Aditi Prabhudeva Archives - Good News 24x7 https://www.goodnews24x7.com/tag/aditi-prabhudeva/ Kannada Sat, 05 Apr 2025 12:38:37 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Aditi Prabhudeva Archives - Good News 24x7 https://www.goodnews24x7.com/tag/aditi-prabhudeva/ 32 32 ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಿದ ಅದಿತಿ ಪ್ರಭುದೇವ..… https://www.goodnews24x7.com/%e0%b2%a4%e0%b2%ae%e0%b3%8d%e0%b2%ae-%e0%b2%ae%e0%b2%97%e0%b2%b3-%e0%b2%b9%e0%b3%81%e0%b2%9f%e0%b3%8d%e0%b2%9f%e0%b3%81%e0%b2%b9%e0%b2%ac%e0%b3%8d%e0%b2%ac%e0%b2%b5%e0%b2%a8%e0%b3%8d%e0%b2%a8%e0%b3%81/ Sat, 05 Apr 2025 12:38:37 +0000 https://www.goodnews24x7.com/?p=3068 ಚಂದನವನದ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಚಂದ್ರಕಾಂತ್ ಸಖತ್ ಖುಷಿಯಲ್ಲಿದ್ದಾರೆ. ಕಾರಣ ಅವರ ಮಗಳಾದಂತಹ ನೇಸರಾಳ ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮ. ದಂಪತಿಗಳಿಬ್ಬರಿಗೂ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸುವುದೇ ಒಂದು ಹಬ್ಬವಾಗಿದೆ. ಹೌದು, 2022ರಲ್ಲಿ ಉದ್ಯಮಿ ಯಶಸ್ಸು…

The post ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಿದ ಅದಿತಿ ಪ್ರಭುದೇವ..… appeared first on Good News 24x7.

]]>

ಚಂದನವನದ ಖ್ಯಾತ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಚಂದ್ರಕಾಂತ್ ಸಖತ್ ಖುಷಿಯಲ್ಲಿದ್ದಾರೆ. ಕಾರಣ ಅವರ ಮಗಳಾದಂತಹ ನೇಸರಾಳ ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮ. ದಂಪತಿಗಳಿಬ್ಬರಿಗೂ ಮುದ್ದು ಮಗಳ ಹುಟ್ಟುಹಬ್ಬವನ್ನು ಆಚರಿಸುವುದೇ ಒಂದು ಹಬ್ಬವಾಗಿದೆ.

ಹೌದು, 2022ರಲ್ಲಿ ಉದ್ಯಮಿ ಯಶಸ್ಸು ಚಂದ್ರಕಾಂತ್ ಪಟ್ಲಾ ಅವರನ್ನು ಚಂದನವನದ ಮುದ್ದಾದ ನಟಿ ಅದಿತಿ ಪ್ರಭುದೇವ ವಿವಾಹವಾಗಿದ್ದರು. ಹೊಸ ವರ್ಷದ ದಿನವೇ ಕುಟುಂಬಸ್ಥರಿಗೆ ಹಾಗೂ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ಕೊಟ್ಟಿದ್ದರು. ಇದೀಗ ಆ ಸಂಭ್ರಮವನ್ನು ಆಚರಿಸಲು ಒಂದು ವರ್ಷದ ಮುದ್ದಾದ ಹೆಣ್ಣು ಮಗುವಿದೆ. ಯುಗಾದಿ ಹಬ್ಬದ ದಿನ ಅಂದರೆ ಏಪ್ರಿಲ್ 4ರಂದು ನಟಿ ಅದಿತಿ ಪ್ರಭುದೇವ ಅವರ ಮನೆಗೆ ಮುದ್ದಾದ ಮಗಳ ಆಗಮನವಾಗಿತ್ತು. ಯುಗಾದಿ ಹಬ್ಬದಂದು ತಾಯಿ ಆದ ಖುಷಿಯ ಜೊತೆಗೆ ನಮ್ಮ ಮನೆ ಮಹಾಲಕ್ಷ್ಮಿ ಅಂತಾ ಮಗುವಿನ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.

ಇದೀಗ ನಟಿ ಅದಿತಿ ಪ್ರಭುದೇವ ಅವರ ಮುದ್ದಾದ ಮಗಳು ನೇಸರ ಹುಟ್ಟು ಹಬ್ಬದ ಖುಷಿಯಲ್ಲಿದ್ದಾಳೆ. ಮಗಳ ಸಂಭ್ರಮವನ್ನು ಪೋಷಕರು ದುಪ್ಪಟ್ಟು ಮಾಡಿದ್ದಾರೆ. ಅಲ್ಲದೇ ಮಗಳ ಬರ್ತ್ ಡೇಯನ್ನು ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ನಲ್ಲಿ ಸಖತ್ ಗ್ರ್ಯಾಂಡ್ ಆಗಿ ಮಾಡಿದ್ದಾರೆ.ಇನ್ನೂ, ನಿನ್ನೆ ಅದಿತಿ ಪ್ರಭುದೇವ ಮಗಳು ನೇಸರ ಹುಟ್ಟು ಹಬ್ಬಕ್ಕೆ ಸಾಕಷ್ಟು ತಾರೆಯರು ಭಾಗಿಯಾಗಿ ಪಾರ್ಟಿಗೆ ಮೆರಗು ತುಂಬಿದ್ದಾರೆ. ಅದಿತಿ ಪ್ರಭುದೇವ್ ಮಗಳ ಬರ್ತ್ ಡೇಗೆ ನಟಿಯರಾದ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಭಾಗಿಯಾಗಿದ್ದರು. ನೆನಪಿರಲಿ ಪ್ರೇಮ್ ಮತ್ತು ಮಗಳು ಅಮೃತಾ ಕೂಡ ಬಂದಿದ್ದರು ಇಷ್ಟೇ ಅಲ್ಲದೇ ನಟಿ ಮೇಘನಾ ರಾಜ್ ಹಾಗೂ ಮಗ ರಾಯನ್ ರಾಜ್ ಕೂಡ ಭಾಗಿಯಾಗಿ ಖುಷಿಪಟ್ಟಿದ್ದಾರೆ. ಹಿಟ್ಲರ್ ಕಲ್ಯಾಣ ಮಲೈಕಾ ಹಾಗೂ ಗುರುಕಿರಣ್ ಅವರು ಹಾಡು ಹಾಡಿ ಮನರಂಜನೆ ನೀಡಿದ್ದಾರೆ.

ಅವರ ಮಗಳ ಹುಟ್ಟು ಹಬ್ಬದಿಂದ, ಕನ್ನಡ ಚಿತ್ರರಂಗದ ಹಲವಾರು ತಾರೆಗಳು ಬಂದಿರುವುದು ಅವರಿಗೆ ಸಂತೋಷ ದುಪ್ಪಟ್ಟಾದಂತಿದೆ. ಒಟ್ಟಿನಲ್ಲಿ ಮುದ್ದು ಹೆಣ್ಣು ಮಗುವಿನ ಜೀವನ ಸುಂದರವಾಗಿರಲಿ ಎಂದು ಹರಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ತಿಳಿಸಿ ಸಂಭ್ರಮವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ ಹಾಗೂ ಯಶಸ್ ಪಾಟ್ಲ.

 

 

 

 

 

 

The post ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಿದ ಅದಿತಿ ಪ್ರಭುದೇವ..… appeared first on Good News 24x7.

]]>