Africa Archives - Good News 24x7 https://www.goodnews24x7.com/tag/africa/ Kannada Sat, 07 Mar 2026 05:23:56 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Africa Archives - Good News 24x7 https://www.goodnews24x7.com/tag/africa/ 32 32 ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ https://www.goodnews24x7.com/police-conduct-extensive-operation-against-foreign-nationals-in-bengaluru/ Sat, 07 Mar 2026 05:23:34 +0000 https://www.goodnews24x7.com/?p=8744 ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವಿಸ್ತೃತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಆಯುಕ್ತರ ನೇತೃತ್ವದಲ್ಲಿ ನಡೆದ ಈ ತಪಾಸಣೆಯಲ್ಲಿ 200ಕ್ಕೂ ಹೆಚ್ಚು ದಾಖಲೆರಹಿತ ವಿದೇಶಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಮೂಲದವರು ಹೆಚ್ಚಿದ್ದು, ಅಗತ್ಯ…

The post ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ appeared first on Good News 24x7.

]]>

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ
ಪೊಲೀಸರು ವಿಸ್ತೃತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಆಯುಕ್ತರ ನೇತೃತ್ವದಲ್ಲಿ ನಡೆದ ಈ ತಪಾಸಣೆಯಲ್ಲಿ 200ಕ್ಕೂ ಹೆಚ್ಚು ದಾಖಲೆರಹಿತ ವಿದೇಶಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಾಂಗ್ಲಾದೇಶ ಮತ್ತು ಆಫ್ರಿಕಾ ಮೂಲದವರು ಹೆಚ್ಚಿದ್ದು, ಅಗತ್ಯ ದಾಖಲೆಗಳಿಲ್ಲದೆ ವಾಸಿಸುತ್ತಿದ್ದರು ಎಂಬುದು ತಿಳಿದು ಬಂದಿದೆ. ವಶಪಡಿಸಿಕೊಂಡವರನ್ನು FRROಗೆ ಹಸ್ತಾಂತರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು, ಮಾರ್ಚ್​ 07: ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ವಿಶೇಷ ಕಾರ್ಯಾಚರಣೆಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ನಗರದ 11 ಡಿಸಿಪಿ ವ್ಯಾಪ್ತಿಯ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ತಪಾಸಣೆ ನಡೆಸಿ ಅಕ್ರಮವಾಗಿ ವಾಸಿಸುತ್ತಿದ್ದ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗುತ್ತಿದೆ.

ಒಂದೇ ದಿನದಲ್ಲಿ ನೂರಾರು ವಿದೇಶಿ ಪ್ರಜೆಗಳ ಪತ್ತೆ
ಪೊಲೀಸರು ಹೇಳುವಂತೆ ನಗರದಲ್ಲಿ ಒಟ್ಟು 200ಕ್ಕೂ ಅಧಿಕ ಅಕ್ರಮ ವಲಸಿಗರನ್ನು ಗುರುತಿಸಲಾಗಿದ್ದು, ನಿನ್ನೆ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲಾಗಿದೆ. ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ತಂಗಿದ್ದ ಈ ವಲಸಿಗರು ಅಗತ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಇವರಲ್ಲಿ ಹೆಚ್ಚಿನವರು ಬಾಂಗ್ಲಾದೇಶ ಮೂಲದವರಾಗಿದ್ದು, ಆಫ್ರಿಕಾ ಸೇರಿದಂತೆ ಇನ್ನೂ ಕೆಲವು ದೇಶಗಳಿಂದ ಬಂದವರೂ ಪತ್ತೆಯಾಗಿದ್ದಾರೆ.

ಪತ್ತೆಯಾದ ಅಕ್ರಮ ವಲಸಿಗರನ್ನು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿ (FRRO) ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕಾರ್ಯಾಚರಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ FRRO ಅಧಿಕಾರಿಗಳು ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ.

ತನಿಖೆ ವೇಳೆ ಸಿಕ್ತು ದಾಖಲೆ
ಪೊಲೀಸರು ನಡೆಸಿದ ಪರಿಶೀಲನೆ ವೇಳೆ ಕೆಲವರ ಬಳಿ ಆಧಾರ್ ಕಾರ್ಡ್ ಸೇರಿದಂತೆ ಸ್ಥಳೀಯ ದಾಖಲೆಗಳು ಕೂಡ ಪತ್ತೆಯಾಗಿವೆ. ಅವುಗಳ ನೈಜತೆ ಕುರಿತು ಪರಿಶೀಲನೆ ನಡೆಯುತ್ತಿದೆ. ಪತ್ತೆಯಾದ ವಿದೇಶಿ ಪ್ರಜೆಗಳ ವಿವರಗಳನ್ನು ಸಂಬಂಧಿತ ದೇಶಗಳ ಅಧಿಕಾರಿಗಳಿಗೆ ರವಾನಿಸಲಾಗುತ್ತಿದ್ದು, ಅವರ ಗುರುತು ಮತ್ತು ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಹಿಂದೆ ಪೊಲೀಸ್ ಆಯುಕ್ತರ ಸೂಚನೆಯಂತೆ ವಿವಿಧ ವಿಭಾಗಗಳ ಪೊಲೀಸರು ಅನುಮಾನಾಸ್ಪದ ಪ್ರದೇಶಗಳಲ್ಲಿ ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆ ವೇಳೆ ಫೆಬ್ರವರಿ 26ರ ಒಂದೇ ದಿನ ಸುಮಾರು 2,000ಕ್ಕೂ ಹೆಚ್ಚು ವಿದೇಶಿಗರು ಪತ್ತೆಯಾಗಿದ್ದರು. ಇದರಲ್ಲಿ ಬಹುತೇಕರು ಸರಿಯಾದ ದಾಖಲೆಗಳಿಲ್ಲದೆ ಅಥವಾ ವೀಸಾ ಅವಧಿ ಮೀರಿಸಿ ನಗರದಲ್ಲಿ ವಾಸಿಸುತ್ತಿರುವುದು ಎಂದು ತಿಳಿದು ಬಂದಿತ್ತು.

The post ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ appeared first on Good News 24x7.

]]>
ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳ. https://www.goodnews24x7.com/zoo-entry-fee-hiked-by-20-percent/ Thu, 31 Jul 2025 11:30:12 +0000 https://www.goodnews24x7.com/?p=5198 ಮೈಸೂರು : ನಾಳೆಯಿಂದ ಮೈಸೂರು ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳವಾಗಲಿದೆ.ನಾಲ್ಕು ವರ್ಷಗಳ ನಂತರ ಮೃಗಾಲಯ ಆಡಳಿತ ಮಂಡಳಿ ದರ ಪರಿಷ್ಕರಣೆ ಮಾಡಿದ್ದು, ವಯಸ್ಕರಿಗೆ 100 ರೂ ಇದ್ದ ಟಿಕೆಟ್ ದರ 120 ರೂ, ಮಕ್ಕಳಿಗೆ 50 ರೂ…

The post ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳ. appeared first on Good News 24x7.

]]>

ಮೈಸೂರು : ನಾಳೆಯಿಂದ ಮೈಸೂರು ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳವಾಗಲಿದೆ.ನಾಲ್ಕು ವರ್ಷಗಳ ನಂತರ ಮೃಗಾಲಯ ಆಡಳಿತ ಮಂಡಳಿ ದರ ಪರಿಷ್ಕರಣೆ ಮಾಡಿದ್ದು, ವಯಸ್ಕರಿಗೆ 100 ರೂ ಇದ್ದ ಟಿಕೆಟ್ ದರ 120 ರೂ, ಮಕ್ಕಳಿಗೆ 50 ರೂ ದರ 60 ರೂ.ಗೆ ಏರಿಕೆಯಾಗಲಿದೆ. ಮೃಗಾಲಯ, ಕಾರಂಜಿ ಕಾಂಬೋ 150 ರೂ. ಮಕ್ಕಳಿಗೆ 80 ರೂ ದರ ನಿಗದಿ ಮಾಡಲಾಗಿದೆ.

https://www.facebook.com/share/v/1Bvz39PD3X/

ಈ ಕುರಿತು ಮಾತನಾಡಿದ ಮೃಗಾಲಯ ಕಾರ್ಯ ನಿರ್ವಾಹಕ ಅಧಿಕಾರಿ ರಂಗಸ್ವಾಮಿ, ಒಂದು ದಿನಕ್ಕೆ ಮೃಗಾಲಯ ನಿರ್ವಹಣೆಗೆ 9 ಲಕ್ಷ ಹಣ ಖರ್ಚಾಗಲಿದ್ದು, ಮೃಗಾಲಯ ಪ್ರಾಣಿಗಳ ಖರ್ಚು ವೆಚ್ಚ ತುಟ್ಟಿ ಹಿನ್ನಲೆ, ನಾಲ್ಕು ವರ್ಷಗಳ ಬಳಿಕ ಪ್ರವೇಶ ದರದಲ್ಲಿ ಏರಿಕೆ ಮಾಡಲಾಗಿದೆ. ಇತ್ತೀಚಿನ ಜರ್ಮನ್, ಆಫ್ರಿಕಾದಿಂದ ತಂದಿರುವ ಹಂಟರ್ ಗೊರಿಲ್ಲ, ಹಂಡರ್ ಚೀತಾ, ಜಾಗ್ವಾರ್,ಪ್ರಾಣಿಗಳ ಸಾಕುವ ವೆಚ್ಚ ದುಬಾರಿಯಾದ ಹಿನ್ನಲೆ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗುತ್ತಿದೆ. ಪ್ರವಾಸಿಗರು ದರ ಏರಿಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

ಆಫ್ರಿಕನ್ ಹಂಟರ್ ಚೀತಾ, ಜಾಗ್ವಾರ್ ಜರ್ಮನ್ ಗೊರಿಲ್ಲ ಸೇರಿದಂತೆ ಹಲವು ಪ್ರಾಣಿಗಳ ವಿನಿಮಯ ಪದ್ದತಿಯಲ್ಲಿ ಮೃಗಾಲಯಕ್ಕೆ ಬಂದ ಹೊಸ ಪ್ರಾಣಿಗಳಾಗಿವೆ.

The post ಮೃಗಾಲಯದ ಪ್ರವೇಶ ದರ ಶೇ 20 ರಷ್ಟು ಹೆಚ್ಚಳ. appeared first on Good News 24x7.

]]>
ಮದುವೆ ದಿನ ಮಾತ್ರ ಸ್ನಾನ ಮಾಡುವ ಪದ್ಧತಿಯನ್ನು ಹೊಂದಿದ್ದಾರೆ ಈ ಬುಡಕಟ್ಟು ಜನಾಂಗದವರು ….. https://www.goodnews24x7.com/%e0%b2%ae%e0%b2%a6%e0%b3%81%e0%b2%b5%e0%b3%86-%e0%b2%a6%e0%b2%bf%e0%b2%a8-%e0%b2%ae%e0%b2%be%e0%b2%a4%e0%b3%8d%e0%b2%b0-%e0%b2%b8%e0%b3%8d%e0%b2%a8%e0%b2%be%e0%b2%a8-%e0%b2%ae%e0%b2%be%e0%b2%a1/ Thu, 26 Jun 2025 11:19:40 +0000 https://www.goodnews24x7.com/?p=4658 ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಕೆಲವರು ದಿನಕ್ಕೆ ಎರಡೆರಡು ಬಾರಿ ಸ್ನಾನ ಮಾಡ್ತಾರೆ. ಆದರೆ ಈ ಜನರು ಮಾತ್ರ ಸ್ನಾನ ಅಂದ್ರೆ ಸಾಕು, ಮಾರು ದೂರ ಓಡ್ತಾರೆರಂತೆ. ಹೌದು, ಇಲ್ಲಿನ ಜನರ ಜೀವನಶೈಲಿ ಮಾತ್ರ ಇವತ್ತಿಗೂ ಬದಲಾಗಿಲ್ಲ. ಇಂದಿಗೂ…

The post ಮದುವೆ ದಿನ ಮಾತ್ರ ಸ್ನಾನ ಮಾಡುವ ಪದ್ಧತಿಯನ್ನು ಹೊಂದಿದ್ದಾರೆ ಈ ಬುಡಕಟ್ಟು ಜನಾಂಗದವರು ….. appeared first on Good News 24x7.

]]>

ಪ್ರತಿದಿನ ಸ್ನಾನ ಮಾಡುವ ಅಭ್ಯಾಸ ಎಲ್ಲರಿಗೂ ಇರುತ್ತದೆ. ಕೆಲವರು ದಿನಕ್ಕೆ ಎರಡೆರಡು ಬಾರಿ ಸ್ನಾನ ಮಾಡ್ತಾರೆ. ಆದರೆ ಈ ಜನರು ಮಾತ್ರ ಸ್ನಾನ ಅಂದ್ರೆ ಸಾಕು, ಮಾರು ದೂರ ಓಡ್ತಾರೆರಂತೆ. ಹೌದು, ಇಲ್ಲಿನ ಜನರ ಜೀವನಶೈಲಿ ಮಾತ್ರ ಇವತ್ತಿಗೂ ಬದಲಾಗಿಲ್ಲ. ಇಂದಿಗೂ ತಮ್ಮ ಹಿಂದಿನ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುವ ಇಲ್ಲಿನ ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡುವುದು. ಹಾಗಾದ್ರೆ ಇಂತಹ ವಿಚಿತ್ರ ಜನರು ಇರುವುದು ಎಲ್ಲಿ? ದೇಹದ ಸ್ವಚ್ಛತೆ ಹೇಗೆ ಮಾಡ್ತಾರೆ? ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ….

ಈ ಬುಡಕಟ್ಟು ಜನಾಂಗದವರು ತಮ್ಮ ಹಿರಿಯರು ಪಾಲಿಸಿಕೊಂಡ ಬಂದ ಸಂಪ್ರದಾಯವನ್ನು ಇವತ್ತಿಗೂ ಕೂಡ ಅನುಸರಿಸಿಕೊಂಡು ಬರುತ್ತಿದ್ದಾರಂತೆ. ಅಂತಹ ಆಚರಣೆಗಳಲ್ಲಿ ಒಂದು ಸ್ನಾನ ಮಾಡದೇ ಇರುವುದು. ಪ್ರಪಂಚದಲ್ಲಿರುವ ಈ ಬುಡಕಟ್ಟು ಜನಾಂಗದಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನೇ ನಿಷೇಧಿಸಲಾಗಿದೆ, ಹೌದು, ಈ ಬುಡಕಟ್ಟು ಜನಾಂಗದ ಹೆಸರು ಹಿಂಬಾ ಬುಡಕಟ್ಟು. ಆಫ್ರಿಕಾ ನಮೀಬಾ ದೇಶದ ಮರುಭೂಮಿಗಳಲ್ಲಿ ಈ ಬುಡಕಟ್ಟು ಜನಾಂಗದ ಜನರು ನೆಲೆಸಿದ್ದು, ಆಧುನಿಕತೆಯಿಂದ ಸಂಪೂರ್ಣ ದೂರ ಉಳಿದಿದ್ದಾರೆ. ನಮ್ಗೆಲ್ಲರಿಗೂ ಒಂದು ದಿನ ಸ್ನಾನ ಮಾಡದೇ ಇದ್ರೆ ಕಿರಿಕಿರಿ ಅನುಭವ ಆಗ್ತದೆ, ಕೆಲವರ ದೇಹದಿಂದ ಗಬ್ಬು ವಾಸನೆ ಬರಲು ಶುರುವಾಗುತ್ತದೆ, ಆದರೆ ಬುಡಕಟ್ಟು ಜನಾಂಗದ ಮಹಿಳೆಯರು ಬೇಸಿಗೆಯಿರಲಿ, ಚಳಿಗಾಲವಿರಲಿ, ಮಳೆಗಾಲವೇ ಇರಲಿ ಸ್ನಾನ ಮಾಡುವುದೇ ಇಲ್ಲ. ಅಷ್ಟೇ ಅಲ್ಲದೇ, ಈ ಮಹಿಳೆಯರು ಬಟ್ಟೆ ಕೂಡ ಒಗೆಯೋದಿಲ್ಲವಂತೆ. ಆದರೆ ಜೀವಮಾನದಲ್ಲಿ ಒಮ್ಮೆ ಮಾತ್ರ ಸ್ನಾನ ಮಾಡೋದು, ಅದುವೇ ತಮ್ಮ ಮದುವೆ ದಿನವಂತೆ.

ಮದುವೆ ದಿನ ಮಾತ್ರ ಸ್ನಾನ ಮಾಡಿದ್ರು ಕೂಡ ಇಲ್ಲಿನ ಮಹಿಳೆಯರು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸ್ತಾರೆ. ದೇಹದ ಸ್ವಚ್ಛತೆಗಾಗಿ ಗಿಡಮೂಲಿಕೆಯನ್ನು ಬಳಸ್ತಾರೆ. ಹೌದು ತಮ್ಮ ಸುತ್ತಮುತ್ತಲಿನಲ್ಲಿ ಸಿಗುವ ವಿಶೇಷ ಗಿಡಮೂಲಿಕೆಗಳನ್ನು ನೀರಿನಲ್ಲಿ ಕುದಿಸುತ್ತಾರೆ. ಅದರ ಹೊಗೆಯನ್ನು ಬಳಸಿ ತಮ್ಮ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುತ್ತಾರೆ. ಸೂರ್ಯನ ಬೆಳಕಿನಿಂದ ಚರ್ಮವನ್ನು ರಕ್ಷಿಸಲು ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ವಿಶೇಷ ಲೋಷನ್ ಬಳಸುತ್ತಾರೆ.

 

The post ಮದುವೆ ದಿನ ಮಾತ್ರ ಸ್ನಾನ ಮಾಡುವ ಪದ್ಧತಿಯನ್ನು ಹೊಂದಿದ್ದಾರೆ ಈ ಬುಡಕಟ್ಟು ಜನಾಂಗದವರು ….. appeared first on Good News 24x7.

]]>