ಈಗಾಗಲೇ ಅನುಶ್ರೀ ಹಾಗೂ ರೋಷನ್ ಅದ್ಧೂರಿಯಾಗಿ ಅರಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ. ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಅನುಶ್ರೀ ಹಾಗೂ ರೋಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇನ್ನೂ, ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಈ ಇಬ್ಬರ ಮದುವೆಯೂ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಡೆಯಲಿದೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಲಿದ್ದಾರೆ.





