್ಯೂರಿಟಿಗಳು ಹಾಕುವಂತೆ ಮನೆ ಬಳಿ ಬಟ್ಟೆ ಹಾಕಿಕೊಂಡು ತಿರುಗಾಡುತಿದ್ದರು. ಅಲ್ಲದೆ, ಡ್ರಗ್ ಪೆಡ್ಲಿಂಗ್ ಮಾಡಬೇಕು ಎಂದು ಬಂದಿದ್ದ ಐನಾತಿಗಳು ನಂತರ ತಮ್ಮ ಅಸಲಿ ವರಸೆ ಶುರುವಿಟ್ಟುಕೊಂಡಿದ್ದರು. ಮನೆಯಲ್ಲಿಯೇ ಡ್ರಗ್ ಶೇಖರಿಸಿಕೊಟ್ಟು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.





