AICC President Archives - Good News 24x7 https://www.goodnews24x7.com/tag/aicc-president/ Kannada Thu, 01 May 2025 06:51:58 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg AICC President Archives - Good News 24x7 https://www.goodnews24x7.com/tag/aicc-president/ 32 32 ಕಾಂಗ್ರೆಸ್ ಪ್ರಧಾನಿ ಮೋದಿ ಬಗ್ಗೆ ಟ್ವಿಟ್ ಗೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಬೇಸರ. https://www.goodnews24x7.com/mallikarjun-kharge-himself-upset-over-congress-tweet-about-pm-modi/ Thu, 01 May 2025 06:49:05 +0000 https://www.goodnews24x7.com/?p=3529 ಬೆಂಗಳೂರು : ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಇಲ್ಲದ ಚಿತ್ರವೊದನ್ನು ಅಪ್ಲೋಡ್ ಮಾಡಿ, ಗಾಯಬ್ ಎಂಬ ವಿವಾದಿತ ಪೋಸ್ಟ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.…

The post ಕಾಂಗ್ರೆಸ್ ಪ್ರಧಾನಿ ಮೋದಿ ಬಗ್ಗೆ ಟ್ವಿಟ್ ಗೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಬೇಸರ. appeared first on Good News 24x7.

]]>

ಬೆಂಗಳೂರು : ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಲೆ ಇಲ್ಲದ ಚಿತ್ರವೊದನ್ನು ಅಪ್ಲೋಡ್ ಮಾಡಿ, ಗಾಯಬ್ ಎಂಬ ವಿವಾದಿತ ಪೋಸ್ಟ್ ಹಾಕಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಯಾವುದೇ ವ್ಯಕ್ತಿ ಆಗಲಿ. ಯಾರೇ ಇರಲಿ ಅದು ಪ್ರಧಾನಿಯೇ ಇರಲಿ ಯಾವುದೇ ಮುಖಂಡರಿಗೆ ಅಗೌರವವನ್ನು ತೋರಬಾರದು. ಅವರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಬಾರದು. ಬಿಜೆಪಿಯವರಾಗಲಿ ನಮ್ಮವರೇ ಆಗಲಿ ಈ ರೀತಿ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.

ಪಹಲ್ಗಾಮ್ ಉಗ್ರರ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಮೋದಿ ಅಧಿವೇಶನದಲ್ಲಿ ಇರಬೇಕು ಏನೆಲ್ಲಾ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಬೇಕು ನಾವು ಪ್ರಧಾನಿಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ದೇಶದ ರಕ್ಷಣೆಗೆ ಒಳ್ಳೆಯ ಹೆಜ್ಜೆ ಇಡಬೇಕು ಎಂದರು.

The post ಕಾಂಗ್ರೆಸ್ ಪ್ರಧಾನಿ ಮೋದಿ ಬಗ್ಗೆ ಟ್ವಿಟ್ ಗೆ ಸ್ವತಃ ಮಲ್ಲಿಕಾರ್ಜುನ ಖರ್ಗೆ ಬೇಸರ. appeared first on Good News 24x7.

]]>
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ -ಡಿಸಿಎಂ ಗೆ ಒಗ್ಗಟ್ಟಿನ ಪಾಠ. https://www.goodnews24x7.com/%e0%b2%8e%e0%b2%90%e0%b2%b8%e0%b2%bf%e0%b2%b8%e0%b2%bf-%e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7-%e0%b2%ae%e0%b2%b2%e0%b3%8d%e0%b2%b2%e0%b2%bf%e0%b2%95%e0%b2%be%e0%b2%b0%e0%b3%8d/ Sun, 09 Mar 2025 05:35:18 +0000 https://www.goodnews24x7.com/?p=2683 ಕಲಬುರಗಿ :- ಮುಖ್ಯಮಂತ್ರಿ ಹುದ್ದೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ವಿವಿಧ ಗುಂಪು ಗಳ ಲಾಬಿ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ವಿರುದ್ಧ ದಿಕ್ಕಿನಲ್ಲಿ ಹೋಗದೆ ನೇರ ದಾರಿ…

The post ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ -ಡಿಸಿಎಂ ಗೆ ಒಗ್ಗಟ್ಟಿನ ಪಾಠ. appeared first on Good News 24x7.

]]>

ಕಲಬುರಗಿ :- ಮುಖ್ಯಮಂತ್ರಿ ಹುದ್ದೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ವಿವಿಧ ಗುಂಪು ಗಳ ಲಾಬಿ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ವಿರುದ್ಧ ದಿಕ್ಕಿನಲ್ಲಿ ಹೋಗದೆ ನೇರ ದಾರಿ ಯಲ್ಲಿ ಒಟ್ಟಾಗಿ ಕೆಲಸ ಮಾಡುಮತೆ ಸಲಹೆ ನೀಡಿದರು.

ಜೇವರ್ಗಿಯ ಕಟ್ಟಿ ಸಾಂಗವಿ ಗ್ರಾಮದಲ್ಲಿನ ಧರ್ಮಸಿಂಗ್ ಆಸ್ಪತ್ರೆಯ ಆವರಣದಲ್ಲಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಗಳನ್ನು ಮಾಡುವ ಗುರಿಯನ್ನು ಹೊಂದಿರುವ ‘ಕಲ್ಯಾಣ ಪಥ ಯೋಜನೆ’ಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ನಾಯಕರನ್ನು ಒಳ್ಳೆಯ ಆಕಾಂಕ್ಷೆಗಳೊಂದಿಗೆ ಆಯ್ಕೆ ಮಾಡುತ್ತಾರೆ. ಜನರ ಆ ಆಕಾಂಕ್ಷೆಗಳನ್ನುಈಡೇರಿಸುವುದು ನಾಯಕರ ಕರ್ತವ್ಯ ನಾಯಕರೇ ವಿರುದ್ಧ ದಿಕ್ಕಿನಲ್ಲಿ ಹೋದರೆ ಜನರನ್ನು ಹೇಗೆ ಎದುರಿಸಬಹುದು ಎಂದು ಅವರು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು. ಆದರೆ ಕಾರಣಾಂತರಗಳಿಂದ ಸಿದ್ದರಾಮಯ್ಯ ಭಾಗವಹಿಸಲು ಸಾಧ್ಯವಾಗಲಿಲ್ಲ. ಹಣಕಾಸು ಸಚಿವರಾಗಿ 16 ಬಾರಿ ಬಜೆಟ್ ಮಂಡಿಸಿದ್ದು ಬಹುಶಃ ಸಿಎಂ ಸಿದ್ದರಾಮಯ್ಯ ಅವರ ದಾಖಲೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಗಳಿಗೆ ಮೆಚ್ಚುಗೆಯ ಅಗತ್ಯವಿದೆ. ಅವರು ದೀನ-ದಲಿತರು ಮತ್ತು ಎಲ್ಲಾ ವರ್ಗದ ಜನರ ಅಭಿವೃದ್ಧಿ ಗಾಗಿ ಕೆಲಸ ಮಾಡುತ್ತಾರೆ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಒಟ್ಟಾಗಿ ಕೆಲಸ ಮಾಡಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಇಬ್ಬರೂ ಸಮರ್ಥ ಮತ್ತು ಬದ್ದ ನಾಯಕರು ಎಂದು ಖರ್ಗೆ ಶ್ಲಾಘಿಸಿದರು. ಈ ವರ್ಷ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ 5000 ಕೋಟಿ ರೂ.ಗಳನ್ನು ನೀಡುತ್ತಿದೆ ಎಂಬ ಡಿ.ಕೆ.ಶಿವಕುಮಾರ್ ಅವರ ಭಾಷಣವನ್ನು ಉಲ್ಲೇಖಿಸಿದ ಖರ್ಗೆ, ಈ ಕಲ್ಯಾಣ ಕರ್ನಾಟಕ ಪ್ರದೇಶವು ಹಲವು ದಶಕಗಳಿಂದ ಹಿಂದುಳಿದಿತ್ತು.

https://www.youtube.com/live/EWXNw0ywJ4c?si=DWKwXrPYOe4aPYSD

ಇದು ಬಲವಾಗಿ ಬೆಳೆಯಲು ಬೆಂಬಲದ ಅಗತ್ಯವಿದೆ ಎಂದು ಹೇಳಿದರು. ಕಲ್ಯಾಣ ಕರ್ನಾಟಕದ ಜನರಿಗೆ, ವಿಶೇಷವಾಗಿ ಕಲಬುರಗಿಯ ಜನರಿಗೆ ಖರ್ಗೆ ಧನ್ಯ ವಾದಗಳನ್ನು ಅರ್ಪಿಸಿದರು. ನಿಮ್ಮ ನಿರಂತರ ಬೆಂಬಲದಿಂದಾಗಿ ತಾವು ಎಐಸಿಸಿ ಅಧ್ಯಕ್ಷರಾಗಿರುವುದಾಗಿ ಹೇಳಿದರು. ಅದೇ ಸಮಯದಲ್ಲಿ 2019ರ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಅಸಮಾಧಾನ ಇದೆ ಎಂದು ಖರ್ಗೆ ಹೇಳಿದರು. ಕಲ್ಯಾಣ ಕರ್ನಾಟಕವು ವಿಧಾನಸಭೆಗೆ ಅನೇಕ ಕಾಂಗ್ರೆಸ್ ಶಾಸಕರ ‘ನ್ನು ಮತ್ತು ಲೋಕಸಭೆಗೆ ಸಂಸದರನ್ನು ಕಳುಹಿಸಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದ ರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಮೈಸೂರಿ ನಿಂದ ಪ್ರಾರಂಭವಾಗುವ ಯಾವುದೇ ಯೋಜನೆಗಳು ಬೆಂಗಳೂರಿನಲ್ಲಿ ನಿಲ್ಲು ತ್ತವೆ. ಆದರೆ ಯಾವುದೇ ಯೋಜನೆಗಳು ಕಲ್ಯಾಣ ಕರ್ನಾಟಕದಿಂದ ಪ್ರಾರಂಭವಾ ದರೆ, ಅವು ಇಡೀ ಕರ್ನಾಟಕವನ್ನು ತಲುಪುತ್ತವೆ ಎಂದು ಖರ್ಗೆ ಹೇಳಿದರು.

The post ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಿಎಂ -ಡಿಸಿಎಂ ಗೆ ಒಗ್ಗಟ್ಟಿನ ಪಾಠ. appeared first on Good News 24x7.

]]>