AirIndiaAI171 Archives - Good News 24x7 https://www.goodnews24x7.com/tag/airindiaai171/ Kannada Thu, 12 Jun 2025 11:15:35 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg AirIndiaAI171 Archives - Good News 24x7 https://www.goodnews24x7.com/tag/airindiaai171/ 32 32 ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? https://www.goodnews24x7.com/plane-crashes-at-ahmedabad-airport-former-gujarat-cm-vijay-rupani-was-also-on-board/ Thu, 12 Jun 2025 11:15:35 +0000 https://www.goodnews24x7.com/?p=4366 ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್…

The post ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? appeared first on Good News 24x7.

]]>

ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುವಾಗ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಪ್ರಯಾಣಿಕರ ಪಟ್ಟಿಯಲ್ಲಿ ವಿಜಯ್ ರೂಪಾನಿ ಹೆಸರಿದೆ. ಟಿಕೆಟ್ ಮಾಹಿತಿ ಕೂಡ ಈಗ ಲಭ್ಯವಾಗಿದೆ.

ವಿಮಾನ ಮಧ್ಯಾಹ್ನ 1.17 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಬಳಿಯ ಸರಕು ಕಚೇರಿಯಲ್ಲಿ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಟ್ಟಡವೂ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ 242 ಜನರಲ್ಲಿ ಇಬ್ಬರು ಪೈಲಟ್ಗಳು ಮತ್ತು 2 ಮಕ್ಕಳು ಸೇರಿದಂತೆ 8 ಸಿಬ್ಬಂದಿ ಇದ್ದರು. ವಿಮಾನದ ಪೈಲಟ್ನ ಹೆಸರು ಸುಮಿತ್ ಸಭರ್ವಾಲ್ ಎಂದು ಹೇಳಲಾಗುತ್ತಿದೆ.

ವಿಮಾನ ಟೇಕ್ ಆಫ್ ಆದ ಕೇವಲ 1 ನಿಮಿಷದಲ್ಲಿ ಅಪಘಾತಕ್ಕೀಡಾಗಿದೆ. ಅದರ ವಿಡಿಯೋ ಕೂಡ ಹೊರಬಿದ್ದಿದೆ. ಆಕಾಶದಲ್ಲಿ 625 ಅಡಿ ಎತ್ತರ ತಲುಪಿದ ತಕ್ಷಣ ವಿಮಾನ ಹೇಗೆ ಪತನಗೊಂಡಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ. ಅಹ್ಮದಾಬಾದ್ ಏರ್ಪೋರ್ಟ್ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್ದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ ಒಟ್ಟು 133 ಮಂದಿ ಸಾವನ್ನಪ್ಪಿದ್ದಾರೆ ಎಂದು ಧೃಡಪಡಿಸಲಾಗಿದೆ. ವಿಜಯ್ ರೂಪಾನಿ ಸೀಟ್ ಸಂಖ್ಯೆ 2-ಡಿಯಲ್ಲಿ ಕುಳಿತಿದ್ದರು. ಟಿಕೆಟ್ ದೃಢೀಕರಿಸಲಾಗಿದೆ. ಅವರ ಸೀಟ್ ನಂಬರ್ 11 ಜಿ. ಮೂಲಗಳ ಪ್ರಕಾರ, ವಿಜಯ್ ರೂಪಾನಿ ಅವರ ಪತ್ನಿ ಬ್ರಿಟನ್ನಲ್ಲಿದ್ದರು. ಅವರ ಪತ್ನಿ 6 ತಿಂಗಳು ಅಲ್ಲಿದ್ದರು. ಅವರನ್ನು ಮರಳಿ ಕರೆತರಲು ವಿಜಯ್ ರೂಪಾನಿ ಲಂಡನ್ಗೆ ಹೋಗುತ್ತಿದ್ದರು. ನಂತರ ಅಹಮದಾಬಾದ್ನಲ್ಲಿ ಟೇಕ್ ಆಫ್ ಆಗುವಾಗ ವಿಮಾನ ಅಪಘಾತಕ್ಕೀಡಾಯಿತು. ಈ ಅಪಘಾತ ಅಹಮದಾಬಾದ್ನ ಮೇಘನಿನಗರ ಪ್ರದೇಶದ ಬಳಿ ಸಂಭವಿಸಿದೆ. ಟೇಕ್ ಆಫ್ ಆಗುವ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ.

1956ರಲ್ಲಿ ಇಂದಿನ ಮೈನ್ಮಾರ್ ದೇಶದ ರಂಗೂನ್ನಲ್ಲಿ ಜೈನ್ ಬನಿಯಾ ಸಮುದಾಯದಲ್ಲಿ ಜನಿಸಿದ ವಿಜಯ್ ರೂಪಾನಿ ಅವರ ಕುಟುಂಬ ಮುಂದೆ ಗುಜರಾತಿನ ರಾಜ್ಕೋಟ್ಗೆ ವಲಸೆ ಬಂತು. ಬಿಎ ಎಲ್ಎಲ್ಬಿ ಪದವೀಧರರು. ಅವರ ತಂದೆ ರಮಣಿಕ್ಲಾಲ್ ರೂಪಾನಿ ತಾಯಿ ಮಾಯಾಬೆನ್. ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ ಅವರು, ಇಸವಿ ಸನ್ 1971ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಅಲ್ಲದೇ ಸ್ಟಾಕ್ ಬ್ರೋಕರ್ ಆಗಿಯೂ ಅವರು ಷೇರುಪೇಟೆಯಲ್ಲಿ ಕೆಲಸ ಮಾಡಿದ್ದರು.ವಿಜಯ್ ರೂಪಾನಿ ಪಕ್ಷ ಮತ್ತು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ನಿಷ್ಠಾವಂತ ಕಾರ್ಯಕರ್ತ. 1976ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ನಡೆಸಿದ ಹೋರಾಟ ಅವರಿಗೆ 11 ತಿಂಗಳ ಜೈಲುವಾಸದ ರುಚಿಯನ್ನೂ ಉಣಬಡಿಸಿತು. 1978ರಿಂದ 1981ರವರೆಗೆ ಆರ್ಎಸ್ಎಸ್ನ ಪ್ರಚಾರಕ್ ಜವಾಬ್ದಾರಿಯನ್ನು ನಿರ್ವಹಿಸಿದ ವಿಜಯ್ ರೂಪಾನಿಗೆ 2006ರಲ್ಲಿ ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿಯ ಜವಾಬ್ದಾರಿಯನ್ನೂ ಬಿಜೆಪಿ ನೀಡಿತು. 2006ರಲ್ಲಿ ರಾಜ್ಕೋಟ್ ಪಾಲಿಕೆ ಕಾರ್ಪೋರೇಟರ್, ಮೇಯರ್ ಆಗಿ ಆಯ್ಎಕಯಾದ ಅವರಿಗೆ ಬಿಜೆಪಿ ರಾಜ್ಯಸಭೆಯ ಸದಸ್ಯ ಸ್ಥಾನವನ್ನು ನೀಡಿತು.

The post ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? appeared first on Good News 24x7.

]]>