Agricultural Archives - Good News 24x7 https://www.goodnews24x7.com/tag/agricultural/ Kannada Tue, 24 Mar 2026 12:52:59 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Agricultural Archives - Good News 24x7 https://www.goodnews24x7.com/tag/agricultural/ 32 32 ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. https://www.goodnews24x7.com/sosai%e1%b9%adiga%e1%b8%b7a-mulakave-be%e1%b8%b7e-kharidi-mara%e1%b9%ada-raitara-svavalambanege-hosa-yojane-societiesmlapressagriculturalcropsfarmerscooperativeprofit-be%e1%b8%b7ega/ Tue, 24 Mar 2026 12:50:41 +0000 https://www.goodnews24x7.com/?p=8970 ಪಾಂಡವಪುರ : ಬೆಳೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಖರೀದಿಸಿ ಮಾರಾಟ ಮಾಡಿ, ರೈತರ ಬೆಳೆಗೆ ಅಧಿಕ ಲಾಭ ನೀಡುವ ಹೊಸ ಕಾಠ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೊಸೈಟಿಗಳು ಇಷ್ಟು ದಿನ…

The post ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. appeared first on Good News 24x7.

]]>

ಪಾಂಡವಪುರ : ಬೆಳೆಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಖರೀದಿಸಿ ಮಾರಾಟ ಮಾಡಿ, ರೈತರ ಬೆಳೆಗೆ ಅಧಿಕ ಲಾಭ ನೀಡುವ ಹೊಸ ಕಾಠ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸೊಸೈಟಿಗಳು ಇಷ್ಟು ದಿನ ರೈತರಿಗೆ ಬೇಕಾದ ರಸಗೊಬ್ಬರ, ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಪಡಿತರ ವಿತರಣೆಯನ್ನು ಮಾತ್ರ ಮಾಡುತ್ತಿ ದ್ದರು. ಅದರ ಜತೆಗೆ ರೈತರು ಬೆಳೆಯುವ ಭತ್ತ, ರಾಗಿ, ಜೋಳ, ಕಾಳುಗಳನ್ನು ಸಹ ನೇರವಾಗಿ ರೈತರಿಂದ ಖರೀದಿಸಿ ಅಧಿಕ ಲಾಭನೀಡುವುದರೊಂದಿಗೆ ಸೊಸೈಟಿಗಳ ಮೂಲಕವೇ ಸಿದ್ದಪಡಿಸಿದ ಬೆಳೆಗಳನ್ನು ಮಾರಾಟ ಮಾಡಲು ಕ್ರಮ ವಹಿಸಲಾಗಿದೆ. ಇದರಿಂದ ದಲ್ಲಾಳಿಗಳ ಹಾವಳಿ ತಪ್ಪಿಸಿದಂತಾಗುತ್ತದೆ, ಜತೆಗೆ ರೈತರಿಗೂ ಅಧಿಕ

ಲಾಭವಾಗಿ ಸೊಸೈಟಿಗಳು ಲಾಭದಾಯಕ ವಾಗಲಿವೆ. ಇದಕ್ಕಾಗಿ ನಬಾರ್ಡ್ ಅಥವಾ ಡಿಸಿಸಿ ಬ್ಯಾಂಕ್‌ಗಳಿಂದ ಸೊಸೈಟಿಗಳಿಗೆ ಆರ್ಥಿಕ ನೆರವು ನೀಡಲು ಕ್ರಮ ವಹಿಸಲಾಗುತ್ತಿದೆ,” ಎಂದು ತಿಳಿಸಿದರು. ”ಈ ಸಂಬಂಧ ಈಗಾಗಲೇ ಸೊಸೈಟಿಗಳ ಸಿಇಒ, ಸಿಬ್ಬಂದಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಜತೆಗೆ ಹೊಸ ಸಾಫ್ಟ್‌ವೇರ್ ಅನ್ನು ಡೆವಲಪ್ ಮಾಡಲಾಗಿದೆ. ಮೊದಲ ಹಂತದಲ್ಲಿ ಭತ್ತ.
ರಾಗಿ, ಜೋಳ, ಕಾಳುಗಳು, ಮೆಣಸಿನ ಕಾಯಿಗಳನ್ನು ಖರೀದಿಸಲಾಗುವುದು, ಬಳಿಕ ಕೋಲ್ಡ್ ಸ್ಟೋರೇಜ್‌ಗಳನ್ನು ನಿರ್ಮಿಸಿ ತರಕಾರಿ ಖರೀದಿಸಲು ತೀರ್ಮಾನಿ ಸಲಾಗುತ್ತಿದೆ. ಈ ಕೆಲಸಕ್ಕೆ ಸಹಕಾರ ಸಂಘಗಳ ಸಹಕಾರ ಇಲ್ಲಿ ನೀಡಬೇಕು, ಯಾವುದೇ ರೀತಿಯ ರಾಜಕೀಯ ನಡೆಸುತ್ತಿಲ್ಲ, ಇದು ಕೇವಲ ರೈತರು ಆರ್ಥಿಕ ಸ್ವಾವಲಂಬಿ ನಡೆಸುವುದಕ್ಕಾಗಿ ಮಾತ್ರ ಈ ಕಾಠ್ಯಕ್ರಮ ಆಯೋಜಿಸಲಾಗಿದೆ,”ಎಂದರು.

‘ಈಗಾಗಲೇ ತಾಲೂಕಿನ ಅರಳಕುಪ್ಪೆ, ಕ್ಯಾತನಹಳ್ಳಿ ಸೊಸೈಟಿಗಳಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಿ ಮಾರಾಟ ಮಾಡಿ ಲಾಭ ಗಳಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಕ್ಷೇತ್ರದಾದ್ಯಂತ ಮಾಡಲಾಗುತ್ತಿದೆ. ಈ ವಿಚಾರವಾಗಿ ಚರ್ಚಿಸಲು ಏ.1ರಂದು ಪಟ್ಟಣದ ಟಿಎಪಿಸಿಎಂಎಸ್‌ ರೈತ ಸಭಾಂಗಣದಲ್ಲಿ ಎಲ್ಲಾ ತ ಸಹಕಾರ ಸಂಘಗಳ ಆಡಳಿತ ಮಂಡಳಿಯ ನಿರ್ದೇಶಕ ಸಭೆಯನ್ನು ಕರೆಯಲಾಗಿದೆ,” ಎಂದು ಮನವಿ ಮಾಡಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ,ಎಲ್. ಕೆಂಪೂಗೌಡ, ತಾಲೂಕು ಅಧ್ಯಕ್ಷ ಎಣ್ಣೆಹೊಳೆ ಕೊಪ್ಪಲು ಮಂಜುನಾಥ್, ಮಾಜಿ ಅಧ್ಯಕ್ಷ ಕೆನ್ನಾಳು ವಿಜಯ್‌ಕುಮಾರ್, ನಾಗರಾಜು, ಪ್ರಕಾಶ್, ಪ್ರಧಾನ ಕಾಠ್ಯದರ್ಶಿ ಡಾಮಡಹಳ್ಳಿ ಅಶೋಕ್, ಕೆ.ಟಿ.ಗೋವಿಂದೇಗೌಡ, ಬಿ.ಟಿ.ಶಿವಣ್ಣ, ಶಂಕರ, ರೂಪಾ, ಕಟ್ಟೇರಿ ಮಹದೇವು, ಮುಖಂಡ ಗೋವಿಂದರಾಜು, ರಾಘು, ಪ್ರಕಾಶ್ ಸೇರಿದಂತೆ ಇತರರು ಇದ್ದರು.

The post ಸೊಸೈಟಿಗಳ ಮೂಲಕವೇ ಬೆಳೆ ಖರೀದಿ-ಮಾರಾಟ: ರೈತರ ಸ್ವಾವಲಂಬನೆಗೆ ಹೊಸ ಯೋಜನೆ. appeared first on Good News 24x7.

]]>
ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ https://www.goodnews24x7.com/monsoon-is-back-agricultural-activities-in-dakshina-kannada/ Sun, 15 Jun 2025 12:00:38 +0000 https://www.goodnews24x7.com/?p=4432 ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು…

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>

ಬೆಳ್ತಂಗಡಿ: ಒಂದು ಹಂತದ ಅಬ್ಬರದ ಮಳೆ ಬಳಿಕ ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ವರ್ಷಧಾರೆ ಶುರುವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಮೇ ತಿಂಗಳಲ್ಲಿ ಈ ಬಾರಿ ಉತ್ತಮ ಮಳೆ ಸುರಿದುದರಿಂದ ಕೃಷಿ ನೀರಿನ ಸಮಸ್ಯೆ ದೂರವಾಗಿತ್ತು. ಅಲ್ಲದೆ ಕೃಷಿಕರು ತಮ್ಮ ತೋಟ, ಗದ್ದೆಗಳ ಕೆಲಸವನ್ನು ಬೇಗನೆ ಆರಂಭಿಸಿದ್ದರು. ಆದರೆ ಜೂನ್ ಆರಂಭವಾಗುತ್ತಿದ್ದಂತೆ ಸುಮಾರು 10-12 ದಿನಗಳ ಕಾಲ ಮಳೆ ದೂರವಾಯಿತು. ಈ ಸಮಯ ಕೃಷಿ ಕೆಲಸಗಳು ಕೊಂಚ ಕುಂಠಿತಗೊಂಡವು. ಇದೀಗ 4 ದಿನಗಳಿಂದ ಮಳೆ ಪ್ರಾರಂಭವಾಗಿದ್ದು ಗದ್ದೆಗಳಲ್ಲಿ ನೀರು ತುಂಬಿದೆ. ಇದು ಏಣೇಲು ಭತ್ತದ ಗದ್ದೆಗಳಿಗೆ ಉತ್ತಮವಾಗಿದ್ದು, ಗದ್ದೆಗಳ ಕೆಲಸಗಳು ಭರದಿಂದ ಸಾಗುತ್ತಿದ್ದು ನೇಜಿ ನಾಟಿಯ ತಯಾರಿ ನಡೆದಿದೆ.

ಇತ್ತೀಚಿನ ವರ್ಷಗಳಲ್ಲಿ ಕಾರ್ಮಿಕರ ಕೊರತೆ ಇರುವುದರಿಂದ ಹೆಚ್ಚಿನ ಕೃಷಿಕರು ಅಗತ್ಯ ಕೆಲಸಗಳಿಗೆ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಇದು ಕಡಿಮೆ ಖರ್ಚು ಹಾಗೂ ಕೆಲಸಗಳು ವೇಗವಾಗಿ ಸಾಗಲು ಸಹಕಾರಿಯಾಗಿದೆ. ಗದ್ದೆಗಳನ್ನು ಹದ ಮಾಡಲು ಟಿಲ್ಲರ್, ಟ್ರ್ಯಾಕ್ಟರ್ಗಳಿಗೆ ಬೇಡಿಕೆ ಹೆಚ್ಚಿದೆ. ಇದರ ಜತೆ ನೇಜಿ, ಬಿತ್ತನೆ ಬೀಜದ ಬೇಡಿಕೆ ಅಧಿಕಗೊಂಡಿದೆ. ಗದ್ದೆಗಳ ಬದು ಕಟ್ಟುವುದು, ಸಣ್ಣ ಪ್ರಮಾಣದ ಕಣಿಗಳನ್ನು ನಿರ್ಮಿಸುವುದು, ನೀರು ನಿಲ್ಲಿಸುವ, ಅಧಿಕ ನೀರನ್ನು ಹೊರ ಬಿಡುವ ಕೆಲಸಗಳನ್ನು ಕಾರ್ಮಿಕರಿಂದ ಮಾಡಿಸಲಾಗುತ್ತಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 1600 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ 1580 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿತ್ತು. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ಕೊಕ್ಕಡ ವೇಣೂರು ಹೋಬಳಿಗಳಲ್ಲಿ ಎಂಒ-(4)- 40ಕ್ವಿಂ., ಬಿಳಿಜಯ-16ಕ್ವಿಂ., ಜ್ಯೋತಿ-12ಕ್ವಿಂ. ಬಿತ್ತನೆ ಬೀಜ ಸಹಾಯಧನದಲ್ಲಿ ಲಭ್ಯವಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಸಿಂಪಡಣೆಗೆ ಅನುಕೂಲ
ಜೂನ್ ತಿಂಗಳಲ್ಲಿ 10 ದಿನ ಮಳೆ ಬಿಟ್ಟು ಬಿಸಿಲಿನ ವಾತಾವರಣ ಮೂಡಿದ್ದು, ಅಡಕೆ ತೋಟಗಳಿಗೆ ಔಷಧ ಸಿಂಪಡಿಸುವ ಕೃಷಿಕರಿಗೆ ಹೆಚ್ಚಿನ ಅನುಕೂಲ ನೀಡಿತ್ತು. ಮೇ ತಿಂಗಳ ಕೊನೆಯ ವಾರದಲ್ಲಿ ವಿಪರೀತ ಮಳೆಯಿಂದ ಔಷಧ ಸಿಂಪಡಣೆಗೆ ಹೆಣಗಾಡುತ್ತಿದ್ದ ಅಡಕೆ ಕೃಷಿಕರಿಗೆ ಜೂನ್ ಮೊದಲ ವಾರ ಮಳೆಬಿಟ್ಟದ್ದು ಅನುಕೂಲವಾಯಿತು.

ಅರ್ಧಕ್ಕಿಂತ ಅಧಿಕ ತೋಟಗಳಲ್ಲಿ ಈಗಾಗಲೇ ಪ್ರಥಮ ಹಂತದ ಔಷಧ ಸಿಂಪಡಣೆ ಪೂರ್ಣಗೊಂಡಿದೆ. ಈ ಬಾರಿ ಉತ್ತಮ ಬೇಸಿಗೆ ಮಳೆಯಿಂದ ಅಡಕೆ ಬೇಗನೆ ಹಣ್ಣಾಗುವ ನಿರೀಕ್ಷೆ ಇದೆ. ನಳ್ಳಿ ಉದುರುವಿಕೆ ಕಡಿಮೆ ಇದ್ಧ ಕಾರಣ ಹಾಗೂ ನೀರಿನ ಕೊರತೆ ಕಂಡು ಬರದುದರಿಂದ ಹೆಚ್ಚಿನ ತೋಟಗಳಲ್ಲಿಉತ್ತಮ ಫಸಲು ಕಂಡು ಬರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಕೃಷಿಕರು ಆಸಕ್ತರಾಗಿದ್ದಾರೆ. ನಾವು ಪ್ರತಿ ವರ್ಷ ನಮ್ಮ ಹಿರಿಯರಿಂದ ಬಂದ ಸುಮಾರು ಐದು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ಎರಡು ಬಾರಿ ಗದ್ದೆ ಬೇಸಾಯ ಮಾಡುತ್ತಿದ್ದೇವೆ. ಏಣೇಲು ಬಿತ್ತನೆಯ ಪೂರ್ವ ತಯಾರಿ ಸಂಪೂರ್ಣಗೊಂಡಿದೆ ಎಂದಿದ್ದಾರೆ ರಮಾನಂದ ಶರ್ಮ, ಗದ್ದೆ ಕೃಷಿಕ, ಗುರಿಪಳ್ಳ, ನಡ.

ತಾಲೂಕಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಅಗತ್ಯ ಕೀಟನಾಶಕಗಳ ದಾಸ್ತಾನು ಸಾಕಷ್ಟು ಇದೆ. ಸಹಾಯಧನದಲ್ಲಿ ಬಿತ್ತನೆ ಬೀಜ ಲಭ್ಯವಿದ್ದು, ಆಸಕ್ತ ಕೃಷಿಕರು ಕಚೇರಿ ಸಮಯದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದಿದ್ದಾರೆ ವೀರಭದ್ರಪ್ಪ ಎ.ಡಿ., ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಬೆಳ್ತಂಗಡಿ.

The post ಮುಂಗಾರು ಮತ್ತೆ ಚುರುಕು: ದಕ್ಷಿಣ ಕನ್ನಡದಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ appeared first on Good News 24x7.

]]>
ಜಯಪುರ ಕೃಷಿ ಪತ್ತಿನ ಸಹಕಾರ ಸಂಘ ಶಾಸಕ ಜಿಟಿಡಿ ಬಣಕ್ಕೆ ಜಯ! https://www.goodnews24x7.com/%e0%b2%9c%e0%b2%af%e0%b2%aa%e0%b3%81%e0%b2%b0-%e0%b2%95%e0%b3%83%e0%b2%b7%e0%b2%bf-%e0%b2%aa%e0%b2%a4%e0%b3%8d%e0%b2%a4%e0%b2%bf%e0%b2%a8-%e0%b2%b8%e0%b2%b9%e0%b2%95%e0%b2%be%e0%b2%b0-%e0%b2%b8/ Tue, 08 Apr 2025 13:03:46 +0000 https://www.goodnews24x7.com/?p=3121 ಮೈಸೂರು : ಜಯಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದಿನಾಂಕ 23.02.2025 ರಂದು ನಡೆದ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಘನ ನ್ಯಾಯಲಯದ ಆದೇಶದಂತೆ ಇಂದು ನಡೆದ ಮತ ಏಣಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣದ ಬಸವಣ್ಣ 222 ಮತಗಳು, ಮಂಜುನಾಥ 221,…

The post ಜಯಪುರ ಕೃಷಿ ಪತ್ತಿನ ಸಹಕಾರ ಸಂಘ ಶಾಸಕ ಜಿಟಿಡಿ ಬಣಕ್ಕೆ ಜಯ! appeared first on Good News 24x7.

]]>

ಮೈಸೂರು : ಜಯಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ದಿನಾಂಕ 23.02.2025 ರಂದು ನಡೆದ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಘನ ನ್ಯಾಯಲಯದ ಆದೇಶದಂತೆ ಇಂದು ನಡೆದ ಮತ ಏಣಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಬಣದ ಬಸವಣ್ಣ 222 ಮತಗಳು, ಮಂಜುನಾಥ 221, ಅಭಿಷೇಕ್ 219, ಮರಿಸಿದ್ದೇಗೌಡ 217, ಕೆಂಪರಾಜು 209,
ಭಾಗ್ಯಮ್ಮ. 184, ಮಹದೇವಯ್ಯ 179, ರತ್ನಮ್ಮ 189, ರಂಗಸ್ವಾಮಿ 196
ಅಬ್ದುಲ್ ಮುತಾಲಿಬ್ 180 ಮತಗಳನ್ನು ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮುಂಖಡರಾದ ಜಯಪುರ ಜವರನಾಯಕ, ನಾಗರಾಜು, ಬರಡನಪುರ ಬಸವಣ್ಣ, ಕೆಲ್ಲಹಳ್ಳಿ ಭೈರೇಶ್, ವಿಜಯ್ ಕುಮಾರ್, ದೂರ ಕುಮಾರ್ ಅರಸನಕೆರೆ ಪ್ರಭು, ಸ್ವಾಮಿ,ಶಿವಣ್ಣ,ನವೀನ್, ಕೀರ್ತಿ, ಮಹದೇವಪ್ಪ, ಮಹದೇವಸ್ವಾಮಿ,ನವೀನ್ ಮಾವಿನಹಳ್ಳಿ ಅಂಕಪ್ಪ ಹಾಗೂ ಹಲವಾರು ಮುಖಂಡರು ಭಾಗವಹಿಸಿದ್ದರು.

The post ಜಯಪುರ ಕೃಷಿ ಪತ್ತಿನ ಸಹಕಾರ ಸಂಘ ಶಾಸಕ ಜಿಟಿಡಿ ಬಣಕ್ಕೆ ಜಯ! appeared first on Good News 24x7.

]]>