authority Archives - Good News 24x7 https://www.goodnews24x7.com/tag/authority/ Kannada Sun, 30 Aug 2026 11:42:41 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg authority Archives - Good News 24x7 https://www.goodnews24x7.com/tag/authority/ 32 32 FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! https://www.goodnews24x7.com/fssai-displeased-everest-and-lg-asafoetida-powder-banned/ Sun, 30 Aug 2026 11:42:41 +0000 https://www.goodnews24x7.com/?p=9942 ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಸಿದ್ಧ ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್’ ಹಾಗೂ ‘ಲಾಲ್ಜಿ ಗೋಧು (LG)’ ಕಂಪನಿಗಳ ಇಂಗಿನ ಪುಡಿ (Asafoetida) ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಎರಡೂ…

The post FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! appeared first on Good News 24x7.

]]>

ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಪ್ರಸಿದ್ಧ ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್’ ಹಾಗೂ ‘ಲಾಲ್ಜಿ ಗೋಧು (LG)’ ಕಂಪನಿಗಳ ಇಂಗಿನ ಪುಡಿ (Asafoetida) ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇತ್ತೀಚೆಗೆ ನಡೆದ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಈ ಎರಡೂ ಬ್ರ್ಯಾಂಡ್‌ಗಳ ಇಂಗಿನ ಮಾದರಿಗಳು ನಿಗದಿತ ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು, ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬುದು ದೃಢಪಟ್ಟಿದೆ.

ಸಾಮಾಜಿಕ ಜಾಲತಾಣದ ಅಧಿಕೃತ ಪೋಸ್ಟ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿರುವ FSSAI, ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಈ ಕಠಿಣ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಜೊತೆಗೆ, ನಿಯಮಾವಳಿಗಳಿಗೆ ಅನುಗುಣವಾಗಿ ಉತ್ಪನ್ನದ ಗುಣಮಟ್ಟವನ್ನು ತಕ್ಷಣವೇ ಸುಧಾರಿಸಲು ಎರಡೂ ಸಂಸ್ಥೆಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

The post FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ! appeared first on Good News 24x7.

]]>
ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು? https://www.goodnews24x7.com/why-are-mobile-numbers-in-india-10-digits-long-what-is-the-math-behind-this/ Sun, 16 Aug 2026 06:36:08 +0000 https://www.goodnews24x7.com/?p=9896 ನಾವು ಪ್ರತಿದಿನ ಹಲವರಿಗೆ ಫೋನ್ ಮಾಡುತ್ತೇವೆ. ಒಂದು ಅಂಕಿ ಕಡಿಮೆಯಾದರೂ ಕರೆ ಕನೆಕ್ಟ್ ಆಗುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಮೊಬೈಲ್ ಸಂಖ್ಯೆಗಳು 8 ಅಥವಾ 9 ಅಂಕಿಗಳಿರದೆ, 10 ಅಂಕಿಗಳೇ ಏಕೆ ಇರುತ್ತವೆ? ಈ ನಿರ್ಧಾರವನ್ನು ಯಾರು ತಗೆದುಕೊಂಡಿದ್ದಾರೆ ಮತ್ತು ಇದರ…

The post ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು? appeared first on Good News 24x7.

]]>

ನಾವು ಪ್ರತಿದಿನ ಹಲವರಿಗೆ ಫೋನ್ ಮಾಡುತ್ತೇವೆ. ಒಂದು ಅಂಕಿ ಕಡಿಮೆಯಾದರೂ ಕರೆ ಕನೆಕ್ಟ್ ಆಗುವುದಿಲ್ಲ. ಆದರೆ, ನಮ್ಮ ದೇಶದಲ್ಲಿ ಮೊಬೈಲ್ ಸಂಖ್ಯೆಗಳು 8 ಅಥವಾ 9 ಅಂಕಿಗಳಿರದೆ, 10 ಅಂಕಿಗಳೇ ಏಕೆ ಇರುತ್ತವೆ? ಈ ನಿರ್ಧಾರವನ್ನು ಯಾರು ತಗೆದುಕೊಂಡಿದ್ದಾರೆ ಮತ್ತು ಇದರ ಹಿಂದಿರುವ ಗಣಿತದ ಲೆಕ್ಕಾಚಾರವೇನು?ಯಾವುದೇ ದೇಶದಲ್ಲಾದರೂ ಮೊಬೈಲ್ ಸಂಖ್ಯೆಯ ಉದ್ದವನ್ನು (Digit length) ಅಲ್ಲಿನ ಜನಸಂಖ್ಯೆ ಮತ್ತು ಭವಿಷ್ಯದ ಅಗತ್ಯಗಳನ್ನು ಆಧಾರವಾಗಿಟ್ಟುಕೊಂಡು ನಿರ್ಧರಿಸಲಾಗುತ್ತದೆ. ಭಾರತದಲ್ಲಿ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಬಳಸುವುದರ ಹಿಂದೆ ಒಂದು ಸರಳ ಹಾಗೂ ಶಕ್ತಿಯುತ ಗಣಿತದ ಲೆಕ್ಕಾಚಾರವಿದೆ.10 ಅಂಕಿಗಳ ಹಿಂದಿರುವ ಗಣಿತದ ಲೆಕ್ಕಾಚಾರ:09 ಅಂಕಿಗಳ ಸಂಖ್ಯೆ ($10^9$): ಒಂದು ವೇಳೆ 9 ಅಂಕಿಗಳ ಸಂಖ್ಯೆಯನ್ನು ಬಳಸಿದರೆ, ಗರಿಷ್ಠ 100 ಕೋಟಿ (1 Billion) ವಿಭಿನ್ನ ಕಾಂಬಿನೇಷನ್ ಸಂಖ್ಯೆಗಳನ್ನು ಮಾತ್ರ ರಚಿಸಲು ಸಾಧ್ಯ. ಪ್ರಸ್ತುತ ಭಾರತದ ಜನಸಂಖ್ಯೆಯೇ 140 ಕೋಟಿ ದಾಟಿದೆ. ಅಲ್ಲದೆ, ಒಬ್ಬರೇ ವ್ಯಕ್ತಿ ಎರಡೆರಡು ಸಿಮ್ ಕಾರ್ಡ್‌ಗಳನ್ನು ಬಳಸುತ್ತಿರುವುದರಿಂದ 9 ಅಂಕಿಗಳ ವ್ಯವಸ್ಥೆ ತೀರಾ ಅಪೂರ್ಣವಾಗುತ್ತಿತ್ತು.10 ಅಂಕಿಗಳ ಸಂಖ್ಯೆ ($10^{10}$): 10 ಅಂಕಿಗಳ ಸಂಖ್ಯೆಯನ್ನು ಬಳಸುವುದರಿಂದ ಒಟ್ಟು 1,000 ಕೋಟಿ (10 Billion) ವಿಭಿನ್ನ ಕಾಂಬಿನೇಷನ್ ಸಂಖ್ಯೆಗಳನ್ನು ಪಡೆಯಬಹುದು. ಇದು ದೇಶದ ಪ್ರಸ್ತುತ ಹಾಗೂ ಭವಿಷ್ಯದ ದೀರ್ಘಕಾಲದ ಅಗತ್ಯಗಳನ್ನು ಸುಲಭವಾಗಿ ಪೂರೈಸುತ್ತದೆ.11 ಅಂಕಿಗಳ ಸಂಖ್ಯೆ ($10^{11}$): 11 ಅಂಕಿಗಳನ್ನು ಬಳಸಿದರೆ 10,000 ಕೋಟಿ ಸಂಖ್ಯೆಗಳನ್ನು ರಚಿಸಬಹುದು. ಆದರೆ, ನೆನಪಿಟ್ಟುಕೊಳ್ಳಲು ಕಷ್ಟವಾಗುವುದರಿಂದ ಮತ್ತು ಪ್ರಸ್ತುತಕ್ಕೆ ಅಷ್ಟೊಂದು ಸಂಖ್ಯೆಗಳ ಅಗತ್ಯವಿಲ್ಲದಿರುವುದರಿಂದ 10 ಅಂಕಿಗಳನ್ನೇ ಅಂತಿಮಗೊಳಿಸಲಾಯಿತು.10 ಅಂಕಿಗಳ ವಿನ್ಯಾಸ (Structure) ಹೇಗಿರುತ್ತದೆ?ಮೊಬೈಲ್ ಸಂಖ್ಯೆ ಎಂಬುದು ಕೇವಲ ಒಂದು ಗುರುತಿನ ಸಂಖ್ಯೆಯಲ್ಲ, ಅದು ನೆಟ್‌ವರ್ಕ್ ವ್ಯವಸ್ಥೆಯಲ್ಲಿ ನಿಮ್ಮ ಫೋನಿನ ವಿಳಾಸ (Address) ಇದ್ದಂತೆ:ಮೊದಲ 4 ಅಥವಾ 5 ಅಂಕಿಗಳು: ಟೆಲಿಕಾಂ ಸರ್ಕಲ್ (ರಾಜ್ಯ/ಪ್ರದೇಶ) ಮತ್ತು ಆಪರೇಟರ್ (ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಇತ್ಯಾದಿ) ಮಾಹಿತಿಯನ್ನು ಸೂಚಿಸುತ್ತವೆ.ಉಳಿದ 5 ಅಥವಾ 6 ಅಂಕಿಗಳು: ಸಿಮ್ ಬಳಸುವ ವ್ಯಕ್ತಿಯ ವೈಯಕ್ತಿಕ ಗುರುತಿನ ಸಂಖ್ಯೆಯಾಗಿರುತ್ತವೆ (Subscriber ID).ಈ ನಿರ್ಧಾರವನ್ನು ಯಾರು ತಗೆದುಕೊಂಡರು?1990ರ ದಶಕದಲ್ಲಿ ಭಾರತದಲ್ಲಿ ಲ್ಯಾಂಡ್‌ಲೈನ್ ಸಂಖ್ಯೆಗಳು 6 ರಿಂದ 7 ಅಂಕಿಗಳಷ್ಟೇ ಇದ್ದವು. ಆದರೆ 2000ರ ಹೊತ್ತಿಗೆ ಮೊಬೈಲ್ ಫೋನ್‌ಗಳ ಬಳಕೆ ದೇಶಾದ್ಯಂತ ವೇಗವಾಗಿ ಹೆಚ್ಚಾಗತೊಡಗಿತು. ಭವಿಷ್ಯದಲ್ಲಿ ಸಂಖ್ಯೆಗಳ ಅಭಾವ ಉಂಟಾಗಬಾರದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ‘ರಾಷ್ಟ್ರೀಯ ಸಂಖ್ಯಾ ಯೋಜನೆ 2003’ (National Numbering Plan 2003) ಅಡಿಯಲ್ಲಿ ದೇಶಾದ್ಯಂತ 10 ಅಂಕಿಗಳ ಮೊಬೈಲ್ ಸಂಖ್ಯೆಯ ನಿಯಮವನ್ನು ಅಧಿಕೃತವಾಗಿ ಜಾರಿಗೆ ತಂದಿತು.

The post ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು? appeared first on Good News 24x7.

]]>
ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ https://www.goodnews24x7.com/toll-rates-to-increase-on-national-highways-from-april-1/ Mon, 23 Mar 2026 10:48:52 +0000 https://www.goodnews24x7.com/?p=8951 ನವದೆಹಲಿ: ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಹೆಚ್ಚಳವಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್ ದರಗಳನ್ನು ಪರಿಷ್ಕರಿಸಿದ್ದು, 4%ನಿಂದ 5%ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.…

The post ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ appeared first on Good News 24x7.

]]>

ನವದೆಹಲಿ: ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರಗಳಲ್ಲಿ ಹೆಚ್ಚಳವಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್ ದರಗಳನ್ನು ಪರಿಷ್ಕರಿಸಿದ್ದು, 4%ನಿಂದ 5%ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದರ ಏರಿಕೆ ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಹಾಗೂ ಅಭಿವೃದ್ಧಿ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಈ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಎನ್‌ಹೆಚ್‌ಎಐ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇ ಸೇರಿದಂತೆ 8 ಇತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಏರಿಕೆಯ ಪರಿಣಾಮ ಬೀರಲಿದೆ. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ 2023ರ ಏ.1ರಿಂದ ಇದು ನಾಲ್ಕನೇ ಬಾರಿಗೆ ದರ ಏರಿಕೆಯಾಗುತ್ತಿದೆ. ಹಿಂದೆ 2023ರ ಜೂನ್‌ನಲ್ಲಿ ಘೋಷಿಸಲಾದ 22% ಏರಿಕೆಯನ್ನು ಜನರ ವಿರೋಧದಿಂದ ಹಿಂಪಡೆಯಲಾಗಿತ್ತು. ಆದರೆ ವಾರ್ಷಿಕವಾಗಿ ಸುಮಾರು 5% ಏರಿಕೆಯನ್ನು ಮುಂದುವರೆಸಲಾಗುತ್ತಿದೆ.

ಇದಲ್ಲದೆ, ಫಾಸ್ಟ್ಟ್ಯಾಗ್ ಬಳಕೆಯನ್ನು ಉತ್ತೇಜಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಫಾಸ್ಟ್ಟ್ಯಾಗ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ ಅಥವಾ ತಾಂತ್ರಿಕ ದೋಷದಿಂದ ಪಾವತಿ ವಿಫಲವಾದರೆ ಡಬಲ್ ಟೋಲ್ ಶುಲ್ಕ ವಿಧಿಸಲಾಗುವುದು. ಇದರಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಚಾರದ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.
ಪ್ರತಿ ವರ್ಷ ಏಪ್ರಿಲ್ 1ರಿಂದ ಟೋಲ್ ದರಗಳ ಪರಿಷ್ಕರಣೆಯನ್ನು ಮಾಡುವ ಪದ್ಧತಿಯಂತೆ ಈ ಬಾರಿಯೂ ಜಾರಿಗೊಳಿಸಲಾಗುತ್ತಿದ್ದು, ದೈನಂದಿನ ಸಂಚಾರಿಕರು, ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎಂದು ಆತಂಕ ವ್ಯಕ್ತವಾಗಿದೆ. ಎನ್‌ಹೆಚ್‌ಎಐಯ ಈ ನಿರ್ಧಾರದಿಂದ ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಆರ್ಥಿಕ ಒತ್ತಡ ಹೆಚ್ಚಾಗಲಿದೆ.

 

The post ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ appeared first on Good News 24x7.

]]>
ಬಿಡಿಎನಲ್ಲಿ ಬದಲಾವಣೆ ಪರ್ವ ಶುರು.. ಮಾಸ್ಟರ್​ ಪ್ಲಾನ್-2041! https://www.goodnews24x7.com/the-era-of-change-has-begun-in-bda-master-plan-2041/ Sun, 31 Aug 2025 05:38:46 +0000 https://www.goodnews24x7.com/?p=7101 ಬಿಡಿಎನಲ್ಲಿ ಬದಲಾವಣೆ ಪರ್ವ ಶುರುವಾಗಿದೆ.. ಹಿಂದಿನ ನ್ಯೂನತೆ ಸರಿಪಡಿಸಿ ನಗರಕ್ಕೆ ಭದ್ರ ಬುನಾದಿ ಹಾಕಲು ಬಿಡಿಎ ಸಜ್ಜಾಗಿದೆ.. RMP-2041 ಪ್ಲಾನ್​ ಹಿಡಿದು ಬಿಡಿಎ ಬದಲಾವಣೆ ಪರ್ವಕ್ಕೆ ನಾಂದಿಹಾಡಿದೆ. ಉದ್ದೇಶವೇನು? ಬಿಡಿಎನಲ್ಲಿ ಪ್ರಸ್ತುತ ಪರಿಷ್ಕೃತ ಮಾಸ್ಟರ್​​​ ಪ್ಲಾನ್​​-2015 ಬಳಕೆ ವಿಸ್ತರಣೆ, ಹೆಚ್ಚುತ್ತಿರುವ ಜನಸಂಖ್ಯೆ,…

The post ಬಿಡಿಎನಲ್ಲಿ ಬದಲಾವಣೆ ಪರ್ವ ಶುರು.. ಮಾಸ್ಟರ್​ ಪ್ಲಾನ್-2041! appeared first on Good News 24x7.

]]>

ಬಿಡಿಎನಲ್ಲಿ ಬದಲಾವಣೆ ಪರ್ವ ಶುರುವಾಗಿದೆ.. ಹಿಂದಿನ ನ್ಯೂನತೆ ಸರಿಪಡಿಸಿ ನಗರಕ್ಕೆ ಭದ್ರ ಬುನಾದಿ ಹಾಕಲು ಬಿಡಿಎ ಸಜ್ಜಾಗಿದೆ.. RMP-2041 ಪ್ಲಾನ್​ ಹಿಡಿದು ಬಿಡಿಎ ಬದಲಾವಣೆ ಪರ್ವಕ್ಕೆ ನಾಂದಿಹಾಡಿದೆ.

ಉದ್ದೇಶವೇನು?
ಬಿಡಿಎನಲ್ಲಿ ಪ್ರಸ್ತುತ ಪರಿಷ್ಕೃತ ಮಾಸ್ಟರ್​​​ ಪ್ಲಾನ್​​-2015 ಬಳಕೆ
ವಿಸ್ತರಣೆ, ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ನಿಯಂತ್ರಣ
ಉತ್ತಮ ಜೀವನ ಗುಣಮಟ್ಟಕ್ಕೆ ಮೂಲ ಸೌಕರ್ಯಗಳ ಅಭಿವೃದ್ಧಿ
ಅನಧಿಕೃತ ಲೇಔಟ್​ಗಳು & ಕಟ್ಟಡಗಳಿಗೆ ಕಡಿವಾಣ ಹಾಕುವುದು
ನಗರಕ್ಕೆ ಅಗತ್ಯವಾದ ಫ್ಲೈಓವರ್​​ಗಳನ್ನು ನಿರ್ಮಾಣ ಮಾಡುವುದು
ಎಲ್ಲಾ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದು
ವಿಶೇಷವಾಗಿ ಗುಣಮಟ್ಟದ ಸಾರಿಗೆ ವ್ಯವಸ್ಥೆಯನ್ನ ರೂಪಿಸುವುದು
ಕೃಷಿ, ವಸತಿ, ವಾಣಿಜ್ಯ, ಸರ್ಕಾರಿ ಉದ್ದೇಶದ ಜಮೀನಿನ ಮಾಹಿತಿ

BDAಯಿಂದ ಟೆಂಡ‌ರ್ ಅಡಿ ಹೈಟೆಕ್ ತ್ರಿಡಿ ಡೋನ್ ಸಮೀಕ್ಷೆ ನಡೆಸಲಾಗುತ್ತೆ.. ಆಧುನಿಕ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ.. 1,240 ಚದರ ಕಿ.ಮೀ. ವಿಸ್ತೀರ್ಣ ಒಳಗೊಂಡ ಬೆಂಗಳೂರು ನಗರದ ಮೂಲ ನಕ್ಷೆ, ಭೂ ಬಳಕೆಯ ನಕ್ಷೆ, ಡಿಜಿಟಲ್ ಎಲಿವೇಶನ್​​ ಬಳಕೆ ಮಾಡಲಾಗುತ್ತೆ.. ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಧಾನದ ಮೂಲಕ ಸಮೀಕ್ಷೆ ನಡೆಸಲಾಗುತ್ತೆ.. ಕರಡು ಸಿದ್ಧವಾದ ನಂತರ ಈ ಬಗ್ಗೆ ಗೆಜೆಟ್‌ನಲ್ಲಿ ಪ್ರಕಟಣೆ ಮಾಡುವ ಸಾಧ್ಯತೆ ಇದೆ.. ಬಳಿಕ ಸಾರ್ವಜನಿಕರಿಗೆ ಸಲಹೆ, ಆಕ್ಷೇಪಣೆಗೆ 60 ದಿನ ಕಾಲಾವಕಾಶ ಇರುತ್ತೆ.. 2026ರ ಮಧ್ಯಭಾಗದ ವೇಳೆಗೆ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಇದಾಗಿದೆ.. ಸದ್ಯ ಪರಿಷ್ಕೃತ ಮಾಸ್ಟರ್​​​ ಸಿದ್ಧಪಡಿಸಲು BDA ಟೆಂಡರ್​ ಕರೆದಿದೆ.. ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಏಜೆನ್ಸಿ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.. ಅರ್ಜಿ ಸಲ್ಲಿಕೆಗೆ ಸೆಪ್ಟೆಂಬರ್ 30ಕ್ಕೆ ಬಿಡಿಎ ಡೆಡ್​ಲೈನ್​ ನೀಡಿದೆ.

ಮಾಸ್ಟರ್ ಪ್ಲಾನ್-2041ನ್ನು ಪರಿಷ್ಕರಣೆಗೆ BDAಗೆ ಅಧಿಕಾರ ಇಲ್ಲ ಎಂಬ ವಾದದಿಂದ ಸದ್ಯ ಹೈಕೋರ್ಟ್​​ನಲ್ಲಿ ಹಿನ್ನಡೆಯಾಗಿದೆ.. ಸದ್ಯ ಹೈಕೊರ್ಟ್​ ಹಸಿರು ನಿಶಾನೆ ತೋರಿದ್ರೆ ಬಿಡಿಎನಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ.. ಒಟ್ನಲ್ಲಿ ಮಾಸ್ಟರ್ ಪ್ಲಾನ್-2041 ಮೂಲಕ ಬಿಡಿಎ ಇಂಥದ್ದೊಂದು ಪ್ಲಾನ್​ ಮಾಡಿರೋದು ರಾಜಧಾನಿಗೆ ವರವಾಗೋದು ನಿಶ್ಚಿತ.

The post ಬಿಡಿಎನಲ್ಲಿ ಬದಲಾವಣೆ ಪರ್ವ ಶುರು.. ಮಾಸ್ಟರ್​ ಪ್ಲಾನ್-2041! appeared first on Good News 24x7.

]]>
BBMP ಬದಲು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ಇಂದಿನಿಂದ ಜಾರಿ. https://www.goodnews24x7.com/governors-assent-to-greater-bangalore-administration-act-instead-of-bbmp-effective-from-today/ Thu, 15 May 2025 11:29:04 +0000 https://www.goodnews24x7.com/?p=3879 ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ ಜಾರಿಯಾಗಲಿದೆ. ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇನ್ನು ಮುಂದೆ ಬೆಂಗಳೂರು…

The post BBMP ಬದಲು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ಇಂದಿನಿಂದ ಜಾರಿ. appeared first on Good News 24x7.

]]>

ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಇಂದಿನಿಂದ ಜಾರಿಯಾಗಲಿದೆ. ಬಿಬಿಎಂಪಿ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇನ್ನು ಮುಂದೆ ಬೆಂಗಳೂರು – ಗ್ರೇಟರ್ ಬೆಂಗಳೂರು ಆಗಲಿದೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಕನಿಷ್ಠ ಮೂರು ಪಾಲಿಕೆ ರಚನೆಯಾಗುವ ಸಾಧ್ಯತೆಯಿದೆ. ರಾಜ್ಯದ ಮುಖ್ಯಮಂತ್ರಿಗಳು ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

The post BBMP ಬದಲು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ರಾಜ್ಯಪಾಲರ ಅಂಕಿತ ಇಂದಿನಿಂದ ಜಾರಿ. appeared first on Good News 24x7.

]]>