ಸಹಕಾರ ಸಚಿವ ಮೇಲಿನ ಹನಿಟ್ರ್ಯಾಪ್ ವಿಚಾರ ರಾಜ್ಯಾದಂತ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿ ಮಾಡಿತ್ತು. ರಾಜಣ್ಣರವರ ಪುತ್ರನ ಮೇಲಿನ ಕೊ* ಸುಫಾರಿ ಯತ್ನ ಇವೆಲ್ಲವೂ ಕೂಡ ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಒಂದು ರೀತಿಯ ಮುಜುಗರ ತಂದೊಡ್ಡಿದೆ. ಇವೆಲ್ಲವನ್ನೂ ಕೂಡ ಸರಿಪಡಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯನವರು ಮಾಡಬೇಕಾದ ಪರಿಸ್ಥಿತಿ ಹಾಗೂ ಅನಿವಾರ್ಯ ಎದುರಾಗಿದೆ.
ಜೊತೆಗೆ ಸಂಪುಟ ಪುನಾರಚಣೆ ವಿಚಾರವೂ ಮುನ್ನಲೆಗೆ ಬಂದಿರುವುದರಿಂದ ಅದು ಕೂಡ ಚರ್ಚೆಗೆ ಬರಬಹುದು ಎಂಬುದು ತಿಳಿದು ಬಂದಿದೆ. ಇದೇ ಮೇಗೆ ಕಾಂಗ್ರೆಸ್ ಆಡಳಿತಕ್ಕೆ ಬಂದು ಎರಡು ವರ್ಷಗಳು ಕಂಪ್ಲೀಟ್ ಆಗಲಿದ್ದು, ಎರಡೂವರೆ ವರ್ಷದ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಏನಾದ್ರೂ ಬದಲಾವಣೆ ಗಾಳಿ ಬೀಸಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.





