Against Archives - Good News 24x7 https://www.goodnews24x7.com/tag/against/ Kannada Sun, 14 Sep 2025 13:03:10 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Against Archives - Good News 24x7 https://www.goodnews24x7.com/tag/against/ 32 32 ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ https://www.goodnews24x7.com/bharata-pak-myac-no%e1%b8%8dalla-enda-pradip-isvar-kendra-sarkara-viruddha-ki%e1%b8%8di-karida-mla-pradip-isvar-asiacupindiapakistanbengalurumlapradeepeshwarcentralgovernmentteamagainstma/ Sun, 14 Sep 2025 13:01:19 +0000 https://www.goodnews24x7.com/?p=7544 ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಬೆಂಗಳೂರು: ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​…

The post ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ appeared first on Good News 24x7.

]]>

ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ.

ಬೆಂಗಳೂರು: ಬದ್ಧ ವೈರಿಯಾಗಿರುವ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಇವತ್ತು ಏಷ್ಯಾಕಪ್​ ಟಿ20 ಪಂದ್ಯವಾಡಲಿದೆ. ಈಗಾಗಲೇ ಎರಡು ತಂಡಗಳು ಭಾರೀ ಸಿದ್ಧತೆ ನಡೆಸಿದ್ದು ಇನ್ನೇನು ಕೆಲವೇ ಗಂಟೆಗಳಲ್ಲಿ ಪಂದ್ಯ ಆರಂಭವಾಗಲಿದೆ. ಪಾಕ್ ವಿರುದ್ಧ ಭಾರತ ಅಖಾಡಕ್ಕೆ ಇಳಿಯಬಾರದು ಎಂದು ಹಲವೆಡೆ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಈ ಸಂಬಂಧ ಶಾಸಕ ಪ್ರದೀಪ್ ಈಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ನಿಲ್ಲಿಸಬಹುದಿತ್ತು. ಇವರು ಯಾವ ಮುಖ ಇಟ್ಟುಕೊಂಡು ಮ್ಯಾಚ್ ಆಡಿಸುತ್ತಿದ್ದಾರೆ. ಈ ಪಂದ್ಯವನ್ನು ರದ್ದು ಮಾಡಬೇಕಿತ್ತು. ಪಹಲ್ಗಾಮ್ ಘಟನೆಯ ನೋವು ನಮ್ಮಲ್ಲಿ ಇನ್ನು ಹಾಗೇ ಇದೆ ಎಂದು ಹೇಳಿದ್ದಾರೆ.
ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಮಗ ಜೈಶಾಗೆ ಬ್ಯುಸಿನೆಸ್​ ಮುಖ್ಯ. ಇಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಬಿ.ವೈ ವಿಜಯೇಂದ್ರ, ಶಾಸಕ ಬಸನಗೌಡ ಯತ್ನಾಳ್ ಅವರು ಪಾಕಿಸ್ತಾನ ಅಂತ ಬೊಬ್ಬೆ ಹಾಕುತ್ತಾರೆ. ಇವರಿಗೆ ಅದೇ ಧಮ್ಮು, ತಾಕತ್ ಇದ್ದರೇ ಕೇಂದ್ರ ಸರ್ಕಾರಕ್ಕೆ ಹೇಳಿ ಮ್ಯಾಚ್ ರದ್ದು ಮಾಡಿಸಲಿ. ಒಂದು ವೇಳೆ ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಿದ್ರೆ ಪಂದ್ಯ ರದ್ದು ಮಾಡಿಸುತ್ತಿದ್ದೇವು. ಪಹಲ್ಗಾಮ್ ಘಟನೆ ಇನ್ನೂ ಮರೆತಿಲ್ಲ, ನೋವಿದೆ. ಅದಕ್ಕಾಗಿ ಇಂದಿನ ಮ್ಯಾಚ್ ನೋಡಲ್ಲ ಎಂದು ಎಂಎಲ್​ಎ ಪ್ರದೀಪ್ ಈಶ್ವರ್​ ಅವರು ಹೇಳಿದ್ದಾರೆ.

ಕಳೆದ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟಿದ್ದರು. ಇದರಲ್ಲಿ ಕರ್ನಾಟಕದವರು ಸೇರಿದ್ದಾರೆ. ಪಹಲ್ಗಾಮ್ ದಾಳಿಗೆ ಪಾಕಿಸ್ತಾನವೇ ಕಾರಣ. ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಕೂಡ ನಡೆದಿತ್ತು. ಈ ಎಲ್ಲಾ ಬೆಳವಣಿಗಳ ನಡುವೆ ಪಾಕ್ ವಿರುದ್ಧ ಭಾರತ ಪಂದ್ಯವಾಡುತ್ತಿರುವುದಕ್ಕೆ ವಿರೋಧ ಕೇಳಿ ಬರುತ್ತಿದೆ.

The post ಭಾರತ-ಪಾಕ್ ಮ್ಯಾಚ್ ನೋಡಲ್ಲ ಎಂದ ಪ್ರದೀಪ್ ಈಶ್ವರ್, ಕೇಂದ್ರ ಸರ್ಕಾರ ವಿರುದ್ಧ ಕಿಡಿ ಕಾರಿದ MLA ಪ್ರದೀಪ್ ಈಶ್ವರ್ appeared first on Good News 24x7.

]]>
ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. https://www.goodnews24x7.com/viral-fever-cases-increase-in-bengaluru-city-due-to-continuous-rains/ Tue, 19 Aug 2025 05:39:41 +0000 https://www.goodnews24x7.com/?p=6384 ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ…

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>

ಬೆಂಗಳೂರು : ನಗರದ ಹವಾಮಾನದಲ್ಲಿ ನಡೆಯುತ್ತಿರುವ ಅನಿಯಮಿತ ಬದಲಾವಣೆಯ ಹಿನ್ನೆಲೆ, ಕಳೆದ ಒಂದು ವಾರದಿಂದ ಸಂಭವಿಸುತ್ತಿರುವ ನಿರಂತರ ಮಳೆಯು ವೈರಲ್ ಜ್ವರ ಪ್ರಕರಣಗಳಲ್ಲಿ ಏರಿಕೆ ತರಿಸಿದೆ. ವೈದ್ಯಕೀಯ ವರದಿಗಳ ಪ್ರಕಾರ, ಮಕ್ಕಳಲ್ಲಿ ಶೇ.5 ರಿಂದ 10 ರಷ್ಟು ಮತ್ತು ಒಟ್ಟು ಒಪಿಡಿ ರೋಗಿಗಳಲ್ಲಿ ಶೇ.15-20 ರಷ್ಟು ವೈರಲ್‌ ಫೀವರ್‌ ಪ್ರಕರಣಗಳು ಹೆಚ್ಚಾಗಿವೆ.

ಹವಾಮಾನ ಬದಲಾವಣೆಯಿಂದಾಗಿ ಜ್ವರ, ಕೆಮ್ಮು, ಶೀತ, ಗಂಟಲು ನೋವು, ವಾಂತಿ, ಅತಿಸಾರ ಮುಂತಾದ ಲಕ್ಷಣಗಳೊಂದಿಗೆ ಬಾಲಕರು ಹಾಗೂ ದೊಡ್ಡವರು ಆಸ್ಪತ್ರೆಗಳ ಒಪಿಡಿಗೆ ಬರ್ತಿದ್ದಾರೆ. ಜೊತೆಗೆ ಡೆಂಗ್ಯೂ ಮತ್ತು ಟೈಫಾಯ್ಡ್ ಪ್ರಕರಣಗಳೂ ಸಹ ಕಾಣಿಸಿಕೊಂಡಿವೆ.

ವೈದ್ಯರ ಅಭಿಪ್ರಾಯ
ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಹೇಳುವಂತೆ, “ಮಕ್ಕಳಲ್ಲಿಯಷ್ಟೇ ಅಲ್ಲದೆ, ದೊಡ್ಡವರಲ್ಲೂ ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗಿವೆ. ಬಹುಪಾಲು ಪ್ರಕರಣಗಳು ಮೂರು ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳುತ್ತವೆ.”

ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ. ಅವರು, “ಚಳಿಯ ವಾತಾವರಣದಿಂದಾಗಿ ಗರ್ಭಿಣಿಯರಲ್ಲಿಯೂ ಜ್ವರ, ನೆಗಡಿಯಂತಹ ಲಕ್ಷಣಗಳ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಸಾಮಾನ್ಯವಾಗಿ ರೆಸ್ಪಿರೇಟರಿ ವೈರಸ್‌ನಿಂದ ಉಂಟಾಗುವ ಅಸ್ವಸ್ಥತೆ” ಎಂದರು.

ಆರೋಗ್ಯ ಕಾಳಜಿ ಅಗತ್ಯ
ಕೆ.ಸಿ. ಜನರಲ್, ವಿಕ್ಟೋರಿಯಾ, ಸಿ.ವಿ. ರಾಮನ್ ನಗರ, ವಾಣಿವಿಲಾಸ್ ಸೇರಿ ಬಹುತೇಕ ಸರ್ಕಾರಿ ಆಸ್ಪತ್ರೆಗಳ ಒಪಿಡಿಯಲ್ಲಿ ಅರ್ಧಕ್ಕಿಂತ ಹೆಚ್ಚು ರೋಗಿಗಳು ವೈರಲ್ ಜ್ವರದಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.

ವೈದ್ಯರ ಸಲಹೆ:

  • ಮಕ್ಕಳನ್ನು ಬೆಚ್ಚಗಿರಿಸಲು ಯತ್ನಿಸಿ
  • ಮಳೆ ಅಥವಾ ಚಳಿಯಲ್ಲಿ ಹೊರಗೆ ಹೋಗದಂತೆ ತಡೆಗಟ್ಟಿರಿ
  • ಜ್ವರ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ
  • ಆರೋಗ್ಯಕರ ಆಹಾರ ಮತ್ತು ನಿದ್ರೆ ಕಾಪಾಡಿಕೊಳ್ಳಿ

ಬೆಂಗಳೂರು ನಿವಾಸಿಗಳು ಹವಾಮಾನದ ಬದಲಾವಣೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ನಿಜವಾಗಿಯೂ ಅಗತ್ಯವಾಗಿದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

 

The post ಬೆಂಗಳೂರು ನಗರದಲ್ಲಿ ಸತತ ಮಳೆಯ ಪರಿಣಾಮ ವೈರಲ್ ಜ್ವರ ಪ್ರಕರಣಗಳಲ್ಲಿ ಹೆಚ್ಚಳ. appeared first on Good News 24x7.

]]>