arrested Archives - Good News 24x7 https://www.goodnews24x7.com/tag/arrested/ Kannada Thu, 16 Jul 2026 11:06:54 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg arrested Archives - Good News 24x7 https://www.goodnews24x7.com/tag/arrested/ 32 32 ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! https://www.goodnews24x7.com/attempt-to-loot-property-worth-rs-120-crore-of-chunchanagiri-math-11-people-arrested9849-2/ Thu, 16 Jul 2026 11:06:42 +0000 https://www.goodnews24x7.com/?p=9849   ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

The post ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! appeared first on Good News 24x7.

]]>

 

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಆರು ಸರ್ಕಾರಿ ಅಧಿಕಾರಿಗಳು ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ

ಬಂಧಿತ ಆರೋಪಿಗಳನ್ನು ಉಪ ತಹಶೀಲ್ದಾರ್‌ಗಳಾದ ದೀಪಕ್ ಮತ್ತು ಎಂ.ಪಿ. ರವಿ ಕಂದಾಯ ನಿರೀಕ್ಷಕರಾದ ಕಿರಣ್ ಕುಮಾರ್ ಮತ್ತು ಅರುಣ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳಾದ ಶಿವಪ್ರಸಾದ್ ಮತ್ತು ಸತೀಶ್ ಕುಮಾರ್ ಹಾಗೂ ಫ್ರಾನ್ಸಿಸ್, ಆರೋಗ್ಯಸ್ವಾಮಿ, ಶ್ರೀನಿವಾಸು, ನರೇಂದ್ರ ಕುಮಾರ್, ಜೋಸೆಫ್ ಎಂದು ಗುರುತಿಸಲಾಗಿದೆ.100 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಈ ಆರು ಎಕರೆ ಭೂಮಿ, ಕೆಂಗೇರಿಯ ಕಂಬಿಪುರ ಗ್ರಾಮದ ಸರ್ವೆ ಸಂಖ್ಯೆ 43 ರಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಒಡೆತನದ 45 ಎಕರೆ ಆಸ್ತಿಯ ಭಾಗವಾಗಿದೆ. ಇದನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದನ್ನು ಕಬಳಿಸಲು ಯತ್ನಿಸಿದ್ದಾರೆ ಎಂದು ಅವರು ಹೇಳಿದರು.

 

ಕೆಂಗೇರಿ ಹೋಬಳಿಯ ಕಂಬಿಪುರ ಗ್ರಾಮದ ಸರ್ವೆ ನಂಬರ್ 43ರಲ್ಲಿ 45 ಎಕರೆ ಜಮೀನು ಗುತ್ತಿಗೆ ಆಧಾರದಲ್ಲಿ 2004ರಲ್ಲಿ ಕಂದಾಯ ಇಲಾಖೆಯಿಂದ ಮಂಜೂರು ಮಾಡಿಸಿಕೊಳ್ಳಲಾಗಿತ್ತು. 45 ಎಕರೆಗಳ ಪೈಕಿ 35 ಎಕರೆ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ 2018ರಲ್ಲಿ ಸರ್ಕಾರದಿಂದ ಖರೀದಿಸಲಾಗಿತ್ತು. ಉಳಿದ 10 ಎಕರೆ ಜಾಗವನ್ನು ಗೋಶಾಲೆಗಾಗಿ ಮೀಸಲಿರಿಸಲಾಗಿತ್ತು. ಈ ವೇಳೆ ಫ್ರಾನ್ಸಿಸ್ ಎಂಬಾತ 6 ಎಕರೆ ಜಾಗವು ತನ್ನ ತಂದೆ ಆರೋಗ್ಯ ಸ್ವಾಮಿಗೆ ಸೇರಿದೆ ಎಂದು ತಕರಾರು ತೆಗೆದಿದ್ದ. ಜಮೀನಿಗೆ ವಾರಸುದಾರನಂತೆ ಬಿಂಬಿಸಿಕೊಂಡು ನಕಲಿ ಮರಣ ಪ್ರಮಾಣಪತ್ರ ಸೇರಿದಂತೆ ಇನ್ನಿತರೆ ದಾಖಲಾತಿಗಳನ್ನು ಸೃಷ್ಟಿಸಿಕೊಂಡು ನ್ಯಾಯಾಲಯಕ್ಕೆ ಸುಳ್ಳು ದಾವೆ ಹೂಡಿ ಆದೇಶ ಪಡೆದುಕೊಂಡಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಭೂಮಿ ಕಬಳಿಸಲು ಯತ್ನಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಶ್ರೀರಂಗಪಟ್ಟಣದಲ್ಲಿ ಬೃಹತ್ ಭೂ ಹಗರಣ: ಬರೋಬ್ಬರಿ 200 ಎಕರೆ ಸರ್ಕಾರಿ ಭೂಮಿ ಕಬಳಿಸಲು ನಕಲಿ ದಾಖಲೆ ಸೃಷ್ಟಿ; 9 ಜನರ ಬಂಧನ!
“ಫ್ರಾನ್ಸಿಸ್ ಆರೋಗ್ಯಸ್ವಾಮಿ ಅವರ ಮಗ ಮತ್ತು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಹೇಳಿಕೊಂಡು ನಕಲಿ ವಂಶವೃಕ್ಷ, ಮರಣ ಪ್ರಮಾಣಪತ್ರ, ಅನುದಾನ ಪ್ರಮಾಣಪತ್ರ ಮತ್ತು ಇತರ ಕಂದಾಯ ದಾಖಲೆಗಳು ಸೇರಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ” ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಫ್ರಾನ್ಸಿಸ್ ತನ್ನೊಂದಿಗೆ ತಂಡ ರಚಿಸಿಕೊಂಡು ಬೆಂಗಳೂರು ಸುತ್ತಮುತ್ತಲಿನ ಬೆಲೆಬಾಳುವ ಜಮೀನು ಕಬಳಿಸಲು ಯತ್ನಿಸಿರುವ ಶಂಕೆ ಇದೆ. ಈ ಬಗ್ಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದುನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.

 

The post ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! appeared first on Good News 24x7.

]]>
ಹೆರಿಗೆ ನೋವಿನ ಬಳಿಕ ಬಾಲಕಿ ಮೇಲಿನ ಅ***ರ ಬೆಳಕಿಗೆ ಬಂದಿದೆ https://www.goodnews24x7.com/rape-of-girl-comes-to-light-after-labor-pains/ Sat, 18 Oct 2025 12:16:00 +0000 https://www.goodnews24x7.com/?p=7767  ನೇಪಾಳ: 15ರ ಬಾಲಕಿಯ ಗರ್ಭಿಣಿ ಮಾಡಿದ 17ರ ಬಾಲಕ ಅರೆಸ್ಟ್ ತನ್ನ ನೆರೆಮನೆಯ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾಗದ ಬಾಲಕನೊಬ್ಬನನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ನೇಪಾಳ…

The post ಹೆರಿಗೆ ನೋವಿನ ಬಳಿಕ ಬಾಲಕಿ ಮೇಲಿನ ಅ***ರ ಬೆಳಕಿಗೆ ಬಂದಿದೆ appeared first on Good News 24x7.

]]>

 ನೇಪಾಳ: 15ರ ಬಾಲಕಿಯ ಗರ್ಭಿಣಿ ಮಾಡಿದ 17ರ ಬಾಲಕ ಅರೆಸ್ಟ್ ತನ್ನ ನೆರೆಮನೆಯ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾಗದ ಬಾಲಕನೊಬ್ಬನನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ನೇಪಾಳ ಮೂಲದ ಸಂತ್ರಸ್ತ ಬಾಲಕಿಗೆ ಗರ್ಭಪಾತವಾದ ಬಳಿಕ ಈ ಲೈಂಗಿಕ ಶೋಷಣೆ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಅಪ್ರಾಪ್ತ ಬಾಲಕನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಲವು ದಿನದ ಹಿಂದೆ ಉದ್ಯೋಗ ಅರಸಿ ನಗರಕ್ಕೆ ನೇಪಾಳದಿಂದ ಸಂತ್ರಸ್ತ ಕುಟುಂಬದ ಹಾಗೂ ರಾಜಸ್ಥಾನದಿಂದ ಆರೋಪಿತ ಬಾಲಕ ಪರಿವಾರ ಬಂದಿದ್ದರು. ಶಂಕರಪುರವ್ಯಾಪ್ತಿಯಲ್ಲಿ ಎರಡು ಕುಟುಂಬಗಳು ನೆರೆಹೊರೆಯಲ್ಲಿ ನೆಲೆಸಿದ್ದವು. ಮನೆ ಸಮೀಪದ ಶಾಲೆಯಲ್ಲಿ 9ನೇ ತರಗತಿಯಲ್ಲಿ ಸಂತ್ರಸ್ತೆ ಹಾಗೂ ಬಾಲಕ ಪಿಯುಸಿ ಓದುತ್ತಿದ್ದ. ಇನ್ನು ಖಾಸಗಿ ಕಂಪನಿ ಯಲ್ಲಿ ಬಾಲಕಿ ತಂದೆ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಆರೋಪಿ ಬಾಲಕನ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಎರಡು ಕುಟುಂಬಗಳ ನಡುವೆ ಸ್ನೇಹ ಬಾಂಧವ್ಯ ಇತ್ತು.

ಈ ಗೆಳೆತನದಲ್ಲೇ ಬಾಲಕಿ ಮನೆಗೆ ಬಂದು ಹೋಗುವುದನ್ನು ಬಾಲಕ ಮಾಡುತ್ತಿದ್ದ. ಆಗ ಆಕೆಯ ಮೇಲೆ ಲೈಂಗಿಕ ಶೋಷಣೆ ಮಾಡಿದ್ದಾನೆ. ಅತ್ಯಾಚಾರದಿಂದ ಗರ್ಭಧರಿಸಿದ್ದಳು. 2 ದಿನದಹಿಂದೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡು ಪರಿಸ್ಥಿತಿ ಗಂಭೀರವಾಗಿದೆ. ಕೂಡಲೇ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಪೋಷಕರು ಕರೆದೊಯ್ದಿದ್ದರು. ಅಷ್ಟರಲ್ಲಿ ಗರ್ಭಪಾತವಾಗಿತ್ತು ಎಂದು ತಿಳಿದು ಬಂದಿದೆ.

The post ಹೆರಿಗೆ ನೋವಿನ ಬಳಿಕ ಬಾಲಕಿ ಮೇಲಿನ ಅ***ರ ಬೆಳಕಿಗೆ ಬಂದಿದೆ appeared first on Good News 24x7.

]]>
ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ: ಬಂಟ್ವಾಳದ ಪಟ್ಟೆಕೋಡಿಯಲ್ಲಿ ಇಬ್ಬರ ಬಂಧನ. https://www.goodnews24x7.com/illegal-hoarding-of-ration-rice-two-arrested-in-pattekodi-bantwal/ Sun, 24 Aug 2025 08:43:51 +0000 https://www.goodnews24x7.com/?p=6657 ದಕ್ಷಿಣ ಕನ್ನಡ, ಬಂಟ್ವಾಳ: ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಖಾಸಗಿ ಕಟ್ಟಡದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ. ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ಈ…

The post ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ: ಬಂಟ್ವಾಳದ ಪಟ್ಟೆಕೋಡಿಯಲ್ಲಿ ಇಬ್ಬರ ಬಂಧನ. appeared first on Good News 24x7.

]]>

ದಕ್ಷಿಣ ಕನ್ನಡ, ಬಂಟ್ವಾಳ: ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಖಾಸಗಿ ಕಟ್ಟಡದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ.

ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಪಟ್ಟೆಕೋಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಸರ್ಕಾರದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಇಟ್ಟುಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಬಂಟ್ವಾಳ ತಹಸಿಲ್ದಾರ ಕಚೇರಿಯ ಆಹಾರ ನಿರೀಕ್ಷಕ ಎ. ಪ್ರಶಾಂತ್ ಶೆಟ್ಟಿ ಅವರು ಬಂಟ್ವಾಳ ನಗರ ಠಾಣಾ ಪೊಲೀಸರ ಸಹಕಾರದಿಂದ ದಾಳಿ ನಡೆಸಿದರು.

ದಾಳಿಯಲ್ಲಿ, ಕಲ್ಲಡ್ಕ ನಿವಾಸಿ ಹಾಗೂ ಗೋಡೌನ್ ನಿರ್ವಾಹಕ ಉಮ್ಮರಬ್ಬ ಹಾಗೂ ಕೆಲಸಗಾರ ರಫೀಕ್ ಎಂಬವರನ್ನು ಬಂಧಿಸಲಾಗಿದೆ. ದಾಳಿ ವೇಳೆ ಉಮ್ಮರಬ್ಬ ಅವರು ಪಟ್ಟೆಕೋಡಿಯ ಅಂಗಡಿಕಟ್ಟಡವೊಂದರಲ್ಲಿ 64 ಗೋಣಿಗಳಲ್ಲಿ 2,103.35 ಕೆ.ಜಿ ಬೆಳ್ತಿಗೆ ಅಕ್ಕಿ ಹಾಗೂ 467.10 ಕೆ.ಜಿ ಕುಚ್ಚಲಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡಿರುವುದು ಪತ್ತೆಯಾಗಿದೆ. ಈ ಅಕ್ಕಿಯ ಮೌಲ್ಯ ರೂ. 58,288 ಎಂದು ಅಂದಾಜಿಸಲಾಗಿದೆ.

ಇದಲ್ಲದೆ, ಅಕ್ಕಿಯ ಸಾಗಾಟಕ್ಕಾಗಿ ಆಟೋರಿಕ್ಷಾವೊಂದನ್ನು ಸಿದ್ಧಪಡಿಸಿರುವುದೂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸ್ಥಳದಲ್ಲಿ ದೊರೆತ ಅಕ್ಕಿಯ ಗೋಣಿಗಳು, ಆಟೋರಿಕ್ಷಾ, ತೂಕದ ಯಂತ್ರ, ಖಾಲಿ ಗೋಣಿಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 96/2025ರಂತೆ, 1955ರ ಅಗತ್ಯ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 7 ಹಾಗೂ 2016ರ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿಯಂತ್ರಣ ಆದೇಶ)ನ ಸೆಕ್ಷನ್ 18ರಡಿ ಪ್ರಕರಣ ದಾಖಲಿಸಲಾಗಿದೆ.

The post ಪಡಿತರ ಅಕ್ಕಿ ಅಕ್ರಮ ಸಂಗ್ರಹಣೆ: ಬಂಟ್ವಾಳದ ಪಟ್ಟೆಕೋಡಿಯಲ್ಲಿ ಇಬ್ಬರ ಬಂಧನ. appeared first on Good News 24x7.

]]>
ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! https://www.goodnews24x7.com/inhumane-attack-on-soldier-staff-tied-to-a-pole-and-beaten-at-toll-plaza-four-arrested/ Mon, 18 Aug 2025 07:55:36 +0000 https://www.goodnews24x7.com/?p=6339 ಲಕ್ನೋ : ದೇಶದ ರಕ್ಷಕರಾದ ಯೋಧರು ಇಂದು ತಾವು ರಕ್ಷಿಸುತ್ತಿರುವ ಜನರಿಂದಲೇ ಅಪಮಾನ ಅನುಭವಿಸುವ ಸ್ಥಿತಿಗೆ ತಲುಪಿರುವುದನ್ನು ತೋರಿಸುವ ಹೃದಯವಿದ್ರಾವಕ ಘಟನೆ ಮೀರತ್‌ನಲ್ಲಿ ನಡೆದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಒಬ್ಬ ಯೋಧನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ…

The post ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! appeared first on Good News 24x7.

]]>

ಲಕ್ನೋ : ದೇಶದ ರಕ್ಷಕರಾದ ಯೋಧರು ಇಂದು ತಾವು ರಕ್ಷಿಸುತ್ತಿರುವ ಜನರಿಂದಲೇ ಅಪಮಾನ ಅನುಭವಿಸುವ ಸ್ಥಿತಿಗೆ ತಲುಪಿರುವುದನ್ನು ತೋರಿಸುವ ಹೃದಯವಿದ್ರಾವಕ ಘಟನೆ ಮೀರತ್‌ನಲ್ಲಿ ನಡೆದಿದೆ. ಟೋಲ್ ಪ್ಲಾಜಾದ ಸಿಬ್ಬಂದಿ ಒಬ್ಬ ಯೋಧನನ್ನು ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೆ ಒಳಗಾದ ಯೋಧನನ್ನು ಕಪಿಲ್ ಕವಾಡ್ ಎಂದು ಗುರುತಿಸಲಾಗಿದ್ದು, ಅವರು ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನ ಸದಸ್ಯರಾಗಿದ್ದಾರೆ. ರಜೆ ಮುಗಿಸಿ ಕರ್ತವ್ಯದ ಸ್ಥಳವಾದ ಶ್ರೀನಗರಕ್ಕೆ ತೆರಳುತ್ತಿದ್ದ ಕಪಿಲ್, ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಮೀರತ್‌ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ತಡೆಗೊಳ್ಳಲಾದರು.

ವಿಮಾನಕ್ಕೆ ತಡವಾಗುತ್ತಿದೆ ಎಂಬ ಆತಂಕದಿಂದ ಕಾರಿನಿಂದ ಇಳಿದು ಟೋಲ್ ಸಿಬ್ಬಂದಿಯೊಂದಿಗೆ ಮಾತನಾಡಲು ಮುಂದಾದ ಕಪಿಲ್, ವಾಗ್ವಾದಕ್ಕೆ ಒಳಗಾಗಿದರು. ಇದಾದ ನಂತರ ಐವರು ಸಿಬ್ಬಂದಿ ಕಪಿಲ್ ಮತ್ತು ಅವರ ಸಂಬಂಧಿಯನ್ನು ಥಳಿಸಿದರು. ಈ ನಡುವೆ, ಕಪಿಲ್ ಅವರನ್ನು ಕಂಬಕ್ಕೆ ಕಟ್ಟಿದ ಮೇಲೆ ಮನಬಂದಂತೆ ದಾಳಿ ನಡೆಸಿದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಜನತೆಯಲ್ಲಿ ಆಕ್ರೋಶ ಮೂಡಿಸಿದೆ.

ಘಟನೆಯ ತನಿಖೆ ಆರಂಭಿಸಿದ ಪೊಲೀಸರು, ನಾಲ್ವರನ್ನು ಬಂಧಿಸಿರುವುದಾಗಿ ಎಸ್‌ಪಿ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಉಳಿದ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆ ಮುಂದುವರಿಯುತ್ತಿದೆ.

The post ಯೋಧನಿಗೆ ಅಮಾನವೀಯ ಹಲ್ಲೆ: ಟೋಲ್ ಪ್ಲಾಜಾದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದ ಸಿಬ್ಬಂದಿ – ನಾಲ್ವರು ಅರೆಸ್ಟ್ ! appeared first on Good News 24x7.

]]>
ನಟಿ ರನ್ಯಾ ರಾವ್​ಗೆ ಒಂದು ವರ್ಷ ಜೈಲೇ ಗತಿ ಜಾಮೀನಿನ​ ಮಾತೇ ಇಲ್ಲ! https://www.goodnews24x7.com/%e0%b2%a8%e0%b2%9f%e0%b2%bf-%e0%b2%b0%e0%b2%a8%e0%b3%8d%e0%b2%af%e0%b2%be-%e0%b2%b0%e0%b2%be%e0%b2%b5%e0%b3%8d%e0%b2%97%e0%b3%86-%e0%b2%92%e0%b2%82%e0%b2%a6%e0%b3%81-%e0%b2%b5%e0%b2%b0/ Thu, 17 Jul 2025 08:53:39 +0000 https://www.goodnews24x7.com/?p=5142 ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ ಎನ್ನಲಾಗಿದೆ. ಕಠಿಣ ಕಾಯ್ದೆಯಾದ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಿಂದಾಗಿ ಅವರು ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾಗಿದೆ. ಅವರು ವಿದೇಶದಿಂದ ಚಿನ್ನವನ್ನು ಸಾಗಾಟ ಮಾಡುತ್ತಿದ್ದರು ಮತ್ತು ಪೊಲೀಸ್…

The post ನಟಿ ರನ್ಯಾ ರಾವ್​ಗೆ ಒಂದು ವರ್ಷ ಜೈಲೇ ಗತಿ ಜಾಮೀನಿನ​ ಮಾತೇ ಇಲ್ಲ! appeared first on Good News 24x7.

]]>

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್ ಅವರಿಗೆ ಒಂದು ವರ್ಷ ಜಾಮೀನು ಸಿಗುವುದಿಲ್ಲ ಎನ್ನಲಾಗಿದೆ. ಕಠಿಣ ಕಾಯ್ದೆಯಾದ ಅಡಿಯಲ್ಲಿ ದಾಖಲಾಗಿರುವ ಪ್ರಕರಣದಿಂದಾಗಿ ಅವರು ಒಂದು ವರ್ಷ ಜೈಲಿನಲ್ಲಿಯೇ ಇರಬೇಕಾಗಿದೆ. ಅವರು ವಿದೇಶದಿಂದ ಚಿನ್ನವನ್ನು ಸಾಗಾಟ ಮಾಡುತ್ತಿದ್ದರು ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿವೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಮಾರ್ಚ್ 3ರಂದು ನಟಿ ರನ್ಯಾ ರಾವ್ ಅವರ ಬಂಧನ ಆಯಿತು. ಕಳೆದ ನಾಲ್ಕು ತಿಂಗಳಿಂದ ಅವರು ಜೈಲಿನಲ್ಲೇ ಇದ್ದಾರೆ. ಒಟ್ಟೂ ಒಂದು ವರ್ಷ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ. ಹೇಗಾದರೂ ಮಾಡಿ ಜಾಮೀನು ಪಡೆದು ಹೊರಬರಬೇಕು ಎಂದುಕೊಂಡಿದ್ದ ಅವರಿಗೆ ಈ ವಿಚಾರ ತಿಳಿದು ಮತ್ತಷ್ಟು ಚಿಂತೆ ಉಂಟಾಗಿದೆ. ಹಾಗಾದರೆ ಅವರಿಗೆ ಜಾಮೀನು ಸಿಗದೇ ಇರಲು ಕಾರಣ ಎಂಬುದರ ವಿವರ ಇಲ್ಲಿದೆ.

ರನ್ಯಾ ರಾವ್ ಅವರು ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದರು. ಈ ರೀತಿಯಲ್ಲಿ ಅವರು ಈಗಾಗಲೇ ಸಾಕಷ್ಟು ವಂಚನೆ ಮಾಡಿದ್ದಾರೆ. ಇದಕ್ಕೆ ರನ್ಯಾ ಪೊಲೀಸ್ ವ್ಯವಸ್ಥೆಯನ್ನು ಕೂಡ ಬಳಕೆ ಮಾಡಿಕೊಂಡ ಆರೋಪ ಇದೆ. ಅವರ ಬಂಧನದ ಬಳಿಕ ಈ ಜಾಲದ ಉದ್ದ-ಅಗಲ ಗೊತ್ತಾಗಿದೆ. ಅವರು ಬಂಧನಕ್ಕೆ ಒಳಗಾದಾಗಿನಿಂದಲೂ ಜಾಮೀನು ಪಡೆಯುವ ಪ್ರಯತ್ನದಲ್ಲಿ ಇದ್ದರು. ಆದರೆ, ಒಂದು ವರ್ಷಗಳ ಕಾಲ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಇದೆ.

ರನ್ಯಾ ರಾವ್ ಅವರನ್ನು ಬಂಧಿಸಿದ್ದು ಡಿಆರ್​ಐ ಅಧಿಕಾರಿಗಳು. ರನ್ಯಾ ಹಾಗೂ ಅವರ ಸಹಚರರ ವಿರುದ್ಧ ಕಠಿಣವಾದ ‘ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ನಿಯಂತ್ರಣ ಕಾಯ್ದೆ’ ಕಾಫೆಪೊಸಾ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದೊಂದು ಕಠಿಣವಾದ ಕಾಯ್ದೆ ಆಗಿದೆ. ಈ ಕಾಯ್ದೆಯ ಅಡಿ ದೂರು ದಾಖಲಾದರೆ ಜಾಮೀನು ನೀಡಲಾಗುವುದಿಲ್ಲ. ಒಂದೊಮ್ಮೆ ಆರೋಪಿಗಳಿಗೆ ಬೇರೆ ಪ್ರಕರಣಗಳಲ್ಲಿ ಜಾಮೀನು ದೊರೆತರೂ ಸಹ ಅವರ ಬಿಡುಗಡೆ ಆಗುವುದಿಲ್ಲ.

The post ನಟಿ ರನ್ಯಾ ರಾವ್​ಗೆ ಒಂದು ವರ್ಷ ಜೈಲೇ ಗತಿ ಜಾಮೀನಿನ​ ಮಾತೇ ಇಲ್ಲ! appeared first on Good News 24x7.

]]>
ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ https://www.goodnews24x7.com/director-sanoj-mishra-who-offered-a-movie-to-monalisa-arrested/ Mon, 31 Mar 2025 11:17:30 +0000 https://www.goodnews24x7.com/?p=2943 ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಕಿ ಮೊನಾಲಿಸಾಳಿಗೆ ಬಾಲಿವುಡ್ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಡಿ ದೆಹಲಿ ಹೈಕೋರ್ಟ್…

The post ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ appeared first on Good News 24x7.

]]>

ಮಹಾಕುಂಭ ಮೇಳದಲ್ಲಿ ವೈರಲ್ ಆದ ಬೆಡಕಿ ಮೊನಾಲಿಸಾಳಿಗೆ ಬಾಲಿವುಡ್ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಡಿ ದೆಹಲಿ ಹೈಕೋರ್ಟ್ ಮೆಟ್ಟೇಲೇರಿದ್ದ ಸನೋಜ್ ಮಿಶ್ರಾಗೆ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಇದರ ಬೆನ್ನಲ್ಲೇ ಪೊಲೀಸರು ಸನೋಜ್ ಮಿಶ್ರಾ ಅರೆಸ್ಟ್ ಮಾಡಿದ್ದಾರೆ.

ನಟಿಯಾಗಲು ಅವಕಾಶ ಕೇಳಿ ಬಂದು ಮೋಸ ಹೋಗಿದ್ದೇನೆ ಎಂದು ಯುವತಿಯೊಬ್ಬಳು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಸನೋಜ್ ಮಿಶ್ರಾರನ್ನು ಬಂಧಿಸಿದ್ದಾರೆ. ಈ ಮೂಲಕ ಮೊನಾಲಿಸಾ ಸಿನಿಮಾ ಕರಿಯರ್ ಕೂಡ ಅರ್ಧಕ್ಕೆ ಮೊಟಕುಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಇಷ್ಟೇ ಅಲ್ಲ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ದ ಕೇಳಿಬಂದ ಆರೋಪ ಹಲವರನ್ನು ದಿಗ್ಬ್ರಮೆಗೊಳಿಸಿದೆ. ಮುಗ್ದ ಹುಡುಗಿ ಮೊನಾಲಿಸಾಗೆ ಬಣ್ಣದ ಬದುಕಿನ ಆಸೆ ತೋರಿಸಿ ಕರಿಯರ್ ಹಾಳುವ ಮಾಡುವ ಸಾಧ್ಯತೆ ಇದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

The post ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ appeared first on Good News 24x7.

]]>
ಕನ್ನಡ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ. https://www.goodnews24x7.com/%e0%b2%95%e0%b2%a8%e0%b3%8d%e0%b2%a8%e0%b2%a1-%e0%b2%ac%e0%b2%bf%e0%b2%97%e0%b3%8d-%e0%b2%ac%e0%b2%be%e0%b2%b8%e0%b3%8d-%e0%b2%b8%e0%b3%80%e0%b2%b8%e0%b2%a8%e0%b3%8d-11%e0%b2%b0-%e0%b2%ae%e0%b2%be/ Sat, 25 Jan 2025 05:37:21 +0000 https://www.goodnews24x7.com/?p=1922 ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಮತ್ತು ಅವರ ಗನ್ ಮ್ಯಾನ್ನನ್ನು ಕೊಡಿಗೇಹಳ್ಳಿ ಪೊಲೀಸರಿಂದ ಬಂಧಿಸಿದ್ದಾರೆ. ಶುಕ್ರವಾರ ನಡೆದ ಗಲಾಟೆಯಲ್ಲಿ ಅವರ ಗನ್ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ…

The post ಕನ್ನಡ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ. appeared first on Good News 24x7.

]]>

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ಮಾಜಿ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಮತ್ತು ಅವರ ಗನ್ ಮ್ಯಾನ್ನನ್ನು ಕೊಡಿಗೇಹಳ್ಳಿ ಪೊಲೀಸರಿಂದ ಬಂಧಿಸಿದ್ದಾರೆ. ಶುಕ್ರವಾರ ನಡೆದ ಗಲಾಟೆಯಲ್ಲಿ ಅವರ ಗನ್ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಸಂಬಂಧ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್ ಜಗದೀಶ್ರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆದು, ಕರ್ನಾಟಕದಲ್ಲಿ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ದೂರುದಾರನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಕಿರಿಕ್ ಆಗಿತ್ತು. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಇದೇ ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೋರಿಸಿದ್ದನ್ನು ಜಗದೀಶ್ ಪ್ರಶ್ನೆ ಮಾಡಿದ್ದರು. ಆಗ ಜಗದೀಶ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಈ ಘಟನೆ ಸಂಬಂಧ ಪ್ರತಿಕ್ರಿಯಿಸುವಾಗ ಅವರು ಆವಾಜ್ ಹಾಕಿದ್ದರು. ದರ್ಶನ್ ಅಭಿಮಾನಿಗಳನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದರು. ‘ಈ ಕೆಲಸ ಮಾಡಿದ್ದು ದರ್ಶನ್ ಅಭಿಮಾನಿಗಳಂತೆ. ನನ್ನ ಬಳಿ ಬರುವಾಗ ವಿಮೆ ಮಾಡಿಸಿಕೊಂಡು ಬನ್ನಿ’ ಎಂದಿದ್ದರು.

ಈ ಬೆನ್ನಲ್ಲೇ ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಆಗಿದೆ. ಕೆಲವರು ಕೋಲು ದೊಣ್ಣೆ ತೆಗೆದುಕೊಂಡು ಬಂದು ಜಗದೀಶ್ ಅವರ ಕಾರನ್ನು ಪೀಸ್ ಪೀಸ್ ಮಾಡಿದ್ದಾರೆ. ಜಗದೀಶ್ ಅವರ ಮೇಲೆ ಹಲ್ಲೆ ಮಾಡಲಾಗಿತ್ತು. ಈ ವೇಳೆ ಜಗದೀಶ್ ಅವರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

The post ಕನ್ನಡ ಬಿಗ್ ಬಾಸ್ ಸೀಸನ್ 11ರ ಮಾಜಿ ಸ್ಪರ್ಧಿ ಲಾಯರ್ ಜಗದೀಶ್ ಬಂಧನ. appeared first on Good News 24x7.

]]>
ವ್ಯಕ್ತಿಯನ್ನು ಹೊಡೆದು ಕೊಂ* ಗೆಳತಿಯ ಪ್ರಿಯಕರ: ತ್ರಿಕೋನ ಪ್ರೇಮದಲ್ಲಿ ಐವರ ಬಂಧನ.. https://www.goodnews24x7.com/%e0%b2%b5%e0%b3%8d%e0%b2%af%e0%b2%95%e0%b3%8d%e0%b2%a4%e0%b2%bf%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b9%e0%b3%8a%e0%b2%a1%e0%b3%86%e0%b2%a6%e0%b3%81-%e0%b2%95%e0%b3%8a%e0%b2%82/ Tue, 31 Dec 2024 12:13:34 +0000 https://www.goodnews24x7.com/?p=1426 ಛತ್ತೀಸ್ಗಢ :- ವ್ಯಕ್ತಿಯೊಬ್ಬನನ್ನು ಗೆಳತಿಯ ಪ್ರಿಯಕರ ತನ್ನ ಸ್ನೇಹಿತರೊಟ್ಟಿಗೆ ಸೇರಿ ಕೊಲೆ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಯುವತಿಯ ಪ್ರಿಯಕರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಕೆಲವರು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದ್ದರಿಂದ ಚೇತನ್ ಎಂಬ ವ್ಯಕ್ತಿಗೆ ತುಂಬಾ…

The post ವ್ಯಕ್ತಿಯನ್ನು ಹೊಡೆದು ಕೊಂ* ಗೆಳತಿಯ ಪ್ರಿಯಕರ: ತ್ರಿಕೋನ ಪ್ರೇಮದಲ್ಲಿ ಐವರ ಬಂಧನ.. appeared first on Good News 24x7.

]]>

ಛತ್ತೀಸ್ಗಢ :- ವ್ಯಕ್ತಿಯೊಬ್ಬನನ್ನು ಗೆಳತಿಯ ಪ್ರಿಯಕರ ತನ್ನ ಸ್ನೇಹಿತರೊಟ್ಟಿಗೆ ಸೇರಿ ಕೊಲೆ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಯುವತಿಯ ಪ್ರಿಯಕರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಕೆಲವರು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದ್ದರಿಂದ ಚೇತನ್ ಎಂಬ ವ್ಯಕ್ತಿಗೆ ತುಂಬಾ ಗಾಯಗಳಾಗಿತ್ತು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ತ್ರಿಕೋನ ಪ್ರೇಮ ಪ್ರಕರಣವೊಂದರಲ್ಲಿ ಕೊಲೆಯೇ ನಡೆದು ಹೋಗಿದೆ. ವ್ಯಕ್ತಿಯೊಬ್ಬನನ್ನು ಗೆಳತಿಯ ಪ್ರಿಯಕರ ತನ್ನ ಸ್ನೇಹಿತರೊಟ್ಟಿಗೆ ಸೇರಿ ಕೊಲೆ ಮಾಡಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಯುವತಿಯ ಪ್ರಿಯಕರ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿ 9.30ರ ಸುಮಾರಿಗೆ ಕೆಲವರು ದೊಣ್ಣೆಗಳಿಂದ ಅಮಾನುಷವಾಗಿ ಥಳಿಸಿದ್ದರಿಂದ ಚೇತನ್ ಎಂಬ ವ್ಯಕ್ತಿಗೆ ತುಂಬಾ ಗಾಯಗಳಾಗಿತ್ತು, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ, ಅದರ ಪ್ರಕಾರ ಚೇತನ್ ಯುವತಿಯೊಂದಿಗೆ ಸಂಬಂಧ ಹೊಂದಿದ್ದ. ಇವರಿಬ್ಬರ ತಾಯಂದಿರು ಪೊಲೀಸ್ ಇಲಾಖೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ, ಹುಡುಗಿಯ ತಾಯಿಯನ್ನು ಸುರ್ಗುಜಾ ಜಿಲ್ಲೆಯ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು, ನಂತರ ಹುಡುಗಿಯೂ ಆ ಜಾಗ ಬಿಡಬೇಕಾಯಿತು.
ಬಳಿಕ ಆಕೆ ಸುರ್ಗುಜಾಗೆ ಹೋದಾಗ ಅಲ್ಲಿ ಲೋಕೇಶ್ ಸಾಹು ಎಂಬುವವನನ್ನು ಭೇಟಿಯಾದಳು, ಕ್ರಮೇಣ ಅದು ಪ್ರೀತಿಗೆ ತಿರುಗಿತ್ತು. ಇದೇ ವೇಳೆ ಚೇತನ್ ಆಕೆಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದ, ಆತನ ಕರೆಗೆ ಪ್ರತಿಕ್ರಿಯೆ ಕೂಡ ನೀಡುತ್ತಿರಲಿಲ್ಲ. ಡಿಸೆಂಬರ್ 24 ರಂದು ಯುವತಿ ತನ್ನ ತಾಯಿಯೊಂದಿಗೆ ದುರ್ಗಕ್ಕೆ ಬಂದಿದ್ದಳು, ಅದು ಚೇತನ್ಗೆ ತಿಳಿದಾಗ, ತನ್ನನ್ನು ಭೇಟಿಯಾಗುವಂತೆ ಕೇಳಿದ್ದ, ಆದರೆ ಆಕೆ ನಿರಾಕರಿಸಿದ್ದಳು.
ಯುವತಿ ಲೋಕೇಶ್ಗೆ ಚೇತನ್ ಬಗ್ಗೆ ತಿಳಿಸಿದ್ದಾಳೆ, ಬಳಿಕ ಆತನಿಗೆ ಕರೆ ಮಾಡಿ ಭೇಟಿಯಾಗುವಂತೆ ಕೇಳಿದ್ದಳು. ಆತ ಆಕೆಯನ್ನು ಭೇಟಿಯಾಗಲು ಬಂದಾಗ ಲೋಕೇಶ್ ತನ್ನ ಸ್ನೇಹಿತರೊಂದಿಗೆ ಅಲ್ಲಿಯೇ ಇದ್ದ. ಇದಾದ ಕೆಲವೇ ಹೊತ್ತಿನಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು.
ಲೋಕೇಶ್ ವ್ಯಕ್ತಿಯ ಮೇಲೆ ದೊಣ್ಣೆಯಿಂದ ಅಮಾನುಷವಾಗಿ ಥಳಿಸಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನೂ ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

The post ವ್ಯಕ್ತಿಯನ್ನು ಹೊಡೆದು ಕೊಂ* ಗೆಳತಿಯ ಪ್ರಿಯಕರ: ತ್ರಿಕೋನ ಪ್ರೇಮದಲ್ಲಿ ಐವರ ಬಂಧನ.. appeared first on Good News 24x7.

]]>
ಟೆಕ್ಕಿ ಆತ್ಮಹತ್ಯೆ: ಪತ್ನಿ, ಅತ್ತೆ ಮತ್ತು ಭಾಮೈದ ಅರೆಸ್ಟ್…..!!!! https://www.goodnews24x7.com/%e0%b2%9f%e0%b3%86%e0%b2%95%e0%b3%8d%e0%b2%95%e0%b2%bf-%e0%b2%86%e0%b2%a4%e0%b3%8d%e0%b2%ae%e0%b2%b9%e0%b2%a4%e0%b3%8d%e0%b2%af%e0%b3%86-%e0%b2%aa%e0%b2%a4%e0%b3%8d%e0%b2%a8%e0%b2%bf-%e0%b2%85/ Sun, 15 Dec 2024 05:00:17 +0000 https://www.goodnews24x7.com/?p=1145 ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಅತುಲ್ ಪತ್ನಿ ನಿಖಿತಾ, ಅತ್ತೆ ನಿಶಾ ಮತ್ತು ಭಾಮೈದ ಅನುರಾಗ್ನನ್ನು ಬಂಧಿಸಿದ್ದಾರೆ. ಅತುಲ್ 15 ದಿನಗಳಿಂದ ಆತ್ಮಹತ್ಯೆಗೆ ಯೋಜಿಸಿದ್ದರು ಮತ್ತು ಡೆತ್ ನೋಟ್ ಬರೆದಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಪತ್ನಿ…

The post ಟೆಕ್ಕಿ ಆತ್ಮಹತ್ಯೆ: ಪತ್ನಿ, ಅತ್ತೆ ಮತ್ತು ಭಾಮೈದ ಅರೆಸ್ಟ್…..!!!! appeared first on Good News 24x7.

]]>

ಬೆಂಗಳೂರಿನ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಅತುಲ್ ಪತ್ನಿ ನಿಖಿತಾ, ಅತ್ತೆ ನಿಶಾ ಮತ್ತು ಭಾಮೈದ ಅನುರಾಗ್ನನ್ನು ಬಂಧಿಸಿದ್ದಾರೆ. ಅತುಲ್ 15 ದಿನಗಳಿಂದ ಆತ್ಮಹತ್ಯೆಗೆ ಯೋಜಿಸಿದ್ದರು ಮತ್ತು ಡೆತ್ ನೋಟ್ ಬರೆದಿದ್ದರು ಎಂದು ಮೂಲಗಳಿಂದ ಮಾಹಿತಿ ದೊರೆತಿದೆ. ಪತ್ನಿ ಮತ್ತು ಸಂಬಂಧಿಕರಿಂದ ಕಿರುಕುಳಕ್ಕೆ ಒಳಗಾಗಿದ್ದ ಅತುಲ್, ಆತ್ಮಹತ್ಯೆಗೆ ಮುನ್ನ 90 ನಿಮಿಷಗಳ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಬೆಂಗಳೂರು : -ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತ್ತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅತುಲ್ ಪತ್ನಿ, ಎ1 ನಿಖಿತಾ ಸಿಂಘಾನಿಯ, ಆತುಲ್ ಅತ್ತೆ, ಎ2 ನಿಶಾ ಸಿಂಘಾನಿಯಾ, ಭಾಮೈದ ಎ3 ಅನುರಾಗ್ನನ್ನು ಪೊಲೀಸರು ಬಂಧಿಸಿ ತಡರಾತ್ರಿ ಬೆಂಗಳೂರಿಗೆ ಕರೆತಂದಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಅತುಲ್ ಪತ್ನಿ ನಿಖಿತಾಳನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಿಶಾ ಹಾಗೂ ಅನುರಾಗ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೂವರನ್ನೂ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪತಿ ಆತ್ಮಹತ್ಯೆ ಬಳಿಕ ನಿಖಿತಾ ಪರಾರಿಯಾಗಿದ್ದರು. ಹುಡುಕಾಟ ಆರಂಭಿಸಿದ್ದ ಮಾರತ್ತಹಳ್ಳಿ ಪೊಲೀಸರು ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗಿವೆ. ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳಲು 15 ದಿನಗಳ ಹಿಂದೆಯೇ ನಿರ್ಧರಿಸಿದ್ದರು. ಆತ್ಮಹತ್ಯೆಗೂ ಮುನ್ನ ಮೂರು ದಿನದ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದರು. ಅಲ್ಲದೇ, ಕಾನೂನಿನ ವಿಚಾರಗಳ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿದ್ದರು ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಆತಹತ್ಯೆ ಪ್ರಕರಣಗಳು, ವಿಡಿಯೋ ಫುಟೇಜ್ಗಳ ಬಗ್ಗೆ ಹೆಚ್ಚು ಹುಡುಕಾಡಿದ್ದರು. ಮೂರು ದಿನಗಳ ಕಾಲ ಪ್ಲಾಟ್ನಲ್ಲೇ ಕುಳಿತು ಸುದೀರ್ಘವಾಗಿ ಡೆತ್ ನೋಟ್ ಬರೆದಿದ್ದರು. ಡೆತ್ನೋಟ್ ಬರೆದ ಬಳಿಕ ವಿಡಿಯೋ ರೆಕಾರ್ಡ್ ಮಾಡಿದ್ದರು. ಅಲ್ಲದೇ, ಎಕ್ಸ್ ಪೋಸ್ಟ್ಗಳನ್ನು ಶೇರ್ ಮಾಡುವ ವಿಧಾನದ ಬಗ್ಗೆಯೂ ತಿಳಿದುಕೊಂಡಿದ್ದರು. ಅಮೇರಿಕಾ ಅಧ್ಯಕ್ಷ ಟ್ರಂಪ್ ಐಡಿ, ಭಾರತದ ರಾಷ್ಟ್ರಪತಿಗಳ ಐಡಿಗಳನ್ನೂ ಇಂಟರ್ನೆಟ್ ಮೂಲಕ ಪಡೆದಿದ್ದರು. ಹಾಗೇ, ಯಾವ ಸಮಯಕ್ಕೆ ಏನೇನು ಮಾಡಬೇಕು ಎಂದು ಪಟ್ಟಿ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಕೆಲ ಕ್ಷಣಗಳ ಮುಂಚೆಯಷ್ಟೇ ಎನ್ಜಿಒ ಗ್ರೂಪ್ಗೆ ವಿಡಿಯೋ ಮಾಹಿತಿ ಶೇರ್ ಮಾಡಿದ್ದರು ಎಂದು ಪೊಲೀಸರಿಗೆ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಪೊಲೀಸರು ಆತುಲ್ ಸುಭಾಷ್ ಅವರ ಸಹದ್ಯೋಗಿಗಳ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಪತ್ನಿ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಅತುಲ್ ಸುಭಾಷ (34 ವರ್ಷ) ಡೆತ್ನೋಟ್ ಬರೆದಿಟ್ಟು ಡಿಸೆಂಬರ್ 9ರಂದು ಬೆಂಗಳೂರಿನ ಮಂಜುನಾಥ ಲೇಔಟ್ನ ಪ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ತನಗೆ ಪತ್ನಿ ಮತ್ತು ಆಕೆಯ ಸಂಬಂಧಿಕರು ನೀಡಿರುವ ಕಿರುಕುಳದ ಬಗ್ಗೆ 90 ನಿಮಿಷಗಳ ವಿಡಿಯೋ ಮಾಡಿ, ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹರಿಬಿಟ್ಟಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತುಲ್ ಸುಭಾಷ ಆತ್ಮಹತ್ಯೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಅಲ್ಲದೇ ಪ್ರಕರಣ ಸುಪ್ರೀಂ ಕೋರ್ಟ್ನಲ್ಲೂ ಪ್ರಸ್ತಾಪವಾಗಿತ್ತು.

The post ಟೆಕ್ಕಿ ಆತ್ಮಹತ್ಯೆ: ಪತ್ನಿ, ಅತ್ತೆ ಮತ್ತು ಭಾಮೈದ ಅರೆಸ್ಟ್…..!!!! appeared first on Good News 24x7.

]]>