Agriculture Archives - Good News 24x7 https://www.goodnews24x7.com/tag/agriculture/ Kannada Sat, 18 Apr 2026 11:30:21 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Agriculture Archives - Good News 24x7 https://www.goodnews24x7.com/tag/agriculture/ 32 32 ರೈತರಿಗೆ ನೆಮ್ಮದಿ: ತೊಗರಿ ಮತ್ತು ಕಡಲೆ ಖರೀದಿ ಅವಧಿ ಒಂದು ತಿಂಗಳು ವಿಸ್ತರಣೆ! https://www.goodnews24x7.com/farmers-relief-chickpea-and-chickpea-procurement-period-extended-by-one-month/ Sat, 18 Apr 2026 11:30:21 +0000 https://www.goodnews24x7.com/?p=9310 ರಾಜ್ಯದ ರೈತರ ಹಿತದೃಷ್ಟಿಯಿಂದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಇದರ ಫಲವಾಗಿ, 2025-26ನೇ ಸಾಲಿನ ಬೆಲೆ ಬೆಂಬಲ ಯೋಜನೆ (MSP) ಅಡಿಯಲ್ಲಿ ತೊಗರಿ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಈಗಾಗಲೇ 98,610…

The post ರೈತರಿಗೆ ನೆಮ್ಮದಿ: ತೊಗರಿ ಮತ್ತು ಕಡಲೆ ಖರೀದಿ ಅವಧಿ ಒಂದು ತಿಂಗಳು ವಿಸ್ತರಣೆ! appeared first on Good News 24x7.

]]>

ರಾಜ್ಯದ ರೈತರ ಹಿತದೃಷ್ಟಿಯಿಂದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಇದರ ಫಲವಾಗಿ, 2025-26ನೇ ಸಾಲಿನ ಬೆಲೆ ಬೆಂಬಲ ಯೋಜನೆ (MSP) ಅಡಿಯಲ್ಲಿ ತೊಗರಿ ಖರೀದಿ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಈಗಾಗಲೇ 98,610 ರೈತರು ನೋಂದಾಯಿಸಿಕೊಂಡಿದ್ದರೂ, ಹೆಚ್ಚಿನ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಷ್ಟೇ ಅಲ್ಲದೆ, ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 58 ಸಾವಿರ ಕ್ವಿಂಟಾಲ್ ಕಡಲೆ ಖರೀದಿಸಲು ಮತ್ತು ಅದರ ಕಾಲಾವಧಿಯನ್ನು ಒಂದು ತಿಂಗಳು ವಿಸ್ತರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ. ಸೂರ್ಯಕಾಂತಿ ಬೆಳೆಗಾರರಿಗೂ ನೆರವಾಗಲು ಕ್ವಿಂಟಾಲ್‌ಗೆ 7,721 ರೂ. ದರದಂತೆ 11 ಸಾವಿರ ಮೆಟ್ರಿಕ್ ಟನ್ ಖರೀದಿಗಾಗಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ಕ್ರಮಗಳಿಂದಾಗಿ ರಾಜ್ಯದ ಸಾವಿರಾರು ರೈತರಿಗೆ ತಮ್ಮ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತಾಗಿದೆ.

The post ರೈತರಿಗೆ ನೆಮ್ಮದಿ: ತೊಗರಿ ಮತ್ತು ಕಡಲೆ ಖರೀದಿ ಅವಧಿ ಒಂದು ತಿಂಗಳು ವಿಸ್ತರಣೆ! appeared first on Good News 24x7.

]]>
ವಿಶ್ವ ಆಹಾರ ದಿನ !ಈ ದಿನದ ಉದ್ದೇಶ ನಿಮ್ಗೆ ಗೊತ್ತಾ ? https://www.goodnews24x7.com/world-food-daydo-you-know-the-purpose-of-this-day/ Thu, 16 Oct 2025 06:29:02 +0000 https://www.goodnews24x7.com/?p=7734 ಪ್ರತಿವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಅಕ್ಟೋಬರ್ 16.1945 ರಂದು ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಗೊಂಡಿತು.ಇದರ ಸ್ಮರಣಾರ್ಥ ಈ ದಿನವನ್ನು ಘೋಷಿಸಲಾಯಿತು.ಹಸಿವು ಮುಕ್ತಗೊಳಿಸುವುದು.ಆಹಾರ ಭದ್ರತೆಯ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. 1979…

The post ವಿಶ್ವ ಆಹಾರ ದಿನ !ಈ ದಿನದ ಉದ್ದೇಶ ನಿಮ್ಗೆ ಗೊತ್ತಾ ? appeared first on Good News 24x7.

]]>

ಪ್ರತಿವರ್ಷ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಅಕ್ಟೋಬರ್ 16.1945 ರಂದು ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಸ್ಥೆ ಸ್ಥಾಪನೆಗೊಂಡಿತು.ಇದರ ಸ್ಮರಣಾರ್ಥ ಈ ದಿನವನ್ನು ಘೋಷಿಸಲಾಯಿತು.ಹಸಿವು ಮುಕ್ತಗೊಳಿಸುವುದು.ಆಹಾರ ಭದ್ರತೆಯ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.

1979 ರ ನವೆಂಬರ್‌ನಲ್ಲಿ ನಡೆದ ಸಂಸ್ಥೆಯ 20 ನೇ ಸಾಮಾನ್ಯ ಸಮ್ಮೇಳನದಲ್ಲಿ FAO ನ ಸದಸ್ಯ ರಾಷ್ಟ್ರಗಳು ವಿಶ್ವ ಆಹಾರ ದಿನವನ್ನು (WFD) ಸ್ಥಾಪಿಸಿದವು.

ಹಂಗೇರಿಯನ್ ಮಾಜಿ ಕೃಷಿ ಮತ್ತು ಆಹಾರ ಸಚಿವ ಡಾ. ಪಾಲ್ ರೊಮಾನಿ ನೇತೃತ್ವದ ಹಂಗೇರಿಯನ್ ನಿಯೋಗವು FAO ಸಮ್ಮೇಳನದ 20 ನೇ ಅಧಿವೇಶನದಲ್ಲಿ ಸಕ್ರಿಯ ಪಾತ್ರ ವಹಿಸಿತು ಮತ್ತು ವಿಶ್ವಾದ್ಯಂತ WFD ಅನ್ನು ಆಚರಿಸುವ ಕಲ್ಪನೆಯನ್ನು ಸೂಚಿಸಿತು . ಅಂದಿನಿಂದ ಇದನ್ನು ಪ್ರತಿ ವರ್ಷ 150 ಕ್ಕೂ ಹೆಚ್ಚು ದೇಶಗಳಲ್ಲಿ ಆಚರಿಸಲಾಗುತ್ತಿದೆ, ಬಡತನ ಮತ್ತು ಹಸಿವಿನ ಹಿಂದಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ


ಆಹಾರವನ್ನು ಗೌರವಿಸಿ ಮತ್ತು ಉಳಿಸಿ: ನಮಗೆ ಲಭ್ಯವಿರುವ ಆಹಾರವನ್ನು ಗೌರವಿಸೋಣ ಮತ್ತು ವ್ಯರ್ಥ ಮಾಡುವುದನ್ನು ಕಡಿಮೆ ಮಾಡೋಣ. ಹಸಿವಿನಿಂದ ಇರುವವರಿಗಾಗಿ ಆಹಾರವನ್ನು ಸಂರಕ್ಷಿಸೋಣ.

ರೈತರಿಗೆ ಕೃತಜ್ಞತೆ: ನಮಗೆ ಆಹಾರ ನೀಡುವ ರೈತರನ್ನು ಸ್ಮರಿಸೋಣ ಮತ್ತು ಅವರ ಶ್ರಮವನ್ನು ಗುರುತಿಸೋಣ.

ಸುಸ್ಥಿರ ಕೃಷಿ: ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಆಹಾರ ಉತ್ಪಾದನೆಯನ್ನು ಬೆಂಬಲಿಸೋಣ.

ಸಹಕಾರ: ಹಸಿವನ್ನು ಹೋಗಲಾಡಿಸಲು ಮತ್ತು ಎಲ್ಲರಿಗೂ ಆಹಾರ ಭದ್ರತೆಯನ್ನು ಒದಗಿಸಲು ಒಟ್ಟಾಗಿ ಕೆಲಸ ಮಾಡೋಣ

The post ವಿಶ್ವ ಆಹಾರ ದಿನ !ಈ ದಿನದ ಉದ್ದೇಶ ನಿಮ್ಗೆ ಗೊತ್ತಾ ? appeared first on Good News 24x7.

]]>
ಗದ್ದೆಗೆ ಇಳಿದು ಭತ್ತದ ನಾಟಿಯಲ್ಲಿ ತೊಡಗಿದ ವಿದ್ಯಾರ್ಥಿಗಳು: ಪ್ರಾಯೋಗಿಕ ಅನುಭವದಿಂದ ಕೃಷಿಯ ಅರಿವು. https://www.goodnews24x7.com/students-went-down-to-the-field-and-engaged-in-paddy-planting-knowledge-of-agriculture-through-practical-experience/ Sun, 31 Aug 2025 05:50:10 +0000 https://www.goodnews24x7.com/?p=7106 ನಾಪೋಕ್ಲು: ಹಳೆ ತಾಲೂಕು ಸಮೀಪದ ಅಂಕುರ್ ಪಬ್ಲಿಕ್ ಶಾಲೆಯ ಸೈನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕೃಷಿಯ ಪ್ರಾಯೋಗಿಕ ಅರಿವು ನೀಡುವ ಉದ್ದೇಶದಿಂದ ಭತ್ತದ ನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ, 9ನೇ ತರಗತಿಯ ವಿದ್ಯಾರ್ಥಿಗಳು ಕೊಳಕೇರಿ ಗ್ರಾಮದ ಕೆಟೋಳಿರ ರಾಜಾ…

The post ಗದ್ದೆಗೆ ಇಳಿದು ಭತ್ತದ ನಾಟಿಯಲ್ಲಿ ತೊಡಗಿದ ವಿದ್ಯಾರ್ಥಿಗಳು: ಪ್ರಾಯೋಗಿಕ ಅನುಭವದಿಂದ ಕೃಷಿಯ ಅರಿವು. appeared first on Good News 24x7.

]]>

ನಾಪೋಕ್ಲು: ಹಳೆ ತಾಲೂಕು ಸಮೀಪದ ಅಂಕುರ್ ಪಬ್ಲಿಕ್ ಶಾಲೆಯ ಸೈನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕೃಷಿಯ ಪ್ರಾಯೋಗಿಕ ಅರಿವು ನೀಡುವ ಉದ್ದೇಶದಿಂದ ಭತ್ತದ ನಾಟಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಅಂಗವಾಗಿ, 9ನೇ ತರಗತಿಯ ವಿದ್ಯಾರ್ಥಿಗಳು ಕೊಳಕೇರಿ ಗ್ರಾಮದ ಕೆಟೋಳಿರ ರಾಜಾ ಚರ್ಮಣ ಅವರ ಹೊಲದಲ್ಲಿ ಕೆಸರು ಗದ್ದೆಗೆ ಇಳಿದು ನಾಟಿ ನಡೆಸಿದರು. ತಮ್ಮ ಕೈಯಾರೆ ಭತ್ತದ ಅಗೆ ನೆಡುವ ಮೂಲಕ ಕೃಷಿ ಬದುಕಿನ ಮಹತ್ವ, ಶ್ರಮದ ಮೌಲ್ಯ ಮತ್ತು ಅನ್ನದಾತರ ಪರिश್ರಮವನ್ನು ನೇರವಾಗಿ ಅನುಭವಿಸಿದರು.

ಶಾಲೆಯ ಕಾರ್ಯದರ್ಶಿ ರತ್ನಾ ಚರ್ಮಣ ಅವರು ಮಕ್ಕಳೊಂದಿಗೆ ನೇರವಾಗಿ ಭಾಗವಹಿಸಿ, ಭತ್ತದ ಸಸಿ ಎಡೆಯುವುದು, ನಾಟಿ ಮಾಡುವುದು, ಕಳೆ ಕೀಳುವುದು ಹಾಗೂ ಬೆಳೆ ಬೆಳೆಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷತೆ ನೀಡಿದರು. ಕೃಷಿಯ ಮಹತ್ವವನ್ನು ವಿವರಿಸುತ್ತಾ, “ಭೂಮಿಯನ್ನು ಬಂಜರಾಗಿ ಬಿಡದೆ ಉಪಯೋಗಿಸಬೇಕು, ಅದು ನಮ್ಮ ಭವಿಷ್ಯದ ಪಾಲಿಗೆ ಅತಿಮಹತ್ವದ ದಾರಿ” ಎಂದು ವಿದ್ಯಾರ್ಥಿಗಳಿಗೆ ಮನಮಿಡಿಯುವಂತೆ ವಿವರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶೈಲಾ ನರೇಶ್ ಮತ್ತು ಶೃತಿ ಅವರು ಭತ್ತದ ನಾಟಿಯ ತಂತ್ರ, ವಿಧಾನಗಳು ಹಾಗೂ ಕೃಷಿಯ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಈ ರೀತಿಯ ಕಾರ್ಯಕ್ರಮಗಳು ಶಾಲೆಯ ಪಾಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಕೃಷಿಯ ಹತ್ತಿರ ತರಲು ಸಹಾಯ ಮಾಡುತ್ತಿದ್ದು, ಪರಿಸರ ಸ್ನೇಹಿ ಶಿಕ್ಷಣದತ್ತ ಒಂದು ಹೆಜ್ಜೆಯೆಂದು ಶಾಲಾ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ.

The post ಗದ್ದೆಗೆ ಇಳಿದು ಭತ್ತದ ನಾಟಿಯಲ್ಲಿ ತೊಡಗಿದ ವಿದ್ಯಾರ್ಥಿಗಳು: ಪ್ರಾಯೋಗಿಕ ಅನುಭವದಿಂದ ಕೃಷಿಯ ಅರಿವು. appeared first on Good News 24x7.

]]>
4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ KRSಗೆ ಬಾಗಿನ ಸಮರ್ಪಣೆ.. https://www.goodnews24x7.com/cm-siddaramaiah-dedicates-a-plot-to-krs-for-the-4th-time/ Mon, 30 Jun 2025 09:48:30 +0000 https://www.goodnews24x7.com/?p=4855 ಮಂಡ್ಯ: 93 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಕೆಆರ್ಎಸ್ (ಕೃಷ್ಣರಾಜಸಾಗರ) ಡ್ಯಾಂ ಸಂಪೂರ್ಣ ಭರ್ತಿ ಆಗಿದ್ದು ಸಿಎಂ ಸಿದ್ದರಾಮಯ್ಯ ಅವರು ಇಂದು ಬಾಗಿನ ಸಮರ್ಪಣೆ ಮಾಡಿದರು. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚೆಲುವರಾಯಸ್ವಾಮಿ…

The post 4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ KRSಗೆ ಬಾಗಿನ ಸಮರ್ಪಣೆ.. appeared first on Good News 24x7.

]]>

ಮಂಡ್ಯ: 93 ವರ್ಷಗಳ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಕೆಆರ್ಎಸ್ (ಕೃಷ್ಣರಾಜಸಾಗರ) ಡ್ಯಾಂ ಸಂಪೂರ್ಣ ಭರ್ತಿ ಆಗಿದ್ದು ಸಿಎಂ ಸಿದ್ದರಾಮಯ್ಯ ಅವರು ಇಂದು ಬಾಗಿನ ಸಮರ್ಪಣೆ ಮಾಡಿದರು. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚೆಲುವರಾಯಸ್ವಾಮಿ ಹಾಗೂ ಹೆಚ್.ಸಿ ಮಹದೇವಪ್ಪ ಸೇರಿ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


ಸಿಎಂ ಸಿದ್ದರಾಮಯ್ಯ ಅವರು ಅಭಿಜಿತ್ ಶುಭ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಮಾಡಿದರು. ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯಗಳು ನೆರವೇರಿದವು. ಕೆಆರ್ಎಸ್ ಜಲಾಶಯಕ್ಕೆ 4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಿ ಖುಷಿ ಪಟ್ಟರು. ನಂತರ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಇದೇ ವೇಳೆ ನಾಡಿನ ಜನರಿಗೆ ಒಳ್ಳೆಯದಾಗಲಿ ಎಂದು ತಾಯಿ ಕಾವೇರಿ ಬಳಿ ಪ್ರಾರ್ಥನೆ ಮಾಡಿದರು.

ದಾಖಲೆ ಬರೆದ ಸಿಎಂ
ಕೆಆರ್ಎಸ್ ಜಲಾಶಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಕೆಆರ್ಎಸ್ಗೆ ಬಾಗಿನ ಅರ್ಪಿಸಿದ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿದ್ದಾರೆ. 1979 ರಂದು ಡಿ ದೇವರಾಜ ಅರಸು ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾದರೂ ಈ ಹಿಂದಿನ ಯಾವ ಮುಖ್ಯಮಂತ್ರಿ ಕೂಡ ಜೂನ್ನಲ್ಲಿ ಬಾಗಿನ ಅರ್ಪಿಸಿರಲಿಲ್ಲ. ಆದರೆ ಈಗ ಸಿಎಂ ಸಿದ್ದರಾಮಯ್ಯ ಅವರು ಜೂನ್ನಲ್ಲೇ ಕೆಆರ್ಎಸ್ಗೆ ಬಾಗಿನ ಸಮರ್ಪಣೆ ಮಾಡಿ ನೂತನ ದಾಖಲೆ ಬರೆದಿದ್ದಾರೆ.

ಕೆಆರ್ಎಸ್ ಬಾಗಿನ ಸಮರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯವನ್ನು ಬಣ್ಣ ಬಣ್ಣದ ಹೂವುಗಳಿಂದ ಶೃಂಗಾರ ಮಾಡಲಾಗಿತ್ತು. ಅಣೆಕಟ್ಟೆ ಗೋಡೆಗೆ ಸುಣ್ಣ, ಬಣ್ಣ ಬಳೆದಿದ್ದು ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸುತ್ತಿದ್ದವು. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಎನ್ ಚಲುವರಾಯಸ್ವಾಮಿ, ಹೆಚ್. ಸಿ ಮಹದೇವಪ್ಪ, ಕೆ ವೆಂಕಟೇಶ್, ಎನ್.ಎಸ್ ಬೋಸರಾಜು ಹಾಗೂ ಸ್ಥಳೀಯ ಶಾಸಕರು ಇದ್ದರು.

The post 4ನೇ ಬಾರಿಗೆ ಸಿಎಂ ಸಿದ್ದರಾಮಯ್ಯ KRSಗೆ ಬಾಗಿನ ಸಮರ್ಪಣೆ.. appeared first on Good News 24x7.

]]>
ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ! https://www.goodnews24x7.com/cm-siddaramaiah-to-set-new-record-by-offering-water-to-krs-reservoir/ Mon, 30 Jun 2025 05:09:26 +0000 https://www.goodnews24x7.com/?p=4824 ಮಂಡ್ಯ: ಇಂದು ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯ ಶೃಂಗಾರಗೊಂಡಿದೆ. ಕನ್ನಂಬಾಡಿ ಕಟ್ಟೆ ಹಸಿರು ತಳಿರು-ತೋರಣ ಹೂಗಳಿಂದ ಹಾಗೂ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿದ್ದು ನೋಡುಗರನ್ನು ಸೆಳೆಯುವಂತ್ತಿದೆ. ಕೆಆರ್ಎಸ್ ಜಲಾಶಯ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ…

The post ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ! appeared first on Good News 24x7.

]]>

ಮಂಡ್ಯ: ಇಂದು ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕೆಆರ್ಎಸ್ ಜಲಾಶಯ ಶೃಂಗಾರಗೊಂಡಿದೆ. ಕನ್ನಂಬಾಡಿ ಕಟ್ಟೆ ಹಸಿರು ತಳಿರು-ತೋರಣ ಹೂಗಳಿಂದ ಹಾಗೂ ಕನ್ನಡ ಬಾವುಟಗಳಿಂದ ಕಂಗೊಳಿಸುತ್ತಿದ್ದು ನೋಡುಗರನ್ನು ಸೆಳೆಯುವಂತ್ತಿದೆ.


ಕೆಆರ್ಎಸ್ ಜಲಾಶಯ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಭರ್ತಿ ಆಗುವ ಮೂಲಕ 93 ವರ್ಷಗಳ ಇತಿಹಾಸದಲ್ಲಿ ಐತಿಹಾಸಕ ದಾಖಲೆ ಬರೆದಿದೆ. ಡ್ಯಾಂ ನಿರ್ಮಾಣ ಆದಾಗಿನಿಂದ ಜೂನ್ ತಿಂಗಳಲ್ಲಿ ಇದುವರೆಗೂ ತುಂಬಿರಲಿಲ್ಲ. ಆದರೆ 93 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಈಗ ಕೆಆರ್ಎಸ್ ಭರ್ತಿಯಾಗಿದೆ. 124.80 ಅಡಿಗಳ ಗರಿಷ್ಠ ಮಟ್ಟ ಸಂಪೂರ್ಣ ಭರ್ತಿ ಆಗಿದ್ದು ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ.

ಈ ಹಿನ್ನೆಲೆಯಲ್ಲಿ ಇಂದು 11.30ಕ್ಕೆ ಅಭಿಜಿತ್ ಶುಭ ಮುಹೂರ್ತದಲ್ಲಿ ಕಾವೇರಿ ಮಾತೆಗೆ ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಣೆ ಮಾಡಲಿದ್ದಾರೆ. ವೈದಿಕ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ ಬಾಗಿನ ಪೂಜಾ ಕೈಂಕರ್ಯ ನಡೆಯಲಿದೆ. ಸಿದ್ದರಾಮಯ್ಯಗೆ ನಾಲ್ಕನೇ ಬಾರಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ದೊರಕಿದೆ. ಇದಾದ ಬಳಿಕ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಕೆ ಮಾಡಲಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ.

ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ

ಸಾಂದರ್ಭಿಕ ಚಿತ್ರ
ಕೆಆರ್ಎಸ್ ಜಲಾಶಯ ಇತಿಹಾಸದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಜೂನ್ನಲ್ಲಿ ಸಂಪೂರ್ಣವಾಗಿ ಭರ್ತಿಯಾಗಿದೆ. ಜೂನ್ ತಿಂಗಳಲ್ಲೇ ಕೆಆರ್ಎಸ್ಗೆ ಬಾಗಿನ ಅರ್ಪಿಸುತ್ತಿರುವ ಕರ್ನಾಟಕದ ಮೊಟ್ಟ ಮೊದಲ ಮುಖ್ಯಮಂತ್ರಿ ಆಗಲಿದ್ದಾರೆ. 1979 ರಂದು ಡಿ ದೇವರಾಜ ಅರಸು ಅವರ ಕಾಲದಲ್ಲಿ ಬಾಗಿನ ಕಾರ್ಯಕ್ರಮ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ಜೂನ್ನಲ್ಲಿ ಯಾರು ಬಾಗಿನ ಸಲ್ಲಿಸಿರಲಿಲ್ಲ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ನೂತನ ದಾಖಲೆ ಬರೆಯಲಿದ್ದಾರೆ.

The post ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಿ ಹೊಸ ದಾಖಲೆ ಬರೆಯಲಿರುವ ಸಿಎಂ ಸಿದ್ದರಾಮಯ್ಯ! appeared first on Good News 24x7.

]]>
ಕೆ.ಆರ್.ಎಸ್ ಗೆ ಜೂ. 30 ರಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ: ಸಚಿವ ಎನ್.ಚಲುವರಾಯಸ್ವಾಮಿ. https://www.goodnews24x7.com/cm-siddaramaiah-to-offer-water-to-krs-on-june-30-minister-n-chaluvarayaswamy/ Fri, 27 Jun 2025 11:07:26 +0000 https://www.goodnews24x7.com/?p=4716 ಮಂಡ್ಯ : ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗುತ್ತಿದ್ದು, ಜೂನ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು. ಸಾಂದರ್ಭಿಕ ಚಿತ್ರ…

The post ಕೆ.ಆರ್.ಎಸ್ ಗೆ ಜೂ. 30 ರಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ: ಸಚಿವ ಎನ್.ಚಲುವರಾಯಸ್ವಾಮಿ. appeared first on Good News 24x7.

]]>

ಮಂಡ್ಯ : ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗುತ್ತಿದ್ದು, ಜೂನ್ 30 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು.

ಸಾಂದರ್ಭಿಕ ಚಿತ್ರ

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳು ಜೂನ್ 30 ರಂದು ಬೆಳಿಗ್ಗೆ 10.30 ಗಂಟೆಯ ನಂತರ ಕೆ‌ಆರ್.ಎಸ್ ಗೆ ಆಗಮಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ. ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದರು.
ವೇದಿಕೆ, ಸಾರ್ವಜನಿಕರಿಗೆ ಆಸನದ ವ್ಯವಸ್ಥೆ, ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದು ಸೂಚನೆ ನೀಡಿದರು.

ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟಾಪ್ ವಿತರಣೆ
ಸರ್ಕಾರ ಇ- ಆಫೀಸ್ ನಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಿರುವ ಲ್ಯಾಪ್ ಟಾಪ್ ಅನ್ನು ಜಿಲ್ಲೆಯ 185 ಗ್ರಾಮ ಆಡಳಿತಾಧಿಕಾರಿಗಳಿಗೆ ಒದಗಿಸಿದ್ದು, ಸಂಕೇತಿಕವಾಗಿ ಗ್ರಾಮ ಆಡಳಿತಾಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಲ್ಯಾಪ್ ಟಾಪ್ ವಿತರಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದಲ್ಲಿ ಸರ್ಕಾರಿ ಕೆಲಸಗಳನ್ನು ಇ- ಆಫೀಸ್ ಮೂಲಕ ನಿರ್ವಹಿಸಬೇಕಿದ್ದು, ಕೆಲಸವನ್ನು ಪಾರದರ್ಶಕ ಹಾಗೂ ದಕ್ಷತೆಯಿಂದ ನಿರ್ವಹಿಸಿ ಎಂದರು.
ಭೂ ಸುರಕ್ಷಾ ಯೋಜನೆಯಡಿ ದಾಖಲೆಗಳ ಗಣಕೀಕರಣ ಪ್ರಕ್ರಿಯೆ ತಾಲ್ಲೂಕು ಕಚೇರಿಗಳಲ್ಲಿ ನಡೆಯುತ್ತಿದ್ದು, ಮಂಡ್ಯ ತಾಲ್ಲೂಕು ಕಚೇರಿಯಿಂದ ಸಂಕೇತಿಕವಾಗಿ ಗಣಕೀಕೃತ ಪ್ರತಿಯನ್ನು ಸಚಿವ ಚಲುವರಾಯಸ್ವಾಮಿ ವಿತರಿಸಿದರು.

ಸಭೆಯಲ್ಲಿ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕಾ.ನೀ.ನಿ.ನಿ ಅಧೀಕ್ಷಕ ಅಭಿಯಂತರ ರಘುರಾಮ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

The post ಕೆ.ಆರ್.ಎಸ್ ಗೆ ಜೂ. 30 ರಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಣೆ: ಸಚಿವ ಎನ್.ಚಲುವರಾಯಸ್ವಾಮಿ. appeared first on Good News 24x7.

]]>
ರೈತಕುಟುಂಬದಿಂದ ಬಂದಿರುವ ಅಧಿಕಾರಿಗಳನ್ನು ಕೃಷಿ ಇಲಾಖೆಗೆ ನೇಮಿಸಿ : ಜಿ.ಟಿ ದೇವೇಗೌಡ https://www.goodnews24x7.com/%e0%b2%b0%e0%b3%88%e0%b2%a4%e0%b2%95%e0%b3%81%e0%b2%9f%e0%b3%81%e0%b2%82%e0%b2%ac%e0%b2%a6%e0%b2%bf%e0%b2%82%e0%b2%a6-%e0%b2%ac%e0%b2%82%e0%b2%a6%e0%b2%bf%e0%b2%b0%e0%b3%81%e0%b2%b5-%e0%b2%85%e0%b2%a7/ Thu, 20 Mar 2025 11:32:43 +0000 https://www.goodnews24x7.com/?p=2843 ಕೆಂಗಲ್ ಹನುಂತಯ್ಯರವರು ಕಟ್ಟಿಸಿದ ವಿಧಾನಸೌಧದಲ್ಲಿ ಸಭಾಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತ್ತಿದ್ದೀರಿ, ಹೊಸಬರಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೆಚ್ಚು ಹೆಚ್ಚು ಅವಕಾಶ ಕಲ್ಪಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ಮಾತು ಪ್ರಾರಂಭಿಸಿದ ಶಾಸಕರು ತಮಿಳುನಾಡು ಆಂಧ್ರಪ್ರದೇಶದಲ್ಲಿರುವಂತೆ, ಕೃಷಿ ಇಲಾಖೆ ಕಾರ್ಯದರ್ಶಿಗಳು ಹಾಗೂ ಆಯುಕ್ತರುಗಳನ್ನು ಗ್ರಾಮೀಣ ಪ್ರದೇಶಗಳ ಹಿನ್ನೆಲೆ ಉಳ್ಳ…

The post ರೈತಕುಟುಂಬದಿಂದ ಬಂದಿರುವ ಅಧಿಕಾರಿಗಳನ್ನು ಕೃಷಿ ಇಲಾಖೆಗೆ ನೇಮಿಸಿ : ಜಿ.ಟಿ ದೇವೇಗೌಡ appeared first on Good News 24x7.

]]>

ಕೆಂಗಲ್ ಹನುಂತಯ್ಯರವರು ಕಟ್ಟಿಸಿದ ವಿಧಾನಸೌಧದಲ್ಲಿ ಸಭಾಧ್ಯಕ್ಷರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತ್ತಿದ್ದೀರಿ, ಹೊಸಬರಿಗೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಹೆಚ್ಚು ಹೆಚ್ಚು ಅವಕಾಶ ಕಲ್ಪಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ಮಾತು ಪ್ರಾರಂಭಿಸಿದ ಶಾಸಕರು ತಮಿಳುನಾಡು ಆಂಧ್ರಪ್ರದೇಶದಲ್ಲಿರುವಂತೆ, ಕೃಷಿ ಇಲಾಖೆ ಕಾರ್ಯದರ್ಶಿಗಳು ಹಾಗೂ ಆಯುಕ್ತರುಗಳನ್ನು ಗ್ರಾಮೀಣ ಪ್ರದೇಶಗಳ ಹಿನ್ನೆಲೆ ಉಳ್ಳ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿರುವಂತೆ ರಾಜ್ಯದಲ್ಲೂ ನೇಮಿಸುವಂತೆ ಸರ್ಕಾರಕ್ಕೆ ಶಾಸಕ ಜಿ.ಟಿ ದೇವೇಗೌಡ ಮನವಿ ಮಾಡಿದರು.

ಇಂದು ಅಧಿವೇಶನದ ಬಜೆಟ್ ಚರ್ಚೆಯಲ್ಲಿ ಪಾಲ್ಗೋಂಡು ಮಾತಾಡಿದ ಶಾಸಕರು ರೈತರೊಂದಿಗೆ ನೇರವಾಗಿ ಮಾತನಾಡಿ ಅವರ ಕಷ್ಟಕಾರ್ಪಣ್ಯಗಳಿಗೆ ಅಧಿಕಾರಿಗಳು ಸ್ಪಂದಿಸುದಲ್ಲಿರುವಂತೆ. ಆದರೆ ಕೆಲವು ಅಧಿಕಾರಿಗಳಿಗೆ ಸರಿಯಾಗಿ ಕನ್ನಡವೇ ಬರುವುದಿಲ್ಲ ಹಾಗೂ ಗ್ರಾಮೀಣ ಹಿನ್ನೆಲೆ ಇರುವುದಿಲ್ಲ ಆದ್ದರಿಂದ ರೈತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಉಪಯುಕ್ತ ಸಲಹೆಗಳನ್ನು ನೀಡುವ ಅಧಿಕಾರಿಗಳನ್ನು ನೇಮಿಸಿ ರೈತರ ನೆರವಿಗೆ ನಿಲ್ಲುವಂತೆ ಮನವಿ ಮಾಡಿದರು.
ನಮ್ಮ ರಾಜ್ಯದ ರೈತರು ಕೃಷಿ ತಜ್ಞರಾಗಿದ್ದಂತಹ ಪ್ರೊಫೆಸರ್ ನಂಜುಂಡಸ್ವಾಮಿಯವರನ್ನು ನೆನಪಿಸಿಕೊಳ್ಳಬೇಕು, ಪ್ರೊ. ನಂಜುಂಡಸ್ವಾಮಿಅವರು ನಮ್ಮ ಮೈಸೂರು ಜಿಲ್ಲೆಯವರಾಗಿದ್ದು, ಅವರೊಂದಿಗೆ ನಿತಂತರ ಸಂಪರ್ಕದಲ್ಲಿದ್ದೆ. ಪ್ರೊ. ನಂಜುಂಡಸ್ವಾಮಿ ಇಲ್ಲದಿದ್ದರೆ ರೈತರಿಗೆ ಧ್ವನಿಯೇ ಇರುತ್ತಿರಲಿಲ್ಲ. ಕರ್ನಾಟಕ ರಾಜ್ಯದ ರೈತರನ್ನು ಎಚ್ಚರಿಸಿದ್ದು, ಸರ್ಕಾರ ಅಧಿಕಾರಿಗಳ ಮಟ್ಟದಲ್ಲಿ ರೈತರಿಗೆ ಒಂದು ಗೌರವವನ್ನು ತಂದು ಕೊಟ್ಟ ಪ್ರೊಫೆಸರ್ ನಂಜುಂಡಸ್ವಾಮಿಅವರಿಗೆ ಈ ಸಂದರ್ಭದಲ್ಲಿ ಈ ಸದನದ ಮೂಲಕ ರೈತರ ಪರವಾಗಿ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಇದೇ ಸಂಧರ್ಭದಲ್ಲಿ ಸ್ಮರಿಸಿಕೊಂಡರು.
ರೈತರ ಆರ್ಥಿಕತೆ ಸುಧಾರಿಸಬೇಕಾದರೆ ರೈತರಿಗೆ ನೇರವಾಗಿ ಏನೇನು ಬೇಕೋ ಅವುಗಳನ್ನು ಉದಾಹರಣೆಗೆ- ಗೊಬ್ಬರ, ಬೀಜ, ಕೀಟನಾಶಕಗಳು ಮತ್ತು ಕೃಷಿ ಪರಿಕರಗಳು ಇವೆಲ್ಲವುಗಳನ್ನು ರೈತರಿಗೆ ಸೂಕ್ತ ಸಮಯದಲ್ಲಿ ತಲುಪುವಂತೆ ಮಾಡಬೇಕು. ಅದಕ್ಕಾಗಿ ಗ್ರಾಮಗಳಲ್ಲಿ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕಗಳು ರೈತರ ಅಂಗಡಿ ಅಥವಾ ಸಹಕಾರ ಸಂಘಗಳನ್ನು ಹಳ್ಳಿಗಳಲ್ಲಿ ಪ್ರಾರಂಭ ಮಾಡುವ ಮೂಲಕ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು. ಇನ್ನು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗಲು ಕ್ರಮ ಜರುಗಿಸಬೇಕು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಕುಸಿದಾಗ ಒಂದೇ ಅಲ್ಲ. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ತ್ವರಿತವಾಗಿ ಸರ್ಕಾರ ಮಧ್ಯಪ್ರವೇಶಿಸಬೇಕು. ಆಗ ದಲ್ಲಾಳಿಗಳು, ವ್ಯಾಪಾರಸ್ಥರು ರೈತರ ಜೀವನದ ಜೊತೆ ಚೆಲ್ಲಾಟವಾಡುವುದಿಲ್ಲ. ಸರ್ಕಾರ ಮಧ್ಯಪ್ರವೇಶಿಸಿದೆ ಎಂದರೆ, ದಲ್ಲಾಳಿಗಳಿಗೆ, ವ್ಯಾಪಾರಸ್ಥರಿಗೆ ಭಯ ಹುಟ್ಟುತ್ತದೆ, ಇದರಿಂದ ರೈತರಿಗೆ ಆತ್ಮಸ್ಥೈರ್ಯ ಸಿಕ್ಕಾಂತಾಗುತ್ತದೆ. ಉದಾಹರಣೆ ಒಂದು ವಾರದ ಹಿಂದೆ ಈರುಳ್ಳಿ ಬೆಲೆ ಕುಸಿಯಿತು, ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಗಮನ ಹರಿಸಲಿಲ್ಲ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ಕಡಿಮೆಯಾಗುತ್ತದೆ, ಆದ್ದರಿಂದ ರೈತರ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಬೆಳೆ ಬದಲಾವಣೆ: ೨೦೦೫ – ೦೬ ರಲ್ಲಿ ೧೦ ರಿಂದ ೧೨ ಲಕ್ಷ ಎಕ್ಟರ್ ತೋಟಗಾರಿಕೆ ಬೆಳೆ ಇದ್ದು ಇದು ೨೦೨೧-೨೨ ರಲ್ಲಿ ೨೧ ಲಕ್ಷ ಹೆಕ್ಟೇರ್ ಗೆ ಏರಿಕೆಯಾಗಿದೆ ವರ್ಷದಿಂದ ವರ್ಷಕ್ಕೆ ಕೃಷಿ ಬೆಳೆಗಳ ಬದಲಾಗಿ ತೋಟಗಾರಿಕೆ ಬೆಳೆಗಳಿಗೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಅಡಕೆ ಬೆಳೆಯಲ್ಲಿ ೨೦೦೫_೦೬ ರಲ್ಲಿ ೨ ಲಕ್ಷ ಇದ್ದ ವಿಸ್ತೀರ್ಣ ಇದೀಗ ಸುಮಾರು ೭ ಲಕ್ಷ ಎಕ್ಟರ್ ಗೆ ಏರಿಕೆಯಾಗಿದ್ದು ಕಂಡುಬರುತ್ತದೆ ಇದೇ ರೀತಿ ಬಹಳಷ್ಟು ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳ ವಿಸ್ತೀರ್ಣ ಏರಿಕೆಯಾಗುತ್ತಿದ್ದು ಆಹಾರ ಧಾನ್ಯಗಳ ಉತ್ಪಾದನೆಗೆ ಬೇಕಾದ ವಿಸ್ತೀರ್ಣ ಕಡಿಮೆ ಆಗುತ್ತಿದೆ ಒಟ್ಟಾರೆ ಭೌಗೋಳಿಕ ವಿಸ್ತೀರ್ಣದಲ್ಲಿ ಶೇಕಡ ೫೬% ರಿಂದ ೬೦% ಮಾತ್ರ ಉಪಯೋಗವಾಗುತ್ತಿದ್ದು ಸುಮಾರು ೧೦-೧೨ ಲಕ್ಷ ಎಕ್ಟರ್ ಬಂಜರು ಭೂಮಿಯಾಗಿರುತ್ತದೆ ಈ ರೀತಿಯ ಏರುಪೇರು ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಕೆಳಕಂಡ ಅಂಶಗಳ ಮೇಲೆ ಕೃಷಿ ಗಣಿತಿ ಆಗಬೇಕಾಗಿದೆ ಎಂದು ಸಲಹೆ ನೀಡಿದರು.

* ಬೆಳೆ ಬದಲಾವಣೆಯ ಸೂಚಕ
* ಆಹಾರ ಭದ್ರತೆಗಾಗಿ ಆಹಾರ ಬೆಳೆಗಳ ವಿಸ್ತೀರ್ಣ ಅವಶ್ಯಕತೆ .
* ಕೃಷಿ ಅರಣ್ಯೀಕರಣ
* ನಗರಗಳ ಬೆಳವಣಿಗೆಯಿಂದಾಗಿ ಕೃಷಿ ಭೂಮಿ ಪರಿವರ್ತಿತ ವಾಗಿರುವುದು
ಒಟ್ಟಾರೆಯಾಗಿ ಕೃಷಿ ಬೆಳೆಗಳ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದು ಒಂದು ಕಡೆಯಾದರೆ ಜನಸಂಖ್ಯೆ ಏರಿಕೆ ಹಾಗೂ ಆಹಾರದ ಬೇಡಿಕೆ ಹೆಚ್ಚಾಗಿರುವುದು ಮತ್ತೊಂದು ಕಡೆ ಈ ಎಲ್ಲಾ ಅಂಶಗಳ ಬಗ್ಗೆ ಮಾಹಿತಿ ಪಡೆದು ಯೋಜನೆ ರೂಪಿಸಬೇಕಾದರೆ ಕೃಷಿಗಣತಿ ಅತಿ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರು.

The post ರೈತಕುಟುಂಬದಿಂದ ಬಂದಿರುವ ಅಧಿಕಾರಿಗಳನ್ನು ಕೃಷಿ ಇಲಾಖೆಗೆ ನೇಮಿಸಿ : ಜಿ.ಟಿ ದೇವೇಗೌಡ appeared first on Good News 24x7.

]]>