Ahmedabad Archives - Good News 24x7 https://www.goodnews24x7.com/tag/ahmedabad/ Kannada Mon, 09 Mar 2026 11:47:58 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Ahmedabad Archives - Good News 24x7 https://www.goodnews24x7.com/tag/ahmedabad/ 32 32 ವಿಶ್ವಕಪ್​ನಲ್ಲೂ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ! https://www.goodnews24x7.com/team-india-also-wrote-a-world-record-in-the-world-cupteam-india-also-wrote-a-world-record-in-the-world-cup/ Mon, 09 Mar 2026 11:44:51 +0000 https://www.goodnews24x7.com/?p=8796   T20 World Cup 2026 Final India vs New zealand ,ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ…

The post ವಿಶ್ವಕಪ್​ನಲ್ಲೂ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ! appeared first on Good News 24x7.

]]>

 

T20 World Cup 2026 Final India vs New zealand ,ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 255 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು 19 ಓವರ್​ಗಳಲ್ಲಿ 159 ರನ್​ ಬಾರಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 96 ರನ್​ಗಳ ಅಮೋಘ ಗೆಲುವು ದಾಖಲಿಸಿದೆ.

ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ. ಅದು ಕೂಡ ಒಂದೇ ಬಾರಿ ಮೂರು ದಾಖಲೆಗಳನ್ನು ಬರೆಯುವ ಮೂಲಕ ಎಂಬುದೇ ವಿಶೇಷ.

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 255 ರನ್​ಗಳು.
ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 255 ರನ್​ಗಳು.

256 ರನ್​ಗಳ ಕಠಿಣ ಗುರಿ ಪಡೆದ ನ್ಯೂಝಿಲೆಂಡ್ ತಂಡವು 19 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಭರ್ಜರಿ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಆ ದಾಖಲೆಗಳಾವುವು ಎಂದು ನೋಡುವುದಾದರೆ….
256 ರನ್​ಗಳ ಕಠಿಣ ಗುರಿ ಪಡೆದ ನ್ಯೂಝಿಲೆಂಡ್ ತಂಡವು 19 ಓವರ್​ಗಳಲ್ಲಿ 159 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಭರ್ಜರಿ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಆ ದಾಖಲೆಗಳಾವುವು ಎಂದು ನೋಡುವುದಾದರೆ….

3 ವಿಶ್ವಕಪ್ ಗೆದ್ದ ಮೊದಲ ತಂಡ: ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ತನ್ನದಾಗಿಸಿಕೊಂಡಿದೆ. 2007, 2024 ರಲ್ಲಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದ ಭಾರತ ಇದೀಗ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿ ಈ ಸಾಧನೆ ಮಾಡಿದೆ.

ತವರಿನಲ್ಲಿ ಗೆದ್ದ ಮೊದಲ ತಂಡ: ಟಿ20 ವಿಶ್ವಕಪ್ ಇತಿಹಾಸದಲ್ಲಿ ತವರಿನಲ್ಲಿ ಯಾವುದೇ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರಲಿಲ್ಲ. ಆದರೆ ಈ ಬಾರಿ ತವರು ಮೈದಾನಗಳಲ್ಲಿ ಪ್ರಚಂಡ ಪ್ರದರ್ಶನ ನೀಡಿರುವ ಭಾರತ ತಂಡವು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ತವರಿನಲ್ಲಿ ಗೆದ್ದ ಮೊದಲ ತಂಡ: ಟಿ20 ವಿಶ್ವಕಪ್ ಇತಿಹಾಸದಲ್ಲಿ ತವರಿನಲ್ಲಿ ಯಾವುದೇ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರಲಿಲ್ಲ. ಆದರೆ ಈ ಬಾರಿ ತವರು ಮೈದಾನಗಳಲ್ಲಿ ಪ್ರಚಂಡ ಪ್ರದರ್ಶನ ನೀಡಿರುವ ಭಾರತ ತಂಡವು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಚಾಂಪಿಯನ್ ಪಟ್ಟ ಉಳಿಸಿಕೊಂಡ ಮೊದಲ ತಂಡ: ಟಿ20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಟೀಮ್ ಇಂಡಿಯಾ ಪಾತ್ರವಾಗಿದೆ. ಅಂದರೆ 2024 ರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ಇದೀಗ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.
ಚಾಂಪಿಯನ್ ಪಟ್ಟ ಉಳಿಸಿಕೊಂಡ ಮೊದಲ ತಂಡ: ಟಿ20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟ ಅಲಂಕರಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೂ ಟೀಮ್ ಇಂಡಿಯಾ ಪಾತ್ರವಾಗಿದೆ. ಅಂದರೆ 2024 ರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ ಇದೀಗ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಬ್ಯಾಕ್ ಟು ಬ್ಯಾಕ್ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿದೆ.

The post ವಿಶ್ವಕಪ್​ನಲ್ಲೂ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ! appeared first on Good News 24x7.

]]>
ಟಿ20 ವಿಶ್ವಕಪ್ 2026;ಭಾರತ vs ನ್ಯೂಜಿಲೆಂಡ್‌ ಅಂತಿಮ ಹೋರಾಟದಲ್ಲಿ ಗೆಲ್ಲೋರ್‍ಯಾರು? https://www.goodnews24x7.com/t20-world-cup-2026-who-will-win-the-final-match-between-india-vs-new-zealand/ Sun, 08 Mar 2026 06:44:48 +0000 https://www.goodnews24x7.com/?p=8782 ಅಹಮದಾಬಾದ್: ಟಿ20 ವಿಶ್ವಕಪ್ ಪೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಭಾರತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಕೋಟ್ಯಂತರ ಭಾರತೀಯರು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ವಿಶ್ವಕಪ್ ಮೊದಲ ಟೂರ್ನಿಯಲ್ಲೇ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ…

The post ಟಿ20 ವಿಶ್ವಕಪ್ 2026;ಭಾರತ vs ನ್ಯೂಜಿಲೆಂಡ್‌ ಅಂತಿಮ ಹೋರಾಟದಲ್ಲಿ ಗೆಲ್ಲೋರ್‍ಯಾರು? appeared first on Good News 24x7.

]]>

ಅಹಮದಾಬಾದ್: ಟಿ20 ವಿಶ್ವಕಪ್ ಪೈನಲ್ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಭಾರತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಟೀಂ ಇಂಡಿಯಾ ಗೆಲುವಿಗಾಗಿ ಕೋಟ್ಯಂತರ ಭಾರತೀಯರು ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ವಿಶ್ವಕಪ್ ಮೊದಲ ಟೂರ್ನಿಯಲ್ಲೇ ಇತಿಹಾಸ ನಿರ್ಮಿಸಿದ್ದ ಟೀಂ ಇಂಡಿಯಾ ಮತ್ತೆ ಕಪ್ ಗೆಲ್ಲೋಕೆ ತೆಗೆದುಕೊಂಡಿದ್ದು, ಬರೋಬ್ಬರಿ 17 ವರ್ಷ. ಈ ಸುದೀರ್ಘ ಕಾಯುವಿಕೆ ಬಳಿಕ 2024 ರಲ್ಲಿ ಚಾಂಪಿಯನ್ ಆಗಿದ್ದ ಭಾರತ ತಂಡಕ್ಕೆ ಈಗ ಮತ್ತೊಂದು ಸುವರ್ಣ ಅವಕಾಶ. ಈ ಬಾರಿಯ ವಿಶ್ವಕಪ್ ಗೆಲುವು, ಚಾಂಪಿಯನ್ ಪಟ್ಟ ಮಾತ್ರ ಅಲ್ಲದೇ ವಿಶ್ವ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಗೂ ಕಾರಣವಾಗಲಿದೆ.

2007 ರಲ್ಲಿ ಮೊದಲ ಬಾರಿಗೆ ಆರಂಭವಾದ ಚುಟುಕು ಕ್ರಿಕೆಟ್‌ನಲ್ಲೇ ಭಾರತ ಚಾಂಪಿಯನ್ ಆಗಿ, ವಿಶ್ವಕಪ್ ಮೊದಲ ಚಾಂಪಿಯನ್ಸ್ ಎಂಬ ಹೆಗ್ಗಳಿಗೆ ಪಾತ್ರವಾಗಿತ್ತು. ಆದಾದ ಬಳಿಕ ಸತತ ಪ್ರಯತ್ನಗಳಾಗಿದ್ದರೂ ಭಾರತಕ್ಕೆ ಕಪ್ ಗೆಲ್ಲಲ್ಲು ಆಗಿರಲಿಲ್ಲ. 2014 ರಲ್ಲಿ ಫೈನಲ್ ಗೇರಿದ್ದರು. ಶ್ರೀಲಂಕಾ ವಿರುದ್ಧ ಸೋತು ನಿರಾಸೆ ಅನುಭಸಿತ್ತು. ಬಳಿಕ ಯಾವುದೇ ವಿಶ್ವಕಪ್‌ನಲ್ಲಿ ಭಾರತಕ್ಕೆ ಚಾಂಪಿಯನ್ ಆಗುವ ಅವಕಾಶವೇ ಸಿಕ್ಕಿರಲಿಲ್ಲ. ಆದರೆ, 2024 ರಲ್ಲಿ 17 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಆದ ಭಾರತ, ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿತ್ತು. 17 ವರ್ಷಗಳ ಬಹು ದೂರದ ಕಾಯುವಿಕೆ ಬಳಿಕ ಟ್ರೋಪಿ ಬರ ನೀಗಿಸಿಕೊಂಡಿತ್ತು. ಈಗ ಮತ್ತೆ ಅಂತಹದ್ದೆ ಅವಕಾಶ ಸಿಕ್ಕಿದ್ದು, ಮತ್ತೆ ಇತಿಹಾಸ ನಿರ್ಮಿಸಲು ಮೆನ್ ಇನ್ ಬ್ಲ್ಯೂ ಪಡೆ ಸಿದ್ಧವಾಗಿದೆ.

ಹಾಲಿ ಚಾಂಪಿಯನ್ನರನ್ನು ಸದೆಬಡಿದು ಚೊಚ್ಚಲ ಕಪ್ ಗೆಲ್ಲಲು ನ್ಯೂಜಿಲೆಂಡ್ ಕಾಯುತ್ತಿದೆ. ಭಾರತ ತಂಡ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಒಂದು ಪಂದ್ಯದಲ್ಲೂ ಗೆದ್ದಿಲ್ಲ. ಟೂರ್ನಿಯಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿಯಾಗಿವೆ. ಎಲ್ಲಾ ಪಂದ್ಯಗಳಲ್ಲೂ ನ್ಯೂಜಿಲೆಂಡ್ ಗೆದ್ದಿದೆ.

10ನೇ ಆವೃತ್ತಿಯ ಟಿ20 ವಿಶ್ವಕಪ್ ಫೈನಲ್ ಪಂದ್ಯ ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ವಿಶ್ವಕಪ್ ಇತಿಹಾದಲ್ಲಿ ಭಾರತ ನಡೆದು ಬಂದ ಹಾದಿ ಹೇಗಿದೆ?
* 2007 – ಎಂಎಸ್ ಧೋನಿ ನೇತೃತ್ವದಲ್ಲಿ ಚಾಂಪಿಯನ್ಸ್
* 2009 – ಸೂಪರ್ 8 ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ
* 2010 – ಸೂಪರ್ 8 ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ
* 2012 – ಸೂಪರ್ 8 ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ
* 2014 – ರನ್ನರ್-ಅಪ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋಲು
* 2016 – ಸೆಮಿಫೈನಲ್ ವೆಸ್ಟ್ ಇಂಡೀಸ್ ವಿರುದ್ಧ ಸೋಲು
* 2021 – ಸೂಪರ್ 12 ಸೆಮಿಫೈನಲ್ ತಲುಪುವಲ್ಲಿ ವಿಫಲ
* 2022 – ಸೆಮಿಫೈನಲ್ ಇಂಗ್ಲೆAಡ್ ವಿರುದ್ಧ ಸೋಲು.

 

The post ಟಿ20 ವಿಶ್ವಕಪ್ 2026;ಭಾರತ vs ನ್ಯೂಜಿಲೆಂಡ್‌ ಅಂತಿಮ ಹೋರಾಟದಲ್ಲಿ ಗೆಲ್ಲೋರ್‍ಯಾರು? appeared first on Good News 24x7.

]]>
ಏರ್ ಇಂಡಿಯಾ ವಿಮಾನ ದುರಂತದ ವೇಳೆ ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾ*ವು! https://www.goodnews24x7.com/14-year-old-boy-dies-while-standing-near-tea-stall-during-air-india-plane-crash/ Sat, 14 Jun 2025 11:55:17 +0000 https://www.goodnews24x7.com/?p=4392 ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ವೇಳೆ ಅಲ್ಲೇ ಪಕ್ಕದ ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ.             ಆಕಾಶ್ (14) ಮೃತ…

The post ಏರ್ ಇಂಡಿಯಾ ವಿಮಾನ ದುರಂತದ ವೇಳೆ ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾ*ವು! appeared first on Good News 24x7.

]]>

ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ ವೇಳೆ ಅಲ್ಲೇ ಪಕ್ಕದ ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ.

 

 

 

 

 

 

ಆಕಾಶ್ (14) ಮೃತ ಬಾಲಕ. ಬಿಜೆ ಹಾಸ್ಟೆಲ್ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿದ್ದರು. ಆಕಾಶ್ ತಾಯಿಗೆ ತಿಂಡಿ ಕೊಡಲು ಅಂಗಡಿ ಬಳಿ ಹೋಗಿದ್ದ. ವಿಮಾನ ದುರಂತದ ವೇಳೆ ಆಕಾಶ್ ಟೀ ಅಂಗಡಿಯ ಮುಂದೆ ನಿಂತಿದ್ದ. ಇದ್ದಕ್ಕಿದ್ದಂತೆ ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

 

 

 

 

 

 

 

ಆಕಾಶ್ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ದೊಡ್ಡಣ್ಣ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾನು ಆಟೋ ಓಡಿಸುತ್ತಿದ್ದೆ. ಬೆಂಕಿ ತೀವತ್ರೆಗೆ ಗಾಯಗೊಂಡಿದ್ದ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ತಮ್ಮ ಅಲ್ಲೇ ಸಿಲುಕಿದ್ದ. ನನ್ನ ತಮ್ಮನನ್ನು ಒಮ್ಮೆ ನೋಡಲು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

ನನ್ನ ತಮ್ಮ ಆಕಾಶ್ ಕೂಡ ಅಲ್ಲೇ ಇದ್ದ. ಆದರೆ ಅವನನ್ನು ಯಾರೂ ರಕ್ಷಣೆ ಮಾಡೋರಿಲ್ಲದೆ ಸಾವನ್ನಪ್ಪಿದ್ದಾನೆ. ನನ್ನ ತಮ್ಮ ಇಲ್ಲದೆ ನಾನು ಹೇಗೆ ಬದುಕಲಿ. ಒಮ್ಮೆ ನನ್ನ ಸಹೋದರನ ಮುಖ ನೋಡಲು ಬಿಡಿ.  ನನ್ನ ತಾಯಿಗೆ ಇನ್ನೂ ವಿಷಯ ತಿಳಿದಿಲ್ಲ. ಆಕೆಗೆ ಕೂಡ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗ ಹೇಗಿದ್ದಾನೆ ಎಂದು ಕೇಳ್ತಿದ್ದಾರೆ. ಆಕಾಶ್ಗೆ ಏನೂ ಆಗಿಲ್ಲ, ಚೆನ್ನಾಗಿದ್ದಾನೆ ಎಂದು ಅವರನ್ನು ಸಮಾಧಾನಪಡಿಸಿದ್ದೇವೆ ಎಂದು ದುಃಖಿಸಿದರು.

The post ಏರ್ ಇಂಡಿಯಾ ವಿಮಾನ ದುರಂತದ ವೇಳೆ ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾ*ವು! appeared first on Good News 24x7.

]]>
ಪದವಿಯ ಕನಸುಗಳೊಂದಿಗೆ ಲಂಡನ್‌ಗೆ ಹೋಗಿದ್ದ ಆಟೋ ಚಾಲಕನ ಮಗಳ ದುರಂತ ಅಂ*ತ್ಯ! https://www.goodnews24x7.com/tragic-end-to-auto-drivers-daughter-who-had-gone-to-london-with-dreams-of-a-degree/ Sat, 14 Jun 2025 11:38:02 +0000 https://www.goodnews24x7.com/?p=4380 ಅಹಮದಾಬಾದ್: ಗುಜರಾತ್ನ ಹಿಮತ್ನಗರದ ಗೂಡ್ಸ್ ಆಟೋ ಚಾಲಕನ ಮಗಳಾದ ಪಾಯಲ್ ಖಾಟಿಕ್ ಎಂಟೆಕ್ ಪದವಿಯ ಕನಸು ಹೊತ್ತು ಲಂಡನ್ಗೆ ಹೊರಟಿದ್ದಳು. ಆದರೆ ಅವಳ ಹಾಗೂ ಕುಟುಂಬದ ಕನಸು ಆಗಸದಲ್ಲಿ ಛಿದ್ರವಾಗಿದೆ. ಹೌದು, ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅವಳು…

The post ಪದವಿಯ ಕನಸುಗಳೊಂದಿಗೆ ಲಂಡನ್‌ಗೆ ಹೋಗಿದ್ದ ಆಟೋ ಚಾಲಕನ ಮಗಳ ದುರಂತ ಅಂ*ತ್ಯ! appeared first on Good News 24x7.

]]>

ಅಹಮದಾಬಾದ್: ಗುಜರಾತ್ನ ಹಿಮತ್ನಗರದ ಗೂಡ್ಸ್ ಆಟೋ ಚಾಲಕನ ಮಗಳಾದ ಪಾಯಲ್ ಖಾಟಿಕ್ ಎಂಟೆಕ್ ಪದವಿಯ ಕನಸು ಹೊತ್ತು ಲಂಡನ್ಗೆ ಹೊರಟಿದ್ದಳು. ಆದರೆ ಅವಳ ಹಾಗೂ ಕುಟುಂಬದ ಕನಸು ಆಗಸದಲ್ಲಿ ಛಿದ್ರವಾಗಿದೆ. ಹೌದು, ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅವಳು ಸಾವನ್ನಪ್ಪಿದ್ದಾಳೆ.

 

 

 

 

 

 

ಪಾಯಲ್ ತಂದೆ ರಿಕ್ಷಾ ಚಾಲಕರಾಗಿದ್ದು, ಗುರುವಾರ ಮಗಳನ್ನು ವಿಮಾನ ಹತ್ತಿಸಿ ಉತ್ಸಾಹದಿಂದ ಕಳುಹಿಸಿದ್ದರು. ಅವಳು ಸುರಕ್ಷಿತವಾಗಿ ಲಂಡನ್ ತಲುಪುತ್ತಾಳೆ. ಅಲ್ಲಿ ಅಧ್ಯಯನ ಮಾಡಿ, ಉನ್ನತ ಸ್ಥಾನಕ್ಕೇರುತ್ತಾಳೆ ಎಂದು ಕುಂಟುಂಬಸ್ಥರು ಸಹ ಕನಸು ಕಂಡಿದ್ದರು. ಆದರೆ ವಿಧಿಯ ಆಟ ಮಾತ್ರ ಬೇರೆಯದೇ ಆಗಿತ್ತು. ಪಾಯಲ್ ಸಾವು ದೃಢಪಟ್ಟಿದ್ದು, ಡಿಎನ್ಎ ಪರೀಕ್ಷೆಯಿಂದ ಮೃತದೇಹ ಗುರುತಿಸಲಾಗಿದೆ.

 

 

 

 

 

 

ಮಗಳ ಕನಸಿನ ಬಗ್ಗೆ ಮಾತಾಡಿರುವ ತಂದೆ ಸುರೇಶ್ ಖಾಟಿಕ್, ಕಾಲೇಜು ಮುಗಿಸಿದ ನಂತರ ಪಾಯಲ್ ನಮ್ಮೊಂದಿಗೆ ಇದ್ದಳು. ಅವಳು ಲಂಡನ್ನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ಬಯಸಿದ್ದಳು. ಅವಳ ಶಿಕ್ಷಣಕ್ಕಾಗಿ ಸಾಲ ಮಾಡಿದ್ದೆವು. ಅವಳಿಗೆ ಉದ್ಯೋಗ ಸಿಗುವ ಭರವಸೆ ಇತ್ತು. ಇದರಿಂದ ನಮ್ಮ ಬಡತನ ನೀಗುತ್ತದೆ ಎಂದು ಭಾವಿಸಿದ್ದೆವು. ಆದರೆ ಈಗ ಸಾಲ ಮರುಪಾವತಿಸಲು ಯಾವುದೇ ದಾರಿ ಇಲ್ಲ ಎಂದು ಕಣ್ಣೀರಿಟ್ಟದ್ದಾರೆ.

ಪಾಯಲ್ ಲಂಡನ್ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಪ್ರವೇಶ ಪಡೆಯಲು ಹೋಗುತ್ತಿದ್ದಳು. ಸ್ಥಳೀಯರು, ಯುವತಿ ಬಾಲ್ಯದಿಂದಲೂ ಶಾಲೆಯ ಟಾಪರ್ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ. ಗುರುವಾರ ಅಹಮದಾಬಾದ್ನಲ್ಲಿ ಅಪಘಾತಗೊಂಡ ಏರ್ ಇಂಡಿಯಾ ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಈ ಅವಘಡದಲ್ಲಿ 241 ಜನ ಸಾವನ್ನಪ್ಪಿದ್ದಾರೆ. ಓರ್ವ ಮಾತ್ರ ಪವಾಡ ಸದೃಶ್ಯವಾಗಿ ಬದುಕುಳಿದಿದ್ದಾರೆ.

 

The post ಪದವಿಯ ಕನಸುಗಳೊಂದಿಗೆ ಲಂಡನ್‌ಗೆ ಹೋಗಿದ್ದ ಆಟೋ ಚಾಲಕನ ಮಗಳ ದುರಂತ ಅಂ*ತ್ಯ! appeared first on Good News 24x7.

]]>
ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? https://www.goodnews24x7.com/plane-crashes-at-ahmedabad-airport-former-gujarat-cm-vijay-rupani-was-also-on-board/ Thu, 12 Jun 2025 11:15:35 +0000 https://www.goodnews24x7.com/?p=4366 ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್…

The post ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? appeared first on Good News 24x7.

]]>

ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುವಾಗ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಪ್ರಯಾಣಿಕರ ಪಟ್ಟಿಯಲ್ಲಿ ವಿಜಯ್ ರೂಪಾನಿ ಹೆಸರಿದೆ. ಟಿಕೆಟ್ ಮಾಹಿತಿ ಕೂಡ ಈಗ ಲಭ್ಯವಾಗಿದೆ.

ವಿಮಾನ ಮಧ್ಯಾಹ್ನ 1.17 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಬಳಿಯ ಸರಕು ಕಚೇರಿಯಲ್ಲಿ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಟ್ಟಡವೂ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ 242 ಜನರಲ್ಲಿ ಇಬ್ಬರು ಪೈಲಟ್ಗಳು ಮತ್ತು 2 ಮಕ್ಕಳು ಸೇರಿದಂತೆ 8 ಸಿಬ್ಬಂದಿ ಇದ್ದರು. ವಿಮಾನದ ಪೈಲಟ್ನ ಹೆಸರು ಸುಮಿತ್ ಸಭರ್ವಾಲ್ ಎಂದು ಹೇಳಲಾಗುತ್ತಿದೆ.

ವಿಮಾನ ಟೇಕ್ ಆಫ್ ಆದ ಕೇವಲ 1 ನಿಮಿಷದಲ್ಲಿ ಅಪಘಾತಕ್ಕೀಡಾಗಿದೆ. ಅದರ ವಿಡಿಯೋ ಕೂಡ ಹೊರಬಿದ್ದಿದೆ. ಆಕಾಶದಲ್ಲಿ 625 ಅಡಿ ಎತ್ತರ ತಲುಪಿದ ತಕ್ಷಣ ವಿಮಾನ ಹೇಗೆ ಪತನಗೊಂಡಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ. ಅಹ್ಮದಾಬಾದ್ ಏರ್ಪೋರ್ಟ್ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್ದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ ಒಟ್ಟು 133 ಮಂದಿ ಸಾವನ್ನಪ್ಪಿದ್ದಾರೆ ಎಂದು ಧೃಡಪಡಿಸಲಾಗಿದೆ. ವಿಜಯ್ ರೂಪಾನಿ ಸೀಟ್ ಸಂಖ್ಯೆ 2-ಡಿಯಲ್ಲಿ ಕುಳಿತಿದ್ದರು. ಟಿಕೆಟ್ ದೃಢೀಕರಿಸಲಾಗಿದೆ. ಅವರ ಸೀಟ್ ನಂಬರ್ 11 ಜಿ. ಮೂಲಗಳ ಪ್ರಕಾರ, ವಿಜಯ್ ರೂಪಾನಿ ಅವರ ಪತ್ನಿ ಬ್ರಿಟನ್ನಲ್ಲಿದ್ದರು. ಅವರ ಪತ್ನಿ 6 ತಿಂಗಳು ಅಲ್ಲಿದ್ದರು. ಅವರನ್ನು ಮರಳಿ ಕರೆತರಲು ವಿಜಯ್ ರೂಪಾನಿ ಲಂಡನ್ಗೆ ಹೋಗುತ್ತಿದ್ದರು. ನಂತರ ಅಹಮದಾಬಾದ್ನಲ್ಲಿ ಟೇಕ್ ಆಫ್ ಆಗುವಾಗ ವಿಮಾನ ಅಪಘಾತಕ್ಕೀಡಾಯಿತು. ಈ ಅಪಘಾತ ಅಹಮದಾಬಾದ್ನ ಮೇಘನಿನಗರ ಪ್ರದೇಶದ ಬಳಿ ಸಂಭವಿಸಿದೆ. ಟೇಕ್ ಆಫ್ ಆಗುವ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ.

1956ರಲ್ಲಿ ಇಂದಿನ ಮೈನ್ಮಾರ್ ದೇಶದ ರಂಗೂನ್ನಲ್ಲಿ ಜೈನ್ ಬನಿಯಾ ಸಮುದಾಯದಲ್ಲಿ ಜನಿಸಿದ ವಿಜಯ್ ರೂಪಾನಿ ಅವರ ಕುಟುಂಬ ಮುಂದೆ ಗುಜರಾತಿನ ರಾಜ್ಕೋಟ್ಗೆ ವಲಸೆ ಬಂತು. ಬಿಎ ಎಲ್ಎಲ್ಬಿ ಪದವೀಧರರು. ಅವರ ತಂದೆ ರಮಣಿಕ್ಲಾಲ್ ರೂಪಾನಿ ತಾಯಿ ಮಾಯಾಬೆನ್. ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ ಅವರು, ಇಸವಿ ಸನ್ 1971ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಅಲ್ಲದೇ ಸ್ಟಾಕ್ ಬ್ರೋಕರ್ ಆಗಿಯೂ ಅವರು ಷೇರುಪೇಟೆಯಲ್ಲಿ ಕೆಲಸ ಮಾಡಿದ್ದರು.ವಿಜಯ್ ರೂಪಾನಿ ಪಕ್ಷ ಮತ್ತು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ನಿಷ್ಠಾವಂತ ಕಾರ್ಯಕರ್ತ. 1976ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ನಡೆಸಿದ ಹೋರಾಟ ಅವರಿಗೆ 11 ತಿಂಗಳ ಜೈಲುವಾಸದ ರುಚಿಯನ್ನೂ ಉಣಬಡಿಸಿತು. 1978ರಿಂದ 1981ರವರೆಗೆ ಆರ್ಎಸ್ಎಸ್ನ ಪ್ರಚಾರಕ್ ಜವಾಬ್ದಾರಿಯನ್ನು ನಿರ್ವಹಿಸಿದ ವಿಜಯ್ ರೂಪಾನಿಗೆ 2006ರಲ್ಲಿ ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿಯ ಜವಾಬ್ದಾರಿಯನ್ನೂ ಬಿಜೆಪಿ ನೀಡಿತು. 2006ರಲ್ಲಿ ರಾಜ್ಕೋಟ್ ಪಾಲಿಕೆ ಕಾರ್ಪೋರೇಟರ್, ಮೇಯರ್ ಆಗಿ ಆಯ್ಎಕಯಾದ ಅವರಿಗೆ ಬಿಜೆಪಿ ರಾಜ್ಯಸಭೆಯ ಸದಸ್ಯ ಸ್ಥಾನವನ್ನು ನೀಡಿತು.

The post ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? appeared first on Good News 24x7.

]]>
ಮಗು ಮುಖ ನೋಡಿ ಭಾರತಕ್ಕೆ ವಾಪಸ್ಸಾದ ಫಿಲ್ ಸಾಲ್ಟ್. https://www.goodnews24x7.com/rcb-fans-sigh-phil-salt-returns-to-india-after-seeing-his-baby-face/ Tue, 03 Jun 2025 12:04:14 +0000 https://www.goodnews24x7.com/?p=4205 ಐಪಿಎಲ್ 2025 ಫೈನಲ್‌ಗೆ ಮುನ್ನ ತಮ್ಮ ಮಗುವಿನ ಜನನದಿಂದಾಗಿ ತಾಯ್ನಾಡಿಗೆ ಹೋಗಿದ್ದ ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಅವರು ಅಹಮದಾಬಾದ್‌ಗೆ ಮರಳಿದ್ದಾರೆ. ತಂಡದೊಂದಿಗೆ ಸೇರಿಕೊಂಡಿರುವ ಸಾಲ್ಟ್, ಫೈನಲ್ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಅವರ ಆಗಮನವು ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿದೆ.…

The post ಮಗು ಮುಖ ನೋಡಿ ಭಾರತಕ್ಕೆ ವಾಪಸ್ಸಾದ ಫಿಲ್ ಸಾಲ್ಟ್. appeared first on Good News 24x7.

]]>

ಐಪಿಎಲ್ 2025 ಫೈನಲ್‌ಗೆ ಮುನ್ನ ತಮ್ಮ ಮಗುವಿನ ಜನನದಿಂದಾಗಿ ತಾಯ್ನಾಡಿಗೆ ಹೋಗಿದ್ದ ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಅವರು ಅಹಮದಾಬಾದ್‌ಗೆ ಮರಳಿದ್ದಾರೆ. ತಂಡದೊಂದಿಗೆ ಸೇರಿಕೊಂಡಿರುವ ಸಾಲ್ಟ್, ಫೈನಲ್ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಅವರ ಆಗಮನವು ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹವನ್ನು ತುಂಬಿದೆ. ಸಾಲ್ಟ್ ಅವರ ಪ್ರಮುಖ ಇನ್ನಿಂಗ್ಸ್‌ಗಳು ಈ ಸೀಸನ್‌ನಲ್ಲಿ ಆರ್‌ಸಿಬಿಗೆ ಬಹಳಷ್ಟು ನೆರವಾಗಿದೆ.

9 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025 ಫೈನಲ್ ಆಡಲು ಸಿದ್ಧವಾಗಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿರುವ ಆರ್ಸಿಬಿಗೆ ಫೈನಲ್ ಪಂದ್ಯಕ್ಕೂ ಮುನ್ನ ಕಾಡುತ್ತಿದ್ದ ಅದೊಂದು ಭಯಕ್ಕೆ ಮುಕ್ತಿ ಸಿಕ್ಕಿದೆ. ಅದೆನೆಂದರೆ ಫೈನಲ್ ಪಂದ್ಯಕ್ಕೂ ಮುನ್ನ ತಂದೆಯಾದ ಖುಷಿಯಲ್ಲಿದ್ದ ತಂಡದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ತಂಡವನ್ನು ತೊರೆದು ಮನೆಗೆ ವಾಪಸ್ಸಾಗಿದ್ದರು. ಹೀಗಾಗಿ ಅವರು ಫೈನಲ್ ಆಡುತ್ತಾರೋ? ಇಲ್ಲವೋ ಎಂಬ ಆತಂಕ ಶುರುವಾಗಿತ್ತು. ಆದರೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಮಡದಿ ಹಾಗೂ ಮಗುವಿನ ಮುಖ ನೋಡಿ ಫಿಲ್ ಸಾಲ್ಟ್ ಭಾರತಕ್ಕೆ ವಾಪಸ್ಸಾಗಿದ್ದಾರೆ. ಅಲ್ಲದೆ ಅಹಮದಾಬಾದ್‌ನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

ಆರ್ಸಿಬಿ ಪರ ಸಾಲ್ಟ್ ಪ್ರದರ್ಶನ

 

 

 

 

 

 

 

 

 

ಈ ಸೀಸನ್‌ನಲ್ಲಿ ಆರ್ಸಿಬಿ ಪರ ಹಲವು ಪ್ರಮುಖ ಇನ್ನಿಂಗ್ಸ್ಗಳನ್ನು ಆಡಿರುವ ಫಿಲ್ ಸಾಲ್ಟ್ ಆಡಿರುವ 12 ಪಂದ್ಯಗಳಲ್ಲಿ 387 ರನ್ ಗಳಿಸಿದ್ದಾರೆ, ಇದರಲ್ಲಿ ಅವರ ಸ್ಟ್ರೈಕ್ ರೇಟ್ 175.90 ಮತ್ತು ಸರಾಸರಿ 35.18 ಆಗಿದೆ. ಅದೇ ಸಮಯದಲ್ಲಿ, ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸಾಲ್ಟ್ 27 ಎಸೆತಗಳಲ್ಲಿ 56 ಅಜೇಯ ರನ್ ಗಳಿಸುವ ಮೂಲಕ ಆರ್‌ಸಿಬಿ 10 ಓವರ್‌ಗಳಲ್ಲಿ 102 ರನ್‌ಗಳ ಗುರಿ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ಫೈನಲ್ ಪಂದ್ಯಕ್ಕೆ ಸಾಲ್ಟ್ ಲಭ್ಯತೆ ಅತ್ಯವಶ್ಯಕವಾಗಿತ್ತು.

ಆರ್‌ಸಿಬಿಗೆ ಫಿಲ್ ಸಾಲ್ಟ್ ಅಗತ್ಯ

 

 

 

 

 

 

 

 

 

ಈ ಆವೃತ್ತಿಯಲ್ಲಿ ಸಾಲ್ಟ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಅನೇಕ ಪಂದ್ಯಗಳಲ್ಲಿ ಆರ್‌ಸಿಬಿಗೆ ಬಲವಾದ ಆರಂಭವನ್ನು ನೀಡಿದೆ. ಅವರ ಮತ್ತು ವಿರಾಟ್ ಕೊಹ್ಲಿಯ ಆರಂಭಿಕ ಜೋಡಿ ಪ್ರತಿ ಓವರ್‌ಗೆ 10.29 ರ ರನ್ ರೇಟ್ನಲ್ಲಿ ರನ್ ಕಲೆಹಾಕಿತ್ತು. ಹೀಗಾಗಿ ಫೈನಲ್ ಪಂದ್ಯದಲ್ಲೂ ಈ ಜೋಡಿ ಇದೇ ರೀತಿಯ ಪ್ರದರ್ಶನ ನೀಡಿದರೆ ಆರ್ಸಿಬಿಗೆ ಗೆಲುವು ಸುಲಭವಾಗಿ ದಕ್ಕಲಿದೆ.

ತಂದೆಯಾದ ಫಿಲ್ ಸಾಲ್ಟ್

 

 

 

 

 

 

ಐಪಿಎಲ್‌ ಫೈನಲ್ ಪಂದ್ಯಕ್ಕೂ ಮುನ್ನ, ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಅವರ ಬದ್ಧತೆ ಮತ್ತು ಕ್ರೀಡಾ ಸ್ಫೂರ್ತಿ ಎಲ್ಲರ ಹೃದಯ ಗೆದ್ದಿದೆ. ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಸಾಲ್ಟ್ ತಮ್ಮ ಮೊದಲ ಮಗುವಿನ ಜನನಕ್ಕಾಗಿ ಇಂಗ್ಲೆಂಡ್‌ಗೆ ಹೋಗಿದ್ದರು. ಹೀಗಾಗಿ ಅವರು ಆರ್ಸಿಬಿ ಪಾಳಯದಿಂದ ಕಾಣಿಸಿಕೊಂಡಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಸಾಲ್ಟ್ ಅಹಮದಾಬಾದ್‌ಗೆ ಬಂದಿಳಿದಿದ್ದು ತಂಡವನ್ನು ಕೂಡಿಕೊಂಡಿದ್ದಾರೆ. ಮೇ 29 ರಂದು ನಡೆದಿದ್ದ ಕ್ವಾಲಿಫೈಯರ್ -1 ರಲ್ಲಿ ತಂಡದ ಪರ ಆಡಿದ್ದ ಸಾಲ್ಟ್, ಪಂದ್ಯ ಮುಗಿದ ನಂತರ ತಮ್ಮ ದೇಶಕ್ಕೆ ಮರಳಿದ್ದರು. ಹೀಗಾಗಿ ಆರ್‌ಸಿಬಿಯ ತರಬೇತಿ ಸೆಷನ್ನಲ್ಲಿ ಅವರ ಅನುಪಸ್ಥಿತಿ ಅಭಿಮಾನಿಗಳಲ್ಲಿ ಕಳವಳವನ್ನು ಉಂಟುಮಾಡಿತ್ತು. ಆದರೆ, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿರುವ ಸುದ್ದಿ ಆರ್‌ಸಿಬಿ ಅಭಿಮಾನಿಗಳಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ.

The post ಮಗು ಮುಖ ನೋಡಿ ಭಾರತಕ್ಕೆ ವಾಪಸ್ಸಾದ ಫಿಲ್ ಸಾಲ್ಟ್. appeared first on Good News 24x7.

]]>
3ನೇ ಕ್ಲಾಸ್ ಬಾಲಕಿಗೆ ಹೃದಯಾಘಾತ ಅಹಮದಾಬಾದ್ ಶಾಲೆಯಲ್ಲಿ ಘಟನೆ. https://www.goodnews24x7.com/3%e0%b2%a8%e0%b3%87-%e0%b2%95%e0%b3%8d%e0%b2%b2%e0%b2%be%e0%b2%b8%e0%b3%8d-%e0%b2%ac%e0%b2%be%e0%b2%b2%e0%b2%95%e0%b2%bf%e0%b2%97%e0%b3%86-%e0%b2%b9%e0%b3%83%e0%b2%a6%e0%b2%af%e0%b2%be%e0%b2%98/ Sun, 12 Jan 2025 11:50:20 +0000 https://www.goodnews24x7.com/?p=1724 ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಯ ಕಾರಿಡಾರ್ನಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾಳೆ. ಗಾರ್ಗಿ ರಣಪರಾ ಎಂಬ 8 ವರ್ಷದ ಬಾಲಕಿ ನಿನ್ನೆ ಬೆಳಿಗ್ಗೆ ಥಲ್ತೇಜ್ ಪ್ರದೇಶದಲ್ಲಿರುವ ಜೆಬಾರ್ ಶಾಲೆಯಲ್ಲಿ ಕುಸಿದು ಬಿದ್ದಿದ್ದಾಳೆ. ಕ್ಲಾಸ್ರೂಮಿನ ಹೊರಗಿದ್ದ ಕಾರಿಡಾರ್ನಲ್ಲೇ ಬಾಲಕಿ…

The post 3ನೇ ಕ್ಲಾಸ್ ಬಾಲಕಿಗೆ ಹೃದಯಾಘಾತ ಅಹಮದಾಬಾದ್ ಶಾಲೆಯಲ್ಲಿ ಘಟನೆ. appeared first on Good News 24x7.

]]>

ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಬಾಲಕಿ ಶಾಲೆಯ ಕಾರಿಡಾರ್ನಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾಳೆ. ಗಾರ್ಗಿ ರಣಪರಾ ಎಂಬ 8 ವರ್ಷದ ಬಾಲಕಿ ನಿನ್ನೆ ಬೆಳಿಗ್ಗೆ ಥಲ್ತೇಜ್ ಪ್ರದೇಶದಲ್ಲಿರುವ ಜೆಬಾರ್ ಶಾಲೆಯಲ್ಲಿ ಕುಸಿದು ಬಿದ್ದಿದ್ದಾಳೆ. ಕ್ಲಾಸ್ರೂಮಿನ ಹೊರಗಿದ್ದ ಕಾರಿಡಾರ್ನಲ್ಲೇ ಬಾಲಕಿ ಕುಸಿದುಬಿದ್ದಿದ್ದಾಳೆ. ತಕ್ಷಣ ಶಿಕ್ಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅವಳು ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು.
ಶಾಲಾ ಆಡಳಿತ ಮಂಡಳಿ ಹಂಚಿಕೊಂಡ ಸಿಸಿಟಿವಿ ವೀಡಿಯೊದಲ್ಲಿ, ಗಾರ್ಗಿ ರಣಪರಾ ಲಾಬಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆದರೆ ದಾರಿಯಲ್ಲಿ, ಅವಳು ಸುಸ್ತಾಗಿ ಲಾಬಿಯಲ್ಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ. ನಂತರ ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳು ನೋಡನೋಡುತ್ತಿದ್ದಂತೆ ಆಕೆ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಅವಳು ಉಸಿರಾಟದ ತೊಂದರೆ ಅನುಭವಿಸುತ್ತಿದ್ದರಿಂದ ಶಿಕ್ಷಕರು ಅವಳಿಗೆ ಸಿಪಿಆರ್ ನೀಡಿ ಆಂಬ್ಯುಲೆನ್ಸ್ಗೆ ಕರೆ ಮಾಡಿದರು. ಆದರೆ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಆಕೆ ಮೃತಪಟ್ಟಿದ್ದಳು.
ಈ ವಾರದ ಆರಂಭದಲ್ಲಿ ಇದೇ ರೀತಿಯ ಘಟನೆ ಕರ್ನಾಟಕದ ಚಾಮರಾಜನಗರದಲ್ಲಿ ನಡೆದಿತ್ತು. ಇಲ್ಲಿನ 8 ವರ್ಷದ 3ನೇ ತರಗತಿ ವಿದ್ಯಾರ್ಥಿನಿ ಶಾಲೆಯಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಅದೇ ರೀತಿಯ ಘಟನೆ ಅಹಮದಾಬಾದ್ ಶಾಲೆಯಲ್ಲಿ ನಡೆದಿದೆ.

The post 3ನೇ ಕ್ಲಾಸ್ ಬಾಲಕಿಗೆ ಹೃದಯಾಘಾತ ಅಹಮದಾಬಾದ್ ಶಾಲೆಯಲ್ಲಿ ಘಟನೆ. appeared first on Good News 24x7.

]]>