#August 4 Archives - Good News 24x7 https://www.goodnews24x7.com/tag/august-4/ Kannada Mon, 27 Jul 2026 04:53:35 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #August 4 Archives - Good News 24x7 https://www.goodnews24x7.com/tag/august-4/ 32 32 100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ ! https://www.goodnews24x7.com/e20-janata-party-to-go-to-parliament-on-august-4-demanding-clean-petrole20-e20-janata-party-to-go-to-parliament-on-august-4-demanding-clean-petrol-to-go-to-parliament-on-august-4-demanding/ Mon, 27 Jul 2026 04:53:02 +0000 https://www.goodnews24x7.com/?p=9877   E20 ಜನತಾ ಪಕ್ಷವು ಶೇ.20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಬದಲಿಗೆ ಶೇ. 100 ಶುದ್ಧ ಪೆಟ್ರೋಲ್ ನೀಡಲು ಆಗ್ರಹಿಸುತ್ತಿದೆ. E20 ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗಿ, ಎಂಜಿನ್ ಸಮಸ್ಯೆಗಳು ಹೆಚ್ಚುತ್ತಿವೆ ಎಂಬುದು ಅವರ ಆರೋಪ. ಸಚಿವ ನಿತಿನ್ ಗಡ್ಕರಿ ರಾಜೀನಾಮೆಗೆ…

The post 100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ ! appeared first on Good News 24x7.

]]>

 

E20 ಜನತಾ ಪಕ್ಷವು ಶೇ.20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಬದಲಿಗೆ ಶೇ. 100 ಶುದ್ಧ ಪೆಟ್ರೋಲ್ ನೀಡಲು ಆಗ್ರಹಿಸುತ್ತಿದೆ. E20 ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗಿ, ಎಂಜಿನ್ ಸಮಸ್ಯೆಗಳು ಹೆಚ್ಚುತ್ತಿವೆ ಎಂಬುದು ಅವರ ಆರೋಪ. ಸಚಿವ ನಿತಿನ್ ಗಡ್ಕರಿ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್ 4ರಂದು ಸಂಸತ್ ಚಲೋ ಹಮ್ಮಿಕೊಳ್ಳಲಾಗಿದೆ. ಗ್ರಾಹಕರಿಗೆ ಶುದ್ಧ ಇಂಧನ ಆಯ್ಕೆ ಮಾಡುವ ಸ್ವಾತಂತ್ರ್ಯ ಸಿಗಬೇಕು ಎಂಬುದು ಈ ಚಳವಳಿಯ ಮುಖ್ಯ ಬೇಡಿಕೆ.

ನೀಟ್ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆಯು ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಬೆನ್ನಲ್ಲೇ, ಅದೇ ಹಾದಿಯಲ್ಲಿ ಜನತಾ ಪಕ್ಷ ಎಂಬ ನೂತನ ನಾಗರಿಕ ಹಕ್ಕುಗಳ ಚಳವಳಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಸರಬರಾಜಾಗುತ್ತಿರುವ ಶೇ. 20 ಎಥೆನಾಲ್ ಮಿಶ್ರಿತ ಇಂಧನದ ಬದಲು ಸಾರ್ವಜನಿಕರಿಗೆ ಶೇ.100 ಶುದ್ಧ ಪೆಟ್ರೋಲ್ ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿರುವ ಈ ಸಂಘಟನೆಯು, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೆ ಒತ್ತಾಯಿಸಿದೆ.ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುರುವಾದ ಈ ಚಳವಳಿಯು ಕೆಲವೇ ಗಂಟೆಗಳಲ್ಲಿ 25,000ಕ್ಕೂ ಹೆಚ್ಚು ಬೆಂಬಲಿಗರನ್ನು ಗಳಿಸಿದೆ. ಈ ಅಭಿಯಾನಕ್ಕೆ ದೆಹಲಿ ಟ್ಯಾಕ್ಸಿ ಮತ್ತು ಪ್ರವಾಸಿ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಆಗಸ್ಟ್ 4 ರಂದು ಸಂಸತ್ತಿನ ಕಡೆಗೆ ಬೃಹತ್ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ವಿಶೇಷವಾಗಿ ಹಳೆಯ ವಾಹನಗಳಲ್ಲಿ ಎಂಜಿನ್ ವೈಫಲ್ಯ ಮತ್ತು ದುರಸ್ತಿ ವೆಚ್ಚ ಹೆಚ್ಚಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ.ನಾವು ಇಂಧನ ಉಚಿತವಾಗಿ ಕೇಳುತ್ತಿಲ್ಲ ಅಥವಾ ಸಬ್ಸಿಡಿ ಬಯಸುತ್ತಿಲ್ಲ. ಎಥೆನಾಲ್ ಪೆಟ್ರೋಲ್ ಅನ್ನು ಬ್ಯಾನ್ ಮಾಡಿ ಎಂದೂ ಹೇಳುತ್ತಿಲ್ಲ. ಗ್ರಾಹಕರಿಗೆ ಶೇ. 100 ಶುದ್ಧ ಪೆಟ್ರೋಲ್ ಆಯ್ಕೆ ಮಾಡುವ ಅಧಿಕಾರ ಸಿಗಬೇಕು ಎಂಬುದು ಪಕ್ಷದ ಮುಖ್ಯ ಬೇಡಿಕೆಯಾಗಿದೆ.ಪ್ರತಿಯೊಂದು ಬಂಕ್‌ಗಳಲ್ಲಿ ಇಂಧನದ ವಿವರ, ಮೈಲೇಜ್, ಎಂಜಿನ್ ಮೇಲಾಗುವ ಪರಿಣಾಮಗಳ ಕುರಿತು ಸ್ವತಂತ್ರ ಅಧ್ಯಯನದ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಕಾರ್ಯಕ್ಷಮತೆ ಹಾಳಾಗುತ್ತಿದೆ ಎಂಬ ಕುರಿತು ಸರ್ಕಾರಕ್ಕೆ ಯಾವುದೇ ಸಮರ್ಥನೀಯ ದೂರುಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಭಾರತ ಸರ್ಕಾರವು ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಲು ಮತ್ತು ಮಾಲಿನ್ಯ ನಿಯಂತ್ರಿಸಲು 2025-26 ರ ವೇಳೆಗೆ ಶೇ.20 ಎಥೆನಾಲ್ ಮಿಶ್ರಣ ಮಾಡುವ ಗುರಿ ಹೊಂದಿತ್ತು. ಆದರೆ ವಾಹನ ತಯಾರಕ ಸಂಸ್ಥೆಗಳು ಇ-20 ಇಂಧನಕ್ಕೆ ತಕ್ಕಂತೆ ಎಂಜಿನ್‌ಗಳನ್ನು ಪೂರ್ಣವಾಗಿ ನವೀಕರಿಸುವ ಮೊದಲೇ ಈ ನೀತಿ ಜಾರಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

The post 100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ ! appeared first on Good News 24x7.

]]>