Actress Archives - Good News 24x7 https://www.goodnews24x7.com/tag/actress/ Kannada Sun, 23 Nov 2025 06:43:44 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Actress Archives - Good News 24x7 https://www.goodnews24x7.com/tag/actress/ 32 32 ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ https://www.goodnews24x7.com/sudeep-asks-ashwini-directly-who-are-you-to-protect-her-honor/ Sun, 23 Nov 2025 06:43:44 +0000 https://www.goodnews24x7.com/?p=8250 Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು.…

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು. ಇದೇ ವಿಷಯದ ಬಗ್ಗೆ ಸುದೀಪ್, ಅಶ್ವಿನಿ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್​​ಬಾಸ್ (Bigg Boss) ಸ್ಪರ್ಧಿ ಅಶ್ವಿನಿ ಅವರ ನಟಿ ಆಗಿರುವ ಜೊತೆಗೆ ಕನ್ನಡಪರ ಹೋರಾಟಗಾರ್ತಿಯೂ ಹೌದು. ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡಪರ ಸಂಘಟನೆಗಳ ಸಕ್ರಿಯ ಸದಸ್ಯೆ ಆಗಿರುವ ಅಶ್ವಿನಿ ಅವರು ಸಾಕಷ್ಟು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ಆಗುವ ಕಾರ್ಯವನ್ನು ಮಾಡಿದ್ದಾರಂತೆ. ಬಿಗ್​​ಬಾಸ್ ಮನೆಯಲ್ಲಿಯೂ ಸಹ ತಮ್ಮ ಹೋರಾಟದ ಮುಖವನ್ನು ಆಗಾಗ್ಗೆ ತೋರಿಸುತ್ತಲೇ ಇರುತ್ತಾರೆ. ಅದರಲ್ಲೂ ಕೆಲವೊಮ್ಮೆ ಅವಶ್ಯಕತೆ ಇಲ್ಲದ ಸಂದರ್ಭದಲ್ಲಿಯೂ ಅವರು ಬೇರೆಯವರ ಪರವಾಗಿ ದನಿ ಎತ್ತುವುದುಂಟು. ಆದರೆ ಇದೇ ಅವರಿಗೆ ಮುಳುವಾಗಿದೆ.

ಅಶ್ವಿನಿ ಅವರು ಬಿಗ್​​ಬಾಸ್ ಮನೆಯಲ್ಲಿ ಮಹಿಳೆಯರ ಪರವಾಗಿ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಅದರಲ್ಲೂ ಗಿಲ್ಲಿ, ರಘು ಅವರೊಟ್ಟಿಗೆ ಜಗಳವಾದಾಗ ಮಹಿಳೆಗೆ ನೀನು ಹಾಗೆ ಮಾತನಾಡಬೇಡ, ಹೆಣ್ಣುಮಕ್ಕಳಿಗೆ ಎಂದಿಗೂ ಹಾಗೆ ಅನ್ನಬೇಡ, ಅವರ ಗೌರವಕ್ಕೆ ಧಕ್ಕೆ ತರಬೇಡ ಎಂದೆಲ್ಲ ಜಗಳದ ಮಧ್ಯೆ ವಾಕ್ಯಗಳನ್ನು ಬಳಸುತ್ತಿರುತ್ತಾರೆ. ಇಂದು ಸುದೀಪ್ ಅವರು ಈ ಬಗ್ಗೆ ಅಶ್ವಿನಿ ಅವರಿಗೆ ಸ್ಪಷ್ಟವಾಗಿ ಒಂದು ಕ್ಲಾಸ್ ತೆಗೆದುಕೊಂಡರು ಮತ್ತು ಬಿಗ್​​ಬಾಸ್ ಮನೆಯಲ್ಲಿ ಮಹಿಳಾ ಕಾರ್ಡ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಬಿಗ್​​ಬಾಸ್ ಮನೆಯ ಮಹಿಳೆಯರಿಗೆ ಎಚ್ಚರಿಕೆ ನೀಡಿದರು.

‘ಅಶ್ವಿನಿ ಅವರೇ ಬಿಗ್​​ಬಾಸ್ ಮನೆಯ ಮಹಿಳೆಯರ ಮಾನ, ಗೌರವ ಕಾಪಾಡುವ ನೀವು ಗುತ್ತಿಗೆ ನೀವು ಪಡೆದಿದ್ದೀರ? ಏಕೆ ಅವರ ಹಿತವನ್ನು ಅವರು ಕಾಪಾಡಿಕೊಳ್ಳುವಷ್ಟು ಧೈರ್ಯ, ಶಕ್ತಿ ಬಿಗ್​​ಬಾಸ್ ಮನೆಯಲ್ಲಿ ಬೇರೆ ಮಹಿಳೆಯರಿಗೆ ಇಲ್ಲವಾ? ಅಥವಾ ಅವರೇ ಅವರ ಗೌರವ, ಮರ್ಯಾದೆಗಳನ್ನು ಕಾಪಾಡುವಂತೆ ನಿಮ್ಮ ಬಳಿ ಕೇಳಿಕೊಂಡಿದ್ದಾರಾ?’ ಎಂದು ಪ್ರಶ್ನೆ ಮಾಡಿದರು. ಅದೇ ಪ್ರಶ್ನೆಯನ್ನು ಮನೆಯ ಇತರೆ ಮಹಿಳಾ ಸದಸ್ಯರಿಗೂ ಮಾಡಿದ ಸುದೀಪ್, ‘ನಿಮ್ಮ ಮರ್ಯಾದೆಗಳನ್ನು ನೀವುಗಳು ಕಾಪಾಡಿಕೊಳ್ಳದಷ್ಟು ದುರ್ಬಲರಾ ನೀವು? ಎಂದು ಕೇಳಿದರು.

ಮಾತೆತ್ತಿದರೆ ‘ಯಾವ ಹೆಣ್ಣಿಗೂ ಹೀಗೆ ಮಾಡಬೇಡಿ’, ‘ಹೆಣ್ಣಿಗೆ ಗೌರವ ಕೊಡಿ’ ಎನ್ನುತ್ತೀರಿ. ಹೆಣ್ಣಿಗೆ ಈ ಮನೆಯಲ್ಲಿ ಎಂದೂ ಗೌರವ ಕಡಿಮೆ ಆಗಿಲ್ಲ. ಹೆಣ್ಣುಮಕ್ಕಳಿಗೆ ಅವಮಾನ ಆಗದಂತೆ ನಾವು ಕಾವಲು ಕಾಯುತ್ತಿದ್ದೇವೆ. ಎಲ್ಲಿಯಾದರೂ ಸಣ್ಣ ತಪ್ಪು ನಡೆದರೂ ಸಹ ನಾವು ಅದಕ್ಕೆ ಶೀಘ್ರವೇ ಆಕ್ಷನ್ ತೆಗೆದುಕೊಳ್ಳುತ್ತೇವೆ. ಅಷ್ಟು ಮಾತ್ರವೇ ಅಲ್ಲ, ಯಾರಾದರೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ವರ್ತಿಸಿದರೆ, ಕೆಟ್ಟ ಉದ್ದೇಶದಿಂದ ಮಾತನಾಡಿದರೆ, ಮುಟ್ಟಿದರೆ ಅದು ಮೊದಲಿಗೆ ಗೊತ್ತಾಗುವುದು ಆ ಮಹಿಳೆಗೆ. ಹಾಗೇನಾದರೂ ಆಗಿದ್ದರೆ ಕೂಡಲೇ ಹೇಳಿ, ಈಗಲೇ ಕ್ರಮ ಕೈಗೊಳ್ಳೋಣ. ನೀವುಗಳು ಹೀಗೆ ಮಾತನಾಡುವುದರಿಂದ ಮನೆಯಲ್ಲಿರುವ ಗಂಡಸರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ’ ಎಂದರು ಸುದೀಪ್.

‘ಈ ಮನೆಯಲ್ಲಿ ಯಾರೂ ವುಮೆನ್ ಕಾರ್ಡ್ ಪ್ಲೇ ಮಾಡಬೇಡಿ. ಅದು ಕೆಟ್ಟದಾಗಿ ಕಾಣುತ್ತದೆ. ಅಲ್ಲದೆ ನಿಮ್ಮ ಗೌರವ, ಮರ್ಯಾದೆಗಳನ್ನು ನೀವೇ ಕಾಪಾಡಿಕೊಳ್ಳಿ, ಅವುಗಳನ್ನು ಕಾಪಾಡುವ ಹೊಣೆಯನ್ನು ಬೇರೆ ಸ್ಪರ್ಧಿಗಳಿಗೆ ಕೊಡಬೇಡಿ. ಯಾಕೆ ನೀವು ಅಷ್ಟೋಂದು ವೀಕಾ? ನಿಮಗೆ ಶಕ್ತಿ, ಧೈರ್ಯ ಇಲ್ಲವಾ’ ಎಂದು ಸುದೀಪ್ ಮಹಿಳಾ ಸ್ಪರ್ಧಿಗಳನ್ನು ಪ್ರಶ್ನೆ ಮಾಡಿದರು.

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>
ಮಂಡ್ಯದ ಗಂಡು​ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ https://www.goodnews24x7.com/demand-to-give-karnataka-ratna-to-ambi-the-son-of-mandya/ Tue, 16 Sep 2025 06:34:50 +0000 https://www.goodnews24x7.com/?p=7550 ವಿಷ್ಣುವರ್ಧನ್ ಆಯ್ತು, ಈಗ ರೆಬಲ್ ಸ್ಟಾರ್​ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಅಂಬಿ ಅಭಿಮಾನಿಗಳು ಆಗ್ರಹಿಸಿದ್ದಾರೆ. ಇವತ್ತು ರೆಬಲ್ ಸ್ಟಾರ್​ ಅಭಿಮಾನಿಗಳ ಪರವಾಗಿ ಹಿರಿಯ ನಟಿ ತಾರಮ್ಮ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಇತ್ತಿಚೆಗೆ ಕರ್ನಾಟಕ ಸರ್ಕಾರ…

The post ಮಂಡ್ಯದ ಗಂಡು​ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ appeared first on Good News 24x7.

]]>

ವಿಷ್ಣುವರ್ಧನ್ ಆಯ್ತು, ಈಗ ರೆಬಲ್ ಸ್ಟಾರ್​ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಅಂಬಿ ಅಭಿಮಾನಿಗಳು ಆಗ್ರಹಿಸಿದ್ದಾರೆ. ಇವತ್ತು ರೆಬಲ್ ಸ್ಟಾರ್​ ಅಭಿಮಾನಿಗಳ ಪರವಾಗಿ ಹಿರಿಯ ನಟಿ ತಾರಮ್ಮ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು. ಇತ್ತಿಚೆಗೆ ಕರ್ನಾಟಕ ಸರ್ಕಾರ ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ಹಿರಿಯ ನಟಿ ಸರೋಜಾ ದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಗೌರವ ಘೋಷಣೆ ಮಾಡಿದೆ. ಬೆನ್ನಲ್ಲೇ ರೆಬೆಲ್​ ಸ್ಟಾರ್ ಅಂಬರೀಶ್​ ಅವರಿಗೂ ‘ಕರ್ನಾಟಕ ರತ್ನ’ ನೀಡುವಂತೆ ಕೂಗು ಕೇಳಿ ಬಂದಿದೆ.

ಇವತ್ತು ಹಿರಿಯ ನಟಿ ತಾರಾ ಅನುರಾಧ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾದರು. ಭೇಟಿ ವೇಳೆ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಅಂಬಿ ಫ್ಯಾನ್ಸ್​ ಪರ ತಾರಾ ಮನವಿ:ಅಂಬರೀಶ್​ಗೆ ಕರ್ನಾಟಕ ರತ್ನ ನೀಡಬೇಕು ಅನ್ನೋದು ಅಂಬಿ ಅಭಿಮಾನಿಗಳ ಒತ್ತಾಸೆ. ನೀವೂ ಕೂಡ (ಡಿಕೆ ಶಿವಕುಮಾರ್) ಅಂಬಿ ಅವರನ್ನ ತುಂಬಾ ಹತ್ತಿರದಿಂದ ಕಂಡಿದ್ದೀರಾ. ವಿಷ್ಣುವರ್ಧನ್​ ಹಾಗೂ ಸರೋಜಾದೇವಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರೊದು ಬಹಳ ಸಂತೋಷದ ಸುದ್ದಿ. ಜೊತೆಗೆ ಅಂಬರೀಶ್​ಗೂ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ ಎಂದು ತಾರಾ ಅನುರಾಧ ಮನವಿ ಮಾಡಿಕೊಂಡಿದ್ದಾರೆ.

The post ಮಂಡ್ಯದ ಗಂಡು​ ಅಂಬಿಗೂ ಕರ್ನಾಟಕ ರತ್ನ ನೀಡುವಂತೆ ಆಗ್ರಹ appeared first on Good News 24x7.

]]>
ಯಶ್​ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಎಂದ ನಿತ್ಯಾಶ್ರೀ https://www.goodnews24x7.com/nithyashri-says-she-would-love-to-act-with-yash/ Sun, 14 Sep 2025 10:44:58 +0000 https://www.goodnews24x7.com/?p=7537 ನಟಿ ಆಗಬೇಕು ಎಂದು ಆಸೆ ಇದೆ. ಯಾವುದಾದರೂ ಓಕೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಇದೆ. ಸೈಡ್ ರೋಲ್ ಆದರೂ ಪರವಾಗಿಲ್ಲ ಯಶ್​ ಅವರ ಜೊತೆ ಆ್ಯಕ್ಟ್​ ಮಾಡಬೇಕು. ಸಿನಿಮಾ ಇಂಡಸ್ಟ್ರಿಗೆ ಬರಬೇಕು…

The post ಯಶ್​ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಎಂದ ನಿತ್ಯಾಶ್ರೀ appeared first on Good News 24x7.

]]>

ನಟಿ ಆಗಬೇಕು ಎಂದು ಆಸೆ ಇದೆ. ಯಾವುದಾದರೂ ಓಕೆ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಇದೆ. ಸೈಡ್ ರೋಲ್ ಆದರೂ ಪರವಾಗಿಲ್ಲ ಯಶ್​ ಅವರ ಜೊತೆ ಆ್ಯಕ್ಟ್​ ಮಾಡಬೇಕು. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎಂದು ಆಸೆ ಇದ್ದೇ ಇದೆ. ಚಾನ್ಸ್​ ಸಿಕ್ಕರೇ ಹೋಗುತ್ತೇನೆ ಎಂದು ‘ಹೂವಿನ ಬಾಣದಂತೆ, ಯಾರಿಗೂ ಕಾಣದಂತೆ’ ಹಾಡು ಹಾಡಿ ವೈರಲ್ ಆದ ಯುವತಿ ನಿತ್ಯಾಶ್ರೀ ಹೇಳಿದ್ದಾರೆ.

ಮೊದಲು ನಾನು ಯಾರಿಗೂ ಗೊತ್ತಿರಲಿಲ್ಲ. ಆದರೆ ಈಗ ಗುರುತಿಸಿಕೊಂಡು ಮೇಡಂ ನೀವು ಅಲ್ವಾ ಸಾಂಗ್ ಹಾಡಿದ್ದು ಸೆಲ್ಫಿ ಕೊಡಿ ಎಂದು ಕೇಳಿದಾಗ ಫ್ರೌಡ್ ಫೀಲ್ ಆಗುತ್ತದೆ. ಇದನ್ನು ನೋಡಿದಾಗ ಇನ್ನು ಎತ್ತರಕ್ಕೆ ಬೆಳೆಯಬೇಕು ಎನಿಸುತ್ತದೆ. ಆ್ಯಕ್ಟಿಂಗ್​ನಲ್ಲಿ ಚಾನ್ಸ್​ ಸಿಗಬೇಕು ಎಂದು ಕೇಳಿಕೊಳ್ಳುತ್ತೇನೆ. ಏಕೆಂದರೆ ನಟನೆ ನನಗೆ ಇಷ್ಟ. ಎಲ್ಲರಿಗೂ ಚಾನ್ಸ್​ ಕೊಟ್ಟ ಮೇಲೆ ನನಗೆ ಕೊಡಿ ಎಂದು ನಿತ್ಯಾಶ್ರೀ ಹೇಳಿದ್ದಾರೆ.

The post ಯಶ್​ ಜೊತೆ ನಟನೆ ಮಾಡೋಕೆ ತುಂಬಾ ಇಷ್ಟ ಎಂದ ನಿತ್ಯಾಶ್ರೀ appeared first on Good News 24x7.

]]>
ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ವಶಪಡಿಸಿಕೊಳ್ಳುವಂತೆ ಸರ್ಕಾರದಿಂದ ಪತ್ರ ? https://www.goodnews24x7.com/government-letter-to-seize-abhiman-studio-where-vishnus-tomb-was-located/ Fri, 29 Aug 2025 09:08:46 +0000 https://www.goodnews24x7.com/?p=6950 ಬೆಂಗಳೂರು: ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು ಹಾಕಲು ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ…

The post ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ವಶಪಡಿಸಿಕೊಳ್ಳುವಂತೆ ಸರ್ಕಾರದಿಂದ ಪತ್ರ ? appeared first on Good News 24x7.

]]>

ಬೆಂಗಳೂರು: ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಮುಟ್ಟುಗೋಲು ಹಾಕಲು ಅರಣ್ಯ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ.

ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ.

ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
ಸರ್ಕಾರಿ ಆದೇಶದ ಅನ್ವಯ ಏಪ್ರಿಲ್‌ 09, 1969 ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಟಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಲಾಗಿತ್ತು.

ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಟುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಇಲ್ಲಿಯೂ ಉದ್ದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂಬುದಾಗಿ ಪತ್ರದಲ್ಲಿ ಉಲೇಖವಾಗಿದೆ.

The post ವಿಷ್ಣು ಸಮಾಧಿ ಇದ್ದ ಅಭಿಮಾನ್ ಸ್ಟುಡಿಯೋ ವಶಪಡಿಸಿಕೊಳ್ಳುವಂತೆ ಸರ್ಕಾರದಿಂದ ಪತ್ರ ? appeared first on Good News 24x7.

]]>
ಇಲ್ಲಿವೆ ಅನುಶ್ರೀ ಮದುವೆ ಫೋಟೋಗಳು… https://www.goodnews24x7.com/here-are-anushrees-wedding-photos/ Fri, 29 Aug 2025 05:53:21 +0000 https://www.goodnews24x7.com/?p=6927 ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ…

The post ಇಲ್ಲಿವೆ ಅನುಶ್ರೀ ಮದುವೆ ಫೋಟೋಗಳು… appeared first on Good News 24x7.

]]>

ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ ತುಳಿದಿದ್ದಾರೆ.

ಅನುಶ್ರೀ.. ಕನ್ನಡ ಕಿರುತೆರೆಯ ಚಿರ ಪರಿಚಿತ ಹೆಸರು. ಅನುಶ್ರೀ ಗೊತ್ತಿಲ್ಲದಂತ ಟಿ.ವಿ ವೀಕ್ಷಕರೇ ಇಲ್ಲ. ಆ ಮಟ್ಟಿಗಿನ ಜನಪ್ರಿಯತೆ ಗಳಿಸಿರೋ ನಿರೂಪಕಿ‌. ಹರಳು ಉರಿದಂತ ತಮ್ಮ ಮಾತುಗಳಿಂದ ಇಡೀ ಶೋವನ್ನು, ವೇದಿಕೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅನುಶ್ರೀಗಿದೆ. ಇಂತಹ ಅನುಶ್ರೀಗೆ ಹೋದಲ್ಲಿ ಬಂದಲ್ಲಿ, ಒಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳಿ, ಕೇಳಿ ಅನುಶ್ರೀಗೂ. ಮದುವೆಯಾಗೋ ಮನಸ್ಸಾಯ್ತು ಅನ್ನಿಸುತ್ತೆ. ಕೊನೆಗೂ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ‌.

ಅನುಶ್ರೀ ಮದುವೆ ವಿಚಾರವಾಗಿ ಅಂತೆ-ಕಂತೆ ವಿಚಾರಗಳು ಬಂದಾಗಲೇ ಅನುಶ್ರೀಗೆ ಶುಭ ಹಾರೈಕೆಗಳ ಸುರಿಮಳೆ ಹರಿದಿತ್ತು. ನೆಚ್ಚಿನ ನಿರೂಪಕಿಯ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಖುಷಿಪಟ್ಟಿದ್ರು. ಅದ್ರಲ್ಲೂ ಹುಡುಗನ ಫೋಟೊ ರಿವೀಲ್ ಆದ ಬಳಿಕ ಹುಡುಗ ಯಾರು..? ಹುಡುಗನ ಹಿನ್ನೆಲೆ ಏನು..? ಅನ್ನೋ ಹುಡುಕಾಟ ಶುರುವಾಗಿದ್ದವು.

ಫೈನಲಿ, ಇಂದು ಪ್ರೀತಿಯ ಗೆಳೆಯ ರೋಷನ್ ಜೊತೆಗೆ ಅನುಶ್ರೀ ಹಸೆಮಣೆ ಏರಿದರು. ಕನಕಪುರ ರಸ್ತೆಯ ಕಗ್ಗಲಿಪುರ ಬಳಿಯ ಖಾಸಗಿ ಸ್ಥಳದಲ್ಲಿ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಈ ಮದುವೆಗೆ ಅನುಶ್ರೀ ಆಪ್ತರು, ಕುಟುಂಬಸ್ಥರು ಹಾಗೂ ಸ್ಯಾಂಡಲ್ವುಡ್ ತಾರೆಯರು ಭಾಗಿಯಾಗಿದ್ರು.

ಅನುಶ್ರೀಯನ್ನು ನಿರೂಪಕಿ ಅನ್ನೋದಕ್ಕಿಂತ ಹೆಚ್ಚಾಗಿ, ಸ್ನೇಹಿತೆಯಂತೆ ಕಂಡವರು ಜಾಸ್ತಿ. ಹೀಗಾಗಿಯೇ ಮದುವೆಗೆ ಸ್ಯಾಂಡಲ್ವುಡ್ ತಾರೆಯರು ಕುಟುಂಬಸ್ಥರಾಗಿ ಆಗಮಿಸಿದ್ರು. ಶಿವಣ್ಣ, ಡಾಲಿ ಧನಂಜಯ, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ತರುಣ್ ಸುಧೀರ್, ಶರಣ್, ಪ್ರೇಮ್, ವಿಜಯ್ ರಾಘವೇಂದ್ರ. ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ರು.

ಮದುವೆ ಸಮಾರಂಭದಲ್ಲಿ ತುಂಬಾ ಹೊತ್ತು ಕಾಲ ಕಳೆದ ಶಿವಣ್ಣ, ಮದುವೆಯ ನಂತರ ಅನುಶ್ರೀ ಮದುವೆಯ ವಿಚಾರವಾಗಿ ಮಾತನಾಡಿದ್ರು. ಅನುಶ್ರೀ ನಮ್ಮ ಮನೆಯ ಸದಸ್ಯೆ ಅಂತಾ ಪ್ರೀತಿಯಿಂದ ಮಾತನಾಡಿದ್ರು.

ಮದುವೆಯ ನಂತರ ಮಾಧ್ಯಮಗಳೊಂದಿಗೆ ನವ ದಂಪತಿ ಪ್ರೀತಿಯಿಂದ ಹಾರೈಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ರು. ಅಲ್ಲದೇ ತಮ್ಮ ಲವ್‌ ಕಂ ಅರೇಂಜ್ಡ್ ಮ್ಯಾರೇಜ್ ಮಾಹಿತಿಯನ್ನು ಪ್ರೀತಿಯಿಂದ ಹಂಚಿಕೊಂಡ್ರು.

ಒಟ್ಟಾರೆ ಅನುಶ್ರೀ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಕಾರ್ಯಕ್ರಮ ನಿರೂಪಣೆಯಂತೆ‌. ಜೀವನದ ನಿರೂಪಣೆಯೂ ಯಶಸ್ವಿ ಆಗಲಿ ಅನ್ನೋದು ಅಭಿಮಾನಿಗಳ ಹಾರೈಕೆ ಆಗಿದೆ.

The post ಇಲ್ಲಿವೆ ಅನುಶ್ರೀ ಮದುವೆ ಫೋಟೋಗಳು… appeared first on Good News 24x7.

]]>
ಕೊಹ್ಲಿ ಲೈಕ್ ಕೊಟ್ಟಿದ್ದೆ ಈ ನಟಿಗೆ ಅದೃಷ್ಟವೋ ಅದೃಷ್ಟ…! https://www.goodnews24x7.com/this-actress-was-lucky-to-have-liked-kohli/ Thu, 28 Aug 2025 07:59:42 +0000 https://www.goodnews24x7.com/?p=6891  ಕೊಹ್ಲಿಯ ಉಡುಗೆ ತೊಡುಗೆ, ಫಿಟ್​ನೆಸ್​​​ ರೂಟಿನ್​, ಸ್ಟೈಲ್​ ಎಲ್ಲವನ್ನೂ ಅನುಕರಿಸೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲೂ ಅಷ್ಟೇ.. ಕೊಹ್ಲಿ ಹಾಕೋ ಪೋಸ್ಟ್​ಗಳು, ಲೈಕ್ಸ್​, ಕಮೆಂಟ್ಸ್​ ಎಲ್ಲವನ್ನ ಫ್ಯಾನ್ಸ್​​ ಗಮನಿಸ್ತಾರೆ. ಸಾಮಾನ್ಯವಾಗಿ ಕೊಹ್ಲಿ ಯಾರ ಪೋಸ್ಟ್​ ಅನ್ನೋ ಲೈಕ್​ ಮಾಡಲ್ಲ. ಅವತ್ತು ಏನಾಗಿತ್ತೋ ಏನೋ,…

The post ಕೊಹ್ಲಿ ಲೈಕ್ ಕೊಟ್ಟಿದ್ದೆ ಈ ನಟಿಗೆ ಅದೃಷ್ಟವೋ ಅದೃಷ್ಟ…! appeared first on Good News 24x7.

]]>

 ಕೊಹ್ಲಿಯ ಉಡುಗೆ ತೊಡುಗೆ, ಫಿಟ್​ನೆಸ್​​​ ರೂಟಿನ್​, ಸ್ಟೈಲ್​ ಎಲ್ಲವನ್ನೂ ಅನುಕರಿಸೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲೂ ಅಷ್ಟೇ.. ಕೊಹ್ಲಿ ಹಾಕೋ ಪೋಸ್ಟ್​ಗಳು, ಲೈಕ್ಸ್​, ಕಮೆಂಟ್ಸ್​ ಎಲ್ಲವನ್ನ ಫ್ಯಾನ್ಸ್​​ ಗಮನಿಸ್ತಾರೆ. ಸಾಮಾನ್ಯವಾಗಿ ಕೊಹ್ಲಿ ಯಾರ ಪೋಸ್ಟ್​ ಅನ್ನೋ ಲೈಕ್​ ಮಾಡಲ್ಲ. ಅವತ್ತು ಏನಾಗಿತ್ತೋ ಏನೋ, ಬಾಲಿವುಡ್​ ಬ್ಯೂಟಿಯ ಬೋಲ್ಡ್​ ಫೋಟೋಗೆ ಕೊಹ್ಲಿ ಲೈಕ್​​ ಮಾಡಿದ್ರು.

ಕೊಹ್ಲಿ ಬೈ ಮಿಸ್ಟೇಕ್​ನಿಂದ ಮಾಡಿದ ಆ ಒಂದು ಲೈಕ್​ ಬೆಲೆ ಎಷ್ಟಿರಬಹುದು ಅಂತಾ ನೀವು ನಿಜಕ್ಕೂ ಊಹಿಸೋಕೂ ಆಗಲ್ಲ. ಅಂತಾ ಅದೃಷ್ಟ ಅವನೀತ್​ ಕೌರ್​​ಗೆ ಖುಲಾಯಿಸಿದೆ. ಕೊಹ್ಲಿ ಲೈಕ್​ ಮಾಡಿದ ಬೆನ್ನಲ್ಲೇ ಈ ಬಾಲಿವುಡ್​ ನಟಿಯ ಫಾಲೋವರ್ಸ್​ ಸಂಖ್ಯೆ ಸರ್​ ಅಂತ ಏರಿದೆ. ನೀವು ನಂಬ್ತಿರೋ ಇಲ್ವೋ.. ತಮನ್ನಾ ಬಾಟಿಯಾ, ಜಾಹ್ನವಿ ಕಪೂರ್​, ಅನನ್ಯಾ ಪಾಂಡೆ, ಪೂಜಾ ಹೆಗ್ಡೆ.. ಸಿನಿ ಅಂಗಳದಲ್ಲಿ ಸೌಂಡ್​ ಮಾಡ್ತಿರೋ ಈ ಸ್ಟಾರ್​​ಗಳಿಗಿಂತ ಹೆಚ್ಚು ಫಾಲೋವರ್ಸ್​ ಈಗ ಅವನೀತ್​ ಕೌರ್​ಗಿದ್ದಾರೆ. ಇನ್ಸ್​​ಸ್ಟಾ ಫಾಲೋವರ್​ಗಳ ಸಂಖ್ಯೆ ಸದ್ಯ 31.6 ಮಿಲಿಯನ್​ಗೇರಿದೆ. 1 ಮಿಲಿಯನ್​​ಗೂ ಅಧಿಕ ಫಾಲೋವರ್ಸ್​ ಸಿಕ್ಕಿದ್ದಾರೆ.

12 ಬ್ರಾಂಡ್​​ಗಳ ಜೊತೆ ಅವನೀತ್​ ಕೌರ್​ ಡೀಲ್…!
ಕೊಹ್ಲಿಯ ಲೈಕ್​​-ಡಿಸ್​ಲೈಕ್​​ ಕಾರಣಕ್ಕೆ ಸುದ್ದಿಯಾದ ಬಳಿಕ ಅವನೀತ್ ಕೌರ್​ ಹಿಂದೆ ಜಾಹೀರಾತು ಕಂಪನಿಗಳು ಮುಗಿಬಿದ್ದಿವೆ. 12 ವಿವಿಧ ಜಾಹೀರಾತುಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರ್ಯಾಂಡ್​​ವ್ಯಾಲ್ಯೂನಲ್ಲಿ ಗಣನೀಯ ಏರಿಕೆಯಾಗಿದೆ. ಶೇಖಡ 30ರಷ್ಟು ಬ್ರ್ಯಾಂಡ್​ ವಾಲ್ಯೂ ಹೆಚ್ಚಾಗಿದೆ. ಈ ಹೊಸ ಒಪ್ಪಂದ, ಜಾಹೀರಾತುಗಳಿಂದ ಆದಾಯವೂ ದುಪ್ಪಾಟ್ಟಾಗಿದೆ.

ಕೌರ್​ ಫುಲ್​ ಕಾಸ್ಟ್ಲಿ..!
ಕೊಹ್ಲಿಯ ಲೈಕ್​ ಕಾಂಟ್ರವರ್ಸಿಯಿಂದ ಅವನೀತ್ ಕೌರ್​​ಗೆ ಜನಪ್ರಿಯತೆ ಮಾತ್ರ ಸಿಕ್ಕಿಲ್ಲ. ಫಾಲೋವರ್​ಗಳ ಸಂಖ್ಯೆ ಮಾತ್ರವೇ ಹೆಚ್ಚಾಗಿಲ್ಲ. ಆದಾಯವೂ ಹೆಚ್ಚಾಗಿದೆ. ಡಿಜಿಟಲ್ ಫ್ಲಾಟ್​ಫಾರ್ಮ್​ನಲ್ಲಿ ಮಾಡೋ ಜಾಹೀರಾತಿಗಳ ಪೋಸ್ಟ್​ ಬೆಲೆಯೂ ಹೆಚ್ಚಾಗಿದೆ. ಒಂದು ಕಮರ್ಷಿಯಲ್​ ಪೋಸ್ಟ್​ಗೆ ಈಗ ಈಕೆ 2.6 ಲಕ್ಷ ಚಾರ್ಜ್​ ಮಾಡ್ತಿದ್ದಾರಂತೆ. ಸಿನಿಮಾ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯುವ ಮುನ್ಸೂಚನೆ ಸಿಕ್ಕಿದೆಯಂತೆ.

ಕೊಹ್ಲಿ ಹೆಸರಿನಿಂದ ಸಿನಿಮಾಗೆ ಬಿಟ್ಟಿ ಪ್ರಮೋಷನ್
ಅವನೀತ್ ಕೌರ್​ ನಟನೆಯ ಲವ್ ಇನ್ ವಿಯೆಟ್ನಾಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಹೊತ್ತಿನಲ್ಲೇ ಟ್ರೈಲರ್ ಬಿಡುಗಡೆಯನ್ನು ಗೊಳಿಸಿದ್ದಾರೆ. ಟ್ರೈಲರ್ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿಯ ಲೈಕ್​​ ಬಗ್ಗೆ ಅವನೀತ್​ ಕೌರ್​, ಮೊದಲ ಬಾರಿ ತುಟಿಬಿಚ್ಚಿದ್ದಾರೆ. ಇದು ಲವ್ ಇನ್ ವಿಯೆಟ್ನಾಂ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆಗುವಂತೆ ಮಾಡಿದೆ. ಕೊಹ್ಲಿ ಹೆಸರಲ್ಲಿ ಬಿಟ್ಟಿ ಪ್ರಮೋಷನ್ ಸಿಕ್ಕಂತಾಗಿರುವುದು ಸುಳ್ಳಲ್ಲ.

The post ಕೊಹ್ಲಿ ಲೈಕ್ ಕೊಟ್ಟಿದ್ದೆ ಈ ನಟಿಗೆ ಅದೃಷ್ಟವೋ ಅದೃಷ್ಟ…! appeared first on Good News 24x7.

]]>
ಸ್ಟಾರ್​ ನಿರೂಪಕಿ ಅನುಶ್ರಿ-ರೋಷನ್; ಅರಿಶಿಣ ಶಾಸ್ತ…! https://www.goodnews24x7.com/star-presenter-anushree-roshan-turmeric-shasta/ Thu, 28 Aug 2025 04:28:40 +0000 https://www.goodnews24x7.com/?p=6841 ಕನ್ನಡದ ಸ್ಟಾರ್​ ನಿರೂಪಕಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟಿ, ನಿರೂಪಕಿ ಆಗಿರೋ ಅನುಶ್ರೀ ರೋಷನ್​ ಎಂಬುವವರ ಜೊತೆಗೆ ಇಂದು ಮದುವೆ ಆಗಲಿದ್ದಾರೆ.   ಈಗಾಗಲೇ ಅನುಶ್ರೀ ಹಾಗೂ ರೋಷನ್ ಅದ್ಧೂರಿಯಾಗಿ ಅರಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ. ಮುಖಕ್ಕೆ ಅರಿಶಿಣ ಹಚ್ಚಿಕೊಂಡು…

The post ಸ್ಟಾರ್​ ನಿರೂಪಕಿ ಅನುಶ್ರಿ-ರೋಷನ್; ಅರಿಶಿಣ ಶಾಸ್ತ…! appeared first on Good News 24x7.

]]>

ಕನ್ನಡದ ಸ್ಟಾರ್​ ನಿರೂಪಕಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟಿ, ನಿರೂಪಕಿ ಆಗಿರೋ ಅನುಶ್ರೀ ರೋಷನ್​ ಎಂಬುವವರ ಜೊತೆಗೆ ಇಂದು ಮದುವೆ ಆಗಲಿದ್ದಾರೆ.

 

ಈಗಾಗಲೇ ಅನುಶ್ರೀ ಹಾಗೂ ರೋಷನ್ ಅದ್ಧೂರಿಯಾಗಿ ಅರಶಿಣ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ. ಮುಖಕ್ಕೆ ಅರಿಶಿಣ ಹಚ್ಚಿಕೊಂಡು ಅನುಶ್ರೀ ಹಾಗೂ ರೋಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇನ್ನೂ, ಇಂದು ಬೆಳಗ್ಗೆ 10.56ಕ್ಕೆ ರೋಷನ್ ಅನುಶ್ರೀಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಈ ಇಬ್ಬರ ಮದುವೆಯೂ ಬೆಂಗಳೂರಿನ ಹೊರವಲಯದ ಸಂಭ್ರಮ ಬೈ ಸ್ವಾನ್‌ಲೈನ್ಸ್ ಸ್ಟುಡಿಯೋಸ್ ತಿಟ್ಟಹಳ್ಳಿ, ಕಗ್ಗಲಿಪುರದಲ್ಲಿ ನಡೆಯಲಿದೆ. ಕೊಡಗು ಮೂಲದ ರಾಮಮೂರ್ತಿ ಹಾಗೂ ಸಿಸಿಲಿಯಾ ಅವರ ಪುತ್ರ ರೋಷನ್ ಜೊತೆ ಅನುಶ್ರೀ ವಿವಾಹ ಆಗಲಿದ್ದಾರೆ.

The post ಸ್ಟಾರ್​ ನಿರೂಪಕಿ ಅನುಶ್ರಿ-ರೋಷನ್; ಅರಿಶಿಣ ಶಾಸ್ತ…! appeared first on Good News 24x7.

]]>
“ನಾನು ಸಿನಿಮಾದಲ್ಲಿ ಇರಲು ಅದೇ ದಾರಿ!” – ವಿಚಿತ್ರ ಹೇಳಿಕೆ ನೀಡಿ ಗಮನಸೆಳೆದ ನಟಿ ಕಲ್ಯಾಣಿ ಪ್ರಿಯದರ್ಶನ್. https://www.goodnews24x7.com/thats-the-way-i-want-to-be-in-cinema-actress-kalyani-priyadarshan-draws-attention-with-a-strange-statement/ Sun, 24 Aug 2025 09:17:38 +0000 https://www.goodnews24x7.com/?p=6669 ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ಪುತ್ರಿಯಾಗಿರುವ ಕಲ್ಯಾಣಿ ಪ್ರಿಯದರ್ಶನ್, 2017 ರಲ್ಲಿ ತೆಲುಗು ಚಿತ್ರದ ‘ಹಲೋ’ ಮೂಲಕ ನಾಯಕಿಯಾಗಿ ಸಿನಿಮಾ ಲೋಕಕ್ಕೆ ಪ್ರವೇಶಿಸಿದರು. ಈ ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ನಾಯಕನಾಗಿ ನಟಿಸಿದ್ದರು ಮತ್ತು ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತು. ‘ಹಲೋ’ನ ನಂತರ…

The post “ನಾನು ಸಿನಿಮಾದಲ್ಲಿ ಇರಲು ಅದೇ ದಾರಿ!” – ವಿಚಿತ್ರ ಹೇಳಿಕೆ ನೀಡಿ ಗಮನಸೆಳೆದ ನಟಿ ಕಲ್ಯಾಣಿ ಪ್ರಿಯದರ್ಶನ್. appeared first on Good News 24x7.

]]>

ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ಪುತ್ರಿಯಾಗಿರುವ ಕಲ್ಯಾಣಿ ಪ್ರಿಯದರ್ಶನ್, 2017 ರಲ್ಲಿ ತೆಲುಗು ಚಿತ್ರದ ‘ಹಲೋ’ ಮೂಲಕ ನಾಯಕಿಯಾಗಿ ಸಿನಿಮಾ ಲೋಕಕ್ಕೆ ಪ್ರವೇಶಿಸಿದರು. ಈ ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ನಾಯಕನಾಗಿ ನಟಿಸಿದ್ದರು ಮತ್ತು ಚಿತ್ರವು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿತು.

‘ಹಲೋ’ನ ನಂತರ ಮತ್ತೆರಡು ತೆಲುಗು ಚಿತ್ರಗಳಲ್ಲಿ ನಟಿಸಿದ ಕಲ್ಯಾಣಿ, 2019 ರಲ್ಲಿ ತಮಿಳು ಚಿತ್ರ ‘ಹೀರೋ’ ಮೂಲಕ ಕೊಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ಪಿ.ಎಸ್. ಮಿತ್ರನ್ ನಿರ್ದೇಶಿಸಿದ್ದರು ಮತ್ತು ಶಿವಕಾರ್ತಿಕೇಯನ್ ನಾಯಕನಾಗಿ ಕಾಣಿಸಿಕೊಂಡಿದ್ದರು.

2020 ರಲ್ಲಿ ‘ವರಣೆ ಅವಶ್ಯಮುಂಡು’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಕಾಲಿಟ್ಟರು. ಮಲಯಾಳಂ ಮೂಲದವರಾಗಿದ್ದರೂ, ಅವರು ಮೊದಲು ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡು ನಂತರ ತಮ್ಮ ಮೂಲ ಭಾಷೆಯ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರೆ ಎಂಬುದು ವಿಶಿಷ್ಟ.

ಪ್ರಸ್ತುತ, ಕಲ್ಯಾಣಿ ಪ್ರಿಯದರ್ಶನ್ ಮಲಯಾಳಂ ಹಾಗೂ ತಮಿಳು ಚಿತ್ರರಂಗಗಳಲ್ಲಿ ಸಕ್ರಿಯವಾಗಿದ್ದಾರೆ. ತಮಿಳಿನಲ್ಲಿ ‘ಜಿನೀ’ ಹಾಗೂ ‘ಮಾರ್ಷಲ್’ ಸಿನಿಮಾಗಳಲ್ಲಿ, ಮತ್ತು ಮಲಯಾಳಂನಲ್ಲಿ ‘ಲೋಕ್’ ಹಾಗೂ ‘ಒಡುಮ್ ಕುಧಿರ ಸಾದುಮ್ ಕುಧಿರ’ ಎಂಬ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕಲ್ಯಾಣಿ ನೀಡಿದ ಹೇಳಿಕೆ ಅಭಿಮಾನಿಗಳ ಗಮನ ಸೆಳೆದಿದೆ. ಅವರು ಹೇಳಿದ್ದಾರೆ:
“ನಾನು ಒಮ್ಮೆಗೊಂದು ಚಿತ್ರದಲ್ಲಷ್ಟೇ ನಟಿಸುತ್ತೇನೆ. ಒಂದು ಚಿತ್ರ ಮುಗಿದ ಮೇಲೆ ಮಾತ್ರ ಮುಂದಿನ ಚಿತ್ರ ಆರಂಭಿಸುತ್ತೇನೆ. ಒಂದೇ ಸಮಯದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಲು ನನಗೆ ಸಾಧ್ಯವಿಲ್ಲ.”

ಅವರ ಈ ದೃಷ್ಟಿಕೋನ ನಟನೆಯ ಬಗ್ಗೆ ಗಂಭೀರತೆ ಮತ್ತು ನಿಷ್ಠೆಯನ್ನೇ ಪ್ರತಿಬಿಂಬಿಸುತ್ತಿದೆ.

The post “ನಾನು ಸಿನಿಮಾದಲ್ಲಿ ಇರಲು ಅದೇ ದಾರಿ!” – ವಿಚಿತ್ರ ಹೇಳಿಕೆ ನೀಡಿ ಗಮನಸೆಳೆದ ನಟಿ ಕಲ್ಯಾಣಿ ಪ್ರಿಯದರ್ಶನ್. appeared first on Good News 24x7.

]]>
ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು https://www.goodnews24x7.com/transgender-woman-files-complaint-against-kerala-congress-mla/ Fri, 22 Aug 2025 06:29:39 +0000 https://www.goodnews24x7.com/?p=6453 ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ…

The post ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು appeared first on Good News 24x7.

]]>

ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ತೃತೀಯಲಿಂಗಿ ಎಂದು ಹೇಳಿದ್ದಾರೆ.

ಪಾಲಕ್ಕಾಡ್: ಪಾಲಕ್ಕಾಡ್ ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ವಿರುದ್ಧ ತೃತೀಯಲಿಂಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪಹೊರಿಸಿದ್ದಾರೆ. ರಾಹುಲ್ ತನ್ನ ಮೇಲೆ ಅತ್ಯಾಚಾರ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಿಸಿದ್ದಾರೆ. ನನ್ನನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ, ಬೆಂಗಳೂರು ಅಥವಾ ಹೈದರಾಬಾದ್​ಗೆ ಹೋಗೋಣ ಬಾ ಎಂದು ಕರೆದಿದ್ದ ಎಂದು ತೃತೀಯಲಿಂಗಿ ಎಂದು ಹೇಳಿದ್ದಾರೆ. ಚುನಾವಣಾ ಚರ್ಚೆಯ ಸಮಯದಲ್ಲಿ ಅವರು ಮೊದಲು ಭೇಟಿಯಾಗಿದ್ದರು. ಸಾಮಾನ್ಯ ಸ್ನೇಹವಾಗಿ ಪ್ರಾರಂಭವಾದದ್ದು ಸಾಮಾಜಿಕ ಮಾಧ್ಯಮದಲ್ಲಿನ ಸಂದೇಶಗಳ ಮೂಲಕ ಅಸಹ್ಯಕರ ಅನುಭವವಾಗಿ ಬದಲಾಯಿತು ಎಂದು ಅವಂತಿಕಾ ಹೇಳಿದ್ದಾರೆ.

ಮಲಯಾಳಂ ನಟಿ ರಿನಿ ಜಾರ್ಜ್ ಮತ್ತು ನಂತರ ಬರಹಗಾರ ಹನಿ ಭಾಸ್ಕರನ್ ಅವರು ನೀಡಿದ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗುರುವಾರ ಕೇರಳ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ . ಪ್ರಮುಖ ರಾಜಕೀಯ ಪಕ್ಷದ ನಾಯಕಿಯೊಬ್ಬರು ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿ ಹೋಟೆಲ್‌ಗೆ ಆಹ್ವಾನಿಸಿದ್ದಾರೆ ಎಂದು ರಿನಿ ಆರೋಪಿಸಿದ್ದರು . ಅವರು ಯಾರನ್ನೂ ಹೆಸರಿಸದಿದ್ದರೂ, ಬಿಜೆಪಿ ಮತ್ತು ಡಿವೈಎಫ್‌ಐ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಮ್‌ಕೂಟತಿಲ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದವು. ಹನಿ ಭಾಸ್ಕರನ್, ರಾಹುಲ್ ಅವರನ್ನು ಹೆಸರಿಸಿ , ಪದೇ ಪದೇ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪಿಸಿದ್ದಾರೆ, ಯುವ ಕಾಂಗ್ರೆಸ್‌ನೊಳಗಿನ ದೂರುಗಳು ಬಗೆಹರಿಯದೆ ಉಳಿದಿವೆ ಎಂದು ಹೇಳಿದರು.

ತಮ್ಮ ರಾಜೀನಾಮೆಯಲ್ಲಿ, ರಾಹುಲ್ ಅವರು ತಾವು ರಾಜೀನಾಮೆ ನೀಡುತ್ತಿರುವುದು ತಪ್ಪು ಕಾರಣದಿಂದಲ್ಲ, ಬದಲಾಗಿ ಪಕ್ಷದ ಕಾರ್ಯಕರ್ತರು ಮುಂಬರುವ ಚುನಾವಣೆಗಳತ್ತ ಗಮನಹರಿಸಲು ಅವಕಾಶ ನೀಡುವ ಉದ್ದೇಶದಿಂದ ಎಂದು ಹೇಳಿದ್ದಾರೆ. ಪಕ್ಷದ ಯಾವುದೇ ನಾಯಕರು ರಾಜೀನಾಮೆ ನೀಡುವಂತೆ ತಮ್ಮನ್ನು ಕೇಳಿಲ್ಲ ಎಂದು ಅವರು ಒತ್ತಿ ಹೇಳಿದರು ಮತ್ತು ಅದು ತಮ್ಮ ವೈಯಕ್ತಿಕ ಜವಾಬ್ದಾರಿ ಎಂದು ಹೇಳಿದರು. ರಾಜೀನಾಮೆ ಬಗ್ಗೆ ಕೇರಳ ಸಚಿವೆ ಆರ್ ಬಿಂದು ಪ್ರತಿಕ್ರಿಯೆ ನೀಡಿದ್ದು, ಯುವ ಶಾಸಕ ರಾಹುಲ್ ವಿರುದ್ಧ ಅನೇಕ ಮಹಿಳೆಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರು ಯುವ ಕಾಂಗ್ರೆಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಮಾಜವನ್ನು ರಕ್ಷಿಸಲು ಅವರು ಶಾಸಕ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತ ಎಂದು ಹೇಳಿದರು.

The post ಕೇರಳ ಕಾಂಗ್ರೆಸ್ ಶಾಸಕನ ವಿರುದ್ಧ ತೃತೀಯಲಿಂಗಿ ದೂರು appeared first on Good News 24x7.

]]>
ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… https://www.goodnews24x7.com/sandalwood-beauty-ankita-amar-has-finally-broken-her-silence-about-marriage-listen-to-what-the-actress-said/ Sat, 16 Aug 2025 10:51:15 +0000 https://www.goodnews24x7.com/?p=6245 ಸ್ಯಾಂಡಲ್‌ವುಡ್‌ ಬ್ಯೂಟಿ ಅಂಕಿತಾ ಅಮರ್‌ ಕೊನೆಗೂ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಕಲೆಯೇ ಜೀವನ ಎಂದು ನಂಬುವ ಅಂಕಿತಾ, ಅವಕಾಶದ ಗಾತ್ರವನ್ನೆಂದರೆ ಕೇಳದೇ, ಬಂದ ಪ್ರತಿಯೊಂದು ಅವಕಾಶವನ್ನೂ ಮನಸ್ಸು ಬಿಡದೇ ಬಳಸಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಎಂಬಿಬಿಎಸ್ ಪದವೀಧರೆ…

The post ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… appeared first on Good News 24x7.

]]>

ಸ್ಯಾಂಡಲ್‌ವುಡ್‌ ಬ್ಯೂಟಿ ಅಂಕಿತಾ ಅಮರ್‌ ಕೊನೆಗೂ ತಮ್ಮ ಮದುವೆಯ ಬಗ್ಗೆ ಮೌನ ಮುರಿದಿದ್ದಾರೆ. ಕಲೆಯೇ ಜೀವನ ಎಂದು ನಂಬುವ ಅಂಕಿತಾ, ಅವಕಾಶದ ಗಾತ್ರವನ್ನೆಂದರೆ ಕೇಳದೇ, ಬಂದ ಪ್ರತಿಯೊಂದು ಅವಕಾಶವನ್ನೂ ಮನಸ್ಸು ಬಿಡದೇ ಬಳಸಿಕೊಂಡು ಬಣ್ಣದ ಲೋಕದಲ್ಲಿ ಹೆಜ್ಜೆ ಇಟ್ಟಿದ್ದಾರೆ. ಎಂಬಿಬಿಎಸ್ ಪದವೀಧರೆ ಆದ ಈಕೆ, ಟಿವಿ ಧಾರಾವಾಹಿಗಳ ಮೂಲಕ ನಟನೆಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಮೊದಲಿಗೆ ‘ಪುಟ್ಟಗೌರಿ ಮದುವೆ’ ಎಂಬ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ಅವರು, ಬಳಿಕ ‘ನಮ್ಮನೆ ಯುವರಾಣಿ’ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದು “ಮೀರಾ” ಎಂಬ ಪಾತ್ರದಿಂದ ಪ್ರೇಕ್ಷಕರ ಪ್ರೀತಿಗೆ ಪಾತ್ರರಾದರು.

ಅಂಕಿತಾ ಕೇವಲ ನಟಿಯಷ್ಟೇ ಅಲ್ಲದೆ, ಖ್ಯಾತ ನಿರೂಪಕಿ, ಗಾಯಕಿ ಹಾಗೂ ನೃತ್ಯಕಾರಿಯೂ ಹೌದು. ‘ಎದೆ ತುಂಬಿ ಹಾಡುವೆನು’ ಎಂಬ ಸಂಗೀತ ಕಾರ್ಯಕ್ರಮವನ್ನು ನಿರೂಪಿಸಿ ಹೊಸ ಮಟ್ಟಿಗೆ ಗುರುತಿಸಿಕೊಂಡ ಅವರು, ಮೈಸೂರಿನವರಾಗಿದ್ದು ಎಂಬಿಬಿಎಸ್‌ ಓದಿದ್ದರೂ ಕಲೆಯತ್ತ ಹೆಚ್ಚಿನ ಆಸಕ್ತಿ ತೋರಿ ಸಿನಿಮಾ ಹಾಗೂ ಸಾಂಸ್ಕೃತಿಕ ಕ್ಷೇತ್ರವನ್ನೇ ತಮ್ಮ ಜೀವನ ಗುರಿಯನ್ನಾಗಿ ಮಾಡಿಕೊಂಡಿದ್ದಾರೆ. ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ನೂರಾರು ಮಹಿಳೆಯರ ನಡುವೆ ಭಜನೆಗೆ ಹೆಜ್ಜೆ ಹಾಕಿ ಎಲ್ಲರ ಮೆಚ್ಚುಗೆ ಪಡೆದ ಘಟನೆ ಈತನಕ ನೆನಪಿನಲ್ಲಿಯೇ ಉಳಿದಿದೆ.

ಇತ್ತೀಚೆಗೆ ಚಿತ್ತಾರಾ ಸ್ಟಾರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಅಂಕಿತಾಗೆ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ತಮTypical ಶೈಲಿಯಲ್ಲಿ ಉತ್ತರ ನೀಡಿ ಎಲ್ಲರ ಮುಖದಲ್ಲಿ ನಗು ತರಿಸಿದರು. “ಈಗಷ್ಟೇ ಮದುವೆಯಾದ ನಿರೂಪಕಿಯನ್ನೊಮ್ಮೆ ನೋಡಿ, ನಾನೂ ಮದುವೆಯಾಗೋಣ ಅಂದುಕೊಳ್ಳುತ್ತೇನೆ. ಇನ್ನೂ ಐದು ವರ್ಷ ಹೊಸದಾಗಿ ಮದುವೆಯಾದವರನ್ನು ನೋಡಿ ನೀವು ಹೇಗಿದ್ದೀರಾ ಅಂತ ಗಮನಿಸಿದಮೇಲೆ ನಾನು ಮದುವೆಯಾಗ್ತೀನಿ” ಎಂದು ಅಂಕಿತಾ ಹುಬ್ಬೆತ್ತಿಸಿದರು. ತಮಗೆ ಬದಲಿಗೆ ಅಭಿಮಾನಿಗಳು ಮದುವೆಯ ಬಗ್ಗೆ ಹೆಚ್ಚು ಕಾತುರದಿಂದ ಕಾದು ನೋಡುತ್ತಿದ್ದಾರೆ ಎಂದೂ ಅವರು ನಗುಮಾಡುತ್ತಲೇ ನಾಚಿಕೆಯಿಂದ ಹೇಳಿದರು.

ಅವರ ಸ್ಯಾಂಡಲ್‌ವುಡ್ ಪ್ರಯಾಣಕ್ಕೂ ಇಂದಿನಿಂದಲೇ ಸಕ್ರೀಯವಾಗಿದೆ. ‘ಅಬಜದಬ’ ಸಿನಿಮಾದ ಮೂಲಕ ಅವರು ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರೂ ಅದು ಇನ್ನೂ ಬಿಡುಗಡೆ ಆಗಿಲ್ಲ. ಆದರೂ ಅವರು ‘ಇಬ್ಬನಿ ತಬ್ಬಿದ ಇಳೆಯಲಿ’, ‘ಮೈ ಹೀರೋ’, ‘ರಂಗು ರಗಳೆ’ ಸೇರಿದಂತೆ ಹಲವು ವಿಭಿನ್ನ ಶೈಲಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಪಾತ್ರಗಳಲ್ಲಿ ತಮ್ಮ ವೈವಿಧ್ಯಮಯ ಪ್ರತಿಭೆ ತೋರಿಸುವದಕ್ಕೆ ಸಜ್ಜಾಗಿದ್ದಾರೆ.

ಅಂಕಿತಾ ತಮ್ಮ ಕಲಾ ಆಸಕ್ತಿಯ ಬಗ್ಗೆ ಮಾತನಾಡುತ್ತಿದ್ದಂತೆ, “ನನಗೆ ಮಲ್ಟಿಟಾಸ್ಕಿಂಗ್‌ ಅಂದರೆ ಇಷ್ಟ. ನಾಟಕ, ನೃತ್ಯ, ಗಾಯನ, ನಿರೂಪಣೆ — ಇವು ಎಲ್ಲವನ್ನೂ ನಾನು ಸಮಾನವಾಗಿ ಇಷ್ಟಪಡುವೆ. ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸದೇ ಇದ್ದರೆ ಓದುವ ಆಸಕ್ತಿಯೇ ಇರುತ್ತಿರಲಿಲ್ಲ. ಈಗ ನಾನು ನೃತ್ಯದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಜ್ಜಾಗುತ್ತಿದ್ದೇನೆ, ಜೊತೆಗೆ ಸುಗಮ ಸಂಗೀತ ಕಲಿಯುತ್ತಿದ್ದೇನೆ” ಎಂದಿದ್ದರು.

ಒಟ್ಟಾರೆ, ತಮ್ಮ ಬಹುಮುಖ ಪ್ರತಿಭೆಯಿಂದಾಗಿ ಅಂಕಿತಾ ಅಮರ್‌ ಸ್ಯಾಂಡಲ್‌ವುಡ್‌ನಲ್ಲಿ ನಿಜವಾದ ಕಲಾವಿದೆ ಎಂಬ ಗುರುತನ್ನು ಸಂಪಾದಿಸಿದ್ದಾರೆ.

The post ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ಸ್ಯಾಂಡಲ್​ವುಡ್​ ಬ್ಯೂಟಿ ಅಂಕಿತಾ ಅಮರ್​: ನಟಿ ಹೇಳಿದ್ದೇನು ಕೇಳಿ… appeared first on Good News 24x7.

]]>