Airport Archives - Good News 24x7 https://www.goodnews24x7.com/tag/airport/ Kannada Mon, 20 Apr 2026 09:16:24 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Airport Archives - Good News 24x7 https://www.goodnews24x7.com/tag/airport/ 32 32 ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! https://www.goodnews24x7.com/phlai-91-vimanadalli-ata%e1%b9%85kada-k%e1%b9%a3a%e1%b9%87a-praya%e1%b9%87ikara-ka%e1%b9%87%e1%b9%87iru-sibbandiya-uddha%e1%b9%adatana-crewbengalurupassengershyderabadairportfamilieshubbal/ Mon, 20 Apr 2026 09:16:24 +0000 https://www.goodnews24x7.com/?p=9314 ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ…

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>

ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ ಅಮಾನವೀಯ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆ ೧೫ ನಿಮಿಷಗಳ ಕಾಲ ಮೃತ್ಯು ಕಣ್ಣೆದುರಿಗಿತ್ತು:
ನಿನ್ನೆ ಮಧ್ಯಾಹ್ನ ೩ ಗಂಟೆಗೆ ಹೊರಟ ವಿಮಾನವು ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಸುಮಾರು ೧೫ ನಿಮಿಷಗಳ ಕಾಲ ತೀವ್ರವಾಗಿ ಅಲುಗಾಡತೊಡಗಿತು. ಟರ್ಬುಲೆನ್ಸ್ ಎಷ್ಟಿತ್ತೆಂದರೆ, ಪ್ರಯಾಣಿಕರು ಬದುಕುವ ಭರವಸೆಯನ್ನೇ ಕೈಬಿಟ್ಟಿದ್ದರು. ಕೆಲವರು ತಮ್ಮ ಕುಟುಂಬದವರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೋ ರೆಕಾರ್ಡ್ ಮಾಡತೊಡಗಿದರೆ, ಇನ್ನು ಕೆಲವರು ಕಿರುಚಾಡುತ್ತಿದ್ದರು. ಅಲುಗಾಟದ ತೀವ್ರತೆಗೆ ಮಗುವೊಂದು ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಈ ವೇಳೆ ಗಗನಸಖಿಯರೂ ಕೂಡ ಭಯದಿಂದ ಕಣ್ಣೀರಿಟ್ಟಿದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು.

೪ ಗಂಟೆಗಳ ಕಾಲ ಆಕಾಶದಲ್ಲೇ ಅಲೆದಾಟ:
ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ವಿಮಾನವು ಕೊನೆಗೆ ರಾತ್ರಿ ೭ ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಜೀವ ಉಳಿಸಿದ ಪೈಲಟ್‌ಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.

ಫ್ಲೈ ೯೧ ಸಿಬ್ಬಂದಿಯ ಅಸಭ್ಯ ವರ್ತನೆ:
ವಿಮಾನ ಸುರಕ್ಷಿತವಾಗಿ ಇಳಿದ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಬೇಕಿದ್ದ ಫ್ಲೈ ೯೧ ಏರ್‌ಲೈನ್ಸ್‌ನ ನೆಲದ ಸಿಬ್ಬಂದಿ (Ground Staff) ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ. “ಇದೇ ವಿಮಾನ ಮತ್ತೆ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತುವವರು ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂದು ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. ಸಾವಿನ ದವಡೆಯಿಂದ ಬಂದಿದ್ದ ಪ್ರಯಾಣಿಕರಿಗೆ ಕನಿಷ್ಠ ಸೌಜನ್ಯವನ್ನೂ ತೋರಿಸದ ಸಿಬ್ಬಂದಿಯ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಮಾನವೀಯತೆ ಇಲ್ಲದ ಇಂತಹ ಏರ್‌ಲೈನ್ಸ್‌ನಲ್ಲಿ ನಾವು ಮತ್ತೆ ಹೇಗೆ ಧೈರ್ಯವಾಗಿ ಪ್ರಯಾಣಿಸಲಿ?” ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>
ಭಾರತೀಯ ತನಿಖಾ ಸಂಸ್ಥೆಗಳ ಭರ್ಜರಿ ಬೇಟೆ: ಥೈಲ್ಯಾಂಡ್‌ನಿಂದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಗಡೀಪಾರು! https://www.goodnews24x7.com/indian-investigation-agencies-big-hunt-most-wanted-gangster-sahil-chauhan-deported-from-thailand/ Sat, 11 Apr 2026 11:24:40 +0000 https://www.goodnews24x7.com/?p=9212 ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್ ಸರ್ಕಾರ ಭಾರತಕ್ಕೆ ಗಡೀಪಾರು ಮಾಡಿದೆ. ಹರಿಯಾಣದ ಜೈಲಿನಲ್ಲಿರುವ ಕುಖ್ಯಾತ ಕೌಶಲ್ ಚೌಧರಿ ಗ್ಯಾಂಗ್‌ನ ಪ್ರಮುಖ ಸದಸ್ಯನಾಗಿರುವ ಈತನನ್ನು ಶನಿವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ…

The post ಭಾರತೀಯ ತನಿಖಾ ಸಂಸ್ಥೆಗಳ ಭರ್ಜರಿ ಬೇಟೆ: ಥೈಲ್ಯಾಂಡ್‌ನಿಂದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಗಡೀಪಾರು! appeared first on Good News 24x7.

]]>

ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್‌ನನ್ನು ಥೈಲ್ಯಾಂಡ್ ಸರ್ಕಾರ ಭಾರತಕ್ಕೆ ಗಡೀಪಾರು ಮಾಡಿದೆ. ಹರಿಯಾಣದ ಜೈಲಿನಲ್ಲಿರುವ ಕುಖ್ಯಾತ ಕೌಶಲ್ ಚೌಧರಿ ಗ್ಯಾಂಗ್‌ನ ಪ್ರಮುಖ ಸದಸ್ಯನಾಗಿರುವ ಈತನನ್ನು ಶನಿವಾರ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹರಿಯಾಣ ವಿಶೇಷ ಕಾರ್ಯಪಡೆ (STF) ತನ್ನ ವಶಕ್ಕೆ ಪಡೆದಿದೆ. ಸಂಘಟಿತ ಅಪರಾಧಗಳಲ್ಲಿ ದಶಕಗಳಿಂದ ಬೇಕಾಗಿದ್ದ ಈತನ ಬಂಧನವು ಭಾರತೀಯ ಭದ್ರತಾ ಸಂಸ್ಥೆಗಳಿಗೆ ಸಿಕ್ಕ ದೊಡ್ಡ ಯಶಸ್ಸಾಗಿದೆ.

ವಿದೇಶದಲ್ಲಿದ್ದುಕೊಂಡೇ ಸುಪಾರಿ ಸಂಚು:
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೇರಿದಂತೆ ಹಲವು ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಸಾಹಿಲ್ ಚೌಹಾಣ್, ಥೈಲ್ಯಾಂಡ್‌ನಲ್ಲಿ ಅಡಗಿಕೊಂಡು ಭಾರತದಲ್ಲಿ ಹತ್ತಾರು ಸುಪಾರಿ ಕೊಲೆ ಮತ್ತು ಸುಲಿಗೆಗಳನ್ನು ಸಂಘಟಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಡ್ರಗ್ಸ್ ಸಾಗಣೆ ಮತ್ತು ಭಯೋತ್ಪಾದಕ ಜಾಲಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈತ, ಕೇಂದ್ರೀಯ ಸಂಸ್ಥೆಗಳು ಮತ್ತು ಹರಿಯಾಣ ಪೊಲೀಸರ ಸಂಘಟಿತ ಪ್ರಯತ್ನದಿಂದಾಗಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಈತನನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.

ಭದ್ರತಾ ಕಣ್ಗಾವಲಿನಲ್ಲಿ ವಿಚಾರಣೆ:
ಆರೋಪಿಯ ಆಗಮನದ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಕಸ್ಟಡಿಗೆ ಪಡೆದ ನಂತರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಹರಿಯಾಣಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ. ಈ ಹಸ್ತಾಂತರ ಪ್ರಕ್ರಿಯೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಾರಿಯಾಗಿರುವ ಅಪರಾಧಿಗಳನ್ನು ಪತ್ತೆಹಚ್ಚುವಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು ‘ಝಾಂಬಿ ಡ್ರ*’ ಹಾವಳಿ ಕುರಿತು ಸ್ಪಷ್ಟನೆ:
ಇದೇ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ‘ಝಾಂಬಿ ಡ್ರ*’ ವದಂತಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ವಿಡಿಯೋದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ ಯುವಕ ಯಾವುದೇ ಮಾದಕ ದ್ರವ್ಯ ಸೇವಿಸಿಲ್ಲ, ಬದಲಾಗಿ ಆಲ್ಕೋಹಾಲ್ ಜೊತೆಗೆ ಆರ್ಥ್ರೈಟಿಸ್ ನೋವು ನಿವಾರಕ ಮಾತ್ರೆ ಸೇವಿಸಿದ್ದರಿಂದ ಸಮತೋಲನ ತಪ್ಪಿದ್ದಾನೆ ಎಂದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದೆ. ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ.

The post ಭಾರತೀಯ ತನಿಖಾ ಸಂಸ್ಥೆಗಳ ಭರ್ಜರಿ ಬೇಟೆ: ಥೈಲ್ಯಾಂಡ್‌ನಿಂದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಸಾಹಿಲ್ ಚೌಹಾಣ್ ಗಡೀಪಾರು! appeared first on Good News 24x7.

]]>
ರಸ್ತೆಯಲ್ಲೆಲ್ಲಾ ಹಾರಾಡಿದ ನೋಟುಗಳು! ಹಣ ಬಾಚಲು ಮುಗಿಬಿದ್ದ ಜನ, 15 ಮಂದಿ ಸಾ* https://www.goodnews24x7.com/notes-flying-all-over-the-road-15-people-died-after-people-ran-out-to-collect-money/ Sat, 28 Feb 2026 05:33:58 +0000 https://www.goodnews24x7.com/?p=8529 ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ ಭೀಕರ ಘಟನೆ ಬೊಲಿವಿಯಾದಲ್ಲಿ ನಡೆದಿದೆ. ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ…

The post ರಸ್ತೆಯಲ್ಲೆಲ್ಲಾ ಹಾರಾಡಿದ ನೋಟುಗಳು! ಹಣ ಬಾಚಲು ಮುಗಿಬಿದ್ದ ಜನ, 15 ಮಂದಿ ಸಾ* appeared first on Good News 24x7.

]]>

ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ ಭೀಕರ ಘಟನೆ ಬೊಲಿವಿಯಾದಲ್ಲಿ ನಡೆದಿದೆ.

ನೋಟುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಕಾರ್ಗೋ ವಿಮಾನವೊಂದು ಪತನಗೊಂಡು ಹೆದ್ದಾರಿಗೆ ಅಪ್ಪಳಿಸಿದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿರುವ ಭೀಕರ ಘಟನೆ ಬೊಲಿವಿಯಾದಲ್ಲಿ ನಡೆದಿದೆ. ವಿಮಾನ ಬಿದ್ದ ರಭಸಕ್ಕೆ ಅದರಲ್ಲಿದ್ದ ಕಂತೆ ಕಂತೆ ನೋಟುಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಇದನ್ನು ಕಂಡ ಜನ ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದ ಪ್ರಸಂಗವೂ ನಡೆದಿದೆ.

ಬೊಲಿವಿಯಾದ ರಾಜಧಾನಿ ಲಾ ಪಾಜ್ ಪಕ್ಕದಲ್ಲಿರುವ ಎಲ್ ಆಲ್ಟೊ (El Alto) ವಿಮಾನ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿದೆ. ಬೊಲಿವಿಯಾ ವಾಯುಪಡೆಗೆ ಸೇರಿದ ಹರ್ಕ್ಯುಲಸ್ ಸಿ-130 (Hercules C-130) ವಿಮಾನವು ಹೊಸದಾಗಿ ಮುದ್ರಿಸಲಾದ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿತ್ತು.

ವಿಮಾನವು ಲ್ಯಾಂಡಿಂಗ್ ಆಗುವಾಗ ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರಿ, ಪಕ್ಕದ ರಸ್ತೆಗೆ ನುಗ್ಗಿದೆ. ಅಲ್ಲಿ ಸಂಚರಿಸುತ್ತಿದ್ದ ಸುಮಾರು 15ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲೇ ಭೀಕರ ವಾತಾವರಣ ನಿರ್ಮಾಣವಾಗಿತ್ತು.

15 ಸಾವು, ಹಲವರಿಗೆ ಗಾಯ
ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವರ್ ನೀಡಿದ ಮಾಹಿತಿ ಪ್ರಕಾರ, ಈ ದುರಂತದಲ್ಲಿ ಕನಿಷ್ಠ 15 ಜನ ಮೃತಪಟ್ಟಿದ್ದಾರೆ. ಆದರೆ ಮೃತಪಟ್ಟವರು ವಿಮಾನದಲ್ಲಿದ್ದವರಾ ಅಥವಾ ಹೆದ್ದಾರಿಯಲ್ಲಿದ್ದ ಕಾರಿನಲ್ಲಿದ್ದವರಾ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ವಿಮಾನದಲ್ಲಿದ್ದ ಆರು ಸಿಬ್ಬಂದಿ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ವಾಯುಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಹಣ ಬಾಚಲು ಮುಗಿಬಿದ್ದ ಜನ!
ವಿಮಾನ ಪತನವಾಗುತ್ತಿದ್ದಂತೆಯೇ ಅದರಲ್ಲಿದ್ದ ಹಣದ ಬಂಡಲ್‌ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದನ್ನು ನೋಡಿದ ಸ್ಥಳೀಯರು ಮತ್ತು ದಾರಿಹೋಕರು, ಅಪಘಾತದ ಭಯವನ್ನೂ ಲೆಕ್ಕಿಸದೆ ಹಣವನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ. ಪೊಲೀಸರು ಲಾಟೀ ಚಾರ್ಜ್ ಮಾಡುವ ಮೂಲಕ ಜನರನ್ನು ಚದುರಿಸಬೇಕಾಯಿತು.

ಇಲ್ಲಿ ಒಂದು ಟ್ವಿಸ್ಟ್ ಇದೆ. ಜನ ಮುಗಿಬಿದ್ದು ತೆಗೆದುಕೊಂಡ ಹಣಕ್ಕೆ ಸದ್ಯ ಯಾವುದೇ ಮೌಲ್ಯವಿಲ್ಲ (Legal Tender Status) ಎಂದು ಬೊಲಿವಿಯಾ ಸೆಂಟ್ರಲ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಈ ನೋಟುಗಳು ಹೊಸದಾಗಿ ಮುದ್ರಣಗೊಂಡು ಚಲಾವಣೆಗೆ ಬರಬೇಕಿದ್ದವು. ಇವುಗಳಲ್ಲಿ ಇನ್ನೂ ಸೀರಿಯಲ್ ನಂಬರ್ (Serial Numbers) ಇಲ್ಲದ ಕಾರಣ, ಇವು ಕೇವಲ ಕಾಗದಕ್ಕೆ ಸಮಾನ ಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಎಸ್ಪಿನೋಜಾ ತಿಳಿಸಿದ್ದಾರೆ.

ರಕ್ಷಣಾ ಸಚಿವ ಮಾರ್ಸೆಲೊ ಸಲಿನಾಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಸಾಂಟಾ ಕ್ರೂಜ್ ನಗರದಿಂದ ಈ ವಿಮಾನ ಹಣವನ್ನು ಹೊತ್ತು ತರುತ್ತಿತ್ತು ಎನ್ನಲಾಗಿದೆ.

The post ರಸ್ತೆಯಲ್ಲೆಲ್ಲಾ ಹಾರಾಡಿದ ನೋಟುಗಳು! ಹಣ ಬಾಚಲು ಮುಗಿಬಿದ್ದ ಜನ, 15 ಮಂದಿ ಸಾ* appeared first on Good News 24x7.

]]>
ಬೆದರಿಕೆಗೆ ನಾನೂ ಹೆದರಲ್ಲ: ಖರ್ಗೆಯವರೂ ಹೆದರುವುದಿಲ್ಲ: ಸಿ.ಎಂ ಸಿದ್ದರಾಮಯ್ಯ ತಿರುಗೇಟು! https://www.goodnews24x7.com/i-am-not-afraid-of-such-threats-kharge-is-not-afraid-either-cm-siddaramaiah-retorts/ Wed, 15 Oct 2025 11:06:49 +0000 https://www.goodnews24x7.com/?p=7721 ಮೈಸೂರು : ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪ್ರಿಯಾಂಕ ಖರ್ಗೆಯವರು ಖುದ್ದು ತಿಳಿಸಿದ್ದು, ಸರ್ಕಾರಿ ಸ್ಥಳಗಳಲ್ಲಿ ಆರ್. ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು. ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ. ಇಂಥಾ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿರುಗೇಟು…

The post ಬೆದರಿಕೆಗೆ ನಾನೂ ಹೆದರಲ್ಲ: ಖರ್ಗೆಯವರೂ ಹೆದರುವುದಿಲ್ಲ: ಸಿ.ಎಂ ಸಿದ್ದರಾಮಯ್ಯ ತಿರುಗೇಟು! appeared first on Good News 24x7.

]]>

ಮೈಸೂರು : ಬೆದರಿಕೆ ಕರೆಗಳು ಬರುತ್ತಿರುವುದಾಗಿ ಪ್ರಿಯಾಂಕ ಖರ್ಗೆಯವರು ಖುದ್ದು ತಿಳಿಸಿದ್ದು, ಸರ್ಕಾರಿ ಸ್ಥಳಗಳಲ್ಲಿ ಆರ್. ಎಸ್.ಎಸ್ ಚಟುವಟಿಕೆಗಳನ್ನು ಕೈಗೊಳ್ಳಬಾರದು. ತಮಿಳುನಾಡು ಮಾದರಿಯಲ್ಲಿ ಇಲ್ಲಿಯೂ ನಿಷೇಧ ಮಾಡಬೇಕು ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ. ಇಂಥಾ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿರುಗೇಟು ನೀಡಿದರು.

ಇಂದು ಮೈಸೂರು ಏರ್ ಪೋರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು ಈ ಕುರಿತ ಆಡಿಯೋ ಕೂಡ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ತಮಿಳುನಾಡಿನಲ್ಲಿ ಆರ್.ಎಸ್.ಎಸ್.ನಿಷೇಧದ ಬಗ್ಗೆ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ.


ತಮಿಳುನಾಡಿನಲ್ಲಿ ಯಾವ ರೀತಿ ನಿಷೇಧ ಹೇರಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಅದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದ ಅವರು ಪ್ರಿಯಾಂಕ ಖರ್ಗೆಯವರಿಗೆ ರಕ್ಷಣೆ ಒದಗಿಸಲಾಗುವುದು ಎಂದರು.

ಬೆದರಿಕೆಗೆ ಹೆದರುವುದಿಲ್ಲ

ದುಷ್ಟ ಶಕ್ತಿಗಳು ಯಾವಾಗಲೂ ಇಂಥದ್ದೇ ಕೆಲಸ ಮಾಡುವುದು. ಬೆದರಿಕೆಗಳಿಗೆ ಪ್ರಿಯಾಂಕ ಅವರು ಹೆದರುವುದಿಲ್ಲ. ನಾನೂ ಹೆಸದರುವುದಿಲ್ಲ ಎಂದರು.

ಸಮೀಕ್ಷೆ: ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ತಡವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬೆಂಗಳೂರು ನಗರ ಬಿಟ್ಟರೆ ಬೇರೆಲ್ಲಿಯೂ ಶೇಕಡಾವಾರು ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಎಂದರು.

ಎಲ್ಲ ಶಾಸಕರಿಗೂ ಅನುದಾನ

ಶಾಸಕರಿಗೆ ಅನುದಾನ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಉಚ್ಚ ನ್ಯಾಯಾಲಯಕ್ಕೆ ಶ್ರೀನಿವಾಸಪುರ ಶಾಸಕರು ಮೊರೆ ಹೋಗಿರುವ ಬಗ್ಗೆ ಮಾತನಾಡಿ ಜೆಡಿಎಸ್ ನವರು ನಮ್ಮ ಶಾಸಕರಿಗೆ ಅನುದಾನ ನೀಡಿದ್ದರೇ ? ಎಂದು ಪ್ರಶ್ನಿಸಿದರು.

ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಿದ್ದು, ಎಲ್ಲರಿಗೂ ಅನುದಾನ ಒದಗಿಸಲಾಗುತ್ತಿದೆ ಎಂದರು.ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಬಿಜೆಪಿಯವರು ತಾಕತ್ತಿದ್ದರೆ ಆರ್.ಎಸ್.ಎಸ್. ಮೇಲೆ ನಿಷೇಧ ಹೇರಲಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಚುನಾವಣಾ ಸಂದರ್ಭದಲ್ಲಿಯೂ ಬಿಜೆಪಿಯವರು ತಾಕತ್ತಿದ್ದರೆ ಬನ್ನಿ ಎಂದಿದ್ದರು. ಆದರೆ ಸೋತು ಹೋದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

The post ಬೆದರಿಕೆಗೆ ನಾನೂ ಹೆದರಲ್ಲ: ಖರ್ಗೆಯವರೂ ಹೆದರುವುದಿಲ್ಲ: ಸಿ.ಎಂ ಸಿದ್ದರಾಮಯ್ಯ ತಿರುಗೇಟು! appeared first on Good News 24x7.

]]>
ಚೀನಾದಲ್ಲಿ SCO ಶೃಂಗಸಭೆ. https://www.goodnews24x7.com/sco-summit-in-china/ Sun, 31 Aug 2025 06:24:07 +0000 https://www.goodnews24x7.com/?p=7121   7 ವರ್ಷಗಳ ನಂತರ ಪ್ರಧಾನಿ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ ಹಿನ್ನೆಲೆಯಲ್ಲಿ ಟಿಯಾಂಜಿನ್ ತಲುಪಿದ್ದಾರೆ. ಭಾರತೀಯರು ತ್ರಿವರ್ಣ ಧ್ವಜವನ್ನು ಬೀಸುತ್ತಾ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು. ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಮೋದಿಗೆ…

The post ಚೀನಾದಲ್ಲಿ SCO ಶೃಂಗಸಭೆ. appeared first on Good News 24x7.

]]>

 

7 ವರ್ಷಗಳ ನಂತರ ಪ್ರಧಾನಿ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ ಹಿನ್ನೆಲೆಯಲ್ಲಿ ಟಿಯಾಂಜಿನ್ ತಲುಪಿದ್ದಾರೆ. ಭಾರತೀಯರು ತ್ರಿವರ್ಣ ಧ್ವಜವನ್ನು ಬೀಸುತ್ತಾ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿದರು. ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.

ಬರೋಬ್ಬರಿ 7 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಚೀನಾಗೆ ಭೇಟಿ ನೀಡಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ ಹಿನ್ನೆಲೆಯಲ್ಲಿ ಟಿಯಾಂಜಿನ್ ತಲುಪಿದ್ದಾರೆ.

ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಚೀನಾದಲ್ಲಿರುವ ಭಾರತೀಯರು ತ್ರಿವರ್ಣ ಧ್ವಜವನ್ನು ಬೀಸುತ್ತಾ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು.

 

ಇವತ್ತಿನಿಂದ ಎರಡು ದಿನಗಳ ಕಾಲ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆ ನಡೆಯಲಿದೆ. ಚೀನಾ ತಲುಪುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಅಪ್​ಡೇಟ್ಸ್​ ನೀಡಿದ್ದಾರೆ. ‘ನಾನು ಟಿಯಾಂಜಿನ್ ತಲುಪಿದ್ದೇನೆ. SCO ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಆಳವಾದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

 

ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್ ನಡುವಿನ ಭೇಟಿಯ ಮೇಲೆ ವಿಶ್ವದ ಕಣ್ಣು ನೆಟ್ಟಿದೆ. ಏಳು ವರ್ಷಗಳ ನಂತರ ಇಬ್ಬರು ನಾಯಕರು ಇವತ್ತು ಮುಖಾಮುಖಿ ಆಗುತ್ತಿದ್ದಾರೆ. ಇಬ್ಬರ ನಡುವಿನ ಮಾತುಕತೆಗಳು ಭಾರತ-ಚೀನಾ ಸಂಬಂಧಗಳನ್ನು ಪರಿಶೀಲಿಸುತ್ತವೆ. ವ್ಯಾಪಾರ ಮತ್ತು ಗಡಿ ವಿವಾದಗಳ ಭವಿಷ್ಯದ ಸ್ಥಿತಿಯನ್ನು ಚರ್ಚಿಸುತ್ತವೆ ಎಂದು ನಂಬಲಾಗಿದೆ.

 

ಕಳೆದ ವರ್ಷ ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಚೀನಾ ಮುಖಾಮುಖಿ ಆಗಿದ್ದವು. ಈ ವೇಳೆ ಗಡಿ ಗಸ್ತು ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಭಾರತ-ಯುಎಸ್ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮೋದಿ ಅವರ ಭೇಟಿ ತುಂಬಾನೇ ಮಹತ್ವ ಪಡೆದುಕೊಂಡಿದೆ. ಇನ್ನು ರಷ್ಯಾ ಅಧ್ಯಕ್ಷ ಪುಟಿನ್ ಜೊತೆಯೂ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆ ಇದೆ.

SCO ಎಂದರೇನು?
SCO ಅನ್ನು 2001ರಲ್ಲಿ ಸ್ಥಾಪಿಸಲಾಯಿತು. ಭಾರತ, ಚೀನಾ, ರಷ್ಯಾ, ಪಾಕಿಸ್ತಾನ, ಇರಾನ್ ಮತ್ತು ಮಧ್ಯ ಏಷ್ಯಾದ ದೇಶಗಳು SCO ಸದಸ್ಯ ರಾಷ್ಟ್ರಗಳಾಗಿವೆ. ಭಾರತವು 2017ರಲ್ಲಿ SCO ಸದಸ್ಯ ದೇಶವಾಯಿತು. 2022-23 ರಲ್ಲಿ ಸಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯ ಅಧ್ಯಕ್ಷತೆಯನ್ನು ವಹಿಸಿತ್ತು.

The post ಚೀನಾದಲ್ಲಿ SCO ಶೃಂಗಸಭೆ. appeared first on Good News 24x7.

]]>
ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! https://www.goodnews24x7.com/inhumane-attack-on-soldier-staff-tied-to-a-pole-and-beaten-at-toll-plaza-four-arrested/ Mon, 18 Aug 2025 07:55:36 +0000 https://www.goodnews24x7.com/?p=6339 ಲಕ್ನೋ : ದೇಶದ ರಕ್ಷಕರಾದ ಯೋಧರು ಇಂದು ತಾವು ರಕ್ಷಿಸುತ್ತಿರುವ ಜನರಿಂದಲೇ ಅಪಮಾನ ಅನುಭವಿಸುವ ಸ್ಥಿತಿಗೆ ತಲುಪಿರುವುದನ್ನು ತೋರಿಸುವ ಹೃದಯವಿದ್ರಾವಕ ಘಟನೆ ಮೀರತ್‌ನಲ್ಲಿ ನಡೆದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಒಬ್ಬ ಯೋಧನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ…

The post ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! appeared first on Good News 24x7.

]]>

ಲಕ್ನೋ : ದೇಶದ ರಕ್ಷಕರಾದ ಯೋಧರು ಇಂದು ತಾವು ರಕ್ಷಿಸುತ್ತಿರುವ ಜನರಿಂದಲೇ ಅಪಮಾನ ಅನುಭವಿಸುವ ಸ್ಥಿತಿಗೆ ತಲುಪಿರುವುದನ್ನು ತೋರಿಸುವ ಹೃದಯವಿದ್ರಾವಕ ಘಟನೆ ಮೀರತ್‌ನಲ್ಲಿ ನಡೆದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಒಬ್ಬ ಯೋಧನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೆ ಒಳಗಾದ ಯೋಧನನ್ನು ಕಪಿಲ್ ಕವಾಡ್ ಎಂದು ಗುರುತಿಸಲಾಗಿದ್ದು, ಅವರು ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನ ಸದಸ್ಯರಾಗಿದ್ದಾರೆ. ರಜೆ ಮುಗಿಸಿ ಕರ್ತವ್ಯದ ಸ್ಥಳವಾದ ಶ್ರೀನಗರಕ್ಕೆ ತೆರಳುತ್ತಿದ್ದ ಕಪಿಲ್, ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಮೀರತ್‌ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ತಡೆಗೊಳ್ಳಲಾದರು.

ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಯೊಂದಿಗೆ ಮಾತನಾಡಲು ಮುಂದಾದ ಕಪಿಲ್, ವಾಗ್ವಾದಕ್ಕೆ ಒಳಗಾಗಿದರು. ಇದಾದ ನಂತರ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸಂಬಂಧಿಯನ್ನು ಥಳಿಸಿದರು. ಈ ನಡುವೆ, ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿದ ಮೇಲೆ ಮನಬಂದಂತೆ ದಾಳಿ ನಡೆಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಜನತೆಯಲ್ಲಿ ಆಕ್ರೋಶ ಮೂಡಿಸಿದೆ.

ಘಟನೆಯ ತನಿಖೆ ಆರಂಭಿಸಿದ ಪೊಲೀಸರು, ನಾಲ್ವರನ್ನು ಬಂಧಿಸಿರುವುದಾಗಿ ಎಸ್‌ಪಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿಯುತ್ತಿದೆ.

The post ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! appeared first on Good News 24x7.

]]>
ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? https://www.goodnews24x7.com/plane-crashes-at-ahmedabad-airport-former-gujarat-cm-vijay-rupani-was-also-on-board/ Thu, 12 Jun 2025 11:15:35 +0000 https://www.goodnews24x7.com/?p=4366 ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್…

The post ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? appeared first on Good News 24x7.

]]>

ಅಹಮದಾಬಾದ್ : ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾದ AI-171 ಪ್ರಯಾಣಿಕ ವಿಮಾನ ಅಪಘಾತಕ್ಕೀಡಾಗಿದೆ. 242 ಜನರು ಪ್ರಯಾಣಿಸುತ್ತಿದ್ದರು. ಈ ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎನ್ನಲಾಗಿದೆ. ಲಂಡನ್ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆಗುವಾಗ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು. ಪ್ರಯಾಣಿಕರ ಪಟ್ಟಿಯಲ್ಲಿ ವಿಜಯ್ ರೂಪಾನಿ ಹೆಸರಿದೆ. ಟಿಕೆಟ್ ಮಾಹಿತಿ ಕೂಡ ಈಗ ಲಭ್ಯವಾಗಿದೆ.

ವಿಮಾನ ಮಧ್ಯಾಹ್ನ 1.17 ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನ ನಿಲ್ದಾಣದ ಬಳಿಯ ಸರಕು ಕಚೇರಿಯಲ್ಲಿ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಟ್ಟಡವೂ ಸಂಪೂರ್ಣವಾಗಿ ಹಾನಿಗೊಳಗಾಗಿದೆ. ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ವಿಮಾನದಲ್ಲಿದ್ದ 242 ಜನರಲ್ಲಿ ಇಬ್ಬರು ಪೈಲಟ್ಗಳು ಮತ್ತು 2 ಮಕ್ಕಳು ಸೇರಿದಂತೆ 8 ಸಿಬ್ಬಂದಿ ಇದ್ದರು. ವಿಮಾನದ ಪೈಲಟ್ನ ಹೆಸರು ಸುಮಿತ್ ಸಭರ್ವಾಲ್ ಎಂದು ಹೇಳಲಾಗುತ್ತಿದೆ.

ವಿಮಾನ ಟೇಕ್ ಆಫ್ ಆದ ಕೇವಲ 1 ನಿಮಿಷದಲ್ಲಿ ಅಪಘಾತಕ್ಕೀಡಾಗಿದೆ. ಅದರ ವಿಡಿಯೋ ಕೂಡ ಹೊರಬಿದ್ದಿದೆ. ಆಕಾಶದಲ್ಲಿ 625 ಅಡಿ ಎತ್ತರ ತಲುಪಿದ ತಕ್ಷಣ ವಿಮಾನ ಹೇಗೆ ಪತನಗೊಂಡಿತು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ. ಅಹ್ಮದಾಬಾದ್ ಏರ್ಪೋರ್ಟ್ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಐದು ನಿಮಿಷದಲ್ಲಿ ಮೇಘನಿನಗರ್ದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಅವರಲ್ಲಿ 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ ಒಟ್ಟು 133 ಮಂದಿ ಸಾವನ್ನಪ್ಪಿದ್ದಾರೆ ಎಂದು ಧೃಡಪಡಿಸಲಾಗಿದೆ. ವಿಜಯ್ ರೂಪಾನಿ ಸೀಟ್ ಸಂಖ್ಯೆ 2-ಡಿಯಲ್ಲಿ ಕುಳಿತಿದ್ದರು. ಟಿಕೆಟ್ ದೃಢೀಕರಿಸಲಾಗಿದೆ. ಅವರ ಸೀಟ್ ನಂಬರ್ 11 ಜಿ. ಮೂಲಗಳ ಪ್ರಕಾರ, ವಿಜಯ್ ರೂಪಾನಿ ಅವರ ಪತ್ನಿ ಬ್ರಿಟನ್ನಲ್ಲಿದ್ದರು. ಅವರ ಪತ್ನಿ 6 ತಿಂಗಳು ಅಲ್ಲಿದ್ದರು. ಅವರನ್ನು ಮರಳಿ ಕರೆತರಲು ವಿಜಯ್ ರೂಪಾನಿ ಲಂಡನ್ಗೆ ಹೋಗುತ್ತಿದ್ದರು. ನಂತರ ಅಹಮದಾಬಾದ್ನಲ್ಲಿ ಟೇಕ್ ಆಫ್ ಆಗುವಾಗ ವಿಮಾನ ಅಪಘಾತಕ್ಕೀಡಾಯಿತು. ಈ ಅಪಘಾತ ಅಹಮದಾಬಾದ್ನ ಮೇಘನಿನಗರ ಪ್ರದೇಶದ ಬಳಿ ಸಂಭವಿಸಿದೆ. ಟೇಕ್ ಆಫ್ ಆಗುವ ಸಮಯದಲ್ಲಿ ವಿಮಾನ ಅಪಘಾತಕ್ಕೀಡಾಗಿದೆ.

1956ರಲ್ಲಿ ಇಂದಿನ ಮೈನ್ಮಾರ್ ದೇಶದ ರಂಗೂನ್ನಲ್ಲಿ ಜೈನ್ ಬನಿಯಾ ಸಮುದಾಯದಲ್ಲಿ ಜನಿಸಿದ ವಿಜಯ್ ರೂಪಾನಿ ಅವರ ಕುಟುಂಬ ಮುಂದೆ ಗುಜರಾತಿನ ರಾಜ್ಕೋಟ್ಗೆ ವಲಸೆ ಬಂತು. ಬಿಎ ಎಲ್ಎಲ್ಬಿ ಪದವೀಧರರು. ಅವರ ತಂದೆ ರಮಣಿಕ್ಲಾಲ್ ರೂಪಾನಿ ತಾಯಿ ಮಾಯಾಬೆನ್. ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸಕ್ರಿಯ ಸದಸ್ಯರಾಗಿ ಕೆಲಸ ಮಾಡಿದ ಅವರು, ಇಸವಿ ಸನ್ 1971ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಅಲ್ಲದೇ ಸ್ಟಾಕ್ ಬ್ರೋಕರ್ ಆಗಿಯೂ ಅವರು ಷೇರುಪೇಟೆಯಲ್ಲಿ ಕೆಲಸ ಮಾಡಿದ್ದರು.ವಿಜಯ್ ರೂಪಾನಿ ಪಕ್ಷ ಮತ್ತು ಸಂಘಟನೆಯ ತತ್ವ ಸಿದ್ಧಾಂತಗಳಿಗೆ ನಿಷ್ಠಾವಂತ ಕಾರ್ಯಕರ್ತ. 1976ರಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ನಡೆಸಿದ ಹೋರಾಟ ಅವರಿಗೆ 11 ತಿಂಗಳ ಜೈಲುವಾಸದ ರುಚಿಯನ್ನೂ ಉಣಬಡಿಸಿತು. 1978ರಿಂದ 1981ರವರೆಗೆ ಆರ್ಎಸ್ಎಸ್ನ ಪ್ರಚಾರಕ್ ಜವಾಬ್ದಾರಿಯನ್ನು ನಿರ್ವಹಿಸಿದ ವಿಜಯ್ ರೂಪಾನಿಗೆ 2006ರಲ್ಲಿ ಗುಜರಾತ್ ಪ್ರವಾಸೋದ್ಯಮ ಅಭಿವೃದ್ಧಿಯ ಜವಾಬ್ದಾರಿಯನ್ನೂ ಬಿಜೆಪಿ ನೀಡಿತು. 2006ರಲ್ಲಿ ರಾಜ್ಕೋಟ್ ಪಾಲಿಕೆ ಕಾರ್ಪೋರೇಟರ್, ಮೇಯರ್ ಆಗಿ ಆಯ್ಎಕಯಾದ ಅವರಿಗೆ ಬಿಜೆಪಿ ರಾಜ್ಯಸಭೆಯ ಸದಸ್ಯ ಸ್ಥಾನವನ್ನು ನೀಡಿತು.

The post ಅಹಮದಾಬಾದ್ ಏರ್ ಪೋರ್ಟ್ನಲ್ಲಿ ವಿಮಾನ ಪತನ! ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಕೂಡ ಇದ್ರ? appeared first on Good News 24x7.

]]>
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ. https://www.goodnews24x7.com/high-alert-at-kempegowda-airport-increased-security-by-staff/ Fri, 09 May 2025 10:44:05 +0000 https://www.goodnews24x7.com/?p=3751 ಬೆಂಗಳೂರು : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಭದ್ರತಾ ಪಡೆ ಸಿಐಎಸ್‌ಎಪ್ ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಶಸ್ತ್ರಸಜ್ಜಿತವಾಗಿ ಭದ್ರತಾ ಪಡೆಯಿದ ರೌಂಡ್ಸ್…

The post ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ. appeared first on Good News 24x7.

]]>

ಬೆಂಗಳೂರು : ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಭದ್ರತಾ ಪಡೆ ಸಿಐಎಸ್‌ಎಪ್ ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಶಸ್ತ್ರಸಜ್ಜಿತವಾಗಿ ಭದ್ರತಾ ಪಡೆಯಿದ ರೌಂಡ್ಸ್ ಹಾಕಲಾಗುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಏರ್ ಪೋರ್ಟ್ ನಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಏರ್ಪೋರ್ಟ್ಗೆ ಬರುವ ವಾಹನಗಳು, ಪ್ರಯಾಣಿಕರ ಮೇಲೆ ಹದ್ದಿನಕಣ್ಣಿಡಲಾಗಿದೆ.


ಪಾಕ್ ಗಡಿ ಭಾಗದ ಏರ್ಪೋರ್ಟ್ ಗೆ ತೆರಳುವ ವಿಮಾನಗಳನ್ನು ರದ್ದು ಮಾಡಲಾಗಿದೆ. ಈ ಮಧ್ಯೆ ಪ್ರಯಾಣಿಕರು ತಮ್ಮ ವಿಮಾನ ನಿರ್ಗಮನದ ಕನಿಷ್ಠ ಮೂರು ಗಂಟೆಗಳ ಮುನ್ನ ವಿಮಾನ ನಿಲ್ದಾಣಕ್ಕೆ ಆಗಮಿಸುವಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಮಂಡಳಿ ಪ್ರಯಾಣಿಕರಿಗೆ ಸೂಚನೆ ನೀಡಿದೆ.

 

The post ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್: ಸಿಬ್ಬಂದಿಯಿಂದ ಹೆಚ್ಚಿನ ಭದ್ರತೆ. appeared first on Good News 24x7.

]]>