animal Archives - Good News 24x7 https://www.goodnews24x7.com/tag/animal/ Kannada Wed, 01 Jul 2026 07:42:35 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg animal Archives - Good News 24x7 https://www.goodnews24x7.com/tag/animal/ 32 32 ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ https://www.goodnews24x7.com/tamil-nadu-government-moves-supreme-court/ Wed, 01 Jul 2026 07:39:35 +0000 https://www.goodnews24x7.com/?p=9717 ರಾಜ್ಯದಲ್ಲಿ ಗೋಹ*ತ್ಯೆಗೆ ಸಂಪೂರ್ಣ ನಿಷೇಧ ಹೇರಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಆದೇಶವು 1958ರ ಪ್ರಾಣಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯನ್ನು ಮೀರಿದೆ ಎಂದು ಸರ್ಕಾರ ವಾದಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹ*ತ್ಯೆ ನಡೆಯುತ್ತಿದೆ…

The post ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ appeared first on Good News 24x7.

]]>

ರಾಜ್ಯದಲ್ಲಿ ಗೋಹ*ತ್ಯೆಗೆ ಸಂಪೂರ್ಣ ನಿಷೇಧ ಹೇರಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಆದೇಶವು 1958ರ ಪ್ರಾಣಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯನ್ನು ಮೀರಿದೆ ಎಂದು ಸರ್ಕಾರ ವಾದಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹ*ತ್ಯೆ ನಡೆಯುತ್ತಿದೆ ಎಂದು ಆರೋಪಿಸಿ, ಅದನ್ನು ತಡೆಯುವಂತೆ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹ*ತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್​​ ಹೇಳಿತ್ತು.

 

ರಾಜ್ಯದಲ್ಲಿ ಗೋಹ*ತ್ಯೆಗೆ ಸಂಪೂರ್ಣ ನಿಷೇಧ ಹೇರಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಆದೇಶವು 1958ರ ಪ್ರಾಣಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಯನ್ನು ಮೀರಿದೆ ಎಂದು ಸರ್ಕಾರ ವಾದಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹ*ತ್ಯೆ ನಡೆಯುತ್ತಿದೆ ಎಂದು ಆರೋಪಿಸಿ, ಅದನ್ನು ತಡೆಯುವಂತೆ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹ*ತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್​​ ಹೇಳಿತ್ತು.
ಮದ್ರಾಸ್ ಹೈಕೋರ್ಟ್​​ನ ಗೋಹ*ತ್ಯೆ ನಿಷೇಧ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ

ಜುಲೈ 01 ನವದೆಹಲಿ : ರಾಜ್ಯದಲ್ಲಿ ಗೋಹ*ತ್ಯೆಗೆ ಸಂಪೂರ್ಣ ನಿಷೇಧ ಹೇರಿದ್ದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ವ್ಯಾಪ್ತಿಯನ್ನು ಮೀರಿ ನೀಡಲಾಗಿದೆ ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ವಾದಿಸಿದೆ. ಮೇ 27ರಂದು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣ್ ಅವರ ವಿಭಾಗೀಯ ಪೀಠವು, ಕಾಯ್ದೆಯಡಿ ಅನುಮತಿಸಲಾದ ಸಂದರ್ಭಗಳನ್ನು ಹೊರತುಪಡಿಸಿ, ಬಕ್ರೀದ್ ಸೇರಿದಂತೆ ಯಾವುದೇ ದಿನ ಹಸು ಅಥವಾ ಕರುವಿನ ಹ*ತ್ಯೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಸರ್ಕಾರದ ವಾದವೇನು?
ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ಸೆಕ್ಷನ್ 4ರ ಪ್ರಕಾರ, 10 ವರ್ಷ ಮೇಲ್ಪಟ್ಟ, ಕೆಲಸಕ್ಕೆ ಅಥವಾ ಸಂತಾನೋತ್ಪತ್ತಿಗೆ ಅಯೋಗ್ಯವೆಂದು ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣೀಕರಿಸಲ್ಪಟ್ಟ ಹಸುವನ್ನು ಮಾತ್ರ ವ*ಧೆ ಮಾಡಲು ಅವಕಾಶವಿದೆ. ಆದರೆ ಹೈಕೋರ್ಟ್ ಈ ಕಾನೂನು ಚೌಕಟ್ಟನ್ನು ಮೀರಿ ಸಂಪೂರ್ಣ ನಿಷೇಧ ಹೇರಿರುವುದು ಕಾನೂನು ವ್ಯಾಪ್ತಿಯನ್ನು ಮೀರಿದ ಕ್ರಮ ಎಂದು ಸರ್ಕಾರ ಹೇಳಿದೆ.

ಹೈಕೋರ್ಟ್​​ ಆದೇಶ ಏನು?
ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹ*ತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ, ಅದನ್ನು ತಡೆಯುವಂತೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ವೇಳೆ ಭಾರತ ಸಂವಿಧಾನದ ವಿಧಿ 48ನ್ನು ಉಲ್ಲೇಖಿಸಿದ್ದ ಹೈಕೋರ್ಟ್, ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು. ಬಕ್ರೀದ್ ಸಂದರ್ಭದಲ್ಲಿ ಗೋಹ*ತ್ಯೆ ಮಾಡುವುದು ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನೂ ಉಲ್ಲೇಖಿಸಿತ್ತು.

ಬಹಳಷ್ಟು ಮುಸ್ಲಿಮರು ಬಕ್ರೀದ್ ದಿನ ಗೋವನ್ನು ಬ*ಲಿ ನೀಡುವುದಿಲ್ಲ. ಗೋವನ್ನು ಬ*ಲಿ ನೀಡುವುದು ಇಸ್ಲಾಂ ಧರ್ಮದ ಕಡ್ಡಾಯ ಆಚರಣೆಯಲ್ಲ. ಬಕ್ರೀದ್ ಸಂದರ್ಭದಲ್ಲಿ ಯಾವುದೇ ಪ್ರಾಣಿಯನ್ನು ಬ*ಲಿ ನೀಡಬಹುದು; ಅದಕ್ಕೆ ಗೋಹತ್ಯೆಯೇ ಏಕೈಕ ಮಾರ್ಗವಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪಿನಲ್ಲಿ ಹೇಳಿರುವುದನ್ನು ಹೈಕೋರ್ಟ್ ತಿಳಿಸಿತ್ತು. ಆದರೀಗ ಹೈಕೋರ್ಟ್​​ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ

 

 

The post ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು ಸರ್ಕಾರ appeared first on Good News 24x7.

]]>
ಒಂಟೆ ಹಾಲು ಚಿನ್ನ, ಬೆಳ್ಳಿಗಿಂತ ಹೆಚ್ಚು ದುಬಾರಿ ಎಂದು ನಿಮಗೆ ಗೊತ್ತಾ? https://www.goodnews24x7.com/did-you-know-that-camel-milk-is-more-expensive-than-gold-and-silver/ Sun, 31 Aug 2025 14:16:58 +0000 https://www.goodnews24x7.com/?p=7177 ಒಂಟೆ ಹಾಲನ್ನು ಚಿನ್ನ ಮತ್ತು ಬೆಳ್ಳಿಗೆ ಏಕೆ ಹೋಲಿಸಲಾಗುತ್ತದೆ ಎಂದು ನಿಮಗೆ ಗೊತ್ತಿದೆಯೇ?ಮರುಭೂಮಿಯಲ್ಲಿ ಹಾಲು ಉತ್ಪಾದಿಸುವ ಪ್ರಾಣಿಗಳ ಸಾಕೋದು ಕಷ್ಟ. ಸಾಗಣೆಗೆ ಸಹಾಯ ಮಾಡುವುದರ ಜೊತೆಗೆ ಹಾಲು ನೀಡುವ ಏಕೈಕ ಪ್ರಾಣಿ ಅಂದರೆ ಅದು ಒಂಟೆ. ಇಂದು ಈ ಹಾಲಿನ ಮೌಲ್ಯ…

The post ಒಂಟೆ ಹಾಲು ಚಿನ್ನ, ಬೆಳ್ಳಿಗಿಂತ ಹೆಚ್ಚು ದುಬಾರಿ ಎಂದು ನಿಮಗೆ ಗೊತ್ತಾ? appeared first on Good News 24x7.

]]>

ಒಂಟೆ ಹಾಲನ್ನು ಚಿನ್ನ ಮತ್ತು ಬೆಳ್ಳಿಗೆ ಏಕೆ ಹೋಲಿಸಲಾಗುತ್ತದೆ ಎಂದು ನಿಮಗೆ ಗೊತ್ತಿದೆಯೇ?ಮರುಭೂಮಿಯಲ್ಲಿ ಹಾಲು ಉತ್ಪಾದಿಸುವ ಪ್ರಾಣಿಗಳ ಸಾಕೋದು ಕಷ್ಟ. ಸಾಗಣೆಗೆ ಸಹಾಯ ಮಾಡುವುದರ ಜೊತೆಗೆ ಹಾಲು ನೀಡುವ ಏಕೈಕ ಪ್ರಾಣಿ ಅಂದರೆ ಅದು ಒಂಟೆ. ಇಂದು ಈ ಹಾಲಿನ ಮೌಲ್ಯ ಹೆಚ್ಚಾಗಿದೆ. ಜನ ಇದನ್ನು ಸುಲಭವಾಗಿ ಖರೀದಿಸುತ್ತಾರೆ. ತಜ್ಞರು ಹೇಳುವಂತೆ.. ಒಂಟೆ ಹಾಲು ಸಾಮಾನ್ಯ ಹಾಲಿಗಿಂತ ಹೆಚ್ಚಿನ ಪೋಷಕಾಂಶಗಳು, ಔಷಧೀಯ ಗುಣಗಳು ಮತ್ತು ಶಕ್ತಿಯ ಸಾಮರ್ಥ್ಯವನ್ನು ಹೊಂದಿದೆ. ಒಂಟೆ ಹಾಲಿನಲ್ಲಿ ಹಸು ಅಥವಾ ಎಮ್ಮೆ ಹಾಲಿಗಿಂತ ಹೆಚ್ಚಿನ ಪ್ರೋಟೀನ್, ವಿಟಮಿನ್-ಸಿ ಮತ್ತು ಖನಿಜಗಳಿವೆ.

 

ಒಂಟೆ ಹಾಲಿನ ಬೆಲೆ ಎಷ್ಟು?
ಕೆಲವು ಪ್ರದೇಶಗಳಲ್ಲಿ ಒಂಟೆ ಹಾಲು ಅಪರೂಪ ಮತ್ತು ದುಬಾರಿ. ಭಾರತದಲ್ಲಿ ಒಂಟೆ ಹಾಲಿನ ಬೆಲೆ ಲೀಟರ್‌ಗೆ 50 ರಿಂದ 60 ರೂಪಾಯಿ. ಜಾಗತಿಕ ಮಾರುಕಟ್ಟೆಯಲ್ಲಿ ಲೀಟರ್‌ಗೆ 600 ರಿಂದ 1500 ರೂಪಾಯಿ. ಇನ್ನು ಒಂಟೆ ಹಾಲಿನ ಉತ್ಪಾದನೆಯು ಸೀಮಿತವಾಗಿದೆ. ವಿಶೇಷವಾಗಿ ಮರುಭೂಮಿ ಪ್ರದೇಶಗಳಲ್ಲಿ ಮತ್ತು ಅದರ ಕಡಿಮೆ ಲಭ್ಯತೆಯಿಂದಾಗಿ ಅದನ್ನು ಚಿನ್ನಕ್ಕೆ ಹೋಲಿಸಲಾಗುತ್ತದೆ.

ಒಂಟೆ ಹಾಲಿನಲ್ಲಿ ಪೋಷಕಾಂಶಗಳು ಅಧಿಕ, ಕೊಬ್ಬು ಕಡಿಮೆ ಮತ್ತು ಲ್ಯಾಕ್ಟೋಸ್ ಕಡಿಮೆ ಇರುತ್ತದೆ. ಇದು ಮಧುಮೇಹ ಮತ್ತು ಅಲರ್ಜಿ ಇರೋರಿಗೆ ಪ್ರಯೋಜನ. ಅದಕ್ಕಾಗಿಯೇ ಇದನ್ನು ಸೂಪರ್‌ಫುಡ್ ಅಂತಲೂ ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಇದರ ಬೇಡಿಕೆ ವೇಗವಾಗಿ ಹೆಚ್ಚಾಗಿದೆ.

The post ಒಂಟೆ ಹಾಲು ಚಿನ್ನ, ಬೆಳ್ಳಿಗಿಂತ ಹೆಚ್ಚು ದುಬಾರಿ ಎಂದು ನಿಮಗೆ ಗೊತ್ತಾ? appeared first on Good News 24x7.

]]>