#Afghanistan Archives - Good News 24x7 https://www.goodnews24x7.com/tag/afghanistan/ Kannada Wed, 04 Mar 2026 15:12:18 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #Afghanistan Archives - Good News 24x7 https://www.goodnews24x7.com/tag/afghanistan/ 32 32 ಮತ್ತೆ 69 ತಾಲಿಬಾನಿಗಳ ಸಾವು! https://www.goodnews24x7.com/69-more-taliban-killed69-more-taliban-killed/ Wed, 04 Mar 2026 15:12:11 +0000 https://www.goodnews24x7.com/?p=8655   ಅಫ್ಘನ್ ಮೇಲೆ ದಾಳಿ ತೀವ್ರಗೊಳಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಅಪ್ಸನ್‌ ಮತ್ತೆ 69 ತಾಲಿಬಾನ್ ಅಧಿಕಾರಿಗಳನ್ನು ಮತ್ತು ಅವರ ಬೆಂಬಲಿತ ಭಯೋತ್ಪಾದಕ ‘ರನ್ನು ಒಂದೇ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಮಂಗಳವಾರ…

The post ಮತ್ತೆ 69 ತಾಲಿಬಾನಿಗಳ ಸಾವು! appeared first on Good News 24x7.

]]>

 

ಅಫ್ಘನ್ ಮೇಲೆ ದಾಳಿ ತೀವ್ರಗೊಳಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಅಪ್ಸನ್‌ ಮತ್ತೆ 69 ತಾಲಿಬಾನ್ ಅಧಿಕಾರಿಗಳನ್ನು ಮತ್ತು ಅವರ ಬೆಂಬಲಿತ ಭಯೋತ್ಪಾದಕ ‘ರನ್ನು ಒಂದೇ ರಾತ್ರಿ ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಮಂಗಳವಾರ ಬೆಳಗಿನ ಜಾವ ನೈರುತ್ಯ ಭಾಗದ ಗಡಿಯಲ್ಲಿ ನಡೆದ ಪಾಕಿಸ್ತಾನ ಸೇನೆಯ ದಾಳಿಗಳಲ್ಲಿ 69 ತಾಲಿಬಾನ್ ಸಿಬ್ಬಂದಿಗಳು ಹಾಗೂ ಭಯೋತ್ಪಾದಕರು ಸತ್ತಿದ್ದಾರೆ ಎಂದು ತಿಳಿಸಿದೆ. ಈ ಮೊದಲು ದಾಳಿ ಶುರುವಾದಾಗಿನಿಂದ ಸುಮಾರು – 331 ಅಫ್ಘನ್‌ನ ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಪಾಕ್ ತಿಳಿಸಿತ್ತು.

ಅನೇಕ ತಾಲಿಬಾಲಿನಿಗಳು ಚಮನ್ ಜಿಲ್ಲೆಯ ಗಡಿಯಲ್ಲಿ ಯಾವುದೇ ಶಸ್ತ್ರಗಳಿಲ್ಲದೇ ನಮ್ಮವರನ್ನು ಬರಿಗೈಯಲ್ಲಿ ಎದುರಿಸಲು ಬಂದು ಹತರಾಗಿದ್ದಾರೆ ಎಂದು ಮಾಹಿತಿ ಸಚಿವ ಆತುಲ್ಲಾ ತಾರರ್ ತಿಳಿಸಿದ್ದಾರೆ.
ಖೈಬ‌ರ್ ಪಂಕ್ತುವ್ವಾ ಪ್ರಾಂತ್ಯದ 12 ಸ್ಥಳಗಳಲ್ಲಿ ಅಫ್ಘನ್ ವಿರುದ್ಧ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಮ್ಮ ಕಡೆ ಇಂದು
ಯಾವುದೇ ಸಾವು-ನೋವುಗಳಾಗಿಲ್ಲ ಎಂದು ವಿವರಿಸಿದ್ದಾರೆ.

ಪಾಕಿಸ್ತಾನ-ಅಫ್ಘಾನಿಸ್ತಾನದ 2,600 ಕಿಲೋಮೀಟರ್ ಉದ್ದದ ಗಡಿಗೆ ಹೊಂದಿ ಕೊಂಡ ಪಾಕ್‌ನ 53 ಸ್ಥಳಗಳನ್ನು ಗುರಿಯಾಗಿಸಿ ಅಫ್ಘಾನಿಸ್ತಾನ ಕಳೆದ ಫೆಬ್ರುವರಿ 26ರಂದು ದಾಳಿ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಶುಕ್ರವಾರ ಪಾಕಿಸ್ತಾನ ಸೇನೆ ಅಫ್ಘಾನಿಸ್ತಾನದ ರಾಜ ಧಾನಿ ಕಾಬೂಲ್ ಮತ್ತು ಕಾಂದಹಾರ್‌ಗಳ ಮೇಲೂ ಬಾಂಬ್ ದಾಳಿ ನಡೆಸಿತ್ತು. ಇದರಿಂದ ಎರಡೂ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಅಫ್ಘಾನಿಸ್ತಾನದಿಂದ ಪಾಕಿಸ್ತಾನದ ಕಡೆಗೆ ಡೋನ್ ದಾಳಿ ಮುಂದುವರಿದ ಕಾರಣ ಪಾಕಿಸ್ತಾನದ ಗಡಿಯ ಅನೇಕ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡ ಲಾಗಿದೆ. ಮೊಹಮಂದ್‌ನಲ್ಲಿ 54, ಘಲಾನೈ ನಲ್ಲಿ 1, ಬೈಜೈನಲ್ಲಿ 33, ಸಫಿಯಲ್ಲಿ 10 ಹಾಗೂ ಖೈಜೈನಲ್ಲಿ 2 ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ವಜೀರಿಸ್ತಾನದಲ್ಲಿ 33, ಬಾಜರ್‌ನಲ್ಲಿ 39 ಶಾಲೆಗಳಿಗೂ ಬೀಗ ಹಾಕಲಾಗಿದೆ.

The post ಮತ್ತೆ 69 ತಾಲಿಬಾನಿಗಳ ಸಾವು! appeared first on Good News 24x7.

]]>