
ಈ ಮೊದಲು ಸೋನಮ್ ಕಾರಿನ ಮೂಲಕ ಘಾಜಿಪುರಕ್ಕೆ ಪ್ರಯಾಣಿಸಿದ್ದಳು ಎಂಬ ಮಾಹಿತಿ ಇತ್ತು. ಆದರೆ, ಆಕೆ ಬಸ್ನ ಮೂಲಕ ಪ್ರಯಾಣಿಸಿದ್ದು, ಅವರ ಪಕ್ಕದಲ್ಲಿಯೇ ಘಾಜಿಪುರದ ಸೈಯದ್ಪುರದ ನಿವಾಸಿ ಉಜಲಾ ಯಾದವ್ ಪ್ರಯಾಣಿಸಿದ್ದರು. ಈಕೆ ರಾಜಾ ರಘುವಂಶಿ ಸಹೋದರ ಸಚಿನ್ ರಘುವಂಶಿಗೆ ಕರೆ ಮಾಡಿ ಮಾತನಾಡಿರುವ ರೆಕಾರ್ಡಿಂಗ್ ಎಲ್ಲೆಡೆ ಹರಿದಾಡುತ್ತಿದೆ.
ವಾರಣಾಸಿಯಿಂದ ಘಾಜಿಪುರಕ್ಕೆ ಪ್ರಯಾಣಿಸಲು ಮುಂದಾದ ಸೋನಮ್ ನಂದಗಂಜ್ನಲ್ಲಿ ಇಳಿದಿದ್ದಳು. ಘಾಜಿಪುರದಿಂದ ಸ್ವಲ್ಪವೇ ದೂರದಲ್ಲಿರುವ ನಂದಗಂಜ್ನಲ್ಲಿ ಇಳಿದು ಅವಳು ಘಾಜಿಪುರಕ್ಕೆ ಹೋಗುವ ಮತ್ತೊಂದು ಬಸ್ ಏರಿದ್ದಳು.

ಈ ರೀತಿ ರೀಲ್ಸ್ ನೋಡಬೇಡಿ ಎಂದಿದ್ದ ಉಜಲಾ: ಸೋನಮ್ನನ್ನು ಬಸ್ ಹತ್ತಿಸಲು ಬಂದಿದ್ದ ವ್ಯಕ್ತಿಗಳು ಇದೀಗ ಪೊಲೀಸರ ಬಂಧನದಲ್ಲಿರುವ ಯುವಕರಲ್ಲ ಎಂದು ಉಜಲಾ ತಿಳಿಸಿದ್ದಾರೆ. ಸೋನಮ್ ನನ್ನ ಪಕ್ಕದಲ್ಲಿ ಕುಳಿತಿದ್ದರು. ರಾಜಾ ರಘುವಂಶಿ ಸಾವಿನ ಸುದ್ದಿಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮದಲ್ಲಿ ನಾನು ರೀಲ್ಗಳನ್ನು ನೋಡುತ್ತಿದ್ದಾಗ, ಅವಳು ನನ್ನ ಮೇಲೆ ಕೋಪಗೊಂಡು ಇಂತಹ ರೀಲ್ಗಳನ್ನು ನೋಡಬೇಡಿ ಎಂದು ತನ್ನ ಮುಖವನ್ನು ಮರೆಮಾಡಿಕೊಂಡಳು.

ಘಾಜಿಪುರದಲ್ಲಿ ಇಳಿದ ನಾನು ಸೈಯದ್ಪುರ್ಕ್ಕೆ ಹೋಗುವ ಬಸ್ ಹತ್ತಿದೆ. ಮನೆಗೆ ಬಂದ ನಾನು ಮರುದಿನ ನೋಡಿದಾಗ ಎಲ್ಲೆಡೆ ಈ ಸುದ್ದಿ ಕಂಡೆ, ಈ ವೇಳೆ ಸೋನಮ್ ಫೋಟೋವನ್ನು ನೋಡಿದೆ. ಆಗ ಅದೇ ಯುವತಿ ಜೊತೆ ತಾನು ನಿನ್ನೆ ರಾತ್ರಿ ಪ್ರಯಾಣಿಸಿದ್ದು ಅನ್ನೋದು ತಿಳಿಯಿತು. ತಕ್ಷಣಕ್ಕೆ ನಾನು ನಂದಗಂಜ್ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದೆ. ಘಾಜಿಪುರಕ್ಕೆ ಹೋಗಬೇಕು ಎಂದಿದ್ದ ಅವಳು, ಮಧ್ಯದಲ್ಲೇ ಇಳಿದಿದ್ದು, ನನಗೆ ಅರ್ಥವಾಗಲಿಲ್ಲ ಎಂದಿದ್ದಾರೆ.

ಸೋನಮ್ ವಿಚಾರಣೆ ವೇಳೆ ಮೇ 22 ರಂದು ಆಕೆಗೆ ಇಂದೋರ್ನಿಂದ ಅಸ್ಸೋಂ ತಲುಪಿದ್ದು, ಅಸ್ಸೋಂನ ಕಾಮಾಕ್ಯ ದೇವಿ ದರ್ಶನದ ಬಳಿಕ ಸಂಜೆಯೇ ಶಿಲ್ಲಾಂಗ್ಗೆ ತೆರಳಿದ್ದಾಗಿ ತಿಳಿಸಿದ್ದಾಳೆ.
ಸೋನಮ್ ಸೂಟ್ಕೇಸ್ ಕಾಣೆ: ಪೊಲೀಸರು ಸೊಹ್ರಾ ಹಿಲ್ಸ್ನಲ್ಲಿರುವ ಹೋಂಸ್ಟೇಯನ್ನು ತನಿಖೆ ಮಾಡಿದಾಗ ರಾಜಾ ಅವರ ವಸ್ತುಗಳು ಮಾತ್ರ ಕಂಡು ಬಂದಿದ್ದವು. ಅಲ್ಲಿ ಇದ್ದ ಸೂಟ್ಕೇಸ್ನಲ್ಲಿ ಸೋನಮ್ ಮಂಗಳಸೂತ್ರ ಮತ್ತು ಉಂಗುರ ಸಿಕ್ಕಿತ್ತು. ಇದು ತನಿಖೆಗೆ ಮಹತ್ವದ ತಿರುವು ನೀಡಿತ್ತು.

ಜಲಪಾತದ ಬಳಿ ಕರೆದೊಯ್ದಿದ್ದ ಸೋನಮ್: ಮೇ 23 ರಂದು ರಾಜಾ ಅವರ ತಾಯಿ ಉಮಾ ರಘುವಂಶಿ ಜೊತೆ ಮಾತನಾಡಿದಾಗ, ಸೋನಮ್ ಶಿಲ್ಲಾಂಗ್ನಲ್ಲಿರುವ ಜಲಪಾತಗಳಿಗೆ ಭೇಟಿ ನೀಡುವ ಬಗ್ಗೆ ಸೋನಮ್ ತಿಳಿಸಿದ್ದಳು. ಈ ವೇಳೆ ರಾತ್ರಿ ಜಲಪಾತದ ಬಳಿಯ ಸೊಹ್ರಾ ಬೆಟ್ಟಗಳಲ್ಲಿರುವ ಹೋಂಸ್ಟೇಯಲ್ಲಿ ತಂಗುವುದಾಗಿ ರಾಜಾ ತಾಯಿಗೆ ಹೇಳಿದ್ದು ತನಿಖೆಯಲ್ಲಿ ಗೊತ್ತಾಗಿದೆ.

ಆರೋಪಿಗಳ ತನಿಖೆ ಮಾಡುತ್ತಿರುವ ಶಿಲ್ಲಾಂಗ್ ಪೊಲೀಸರು: ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಇಂದೋರ್ ನಿವಾಸಿ ರಾಜ್ ಕುಶ್ವಾಹ, ಸೋನಮ್, ಆತನ ಸ್ನೇಹಿತರಾದ ವಿಶಾಲ್, ಆನಂದ್ ಮತ್ತು ಅಂಕಿತ್ ಅವರನ್ನು ಬಂಧಿಸಿ ಶಿಲ್ಲಾಂಗ್ಗೆ ಕರೆದೊಯ್ದು ಪೊಲೀಸರು ತನಿಖೆ ನಡೆಸಿದ್ದಾರೆ.





