awards Archives - Good News 24x7 https://www.goodnews24x7.com/tag/awards/ Kannada Sun, 10 Aug 2025 08:15:57 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg awards Archives - Good News 24x7 https://www.goodnews24x7.com/tag/awards/ 32 32 ‘ಕಾಸ್ಮಿಕ್ ಕ್ಯಾನ್ವಾಸ್’: ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯದ ವಿದ್ಯಾರ್ಥಿನಿ ವಿಜೇತಳಾಗಿದ್ದಾಳೆ. https://www.goodnews24x7.com/cosmic-canvas-state-student-wins-national-level-painting-competition/ Sun, 10 Aug 2025 08:14:31 +0000 https://www.goodnews24x7.com/?p=5684 18ನೇ ಇಂಟರ್ನ್ಯಾಷನಲ್ ಒಲಿಂಪಿಯಾಡ್ ಆನ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ (IOAA)- 2025 ಆಗಸ್ಟ್ 11-21, 2025 ರವರೆಗೆ ಮುಂಬೈಯಲ್ಲಿ ಜರುಗಲಿದೆ. ಈ ನಿಮಿತ್ತವಾಗಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಭಾಗವಾದ ದಿ ಹೋಮಿ ಭಾಭಾ ಸೆಂಟರ್ ಫಾರ್…

The post ‘ಕಾಸ್ಮಿಕ್ ಕ್ಯಾನ್ವಾಸ್’: ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯದ ವಿದ್ಯಾರ್ಥಿನಿ ವಿಜೇತಳಾಗಿದ್ದಾಳೆ. appeared first on Good News 24x7.

]]>

18ನೇ ಇಂಟರ್ನ್ಯಾಷನಲ್ ಒಲಿಂಪಿಯಾಡ್ ಆನ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ (IOAA)- 2025 ಆಗಸ್ಟ್ 11-21, 2025 ರವರೆಗೆ ಮುಂಬೈಯಲ್ಲಿ ಜರುಗಲಿದೆ. ಈ ನಿಮಿತ್ತವಾಗಿ ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಭಾಗವಾದ ದಿ ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮೂರು ವಿಭಾಗಗಳಲ್ಲಿ “ಕಾಸ್ಮಿಕ್ ಕ್ಯಾನ್ವಾಸ್” ಶೀರ್ಷಿಕೆಯಡಿ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಕರ್ನಾಟಕದ ಮೇಧಾ ಉಮೇಶ್ 9-12ನೇ ತರಗತಿಯ ವರೆಗಿನ ಎರಡನೇ ವಿಭಾಗದಲ್ಲಿ ವಿಜೇತಳಾಗಿದ್ದಾಳೆ

ಅಧ್ಯಯನದಲ್ಲೂ ಮುಂಚೂಣಿಯಲ್ಲಿರುವ ಮೇಧಾ ಈ ಹಿಂದೆಯೂ ಚಿತ್ರಕಲೆ, ರಸಪ್ರಶ್ನೆ, ಭಾಷಣ, ಚರ್ಚಾ ಸ್ಪರ್ಧೆ, ಸಂಗೀತ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಅಂತರಾಷ್ಟ್ರೀಯ ರಾಷ್ಟ್ರೀಯಮಟ್ಟಗಳನ್ನೊಳಗೊಂಡಂತೆ ವಿವಿಧ ಹಂತಗಳಲ್ಲಿ 300ಕ್ಕೂ ಅಧಿಕ ಪ್ರಶಸ್ತಿಗಳನ್ನು ಗಳಿಸಿದ್ದಾಳೆ. “ಸೋದರಿ ನಿವೇದಿತಾ ಪುರಸ್ಕಾರ”, “ಶ್ರೀ ಶಂ. ಗು. ಬಿರಾದಾರ ಮತ್ತು ಭಾಸ್ಕರಾಚಾರ್ಯ ಪ್ರತಿಭಾ ಪ್ರಶಸ್ತಿ” ಹಾಗೂ “ನಚಿಕೇತಶ್ರೀ” ರಾಜ್ಯಮಟ್ಟದ ಪ್ರಶಸ್ತಿಗಳನ್ನು ತನ್ನ ಸಮಗ್ರ ಸಾಧನೆಗಾಗಿ ಗಳಿಸಿದ್ದಾಳೆ.

The post ‘ಕಾಸ್ಮಿಕ್ ಕ್ಯಾನ್ವಾಸ್’: ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯದ ವಿದ್ಯಾರ್ಥಿನಿ ವಿಜೇತಳಾಗಿದ್ದಾಳೆ. appeared first on Good News 24x7.

]]>
ಮಾಜಿ CM S.M.ಕೃಷ್ಣ ಹೆಸರಲ್ಲಿ 8 ದತ್ತಿನಿಧಿಗಳ ಸ್ಥಾಪನೆ. https://www.goodnews24x7.com/8-endowment-funds-established-in-the-name-of-former-cm-s-m-krishna/ Wed, 30 Apr 2025 10:44:30 +0000 https://www.goodnews24x7.com/?p=3495 ಬೆಂಗಳೂರು : ಮಾಜಿ ಸಿಎಂ, ಮುತ್ಸದ್ದಿ ನಾಯಕ, ಎಸ್.ಎಂ.ಕೃಷ್ಣ ಅವರ ಹೆಸರನಲ್ಲಿ 8 ದತ್ತಿನಿಧಿಗಳನ್ನು ಸ್ಥಾಪನೆ ಮಾಡಲಾಗಿದೆ. ಎಸ್.ಎಂ.ಕೃಷ್ಣ ಅವರು 1932ರ ಮೇ 1ರಂದು ಜನಿಸಿದ್ದು, ಅವರ 93ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅವರ ಅಭಿಮಾನಿಗಳು ಅವರ…

The post ಮಾಜಿ CM S.M.ಕೃಷ್ಣ ಹೆಸರಲ್ಲಿ 8 ದತ್ತಿನಿಧಿಗಳ ಸ್ಥಾಪನೆ. appeared first on Good News 24x7.

]]>

ಬೆಂಗಳೂರು : ಮಾಜಿ ಸಿಎಂ, ಮುತ್ಸದ್ದಿ ನಾಯಕ, ಎಸ್.ಎಂ.ಕೃಷ್ಣ ಅವರ ಹೆಸರನಲ್ಲಿ 8 ದತ್ತಿನಿಧಿಗಳನ್ನು ಸ್ಥಾಪನೆ ಮಾಡಲಾಗಿದೆ.
ಎಸ್.ಎಂ.ಕೃಷ್ಣ ಅವರು 1932ರ ಮೇ 1ರಂದು ಜನಿಸಿದ್ದು, ಅವರ 93ನೇ ಹುಟ್ಟುಹಬ್ಬದ ಸವಿನೆನಪಿನಲ್ಲಿ ಮಂಡ್ಯ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅವರ ಅಭಿಮಾನಿಗಳು ಅವರ ಹೆಸರನ್ನು ಚಿರಸ್ಥಾಯಿಗೊಳಿಸಲು ಪ್ರತಿವರ್ಷ ವಿವಿಧ ಕ್ಷೇತ್ರದ ಸಾಹಿತಿಗಳು, ಗಣ್ಯರು. ರೈತರು, ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲು ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಹುಟ್ಟಿ ಅದನ್ನು ಕರ್ಮ ಭೂಮಿಯಾಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರದ ಹಲವು ಸಾಂವಿಧಾನಿಕ ಹುದ್ದೆಗಳನ್ನು ಅಲಂಕರಿಸಿದ್ದ ಎಸ್.ಎಂ. ಕೃಷ್ಣ ಅವರು ಒಬ್ಬ ಆದರ್ಶನೀಯ ಜನನಾಯಕರಾಗಿ ಬೆಳೆದವರು. ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಪ್ರಪಂಚವನ್ನು ಬೆಂಗಳೂರು ಕಡೆಗೆ ತಿರುಗುವಂತೆ ಮಾಡಿ ಲಕ್ಷಾಂತರ ಉದ್ಯೋಗ ಸೃಷ್ಟಿಸಿ ರಾಜ್ಯದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಎಸ್ ಎಂ ಕೃಷ್ಣ ಅವರ ಜೀವನ ಯುವ ಪೀಳಿಗೆಗೆ ದಾರಿದೀಪ.


ತುಂಬು ಜೀವನ ನಡೆಸಿ ಕಳೆದ ಡಿಸೆಂಬರ್’ನಲ್ಲಿ ಭೌತಿಕವಾಗಿ ಅಗಲಿದ ಎಸ್.ಎಂ. ಕೃಷ್ಣ ಅವರ ಸಾಧನೆ ಮತ್ತು ಅವರ ಬದುಕನ್ನು ಸದಾ ಹಸಿರಾಗಿಡುವ ಸದುದ್ದೇಶದಿಂದ ಅವರ ಹೆಸರಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಶಾಸಕರು ಎಸ್.ಎಂ.ಕೃಷ್ಣ ದತ್ತಿ‌ನಿಧಿ ಸ್ಥಾಪಿಸಿ ಅದನ್ನು ಈ ಕೆಳಕಂಡ ವಿಶ್ವವಿದ್ಯಾನಿಲಯಗಳು ಮತ್ತು ಪ್ರತಿಷ್ಠಿತ ಸಂಸ್ಥೆಗಳು ಪ್ರತಿವರ್ಷ ದತ್ತಿನಿಧಿಯಿಂದ ಬರುವ ಹಣದಿಂದ ತಲಾ ಒಬ್ಬರಿಗೆ ಪ್ರಶಸ್ತಿ ಅಥವಾ ಉತ್ತಮ ವಿದ್ಯಾರ್ಥಿಗಳಿಗೆ ಚಿನ್ನದ ಪದಕವನ್ನು ಎಸ್. ಎಂ. ಕೃಷ್ಣ ಅವರ ಹೆಸರಿನಲ್ಲಿ ನೀಡಲು ಕ್ರಮವಹಿಸಲಾಗಿದೆ.

ಮಂಡ್ಯ ಜಿಲ್ಲೆಯ ಸಚಿವರು, ಶಾಸಕರುಗಳು ಎಸ್. ಎಂ.ಕೃಷ್ಣರವರ ಹೆಸರಿನಲ್ಲಿ ದತ್ತಿ ನಿಧಿ ಸ್ಥಾಪಿಸಿರುವ ವಿವರಗಳು ಈ ಕೆಳಕಂಡಂತೆ ಇವೆ.


1. ಎನ್. ಚಲುವರಾಯಸ್ವಾಮಿ, ಸಚಿವರು, ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿಗಳು:
ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ (ಜಿಕೆವಿಕೆ)ಬೆಂಗಳೂರು – ಪ್ರಗತಿಪರ ರೈತನಿಗೆ (ದತ್ತಿ ನಿಧಿ 5 ಲಕ್ಷ ರೂ.ಗಳು)

2. ಎನ್. ಚಲುವರಾಯಸ್ವಾಮಿ, ಸಚಿವರು, ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿಗಳು:
ಕರ್ನಾಟಕ ಸಂಘ, ಮಂಡ್ಯ ಸಮಾಜ ಸೇವೆಗಾಗಿ ಉತ್ತಮ ಪ್ರಶಸ್ತಿ (ದತ್ತಿ ನಿಧಿ 5 ಲಕ್ಷ ರೂ.ಗಳು)

3. ಕೆ.ಎಂ.ಉದಯ್, ಶಾಸಕರು, ಮದ್ದೂರು ವಿಧಾನಸಭಾ ಕ್ಷೇತ್ರ:
ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಪ್ರಥಮ ಗೋಲ್ಡ್ ಮೆಡಲ್ ತೆಗೆದುಕೊಂಡ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ. (ದತ್ತಿ ನಿಧಿ 10 ಲಕ್ಷ ರೂ.)

4. ಪಿ.ಎಂ.ನರೇಂದ್ರ ಸ್ವಾಮಿ, ಶಾಸಕರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಳವಳ್ಳಿ ವಿಧಾನಸಭಾ ಕ್ಷೇತ್ರ:
ಕಾನೂನು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗೆ ಚಿನ್ನದ ಪದಕ (ದತ್ತಿ ನಿಧಿ 5 ಲಕ್ಷ ರೂ.ಗಳು)

5. ಎ. ಬಿ. ರಮೇಶ್ ಬಂಡಿಸಿದ್ದೇಗೌಡ, ಶಾಸಕರು, ಅಧ್ಯಕ್ಷರು, ಚಾಮುಂಡೇಶ್ವರಿ ವಿದ್ಯುತ್ ನಿಗಮ:
ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಪ್ರತಿ ವರ್ಷ ಒಬ್ಬರು ಉತ್ತಮ ಚಿತ್ರಕಲಾವಿದರಿಗೆ ನಗದು ಮತ್ತು ಪ್ರಶಸ್ತಿ ಪತ್ರ (ದತ್ತಿ ನಿಧಿ 5 ಲಕ್ಷ ರೂ.ಗಳು)

6. ರವಿಕುಮಾರ್ ಗಣಿಗ, ಶಾಸಕರು. ಮಂಡ್ಯ ವಿಧಾನಸಭಾ ಕ್ಷೇತ್ರ:
ಮಂಡ್ಯ ವಿಶ್ವ ವಿದ್ಯಾನಿಲಯದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗೆ ಚಿನ್ನದ ಪದಕ (ದತ್ತಿ ನಿಧಿ 5 ಲಕ್ಷ ರೂ.ಗಳು)

7. ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಸಮಾಜ ಸೇವಕರು, ಲೋಕಸಭಾ ಅಭ್ಯರ್ಥಿ:
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪ್ರತಿ ವರ್ಷ ಒಬ್ಬ ಸಾಹಿತಿಗೆ ನಗದು, ಪ್ರಶಸ್ತಿ ಪತ್ರ ನೀಡಿ ಗೌರವಿಸುವುದು (ದತ್ತಿ ನಿಧಿ 5 ಲಕ್ಷ ರೂ.ಗಳು)

8. ದಿನೇಶ್ ಗೂಳಿಗೌಡ, ಶಾಸಕರು, ಕರ್ನಾಟಕ ವಿಧಾನ ಪರಿಷತ್, ಮಂಡ್ಯ ಜಿಲ್ಲೆ:
ರಾಮಕೃಷ್ಣ ಆಶ್ರಮ ಮೈಸೂರು. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗೆ ಪ್ರತಿ ವರ್ಷ ಪ್ರಥಮ ಸ್ಥಾನ ಪಡೆದವರಿಗೆ ಚಿನ್ನದ ಪದಕ. (ದತ್ತಿ ನಿಧಿ 5 ಲಕ್ಷ ರೂ.ಗಳು)

ಎಸ್. ಎಂ. ಕೃಷ್ಣ ಅವರ ಹೆಸರಿನಲ್ಲಿ ಪ್ರತಿ ವರ್ಷ ಒಬ್ಬ ಪ್ರಗತಿಪರ ರೈತನಿಗೆ, ಸಮಾಜಮುಖಿ ಸೇವೆ ಸಲ್ಲಿಸಿದ ಒಬ್ಬರಿಗೆ, ಮೈಸೂರು ವಿಶ್ವವಿದ್ಯಾನಿಲಯ, ಕಾನೂನು ವಿಶ್ವವಿದ್ಯಾನಿಲಯ, ಚಿತ್ರಕಲಾ ಪರಿಷತ್, ಮಂಡ್ಯ ವಿಶ್ವ ವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್, ರಾಮಕೃಷ್ಣ ಆಶ್ರಮ ವತಿಯಿಂದ ಎಸ್ ಎಂ ಕೃಷ್ಣ ಅವರ ಹೆಸರಿನಲ್ಲಿ ಆಯಾ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಲು ಸಂಬಂಧ ಪಟ್ಟ ಸಂಸ್ಥೆಗಳಿಗೆ ಡಿಡಿ ಮುಖಾಂತರ ಠೇವಣಿಯನ್ನು ಕಳುಹಿಸಿಕೊಡಲಾಗಿದೆ ಎಂದು ಎಂಎಲ್ ಸಿ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

The post ಮಾಜಿ CM S.M.ಕೃಷ್ಣ ಹೆಸರಲ್ಲಿ 8 ದತ್ತಿನಿಧಿಗಳ ಸ್ಥಾಪನೆ. appeared first on Good News 24x7.

]]>
KUWJ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪ್ರಕಟ: ಮಾರ್ಚ್ 9ಕ್ಕೆಪ್ರಶಸ್ತಿ ಪ್ರದಾನ. https://www.goodnews24x7.com/kuwj-%e0%b2%a6%e0%b2%a4%e0%b3%8d%e0%b2%a4%e0%b2%bf%e0%b2%a8%e0%b2%bf%e0%b2%a7%e0%b2%bf-%e0%b2%b5%e0%b2%be%e0%b2%b0%e0%b3%8d%e0%b2%b7%e0%b2%bf%e0%b2%95-%e0%b2%aa%e0%b3%8d%e0%b2%b0%e0%b2%b6%e0%b2%b8/ Fri, 28 Feb 2025 10:39:39 +0000 https://www.goodnews24x7.com/?p=2465 ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ…

The post KUWJ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪ್ರಕಟ: ಮಾರ್ಚ್ 9ಕ್ಕೆಪ್ರಶಸ್ತಿ ಪ್ರದಾನ. appeared first on Good News 24x7.

]]>

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಅವರು ತಿಳಿಸಿದ್ದಾರೆ.


ಪ್ರಶಸ್ತಿಗಳ ವಿವರ ಇಂತಿದೆ.

ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ಸುಬ್ಬು ಹೊಲೆಯಾರ್

ಡಿ.ವಿ.ಜಿ.ಪ್ರಶಸ್ತಿ :
ರಾಘವೇಂದ್ರ ಗಣಪತಿ, ವಿಜಯವಾಣಿ

ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ: ಯು.ಜಿ.ಭಟ್, ಉದಯವಾಣಿ, ಹೊನ್ನಾವರ.

ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಅನು ಶಾಂತರಾಜು, ಹಿರಿಯ ಪೋಟೋ ಜರ್ನಲಿಸ್ಟ್, ತುಮಕೂರು

ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ: ಸುಭಾಷ್ ಹೂಗಾರ, ಹಿರಿಯ ಪತ್ರಕರ್ತರು.

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಂ.ಆರ್.ಸತ್ಯನಾರಾಯಣ, ಮೈಸೂರು.

ಸಿ.ಆರ್.ಕೃಷ್ಣರಾವ್ ಪ್ರಶಸ್ತಿ: ಉಗಮ ಶ್ರೀನಿವಾಸ್, ಕನ್ನಡಪ್ರಭ

ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ: ಮಂಜುಶ್ರೀ ಎಂ ಕಡಕೊಳ, ಪ್ರಜಾವಾಣಿ.

ಬದರಿನಾಥ ಹೊಂಬಾಳೆ ಪ್ರಶಸ್ತಿ : ಗಂಗಹನುಮಯ್ಯ, ಅಮೃತವಾಣಿ, ತುಮಕೂರು

ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ: ಡಾ.ಸಿದ್ಧನಗೌಡ ಪಾಟೀಲ್, ಸಂಪಾದಕರು, ಹೊಸತು

ಕಿಡಿಶೇಷಪ್ಪ ಪ್ರಶಸ್ತಿ: ಮು.ವೆಂಕಟೇಶಯ್ಯ, ಸಿಂಹ ಬೆಂಗಳೂರು

ರವಿ ಬೆಳಗೆರೆ ಪ್ರಶಸ್ತಿ:
ಎಂ.ಕೆ.ಹೆಗಡೆ, ಹಿರಿಯ ಪತ್ರಕರ್ತರು, ಬೆಳಗಾವಿ
ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ: ಎಂ.ಯೂಸುಫ್ ಪಟೇಲ್, ಹಿರಿಯ ಪತ್ರಕರ್ತರು.
ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ: ಬಸವರಾಜ ಹೆಗ್ಗಡೆ, ಸಂಜೆ ಮಿತ್ರ, ಮಂಡ್ಯ

ರಾಜಶೇಖರ ಕೋಟಿ ಪ್ರಶಸ್ತಿ:
ಕೆ.ಕೆ.ಬೋಪಣ್ಣ, ಆಂದೋಲನ, ಕೊಡಗು

ಪಿ.ರಾಮಯ್ಯ ಪ್ರಶಸ್ತಿ: ಎಸ್.ಟಿ.ರವಿಕುಮಾರ್, ಸ್ಟಾರ್ ಆಪ್ ಮೈಸೂರು.

ಮಾ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ: ತಾ.ನಂ. ಕುಮಾರಸ್ವಾಮಿ, ಆನೆಕಲ್

ಮಹದೇವ ಪ್ರಕಾಶ್ ಪ್ರಶಸ್ತಿ: ಪ್ರಭುಲಿಂಗ ನಿಲೂರೆ, ವಿಜಯ ಕರ್ನಾಟಕ, ಕಲಬುರ್ಗಿ

ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: ಚಂದ್ರಶೇಖರ ಶೃಂಗೇರಿ, ಶಿವಮೊಗ್ಗ

ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ಗಿರೀಶ್ ಉಮ್ರಾಯಿ, ಶಿವಮೊಗ್ಗ

ಎಂ.ನಾಗೇಂದ್ರ ರಾವ್ ಪ್ರಶಸ್ತಿ: ಕೆ.ಬಿ.ಜಗದೀಶ್, ಸಂಜೆವಾಣಿ, ಕೋಲಾರ

ಶ್ರೀಮತಿ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ: ಕವಿತ, ಸಂಯುಕ್ತ ಕರ್ನಾಟಕ

ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ: ಗಣೇಶ್ ಕಾಸರಗೋಡು, ಹಿರಿಯ ಪತ್ರಕರ್ತರು

ಮೂಡಣ, ಹಾವೇರಿ ಪ್ರಶಸ್ತಿ: ಎಂ.ಚಿರಂಜೀವಿ, ಹಿರಿಯ ಪತ್ರಕರ್ತರು, ಹಾವೇರಿ

ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು:
ರಂಗನಾಥ್ ಎಸ್ ಭಾರದ್ವಾಜ್- ಟಿವಿ9
ರಮಾಕಾಂತ್-ಟಿವಿ5
ಶ್ರೀನಿವಾಸ್-ಬೆಂಗಳೂರು.
ಬಿ.ಪಿಳ್ಳರಾಜು- ಬೆಂಗಳೂರು ಗ್ರಾಮಾಂತರ.
ಬಾಸ್ಕರ ರೈ ಕಟ್ಟ-ಮಂಗಳೂರು
ಗುರುಶಾಂತ.ಎನ್. -ಬಳ್ಳಾರಿ
ಎಸ್.ಎಂ.ಮನೋಹರ-
ಹೊಸಪೇಟೆ, ವಿಜಯನಗರ.
ಸಿ.ಬಿ.ಸುಬೇದಾರ್- ನರಗುಂದ, ಗದಗ

The post KUWJ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪ್ರಕಟ: ಮಾರ್ಚ್ 9ಕ್ಕೆಪ್ರಶಸ್ತಿ ಪ್ರದಾನ. appeared first on Good News 24x7.

]]>