announced Archives - Good News 24x7 https://www.goodnews24x7.com/tag/announced/ Kannada Tue, 23 Jun 2026 07:32:51 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg announced Archives - Good News 24x7 https://www.goodnews24x7.com/tag/announced/ 32 32 ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ https://www.goodnews24x7.com/dad-save-me-somehow-students-life-ends-with-last-call/ Tue, 23 Jun 2026 07:32:51 +0000 https://www.goodnews24x7.com/?p=9636 ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ…

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>

ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃ*ತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಅಗ್ನಿ ದುರಂತದಲ್ಲಿ ಮೃ*ತಪಟ್ಟ ವಿದ್ಯಾರ್ಥಿಗಳ ಕರುಣಾಜನಕ ಕಥೆಗಳು ಬೆಳಕಿಗೆ ಬರುತ್ತಿವೆ.

23 ವರ್ಷದ ವಿದ್ಯಾರ್ಥಿ ಸುಖಮಣಿ ಸಿಂಗ್, ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ವೇಳೆ ತನ್ನ ತಂದೆ ಪ್ರಭಜೋತ್ ಸಿಂಗ್ ಅವರಿಗೆ ಕರೆ ಮಾಡಿ, “ಅಪ್ಪಾ, ಹೇಗಾದರೂ ಮಾಡಿ ನನ್ನನ್ನು ಕಾಪಾಡಿ. ಸುತ್ತಲೂ ಬೆಂಕಿಯೇ ಕಾಣುತ್ತಿದೆ. ಹೊರಗೆ ಬರಲು ದಾರಿಯೇ ಇಲ್ಲ” ಎಂದು ಅಳುತ್ತಾ ಸಹಾಯ ಕೋರಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಂದೆ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಂತೆಯೇ ಸಂಪರ್ಕ ಕಡಿತಗೊಂಡಿದೆ

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>
ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. https://www.goodnews24x7.com/csk-suffers-major-setback-ahead-of-ipl-2026-ms-dhoni-out-for-first-two-weeks-due-to-leg-injury/ Sat, 28 Mar 2026 10:11:32 +0000 https://www.goodnews24x7.com/?p=9001 ಐಪಿಎಲ್ 2026ರ 19ನೇ ಆವೃತ್ತಿ ಆರಂಭವಾಗುವ ಮುನ್ನವೇ Chennai Super Kings ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ MS Dhoni ಕಾಲಿನ ಸ್ನಾಯು ಗಾಯ (calf strain)ದಿಂದ ಬಳಲುತ್ತಿದ್ದು, ಟೂರ್ನಿಯ ಮೊದಲ…

The post ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. appeared first on Good News 24x7.

]]>

ಐಪಿಎಲ್ 2026ರ 19ನೇ ಆವೃತ್ತಿ ಆರಂಭವಾಗುವ ಮುನ್ನವೇ Chennai Super Kings ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ MS Dhoni ಕಾಲಿನ ಸ್ನಾಯು ಗಾಯ (calf strain)ದಿಂದ ಬಳಲುತ್ತಿದ್ದು, ಟೂರ್ನಿಯ ಮೊದಲ ಎರಡು ವಾರಗಳ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಫ್ರಾಂಚೈಸಿ ಅಧಿಕೃತವಾಗಿ ತಿಳಿಸಿದೆ. ಧೋನಿ ಅನುಪಸ್ಥಿತಿ ತಂಡದ ಸಮತೋಲನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಆರಂಭಿಕ ಪಂದ್ಯಗಳಲ್ಲಿ ತಂಡಕ್ಕೆ ದೊಡ್ಡ ಸವಾಲಾಗಲಿದೆ.

ಇಂದು ಶನಿವಾರದಿಂದ ಟೂರ್ನಿ ಶುರುವಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ Royal Challengers Bengaluru ತಂಡವು Sunrisers Hyderabad ವಿರುದ್ಧ M. Chinnaswamy Stadiumನಲ್ಲಿ ಮುಖಾಮುಖಿಯಾಗಲಿದೆ. ಇನ್ನೊಂದೆಡೆ, ಸಿಎಸ್ ಕೆ ತನ್ನ ಮೊದಲ ಪಂದ್ಯವನ್ನು ಸೋಮವಾರ Rajasthan Royals ವಿರುದ್ಧ ಆಡಲಿದ್ದು, ಧೋನಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಪ್ರಸ್ತುತ ಧೋನಿ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯಕೀಯ ತಂಡ ಅವರ ಚೇತರಿಕೆಯನ್ನು ನಿಗಾ ವಹಿಸುತ್ತಿದೆ. ಅವರು ಸಂಪೂರ್ಣ ಫಿಟ್ ಆದ ಬಳಿಕ ಮಾತ್ರ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ M. A. Chidambaram Stadiumನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿರುವ ದೃಶ್ಯಗಳು ಅಭಿಮಾನಿಗಳಿಗೆ ಆತ್ಮವಿಶ್ವಾಸ ನೀಡಿದ್ದರೂ, ಗಾಯದ ಸಮಸ್ಯೆ ಮತ್ತೆ ತಲೆದೋರಿರುವುದು ಚಿಂತೆಗೆ ಕಾರಣವಾಗಿದೆ.

ಧೋನಿ ಹೊರಗುಳಿದಿರುವ ಹಿನ್ನೆಲೆಯಲ್ಲಿ, ಆರಂಭಿಕ ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು Sanju Samson ವಹಿಸುವ ಸಾಧ್ಯತೆ ಇದೆ. ನಾಯಕ Ruturaj Gaikwad ನೇತೃತ್ವದಲ್ಲಿ ತಂಡವು ತನ್ನ ಆರುನೇ ಐಪಿಎಲ್ ಪ್ರಶಸ್ತಿಗಾಗಿ ಪೈಪೋಟಿ ನಡೆಸಲು ಸಜ್ಜಾಗಿದೆ. ಇದೇ ವೇಳೆ, ಆಲ್‌ರೌಂಡರ್‌ಗಳಾದ Ravindra Jadeja ಮತ್ತು Sam Curran ತಂಡ ಬದಲಾವಣೆ ಸೇರಿದಂತೆ ಹಲವು ಬದಲಾವಣೆಗಳ ನಡುವೆ ಸೀಸ್‌ನ್ ಆರಂಭವಾಗುತ್ತಿದೆ.

ಇಂಗ್ಲೆಂಡ್‌ನ ಆಲ್‌ರೌಂಡರ್ Sam Curran ಕೂಡ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿರುವುದು ಸಿಎಸ್ ಕೆಗೆ ಮತ್ತೊಂದು ಹಿನ್ನಡೆಯಾಗಿದೆ. ಸೋಮವಾರ Barsapara Cricket Stadiumನಲ್ಲಿ ನಡೆಯುವ Rajasthan Royals ಮತ್ತು Chennai Super Kings ನಡುವಿನ ಪಂದ್ಯದಲ್ಲಿ, ಆಟಗಾರರ ಬದಲಾವಣೆಗಳು ಹಾಗೂ ಧೋನಿ ಗೈರುಹಾಜರಿ ಪಂದ್ಯಕ್ಕೆ ಹೆಚ್ಚುವರಿ ಕುತೂಹಲವನ್ನು ತಂದಿದೆ.

The post ಐಪಿಎಲ್ 2026 ಆರಂಭಕ್ಕೂ ಮುನ್ನ ಸಿಎಸ್ ಕೆಗೆ ಭಾರೀ ಹಿನ್ನಡೆ: ಕಾಲಿನ ಗಾಯದಿಂದ MS Dhoni ಮೊದಲ ಎರಡು ವಾರ ಔಟ್. appeared first on Good News 24x7.

]]>
‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? https://www.goodnews24x7.com/another-part-of-the-kantara-series-the-arrival-of-a-pan-india-hero/ Mon, 04 Aug 2025 08:00:26 +0000 https://www.goodnews24x7.com/?p=5302 ‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ಈ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ತಂಡದವರು ಘೋಷಣೆ ಮಾಡಿದರು. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ…

The post ‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? appeared first on Good News 24x7.

]]>

‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ಈ ಚಿತ್ರಕ್ಕೆ ಪ್ರೀಕ್ವೆಲ್ ತರೋದಾಗಿ ತಂಡದವರು ಘೋಷಣೆ ಮಾಡಿದರು. ಈಗಾಗಲೇ ಸಿನಿಮಾದ ಶೂಟ್ ಕೂಡ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ಸಿನಿಮಾ ರಿಲೀಸ್ ಆಗಲಿದೆ.
ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗಲೇ ಸಿನಿಮಾದ ಬಗ್ಗೆ ಭರ್ಜರಿ ಅಪ್​ಡೇಟ್ ಒಂದು ಸಿಕ್ಕಿದೆ. ‘ಕಾಂತಾರ’  ಸಿನಿಮಾಗೆ ಪ್ರೀಕ್ವೆಲ್ ಮಾತ್ರವಲ್ಲ, ಸೀಕ್ವೆಲ್ ಕೂಡ ಬರಲಿದೆಯಂತೆ.

 

 

 

 

 

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ 280ಕ್ಕೂ ಹೆಚ್ಚು ದಿನ ಶೂಟ್ ಮಾಡಲಾಗಿದೆ. ರಿಷಬ್ ಅವರು ಕಳೆದ ಮೂರು ವರ್ಷಗಳಿಂದ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಈ ಚಿತ್ರದಲ್ಲಿ ಮೋಹನ್​ಲಾಲ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆಯಾದರೂ ಆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈಗ ಚಿತ್ರದ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿದೆ.

‘ಕಾಂತಾರ: ಚಾಪ್ಟರ್ 1’ಗೆ ಸಿನಿಮಾ ಪೂರ್ಣಗೊಳ್ಳುವುದಿಲ್ಲವಂತೆ. ಈ ಸಿನಿಮಾಗೆ ಸೀಕ್ವೆಲ್ ತರುವ ಆಲೋಚನೆ ಕೂಡ ಇದೆ. ಹಾಗೆ ಏನಾದರೂ ನಡೆದರೆ, ‘ಕಾಂತಾರ: ಚಾಪ್ಟರ್ 2’ ಎನ್ನುವ ಶೀರ್ಷಿಕೆ ಇಡಬಹುದು. ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್ ಕೂಡ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

ರಿಷಬ್ ಶೆಟ್ಟಿ ಹಾಗೂ ಜೂನಿಯರ್ ಎನ್​ಟಿಆರ್ ಗೆಳೆತನದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಈ ಮೊದಲು ಜೂನಿಯರ್ ಎನ್​ಟಿಆರ್ ಅವರು ತಮ್ಮ ತಾಯಿ ಜೊತೆ ಕುಂದಾಪುರಕ್ಕೆ ತೆರಳಿದ್ದರು. ಈ ವೇಳೆ ‘ಕಾಂತಾರ’ ಸಿನಿಮಾದಲ್ಲಿ ನಟಿಸುವ ಆಫರ್ ವಿಚಾರ ಚರ್ಚೆಗೆ ಬಂದಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಚಿತ್ರದ ಮೂಲಕ ಹಿಂದಿಗೆ ಕಾಲಿಟ್ಟಿದ್ದಾರೆ. ಅವರು ಕನ್ನಡದಲ್ಲಿ ಹಾಡನ್ನು ಕೂಡ ಹಾಡಿದ್ದಾರೆ. ಒಂದೊಮ್ಮೆ ಅವರು ಕನ್ನಡಕ್ಕೆ ಬಂದರೆ ಅವರಿಗೆ ಭರ್ಜರಿ ಸ್ವಾಗತ ಸಿಗಲಿದೆ. ಸದ್ಯ ಅವರು ಪ್ರಶಾಂತ್ ನೀಲ್ ಜೊತೆಗಿನ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

The post ‘ಕಾಂತಾರ’ ಸರಣಿಗೆ ಮತ್ತೊಂದು ಭಾಗ: ಪ್ಯಾನ್-ಇಂಡಿಯಾ ಹೀರೋ ಆಗಮನ? appeared first on Good News 24x7.

]]>