Bangalore Archives - Good News 24x7 https://www.goodnews24x7.com/tag/bangalore/ Kannada Tue, 30 Jun 2026 09:01:18 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Bangalore Archives - Good News 24x7 https://www.goodnews24x7.com/tag/bangalore/ 32 32 ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ! https://www.goodnews24x7.com/mp-tejaswi-suryas-anger-against-the-state-government/ Tue, 30 Jun 2026 09:01:18 +0000 https://www.goodnews24x7.com/?p=9709 ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕೊರತೆ ಹಾಗೂ ಪ್ರಯಾಣಿಕರ ನಿತ್ಯದ ಪರದಾಟದ ಕುರಿತು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಐಟಿ ನಗರಿಯಲ್ಲಿ ಹೊಸ ಸರ್ಕಾರ ಮತ್ತು ಹೊಸ ಸಾರಿಗೆ ಸಚಿವರು ಬಂದರೂ ಪರಿಸ್ಥಿತಿ ಬದಲಾಗಿಲ್ಲ, ಬಸ್‌ಗಾಗಿ…

The post ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ! appeared first on Good News 24x7.

]]>

ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕೊರತೆ ಹಾಗೂ ಪ್ರಯಾಣಿಕರ ನಿತ್ಯದ ಪರದಾಟದ ಕುರಿತು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಐಟಿ ನಗರಿಯಲ್ಲಿ ಹೊಸ ಸರ್ಕಾರ ಮತ್ತು ಹೊಸ ಸಾರಿಗೆ ಸಚಿವರು ಬಂದರೂ ಪರಿಸ್ಥಿತಿ ಬದಲಾಗಿಲ್ಲ, ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸಾಗಿದೆ ಎಂದು ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲೇ ಕಾಯಬೇಕೋ ಎಂದು ಸಿಎಂಗೆ ಪ್ರಶ್ನಿಸಿದ್ದಾರೆ.

ಬಿಎಂಟಿಸಿ ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸು! ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬಿಎಂಟಿಸಿ ಬಸ್‌ಗಳ ಕೊರತೆ ಕುರಿತು ಸಂಸದ ತೇಜಸ್ವಿ ಸೂರ್ಯ ಅಸಮಾಧಾನ.
ಪ್ರಯಾಣಿಕರು ಗಂಟೆಗಟ್ಟಲೆ ಬಸ್‌ಗಾಗಿ ರಸ್ತೆಯಲ್ಲೇ ಕಾಯುವಂತಾಗಿದೆ ಎಂದು ಟೀಕೆ.
ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲೇ ನಿಲ್ಲಬೇಕೋ ಎಂದು ಪ್ರಶ್ನೆ.
ಜೂನ್ 30,ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಸೋಮವಾರ ಖುದ್ದು ಬಿಎಂಟಿಸಿ ಬಸ್ಸಿನಲ್ಲಿ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯಾಣಿಕರ ಅಳಲು ಆಲಿಸಿದ್ದರು. ಇದೀಗ ಬಿಎಂಟಿಸಿ ಬಸ್​ ಸ್ಟ್ಯಾಂಡ್​ ಒಂದರಲ್ಲಿ ಪ್ರಯಾಣಿಕರೊಂದಿಗೆ ಮಾತನಾಡಿ ಅಲ್ಲಿನ ದುಸ್ಥಿತಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಎಂಟಿಸಿ ಪ್ರಯಾಣಿಕರ ದೈನಂದಿನ ಪರದಾಟವನ್ನು ತಪಸ್ಸಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ!

ಉತ್ತಮ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬಸ್‌ಗಳ ಸಂಖ್ಯೆಯನ್ನು ಕನಿಷ್ಠ 15,000 ಕ್ಕೆ ಹೆಚ್ಚಿಸಬೇಕು. ನಗರದ ಯಾವುದೇ ಭಾಗದಲ್ಲಾದರೂ ಸರಿ, ಪ್ರತಿ ಪ್ರಜೆಗೆ ಐದು ನಿಮಿಷಗಳಲ್ಲಿ ಬಸ್ ಸಿಗುವಂತಾಗಲು ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕು ಎಂದು ತೇಜಸ್ವಿ ಸೂರ್ಯ ಅವರು ಈ ಹಿಂದೆ ಮಾಡಿದ್ದ ಹಳೆಯ ಪೋಸ್ಟ್ ಅನ್ನು ನೆನಪಿಸಿಕೊಂಡಿದ್ದಾರೆ. ಆ ಪೋಸ್ಟ್ ಮಾಡಿ ಎಂಟು ತಿಂಗಳು ಕಳೆದಿದ್ದು, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ, ಹೊಸ ಉಪಮುಖ್ಯಮಂತ್ರಿ ಹಾಗೂ ಹೊಸ ಸಾರಿಗೆ ಸಚಿವರು ಅಧಿಕಾರಕ್ಕೆ ಬಂದಿದ್ದರೂ ಬೆಂಗಳೂರಿನ ಬಿಎಂಟಿಸಿ ಸ್ಥಿತಿ ಮಾತ್ರ ಹಳೇ ಕಥೆಯನ್ನೇ ಮುಂದುವರಿಸಿದೆ ಎಂದು ಅವರು ಟೀಕಿಸಿದ್ದಾರೆ.

The post ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ! appeared first on Good News 24x7.

]]>
ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯಗಳು! https://www.goodnews24x7.com/happy-birthday-to-nadaprabhu-kempegowda/ Sat, 27 Jun 2026 05:50:23 +0000 https://www.goodnews24x7.com/?p=9683 ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಎಲ್ಲರೂ ಗೌರವ ಭಾವದಿಂದ ಸ್ಮರಿಸಬೇಕಾದ ದಿನ; ಆಡಳಿತಗಾರರು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕಾದ ದಿನ. ಏಕೆಂದರೆ, ಬೆಂಗಳೂರಿನಂಥ ಮಹಾಮಹಿಮ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ 513ನೇ ಜನ್ಮದಿನವಿದು. ಇದನ್ನು ಸರ್ಕಾರವೇ ವಿಜೃಂಭಣೆಯಿಂದ ಆಚರಿಸುತ್ತಿದ್ದು, ‘ಬೆಂಗಳೂರಿನ ಜನಕ’ರನ್ನು ಸ್ಮರಿಸುತ್ತಿದೆ. ಈ ಮೂಲಕ,…

The post ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯಗಳು! appeared first on Good News 24x7.

]]>

ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಎಲ್ಲರೂ ಗೌರವ ಭಾವದಿಂದ ಸ್ಮರಿಸಬೇಕಾದ ದಿನ; ಆಡಳಿತಗಾರರು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕಾದ ದಿನ. ಏಕೆಂದರೆ, ಬೆಂಗಳೂರಿನಂಥ ಮಹಾಮಹಿಮ ನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ 513ನೇ ಜನ್ಮದಿನವಿದು. ಇದನ್ನು ಸರ್ಕಾರವೇ ವಿಜೃಂಭಣೆಯಿಂದ ಆಚರಿಸುತ್ತಿದ್ದು, ‘ಬೆಂಗಳೂರಿನ ಜನಕ’ರನ್ನು ಸ್ಮರಿಸುತ್ತಿದೆ. ಈ ಮೂಲಕ, ಕೆಂಪೇಗೌಡರ ವೈಭವದ ಪರಂಪರೆಯನ್ನು ತರುಣ ತಲೆಮಾರುಗಳಿಗೆ ವರ್ಗಾಯಿಸುವ ಕೆಲಸವೂ ಆಗುತ್ತಿದೆ.

ಬೆಂಗಳೂರಿಗೆ ಏನಿಲ್ಲವೆಂದರೂ 1,100 ವರ್ಷಗಳ ಇತಿಹಾಸವಿದೆ. ಕನ್ನಡ ನಾಡಿನ ಬಹುಭಾಗದಿಂದ ಹಿಡಿದು ತಮಿಳುನಾಡಿನ ಮದುರೆಯವರೆಗೂ ಆಳಿದ ಹೊಯ್ಸಳರ ದೊರೆ ಬಲ್ಲಾಳನ ಕಾಲದಿಂದಲೂ ಬೆಂಗಳೂರಿನ ಉಲ್ಲೇಖವು ನಮಗೆ ಅನೇಕ ಕಡೆಗಳಲ್ಲಿ ಸಿಗುತ್ತದೆ.
18 ಬಗೆಯ ಕಸುಬುಗಳನ್ನು ಆಧರಿಸಿದ ಮೂಲ ಬೆಂಗಳೂರಿನ ‘ಪೇಟೆ’ಗಳನ್ನು (ಉದಾ: ದೊಡ್ಡಪೇಟೆ, ಚಿಕ್ಕಪೇಟೆ, ತಿಗಳರ ಪೇಟೆ, ಕುರುಬರ ಪೇಟೆ, ಅರಳೇಪೇಟೆ, ಬಳೇಪೇಟೆ, ತರಗುಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಕುಂಬಾರರ ಪೇಟೆ, ನಗರ್ತರ ಪೇಟೆ, ಗಾಣಿಗರ ಪೇಟೆ, ಮಡಿವಾಳ ಪೇಟೆ, ಉಪ್ಪಾರಪೇಟೆ ಇತ್ಯಾದಿಗಳು) ನೋಡಿದರೆ, ಇದು ಗೊತ್ತಾಗುತ್ತದೆ.

ಈ ‘ಮೂಲ ಬೆಂಗಳೂರೇ’ ಕೆಂಪೇಗೌಡರು ಕಟ್ಟಿದ ಬೆಂಗಳೂರು ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರ ಆಧಾರದ ಮೇಲೆ, ನಂತರದ ಕಾಲದಲ್ಲಿ ಬಂದ ಆಳ್ವಿಕೆಗಾರರು ಬೆಂಗಳೂರನ್ನು ಪೇಟೆಯಾಗಿ, ಪಟ್ಟಣವಾಗಿ, ನಗರವಾಗಿ, ಮಹಾನಗರವಾಗಿ ಬೆಳೆಸಿದ್ದಾರೆ. ಈಗಂತೂ ನಮ್ಮ ರಾಜಧಾನಿಯು ಈ ಹಿರಿಮೆಗಳನ್ನೆಲ್ಲ ದಾಟಿ, ಜಪಾನಿನಿಂದ ಹಿಡಿದು ಅಮೆರಿಕದವರೆಗೂ ಎಲ್ಲರಿಗೂ ಗೊತ್ತಿರುವ ಒಂದು ‘ಕಾಸ್ಮೋಪಾಲಿಟನ್‌ ಸಿಟಿ’ ಆಗಿ, ಹೆಮ್ಮರದಂತೆ ಬೆಳೆದಿದೆಪೇಟೆಯಿಂದ ಸಿಟಿಯವರೆಗೆ
ಬೆಂಗಳೂರು ಇಂದು ಐಟಿ ಸಿಟಿ, ಬಿಟಿ ಸಿಟಿ, ನವೋದ್ಯಮಗಳ ನಗರ, ಸಂಶೋಧನೆಗಳ ನಗರ, ಏರೋನಾಟಿಕ್ಸ್‌ ಸಿಟಿ.. ಇತ್ಯಾದಿಗಳೆಲ್ಲ ಆಗಿದೆ. ಜೊತೆಗೆ, ಉದ್ಯಾನ ನಗರಿ ಎಂಬ ಖ್ಯಾತಿಯನ್ನೂ ಉಳಿಸಿಕೊಂಡಿದೆ. ಇದಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಭಾರತದ ಆರ್ಥಿಕ ಕೇಂದ್ರವಾಗಿಯೂ ನಮ್ಮ ಬೆಂಗಳೂರು ಬೆಳೆದಿದೆ; ಇದಕ್ಕೆ ಪೂರಕವಾಗಿ ಇದು ನಿಜವಾದ ಅರ್ಥದಲ್ಲಿ ‘ನಾಲೆಡ್ಜ್‌ ಸಿಟಿ’ಯೂ ಆಗಿ ಬೆಳೆಯುತ್ತಿದೆ. ಒಟ್ಟಿನಲ್ಲಿ, ಇಲ್ಲಿ ಎಲ್ಲವೂ ಕೆಂಪೇಗೌಡರು ಹಾಕಿದ ಬುನಾದಿಯ ಮೇಲೆಯೇ ವಿಸ್ತರಣೆ ಆಗುತ್ತಿವೆ ಎನ್ನುವುದು ಹೆಮ್ಮೆಯ ಸಂಗತಿ.ಹೀಗಾಗಿಯೇ ಬೆಂಗಳೂರು ಇಂದು ಬಹುದೊಡ್ಡ ಶಿಕ್ಷಣ ತಾಣವಾಗಿದೆ; ಒಂದೂ ಕಾಲು ಕೋಟಿ ಜನರ ಪಾಲಿಗೆ ಸೂರಾಗಿದೆ; ವಿದೇಶೀಯರ ಪಾಲಿಗೆ ಅಚ್ಚುಮೆಚ್ಚಿನ ‘ಡೆಸ್ಟಿನೇಶನ್‌’ ಆಗಿದೆ! ಕಲಿಕೆ, ಹೂಡಿಕೆ, ಕೈಗಾರಿಕೆ, ಆಡಳಿತ, ಸಂಸ್ಕೃತಿ, ಶಾಂತಿ, ಹಿತಕರ ಹವೆ- ಹೀಗೆ ಎಲ್ಲದಕ್ಕೂ ಬೆಂಗಳೂರು ಇನ್ನೊಂದು ಹೆಸರಾಗಿದೆ. ಇವೆಲ್ಲಕ್ಕೆ ಕಿರೀಟವಿಟ್ಟಂತೆ ಈಗ ಇದು ‘ದೇಶದ ಡೆಕಾಕಾರ್ನ್‌ ಕಂಪನಿಗಳ ರಾಜಧಾನಿ’ಯಾಗಿಯೂ ಹೊರಹೊಮ್ಮಿದೆ. ಐಟಿ-ಬಿಟಿ ಖಾತೆಗಳ ಜವಾಬ್ದಾರಿಯನ್ನೂ ಹೊತ್ತುಕೊಂಡಿರುವ ನನಗೆ ದಿನನಿತ್ಯವೂ ಇದರ ಸಾಕ್ಷಾತ್‌ ದರ್ಶನವೇ ಆಗುತ್ತಿದೆ.

ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ

ಕೆಂಪೇಗೌಡರಿಗೆ ಸಂಬಂಧಿಸಿದ 46 ತಾಣಗಳನ್ನು ಅಭಿವೃದ್ಧಿಪಡಿಸಲು ‘ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರ’ವನ್ನೇ ರಚಿಸಲಾಗಿದ್ದು, ಇದಕ್ಕೆ ಅಗತ್ಯ ಹಣಕಾಸಿನ ಅನುದಾನ ಒದಗಿಸಲಾಗುತ್ತಿದೆ. ಇದರಡಿಯಲ್ಲಿ ಮಾಗಡಿ ತಾಲ್ಲೂಕಿನಲ್ಲಿರುವ ಕೆಂಪೇಗೌಡರ ಸಮಾಧಿ ಸ್ಥಳವಾದ ಕೆಂಪಾಪುರವನ್ನು ಸ್ಥಳಾಂತರಿಸಿ, ಅಲ್ಲಿ ‘ವೀರಸಮಾಧಿ ಅಭಿವೃದ್ಧಿ’ಯನ್ನು ಕೋಟ್ಯಂತರ ವೆಚ್ಚದಲ್ಲಿ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಭೂಸ್ವಾಧೀನ ಕಾರ್ಯ ಈಗಾಗಲೇ ಅಂತಿಮ ಹಂತದಲ್ಲಿ ಪ್ರಗತಿಯಲ್ಲಿದೆ. ಹಾಗೆಯೇ, ಮಾಗಡಿಯಲ್ಲಿ ಕೆಂಪೇಗೌಡರು ಕಟ್ಟಿದ ಕೋಟೆಯನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಒಟ್ಟಿನಲ್ಲಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಕೆಂಪೇಗೌಡರಿಗೆ ಸಂಬಂಧಿಸಿದ ಸ್ಥಳಗಳನ್ನೆಲ್ಲ ‘ಮಾಗಡಿ, ಬೆಂಗಳೂರು ಮತ್ತು ನಂದಿ ಸಕ್ರ್ಯೂಟ್‌ ಗಳನ್ನಾಗಿ’ ವಿಂಗಡಿಸಿ, ಆಕರ್ಷಕ ಸ್ಥಳಗಳನ್ನಾಗಿ ಮಾಡಲಾಗುತ್ತಿದೆ. ಇದರಿಂದ ಪ್ರವಾಸೋದ್ಯಮ ಚಟುವಟಿಕೆಗಳೂ ಗರಿಗೆದರುತ್ತವೆ. ಈಗಾಗಲೇ ಈ ಪೈಕಿ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ‘ಐಡೆಕ್‌’ ಸಂಸ್ಥೆಯಿಂದ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ.
ಒಟ್ಟಿನಲ್ಲಿ, ಕೆಂಪೇಗೌಡರು ಕಟ್ಟಿಸಿದ ಕೋಟೆಗಳು, ಕೆರೆಗಳು, ಪಾರಂಪರಿಕ ತಾಣಗಳೆಲ್ಲವೂ ಚಿರಸ್ಥಾಯಿಯಾಗಿ ಉಳಿಯಬೇಕೆನ್ನುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ. ಮಿಗಿಲಾಗಿ, ಕೆಂಪೇಗೌಡರ ವಂಶಕ್ಕೆ ಸೇರಿದ ಇತಿಹಾಸ, ಕಲೆ, ಸಾಹಿತ್ಯ, ವಾಸ್ತುಶಿಲ್ಪ, ನೀರಾವರಿ, ಯೋಜನೆಗಳು ಇತ್ಯಾದಿಗಳ ಬಗ್ಗೆ ಆಯಾ ಕ್ಷೇತ್ರಗಳ ತಜ್ಞರಿಂದ ಸಮಗ್ರ ಮತ್ತು ತಲಸ್ಪರ್ಶಿ ಅಧ್ಯಯನಕ್ಕೆ ಬೇಕಾದ ಸೌಲಭ್ಯವನ್ನು ಮಾಡಿಕೊಡುವುದೂ ಸರ್ಕಾರದ ಚಿಂತನೆಯಲ್ಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ

ಕೆಂಪೇಗೌಡರ ಗೌರವಾರ್ಥವಾಗಿ, ಈ ವರ್ಷದಿಂದಲೇ ನಾನಾ ಕ್ಷೇತ್ರಗಳ ಅನುಪಮ ಸಾಧಕರಿಗೆ ‘ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಸರ್ಕಾರ ಆರಂಭಿಸಿದೆ. ಮೊದಲ ವರ್ಷದ ಈ ಪ್ರಶಸ್ತಿಗೆ ಬೆಂಗಳೂರು ವಿಶ್ವ ಭೂಪಟದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ ಎಸ್‌.ಎಂ.ಕೃಷ್ಣ, ಇಸ್ಫೋಸಿಸ್‌ ಕಂಪನಿಯನ್ನು ಸ್ಥಾಪಿಸುವ ಮೂಲಕ ನಮ್ಮ ನಗರಕ್ಕೆ ‘ಭಾರತದ ಸಿಲಿಕಾನ್‌ ಸಿಟಿ’ ಎನ್ನುವ ಶ್ರೇಯಸ್ಸನ್ನು ತಂದಿತ್ತ ಎನ್‌.ಆರ್‌.ನಾರಾಯಣಮೂರ್ತಿ ಮತ್ತು ಬ್ಯಾಡ್ಮಿಂಟನ್‌ ತಾರೆ ಪ್ರಕಾಶ್‌ ಪಡುಕೋಣೆ ಅವರನ್ನು ತಜ್ಞರ ಸಮಿತಿಯು ಆರಿಸಿದೆ. ಇಂದು ನಡೆಯಲಿರುವ ‘ಕೆಂಪೇಗೌಡರ ಜಯಂತಿ’ಯಲ್ಲಿ ಈ ಮೂವರಿಗೂ ತಲಾ 5 ಲಕ್ಷ ರು. ನಗದಿನೊಂದಿಗೆ ಈ ಪ್ರತಿಷ್ಠಿತ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು.

ಕೆಂಪೇಗೌಡರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಹೀಗೆ ಹಲವು ಅರ್ಥಪೂರ್ಣ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು ಇಂದು ಗಳಿಸಿರುವ ಅತಿಶಯವಾದ ಕೀರ್ತಿಗೆ ಕೆಂಪೇಗೌಡರೇ ಮೂಲಕಾರಣ! ಅವರು ಹಾಕಿಕೊಟ್ಟಿರುವ ಹಾದಿಯಲ್ಲೇ ನಾವೂ ಹೆಜ್ಜೆ ಇಡುತ್ತಿದ್ದೇವೆ. ನಾಡಿನ ಸಮಸ್ತ ಜನತೆ ಗುಡ್ ನ್ಯೂಸ್ ವಾಹಿನಿಯ ವತಿಯಿಂದ ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯಗಳು!

The post ನಾಡಪ್ರಭು ಕೆಂಪೇಗೌಡರ ಜನ್ಮದಿನದ ಶುಭಾಶಯಗಳು! appeared first on Good News 24x7.

]]>
ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ? https://www.goodnews24x7.com/why-did-our-metro-train-give-up-again/ Fri, 26 Jun 2026 06:25:26 +0000 https://www.goodnews24x7.com/?p=9667 ಗುರುವಾರ ಸಂಜೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲಿನ ಬಾಗಿಲು ಮುಚ್ಚದ ಕಾರಣ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದ ಘಟನೆಗೆ ಅಸಲಿ ಕಾರಣ ಬಯಲಾಗಿದೆ. ಪ್ರಯಾಣಿಕರೊಬ್ಬರ ಲೋಹದ ಸರ ಬಾಗಿಲಿನ ಗೈಡ್‌ವೇನಲ್ಲಿ ಸಿಲುಕಿಕೊಂಡಿದ್ದರಿಂದ ಈ ತಾಂತ್ರಿಕ ವ್ಯತ್ಯಯ ಉಂಟಾಗಿತ್ತು…

The post ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ? appeared first on Good News 24x7.

]]>

ಗುರುವಾರ ಸಂಜೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ರೈಲಿನ ಬಾಗಿಲು ಮುಚ್ಚದ ಕಾರಣ ಮೆಟ್ರೋ ಸೇವೆ ಸ್ಥಗಿತಗೊಂಡಿದ್ದ ಘಟನೆಗೆ ಅಸಲಿ ಕಾರಣ ಬಯಲಾಗಿದೆ. ಪ್ರಯಾಣಿಕರೊಬ್ಬರ ಲೋಹದ ಸರ ಬಾಗಿಲಿನ ಗೈಡ್‌ವೇನಲ್ಲಿ ಸಿಲುಕಿಕೊಂಡಿದ್ದರಿಂದ ಈ ತಾಂತ್ರಿಕ ವ್ಯತ್ಯಯ ಉಂಟಾಗಿತ್ತು ಎಂದು ಬಿಎಂಆರ್‌ಸಿಎಲ್ ತನ್ನ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಿದೆ.

ಪರ್ಪಲ್ ಲೈನ್ ಮೆಟ್ರೋ ರೈಲು ಹಾಗೂ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದ ಲೋಹದ ಸರ

ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷವಿಲ್ಲ
ಬಾಗಿಲಿನಲ್ಲಿ ಸಿಲುಕಿತ್ತು ಲೋಹದ ಸರ
ಬಿಎಂಆರ್​ಸಿಎಲ್ ಪ್ರಾಥಮಿಕ ತನಿಖಾ ವರದಿಯಲ್ಲಿ ಬಯಲು

ಜೂನ್ 26 ,ಬೆಂಗಳೂರು : ನಮ್ಮ ಮೆಟ್ರೋದ ನೇರಳೆ ಮಾರ್ಗದ (Purple Line) ಕಬ್ಬನ್ ಪಾರ್ಕ್ ನಿಲ್ದಾಣದಲ್ಲಿ ಗುರುವಾರ ಸಂಜೆ ರೈಲಿನ ಬಾಗಿಲು ಮುಚ್ಚದೆ ಪ್ರಯಾಣಿಕರು ಆತಂಕಗೊಂಡಿದ್ದ ಮತ್ತು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷ ಇರಲಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಎಂಆರ್‌ಸಿಎಲ್, ಘಟನೆಗೆ ಕಾರಣವಾದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದೆ.

ಡೋರ್ ಗೈಡ್‌ವೇನಲ್ಲಿ ಸಿಲುಕಿದ್ದ ಮೆಟಲ್ ಚೈನ್
ಗುರುವಾರ ಸಂಜೆ 7:36 ರ ಸುಮಾರಿಗೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಸರಿಯಾಗಿ ಮುಚ್ಚದ ಕಾರಣ ಮುಂಜಾಗ್ರತಾ ಕ್ರಮವಾಗಿ ಸಂಜೆ 7:54 ರವರೆಗೆ ಮೆಟ್ರೋ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದ ನೂರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು.

ಕಾರಣ ಪತ್ತೆ ಹಚ್ಚಿದ ಬಿಎಂಆರ್​ಸಿಎಲ್ ನಿರ್ವಹಣಾ ತಂಡ
ಈ ಘಟನೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣಾ ತಂಡಗಳು ಜಂಟಿಯಾಗಿ ಸಮಗ್ರ ಪ್ರಾಥಮಿಕ ತನಿಖೆ ನಡೆಸಿದ್ದು, ಪ್ರಯಾಣಿಕರೊಬ್ಬರ ಲೋಹದ ಸರ ರೈಲಿನ ಬಾಗಿಲಿನ ಡೋರ್ ಗೈಡ್‌ವೇ ಯಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿವೆ. ಇದರಿಂದಾಗಿಯೇ ಬಾಗಿಲುಗಳು ಸ್ವಯಂಚಾಲಿತವಾಗಿ ಲಾಕ್ ಆಗಲು ಸಾಧ್ಯವಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆಯೇ ನಮ್ಮ ಆದ್ಯತೆ ಬಿಎಂಆರ್‌ಸಿಎಲ್

ರೈಲು ಹಾಗೂ ಅದರ ಬಾಗಿಲಿನ ವ್ಯವಸ್ಥೆಯನ್ನು ಸಮಗ್ರವಾಗಿ ತಾಂತ್ರಿಕ ಪರಿಶೀಲನೆಗೆ ಒಳಪಡಿಸಿದ ನಂತರ, ರೈಲಿನ ಉಪಕರಣಗಳಲ್ಲಿ ಯಾವುದೇ ರೀತಿಯ ದೋಷ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ‘ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯೇ ಬಿಎಂಆರ್‌ಸಿಎಲ್‌ಗೆ ಅತ್ಯುನ್ನತ ಆದ್ಯತೆಯಾಗಿದೆ. ಸಾರ್ವಜನಿಕರಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ನಿರಂತರ ಮೆಟ್ರೋ ಸೇವೆಗಳನ್ನು ಒದಗಿಸಲು ನಾವು ಸದಾ ಬದ್ಧರಾಗಿದ್ದೇವೆ’ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಮೆಟ್ರೋ ಹತ್ತುವಾಗ ಮತ್ತು ಇಳಿಯುವಾಗ ತಮ್ಮ ಬ್ಯಾಗ್ ಹಾಗೂ ಸರಗಳಂತಹ ವಸ್ತುಗಳ ಬಗ್ಗೆ ಎಚ್ಚರ ವಹಿಸುವುದು ಅವಶ್ಯಕವಾಗಿದೆ.

The post ನಮ್ಮ ಮೆಟ್ರೋ ರೈಲು ಮತ್ತೆ ಕೈಕೊಟ್ಟಿದ್ದೇಕೆ? ? appeared first on Good News 24x7.

]]>
ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! https://www.goodnews24x7.com/food-delivery-apps-banned-in-bengaluru-schools/ Sun, 21 Jun 2026 11:19:35 +0000 https://www.goodnews24x7.com/?p=9616   ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ  ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು…

The post ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! appeared first on Good News 24x7.

]]>

  ಬೆಂಗಳೂರು : ನಗರದ ಪ್ರತಿಷ್ಠಿತ ಶಾಲೆಗಳು ತಮ್ಮ ಆವರಣದಲ್ಲಿ ಸ್ವಿಗ್ಗಿ, ಜೊಮ್ಯಾಟೊ  ಸೇರಿದಂತೆ ಇತರೆ ಆನ್‌ಲೈನ್ ಆಪ್‌ಗಳ ಮೂಲಕ ಆಹಾರ ಆರ್ಡರ್ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸುತ್ತಿವೆ. ಇತ್ತೀಚೆಗಷ್ಟೇ ಬನಶಂಕರಿಯಲ್ಲಿರುವ ವಿದ್ಯಾಶಿಲ್ಪ ಶಾಲೆ ತನ್ನ ಪೋಷಕರಿಗೆ ಸುತ್ತೋಲೆ ಹೊರಡಿಸಿ ಈ ನಿಯಮವನ್ನು ಪ್ರಕಟಿಸಿದ್ದು, ನಗರದ ಇನ್ನೂ ಹಲವು ಪ್ರಮುಖ ಶಾಲೆಗಳು ಈ ಹಾದಿ ಹಿಡಿದಿವೆ.

ಶಾಲಾ ಆಡಳಿತ ಮಂಡಳಿಗಳುಯ ಹೇಳುವಂತೆ ಹೊರಗಿನಿಂದ ಆರ್ಡರ್ ಮಾಡುವ ಜಂಕ್ ಫುಡ್‌ಗಳು ಆರೋಗ್ಯಕರವಾಗಿರುವುದಿಲ್ಲ. ಅವುಗಳಲ್ಲಿ ಅತಿಯಾದ ಎಣ್ಣೆ, ಉಪ್ಪು ಮತ್ತು ಪ್ರಿಸರ್ವೇಟಿವ್ಸ್‌ಗಳನ್ನು ಬಳಸಲಾಗಿರುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾಲೆಯೊಂದರ ಪ್ರಾಂಶುಪಾಲರು ಹೇಳುವಂತೆ, ಒಬ್ಬ ವಿದ್ಯಾರ್ಥಿ ಮನೆಯಿಂದ ತಂದ ಸಾಮಾನ್ಯ ಪಲಾವ್ ತಿನ್ನುವಾಗ, ಪಕ್ಕದ ಮಗು ಪಿಜ್ಜಾ ಆರ್ಡರ್ ಮಾಡಿ ತಿಂದರೆ ಅದು ಮಕ್ಕಳಲ್ಲಿ ಅನಗತ್ಯ ಆಕರ್ಷಣೆ ಮತ್ತು ತಾರತಮ್ಯ ಮೂಡಿಸುತ್ತದೆ. ಇದು ಪೋಷಕರ ಮೇಲೆ ಮತ್ತಷ್ಟು ಒತ್ತಡ ತರುತ್ತದೆ ಎಂದಿದ್ದಾರೆ. ಡೆಲಿವರಿ ಬಾಯ್‌ಗಳು ಪದೇ ಪದೇ ಶಾಲಾ ಆವರಣಕ್ಕೆ ಬರುವುದು ಭದ್ರತೆಯ ದೃಷ್ಟಿಯಿಂದ ಸರಿಯಲ್ಲ. ಪ್ರತಿದಿನ 4-5 ಪಾರ್ಸಲ್‌ಗಳನ್ನು ತರಗತಿಗಳಿಗೆ ತಲುಪಿಸುವುದು ಶಾಲೆಯ ಶಿಸ್ತು ಮತ್ತು ಸಮಯ ಪಾಲನೆಗೆ ಅಡ್ಡಿಪಡಿಸುತ್ತದೆ.

ಮನೆಯ ಊಟಕ್ಕೆ ಆದ್ಯತೆ
ಪೋಷಕರು ಅನಿವಾರ್ಯ ಕಾರಣಗಳಿಂದ ಮನೆಯಲ್ಲಿ ಅಡುಗೆ ಮಾಡಲು ಸಾಧ್ಯವಾಗದಿದ್ದರೆ, ಹೋಟೆಲ್‌ನಿಂದ ತರಿಸಿದ ಆರೋಗ್ಯಕರ ಆಹಾರವನ್ನೇ ಸಾಮಾನ್ಯ ಲಂಚ್ ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿ ಕಳುಹಿಸಬೇಕು ಎಂದು ಶಾಲೆಗಳು ವಿನಂತಿಸಿವೆ. ವಿದ್ಯಾರ್ಥಿಗಳಿಗೆ ಮಾದರಿಯಾಗಲು ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗಕ್ಕೂ ಸಹ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡುವುದನ್ನು ನಿಷೇಧಿಸಲಾಗಿದೆ.

The post ಬೆಂಗಳೂರು ಶಾಲೆಗಳಲ್ಲಿ ಫುಡ್ ಡೆಲಿವರಿ ಆಪ್‌ಗಳಿಗೆ ನಿಷೇಧ ! appeared first on Good News 24x7.

]]>
MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! https://www.goodnews24x7.com/mi-vs-rcb-big-fight-between-giants-at-wankhede-bangalore-ready-for-mumbai-challenge/ Sat, 11 Apr 2026 08:54:52 +0000 https://www.goodnews24x7.com/?p=9186 ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ…

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>

ಮುಂಬೈ: ಐಪಿಎಲ್ 2026ರ ಭಾನುವಾರದ ಬಿಗ್ ಸಂಡೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗುತ್ತಿವೆ. ಶುಕ್ರವಾರವಷ್ಟೇ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡ, ಕೇವಲ ಒಂದೇ ದಿನದ ಅಂತರದಲ್ಲಿ ಮುಂಬೈನ ಐಕಾನಿಕ್ ವಾಂಖೆಡೆ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಪಡೆಯನ್ನು ಎದುರಿಸಲು ಸಜ್ಜಾಗಿದೆ.

ವಾಂಖೆಡೆ ಪಿಚ್ ಮತ್ತು ಹವಾಮಾನ ವರದಿ:
ಬ್ಯಾಟ್ಸ್‌ಮನ್‌ಗಳ ಸ್ವರ್ಗವೆಂದೇ ಕರೆಯಲ್ಪಡುವ ವಾಂಖೆಡೆಯ ಕೆಂಪು ಮಣ್ಣಿನ ಪಿಚ್ ವೇಗ ಮತ್ತು ಬೌನ್ಸ್‌ಗೆ ಹೆಸರಾಗಿದೆ. ಇಲ್ಲಿನ ವೇಗದ ಔಟ್‌ಫೀಲ್ಡ್ ಬೃಹತ್ ಮೊತ್ತದ ರನ್ ಗಳಿಸಲು ಪೂರಕವಾಗಿದೆ. ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನ 12ನೇ ಓವರ್ ಬಳಿಕ ಇಬ್ಬನಿ (Dew Factor) ಬೀಳುವ ನಿರೀಕ್ಷೆಯಿರುವುದರಿಂದ ಚೇಸಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ. ಪಂದ್ಯದ ವೇಳೆ ಮಳೆ ಸಾಧ್ಯತೆ ಕೇವಲ ಶೇ.5 ರಷ್ಟು ಮಾತ್ರವಿದ್ದು, ಕ್ರಿಕೆಟ್ ಪ್ರಿಯರಿಗೆ ಯಾವುದೇ ಅಡ್ಡಿಯಿಲ್ಲದೆ ಪಂದ್ಯ ವೀಕ್ಷಿಸಲು ಅವಕಾಶವಿದೆ.

ಉಭಯ ತಂಡಗಳ ಮುಖಾಮುಖಿ ಹಾಗೂ ದಾಖಲೆಗಳು:
ಇತಿಹಾಸವನ್ನು ಗಮನಿಸಿದರೆ, ಈವರೆಗೆ ನಡೆದ 34 ಹಣಾಹಣಿಗಳಲ್ಲಿ ಮುಂಬೈ 19 ಪಂದ್ಯ ಗೆದ್ದಿದ್ದರೆ, ಆರ್‌ಸಿಬಿ 15 ರಲ್ಲಿ ಜಯ ಸಾಧಿಸಿದೆ. ಮುಂಬೈ ವಿರುದ್ಧದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 855 ರನ್ ಗಳಿಸುವ ಮೂಲಕ ಉತ್ತಮ ದಾಖಲೆ ಹೊಂದಿದ್ದಾರೆ. ಮತ್ತೊಂದೆಡೆ, ಮುಂಬೈ ಪರ ಜಸ್ಪ್ರೀತ್ ಬುಮ್ರಾ ಆರ್‌ಸಿಬಿ ವಿರುದ್ಧ 24 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. 2015 ರಲ್ಲಿ ಆರ್‌ಸಿಬಿ ಇದೇ ಮೈದಾನದಲ್ಲಿ 235 ರನ್ ಸಿಡಿಸಿ ಗರಿಷ್ಠ ಮೊತ್ತ ಪೇರಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ತನ್ನ ತವರಿನ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ಅದ್ಭುತ ದಾಖಲೆ ಹೊಂದಿದ್ದು, ಆರ್‌ಸಿಬಿ ವಿರುದ್ಧದ 12 ಪಂದ್ಯಗಳಲ್ಲಿ 8 ರಲ್ಲಿ ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧದ ಸೋಲಿನಿಂದ ಚೇತರಿಸಿಕೊಂಡು ಜಯಭೇರಿ ಬಾರಿಸುವ ಒತ್ತಡದಲ್ಲಿ ರಜತ್ ಪಾಟಿದಾರ್ ನೇತೃತ್ವದ ಬೆಂಗಳೂರು ತಂಡವಿದೆ.

The post MI vs RCB: ವಾಂಖೆಡೆಯಲ್ಲಿ ದೈತ್ಯರ ನಡುವೆ ಬಿಗ್ ಫೈಟ್; ಮುಂಬೈ ಸವಾಲಿಗೆ ಸಜ್ಜಾದ ಬೆಂಗಳೂರು! appeared first on Good News 24x7.

]]>
ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್! https://www.goodnews24x7.com/bangalore-hotel-association-moves-high-court-for-gas-cylindersbangalore-hotel-association-moves-high-court-for-gas-cylinders/ Tue, 17 Mar 2026 12:41:04 +0000 https://www.goodnews24x7.com/?p=8922   ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವದಿಂದ ಬೆಂಗಳೂರು ಹೋಟೆಲ್ ಉದ್ಯಮ ನಷ್ಟ ಅನುಭವಿಸುತ್ತಿದೆ. ಹಲವು ಹೋಟೆಲ್‌ಗಳು ಬಂದ್ ಆಗಿದ್ದರೆ, ಕೆಲವು ಮೆನು ಕಡಿತಗೊಳಿಸಿವೆ. ಈ ಬಿಕ್ಕಟ್ಟಿಗೆ ಪರಿಹಾರ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ.…

The post ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್! appeared first on Good News 24x7.

]]>

 

ರಾಜ್ಯದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ತೀವ್ರ ಅಭಾವದಿಂದ ಬೆಂಗಳೂರು ಹೋಟೆಲ್ ಉದ್ಯಮ ನಷ್ಟ ಅನುಭವಿಸುತ್ತಿದೆ. ಹಲವು ಹೋಟೆಲ್‌ಗಳು ಬಂದ್ ಆಗಿದ್ದರೆ, ಕೆಲವು ಮೆನು ಕಡಿತಗೊಳಿಸಿವೆ. ಈ ಬಿಕ್ಕಟ್ಟಿಗೆ ಪರಿಹಾರ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದೆ. 40 ಸಾವಿರ ಹೋಟೆಲ್‌ಗಳು ಮತ್ತು 6 ಲಕ್ಷ ಕಾರ್ಮಿಕರ ಭವಿಷ್ಯ ಅತಂತ್ರವಾಗಿದ್ದು, ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದೆ.
ರಾಜ್ಯದಲ್ಲಿ ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರೋದು ಹೋಟೆಲ್​​ ಉದ್ಯಮವನ್ನು ನಷ್ಟದ ಕೂಪಕ್ಕೆ ತಳ್ಳುತ್ತಿದೆ. ಈಗಾಗಲೇ ಹಲವು ಹೋಟೆಲ್​​ಗಳು ಬಂದ್​​ ಆಗಿದ್ದರೆ, ಇನ್ನೊಂದಿಷ್ಟು ಮೆನುವಿನಲ್ಲಿ ಭಾರೀ ಕಡಿತದ ಜೊತೆ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಅವುಗಳೂ ಕ್ಲೋಸ್​​ ಆಗುವ ಆತಂಕ ಎದುರಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ವಾಣಿಜ್ಯ ಬಳಕೆಯ ಸಿಲಿಂಡರ್​​ಗಳಿಗಾಗಿ ಹೈಕೋರ್ಟ್​​ ಕದ ತಟ್ಟಿದೆ.

ಹೈಕೋರ್ಟ್​ಗೆ ರಿಟ್ ಅರ್ಜಿ,ಹೋಟೆಲ್​ಗಳಿಗೆ ಗ್ಯಾಸ್ ಸಿಲಿಂಡರ್ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಲಾಗಿದ್ದು, ಹೋಟೆಲ್ ಮುಚ್ಚಿರುವುದರಿಂದ ಹಾಲು ಮತ್ತು ತರಕಾರಿ ಮಾರಾಟಗಾರರಿಗೂ ತೊಂದರೆ ಆಗಿದೆ. 40 ಸಾವಿರ ಹೋಟೆಲ್, 6 ಲಕ್ಷ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಅಸೋಸಿಯೇಷನ್ ಪರ ವಕೀಲ ಕೆ.ಸತೀಶ್ ಭಟ್ ಅರ್ಜಿ ಸಲ್ಲಿಸಿದ್ದಾರೆ.

ಹೋಟೆಲ್ ಉದ್ಯಮಕ್ಕೆ 1 ಸಾವಿರ ಸಿಲಿಂಡರ್​ಗಳನ್ನು ಪೂರೈಸುವುದಾಗಿ ಸಚಿವ ಮುನಿಯಪ್ಪ ಹೇಳಿದ್ದರೂ, ಸಚಿವರ ಭರವಸೆ ಬಗ್ಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. 40 ಸಾವಿರ ಹೋಟೆಲ್​​ಗಳಿಗೆ ಒಂದು ಸಾವಿರ ಸಿಲಿಂಡರ್ ಕೊಡುವ ಬದಲು, ಕೊಡದೆ ಇರುವುದೇ ಒಳ್ಳೆಯದು. ಹೋಟೆಲ್​​ಗಳ ಮಾಲಕರು ಮಾತ್ರವಲ್ಲದೆ ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬದ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್​ಗಳಿದ್ದು, ಈ ಪೈಕಿ 4,500 ಹೋಟೆಲ್​​ಗಳು ರಿಜಿಸ್ಟರ್​​ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹಲವೆಡೆ ರೆಸ್ಟೋರೆಂಟ್​​ಗಳು ಬಂದ್​​ ಆಗಿದ್ದರೆ, ಇನ್ನು ಕೆಲ ಹೋಟೆಲ್​​ಗಳು ನಷ್ಟದಲ್ಲಿಯೇ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರೊಂದರಲ್ಲೇ ನೂರಾರು ಕೋಟಿ ರೂಪಾಯಿ ಹೋಟೆಲ್​​ ಉದ್ಯಮಕ್ಕೆ ನಷ್ಟ ಉಂಟಾಗಿದೆ ಎನ್ನಲಾಗಿದೆ.

 

The post ಗ್ಯಾಸ್ ಸಿಲಿಂಡರ್​​ಗಾಗಿ ಹೈಕೋರ್ಟ್​​ ಮೆಟ್ಟಿಲೇರಿದ ಬೆಂಗಳೂರು ಹೋಟೆಲ್ ಅಸೋಸಿಯೇಷನ್! appeared first on Good News 24x7.

]]>
ಆನೆ ರಕ್ಷಣೆಗೆ ಬೆಂಗಳೂರಿನಿಂದ ಬಂದ ಕ್ರೇನ್​​, 4 ದಿನಗಳಿಂದ ನಾಲೆಯಲ್ಲಿ ಸಿಲುಕಿ ಆನೆ ಪರದಾಟ ! https://www.goodnews24x7.com/crane-from-bangalore-to-rescue-elephant-stuck-in-canal-for-4-days/ Tue, 18 Nov 2025 09:06:22 +0000 https://www.goodnews24x7.com/?p=8212 ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಶಿವವಸಮುದ್ರ ಬಳಿಯಿರುವ ನಾಲೆಯಲ್ಲಿ ಮರಿಯಾನೆಯೊಂದು ಸಿಲುಕಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ನಾಲೆಯಲ್ಲಿದ್ದು, ಅದರ ರಕ್ಷಣಾ ಕಾರ್ಯ ಇವತ್ತೂ ಮುಂದುವರಿದಿದೆ. ಆನೆ ಆಪರೇಷನ್ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಶಿವವಸಮುದ್ರ ಬಳಿಯಿರುವ ನಾಲೆಯಲ್ಲಿ ಮರಿಯಾನೆಯೊಂದು ಸಿಲುಕಿಕೊಂಡಿದೆ. ಕಳೆದ…

The post ಆನೆ ರಕ್ಷಣೆಗೆ ಬೆಂಗಳೂರಿನಿಂದ ಬಂದ ಕ್ರೇನ್​​, 4 ದಿನಗಳಿಂದ ನಾಲೆಯಲ್ಲಿ ಸಿಲುಕಿ ಆನೆ ಪರದಾಟ ! appeared first on Good News 24x7.

]]>

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಶಿವವಸಮುದ್ರ ಬಳಿಯಿರುವ ನಾಲೆಯಲ್ಲಿ ಮರಿಯಾನೆಯೊಂದು ಸಿಲುಕಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ನಾಲೆಯಲ್ಲಿದ್ದು, ಅದರ ರಕ್ಷಣಾ ಕಾರ್ಯ ಇವತ್ತೂ ಮುಂದುವರಿದಿದೆ.
ಆನೆ ಆಪರೇಷನ್

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ‌ ಶಿವವಸಮುದ್ರ ಬಳಿಯಿರುವ ನಾಲೆಯಲ್ಲಿ ಮರಿಯಾನೆಯೊಂದು ಸಿಲುಕಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ನಾಲೆಯಲ್ಲಿದ್ದು, ಅದರ ರಕ್ಷಣಾ ಕಾರ್ಯ ಇವತ್ತೂ ಮುಂದುವರಿದಿದೆ.
ನಾಲೆಯಲ್ಲಿ ನೀರು

ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ನೀರು ಕುಡಿಯಲು ಬಂದು ನಾಲೆಯಲ್ಲಿ ಸಿಲುಕಿಕೊಂಡಿದೆ. ನಿನ್ನೆ ಕೂಡ ಅರಣ್ಯ ಇಲಾಖೆ ಆನೆಯನ್ನ ಮೇಲೆತ್ತಲು ಪ್ರಯತ್ನ ಮಾಡಿತ್ತು. ಆದರೆ ಯಾವುದೇ ಪ್ರಯೋಜ ಆಗಿರಲಿಲ್ಲ. ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಹೈಡ್ರಾಲಿಕ್ ಕ್ರೇನ್ ಸಹಾಯದಿಂದ ರಕ್ಷಣೆ
ಆನೆ ರಕ್ಷಣೆಗೆ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್​ಗಳನ್ನು ತರಲಾಗಿದೆ. ಇನ್ನು ಮೈಸೂರಿನಿಂದ ಅರವಳಿಕೆ ತಜ್ಞರು, ಅರಣ್ಯ ಸಿಬ್ಬಂದಿ ಬಂದಿದ್ದಾರೆ. ಮಂಡ್ಯ ಡಿಎಫ್ಓ, ಮಳವಳ್ಳಿ ತಹಸಿಲ್ದಾರ್ ನೇತೃತ್ವದಲ್ಲಿ ಆನೆ ಕಾರ್ಯಾಚರಣೆ ನಡೆಯುತ್ತಿದೆ.

ಆನೆ ಆರೋಗ್ಯದ ಬಗ್ಗೆ ಕಳವಳ
ಆನೆ ಸೊಂಡಿಲಲ್ಲಿ ಫಂಗಸ್ ಆಗಿರುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು ದಿನಗಳಿಂದ ನೀರಿನಲ್ಲೇ ನಿಂತಿದೆ. ಹೀಗಾಗಿ ಸೊಂಡಿಲಿನ ಒಂದು ಭಾಗ ಬಿಳಿ ಬಣ್ಣಕ್ಕೆ ತಿರುಗಿದೆ. ಸೊಂಡಿಲ ತುದಿ ಭಾಗದಲ್ಲಿ ಇನ್ಫೆಂಕ್ಷನ್ ಆಗಿರುವ ಸಾಧ್ಯತೆ.

The post ಆನೆ ರಕ್ಷಣೆಗೆ ಬೆಂಗಳೂರಿನಿಂದ ಬಂದ ಕ್ರೇನ್​​, 4 ದಿನಗಳಿಂದ ನಾಲೆಯಲ್ಲಿ ಸಿಲುಕಿ ಆನೆ ಪರದಾಟ ! appeared first on Good News 24x7.

]]>
ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ರಾಜಾತಿಥ್ಯ? https://www.goodnews24x7.com/is-mysore-central-jail-also-providing-royal-hospitality-to-prisoners/ Tue, 11 Nov 2025 07:54:46 +0000 https://www.goodnews24x7.com/?p=8114 ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದ ವಿಡಿಯೋ ವೈರಲ್​ ಬೆನ್ನಲ್ಲೇ, ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ಮದ್ಯ, ಮಾಂಸ, ಮೊಬೈಲ್ ಫೋನ್‌ಗಳಂತಹ ದುಬಾರಿ ಸೌಲಭ್ಯಗಳು ಲಭ್ಯವಾಗುತ್ತಿರುವ ಬಗ್ಗೆ ವರದಿಯಾಗಿದೆ. ಜೈಲುಗಳು ಸುಧಾರಣಾ ಕೇಂದ್ರಗಳ ಬದಲಿಗೆ ಮೋಜಿನ ತಾಣಗಳಾಗಿ ಮಾರ್ಪಟ್ಟಿದ್ದು, ರಾಜ್ಯದ ಕಾರಾಗೃಹ…

The post ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ರಾಜಾತಿಥ್ಯ? appeared first on Good News 24x7.

]]>

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದ ವಿಡಿಯೋ ವೈರಲ್​ ಬೆನ್ನಲ್ಲೇ, ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ಮದ್ಯ, ಮಾಂಸ, ಮೊಬೈಲ್ ಫೋನ್‌ಗಳಂತಹ ದುಬಾರಿ ಸೌಲಭ್ಯಗಳು ಲಭ್ಯವಾಗುತ್ತಿರುವ ಬಗ್ಗೆ ವರದಿಯಾಗಿದೆ. ಜೈಲುಗಳು ಸುಧಾರಣಾ ಕೇಂದ್ರಗಳ ಬದಲಿಗೆ ಮೋಜಿನ ತಾಣಗಳಾಗಿ ಮಾರ್ಪಟ್ಟಿದ್ದು, ರಾಜ್ಯದ ಕಾರಾಗೃಹ ವ್ಯವಸ್ಥೆಯಲ್ಲಿನ ಲೋಪಗಳನ್ನು ಇದು ಎತ್ತಿ ತೋರಿಸುತ್ತಿದೆ.

ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವ ವಿಡಿಯೋಗಳು ವೈರಲ್​ ಆಗಿದ್ದು, ಉಗ್ರ ಮತ್ತು ಅತ್ಯಾಚಾರಿಗಳೂ ಮೊಬೈಲ್​ ಬಳಸುತ್ತಿದ್ದ ಕ್ಲಿಪ್​ಗಳು ಹೊರ ಬಂದಿದ್ದವು. ಆ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಸರ್ಕಾರ ಘಟನೆ ಸಂಬಂಧ ಮುಖ್ಯ ಅಧೀಕ್ಷಕ ಸುರೇಶ್ ಅವರನ್ನು ಎತ್ತಂಗಡಿ ಮಾಡಿ, ಅಧೀಕ್ಷಕ ಮ್ಯಾಗೇರಿ ಮತ್ತು ಉಪಾಧೀಕ್ಷಕರಾದ ಅಶೋಕ್ ಭಜಂತ್ರಿ ಅವರನ್ನು ಸಸ್ಪೆಂಡ್ ಮಾಡಿತ್ತು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿಯೂ ಕೈದಿಗಳಿಗೆ ಸಕಲ ಸೌಕರ್ಯ ಸಿಗುತ್ತಿರುವ ಬಗ್ಗೆ ವರದಿಯಾಗಿದೆ.

ಮೈಸೂರು ಕೇಂದ್ರ ಕಾರಾಗ್ರಹದಲ್ಲಿ ಕೆಲ ಕೈದಿಗಳಿಗೆ ಬೇಕಾದ ಸೌಲಭ್ಯ ಒದಗಿಸಲಾಗುತ್ತಿದ್ದು, ಮದ್ಯ, ಮಾಂಸಾಹಾರ, ಸಿಗರೇಟುಗಳು ಮತ್ತು ಬೀಡಿ, ಮೊಬೈಲ್ ಫೋನ್​ಗಳು ನಿರ್ದಿಷ್ಟ ಬೆಲೆಗೆ ಲಭ್ಯವಾಗುತ್ತಿವೆ. ಆ ಮೂಲಕ ಕೈದಿಗಳ ಮನಃಪರಿವರ್ತನಾ ಕೇಂದ್ರಗಳಾಗಬೇಕಿದ್ದ ಜೈಲು, ಮೋಜಿನ ಸ್ಥಳವಾಗಿ ಮಾರ್ಪಟ್ಟಿದೆ. ಕಾರಾಗೃಹದ ಒಳಭಾಗದಲ್ಲಿ ಪ್ರತಿ ವಸ್ತುವಿಗೂ ನಿಗದಿತ ಬೆಲೆ ಇದ್ದು, ಮಾರುಕಟ್ಟೆಯಲ್ಲಿ ದರ ಬದಲಾದರೂ ಇಲ್ಲಿ ಯಾವುದೇ ಏರಿಳಿತ ಆಗಲ್ಲ. ಒಂದು ವಸ್ತುವಿನ ಕನಿಷ್ಟ ಬೆಲೆಯೇ 150 ರೂ. ಇದೆ. ಇಷ್ಟು ಹಣ ಕೊಟ್ಟು ಖರೀದಿಸುವ ಸಾಮರ್ಥ್ಯ ಇರುವವರಿಗಾಗಿ ಪ್ರತಿ ವಾರ ಮದ್ಯ ಮತ್ತು ಮಾಂಸವನ್ನು ಆರ್ಡರ್​ ಮಾಡಲಾಗುತ್ತೆ ಎಂಬ ಬಗ್ಗೆ ಜೈಲ್ ವಿಸಿಟಿಂಗ್ ಬೋರ್ಡಿನ ಸದಸ್ಯ ಪವನ ಸಿದ್ದರಾಮು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಕೈದಿಗಳಿಗೆ ಐಷಾರಾಮಿ ಜೀವನಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕ್ಯಾಂಟೀನ್​ ಆಪರೇಟರ್​​ಗಳು ಮತ್ತು ಕೆಲ ಕರ್ನಾಟಕ ಸ್ಟೇಟ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸಿಬ್ಬಂದಿ ಪಾತ್ರ ವಹಿಸಿದ್ದಾರೆ. ಇವು ಜೈಲು ಅಧೀಕ್ಷಕರ ಮೂಗಿನ ಕೆಳಗೆಯೇ ನಡೆಯುತ್ತಿರುವ ಘಟನೆಗಳಾಗಿವೆ. ಮೈಸೂರು ಪೊಲೀಸರು ಸರ್ಪ್ರೈಸ್​ ವಿಸಿಟ್​ಗಳನ್ನು ನಡೆಸಿದರೂ ಅಲ್ಲಿ ಏನು ಸಿಗದಿರುವುದು ವಿಪರ್ಯಾಸ. ಸರಿಯಾಗಿ ದಾಳಿ ನಡೆಸಿದರೆ ಪ್ರತಿಬಾರಿಯೂ ನೂರಾರು ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಬಹುದು. ಮೈಸೂರು ಕೇಂದ್ರ ಕಾರಾಗೃಹದ ಪ್ರಸ್ತುತ ಮುಖ್ಯ ಸೂಪರ್‌ಟೆಂಡೆಂಟ್ ಹಿಂದೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲಸ ಮಾಡಿದ್ದರು. ಈಗ ಅಲ್ಲಿಂದ ದೇಶಾದ್ಯಂತ ಸುದ್ದಿಯಾಗುವ ರೀತಿಯ ವಿಡಿಯೋಗಳು ಹೊರ ಬಂದಿವೆ. ಆ ಮೂಲಕ ನಾವು ಕಾರಾಗೃಹಗಳಲ್ಲಿ ಪ್ಯಾರಲೆಲ್ ಮಾಫಿಯಾ ನೆಟ್‌ವರ್ಕ್ ನಿರ್ಮಿಸುತ್ತಿದ್ದೇವೆ ಎಂದು ಪವನ ಸಿದ್ದರಾಮು ತಿಳಿಸಿದ್ದಾರೆ ಎಂದು ವರದಿಯಾಗಿದೆ.

The post ಮೈಸೂರು ಕೇಂದ್ರ ಕಾರಾಗೃಹದಲ್ಲೂ ಕೈದಿಗಳಿಗೆ ರಾಜಾತಿಥ್ಯ? appeared first on Good News 24x7.

]]>
ದೆಹಲಿ ಸ್ಫೋ* ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್​: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? https://www.goodnews24x7.com/high-alert-in-karnataka-in-the-wake-of-delhi-blast-what-did-cm-siddaramaiah-say/ Tue, 11 Nov 2025 04:57:37 +0000 https://www.goodnews24x7.com/?p=8111 ಮೈಸೂರು: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದ್ದು, ದೇಶಾದ್ಯಂತ ಹೈಅಲರ್ಟ್​ ಘೋಷಿಸಿದಲಾಗಿದೆ. ಅದರಂತೆ ಕರ್ನಾಟಕದಲ್ಲೂ ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ. ಇನ್ನು ದೆಹಲಿ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರು,…

The post ದೆಹಲಿ ಸ್ಫೋ* ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್​: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? appeared first on Good News 24x7.

]]>

ಮೈಸೂರು: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಇಡೀ ದೇಶವೇ ಬೆಚ್ಚಿಬಿದ್ದಿದ್ದು, ದೇಶಾದ್ಯಂತ ಹೈಅಲರ್ಟ್​ ಘೋಷಿಸಿದಲಾಗಿದೆ. ಅದರಂತೆ ಕರ್ನಾಟಕದಲ್ಲೂ ಎಲ್ಲೆಡೆ ಕಟ್ಟೆಚ್ಚರವಹಿಸಲಾಗಿದೆ. ಇನ್ನು ದೆಹಲಿ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರು, ಮೈಸೂರು ಸೇರಿ ರಾಜ್ಯದ ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ದೆಹಲಿ ಸ್ಫೋಟದ ಬಗ್ಗೆ ತಿಳಿದ ಬಳಿಕ ಮೈಸೂರು ಪೊಲೀಸರ ಜತೆ ಮಾತನಾಡಿದ್ದು, ರಾಜ್ಯಾದ್ಯಂತ ಭದ್ರತೆ ಬಿಗಿಗೊಳಿಸಲು ತಿಳಿಸಿದ್ದೇನೆ ಹೇಳಿದ್ದಾರೆ.

ಕರ್ನಾಟಕದಲ್ಲೂ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದು, ಇಡೀ ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸುವ ಕೆಲಸ ಮಾಡುತ್ತೇವೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲು ಸೂಚನೆ ನೀಡಲಾಗಿದ್ದು, ದೆಹಲಿ ಸ್ಪೋಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು.

The post ದೆಹಲಿ ಸ್ಫೋ* ಬೆನ್ನಲ್ಲೇ ಕರ್ನಾಟಕದಲ್ಲೂ ಹೈಅಲರ್ಟ್​: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? appeared first on Good News 24x7.

]]>
ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ https://www.goodnews24x7.com/rajyadalli-dara-erike-su%e1%b8%b7ivu-ko%e1%b9%ad%e1%b9%ada-%e1%b8%8di-ke-sures-price-state-pricehike-money-dksuresh-governmentproducedcrore-bangalore-electricity-buttermilk-farmers-worke/ Thu, 06 Nov 2025 11:59:20 +0000 https://www.goodnews24x7.com/?p=8049 1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗು ತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ವಾಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನು ರೈತರಿಗೆ ಕೊಡಲು ಸೂಚಿಸಿದ್ದೇವೆ ಎಂದರು. 50 ಲಕ್ಷ ಲೀಟರ್ ಮಾರಾಟ…

The post ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ appeared first on Good News 24x7.

]]>

1 ಕೋಟಿ ಲೀಟರ್ ಹಾಲು ಉತ್ಪತ್ತಿಯಾಗು ತ್ತದೆ. ಆದರೆ 50 ಲಕ್ಷ ಲೀಟರ್ ಹಾಲು ಮಾತ್ರ ಮಾರಾಟ ವಾಗುತ್ತದೆ. ಸರ್ಕಾರ ಹಾಲಿನ ಮೇಲೆ ದರ ಹೆಚ್ಚಳ ಮಾಡಿರುವ 4 ರೂಪಾಯಿಯನ್ನು ರೈತರಿಗೆ ಕೊಡಲು ಸೂಚಿಸಿದ್ದೇವೆ ಎಂದರು.

50 ಲಕ್ಷ ಲೀಟರ್ ಮಾರಾಟ ಮಾಡುವುದಕ್ಕೆ ಮಾತ್ರ ನಮಗೆ ಹಣ ಬರುತ್ತಿದೆ. ಉಳಿದ 50 ಲಕ್ಷ ಲೀಟರ್ ಹಾಲಿಗೆ ನಮ್ಮ ಕೈಯಿಂದ ರೈತರಿಗೆಹಣ ಕೊಡುತ್ತಿದ್ದೇವೆ. ಸದ್ಯ ಬೆಣ್ಣೆ ಮತ್ತು ತುಪ್ಪಕ್ಕೆ ಬೇಡಿಕೆ ಇದ್ದು, ಈಗ ನಾವು ತುಪ್ಪಕ್ಕೆ ನಿಗದಿಮಾಡಿರುವ ದರ ಮಾರುಕಟ್ಟೆಗಿಂತ ಕಡಿಮೆಯಿದೆ. ಆದರೆ ಗುಣಮಟ್ಟದಲ್ಲಿ ನಾವೇ ಮುಂಚೂಣಿಯಲ್ಲಿದ್ದೇವೆ ಎಂದು ಡಿ.ಕೆ.ಸುರೇಶ್ ಹೇಳಿದರು.

ರಾಜ್ಯದಲ್ಲಿ ಬೆಲೆ ಏರಿಕೆಯ ಸರಮಾಲೆ

  • ಬಸ್ ದರ ಶೇ.15ರಷ್ಟು ಹೆಚ್ಚಳ
  • ಡೀಸೆಲ್ ದರ ಪ್ರತಿ ಲೀಗೆ 2 ರೂ. ಹೆಚ್ಚಳ
  • ವಿದ್ಯುತ್ ದರದೊಂದಿಗೆ ಸೆಸ್ ಹೆಚ್ಚಳ
  • ಆಸ್ತಿ ಮಾರ್ಗಸೂಚಿ ಮೌಲ್ಯ ಶೇ.15ರಿಂದ 30ರಷ್ಟರವರೆಗೆ ಹೆಚ್ಚಳ
  • ಕೈಗಾರಿಕಾ ಬಳಕೆಗಾಗಿ ವಿದ್ಯುತ್, ನೀರು, ಇಂಧನದ ದರಗಳು ಹೆಚ್ಚಳ.
  • ಖಾಸಗಿ ಪದವಿ ಕಾಲೇಜುಗಳಲ್ಲಿ ಶೇ.10ರಷ್ಟು ಶುಲ್ಕ ಏರಿಕೆ.
  • ರೂ. 25 ಲಕ್ಷ ಮೀರಿದ ವಿದ್ಯುತ್ ವಾಹನಗಳಿಗೆ ಶೇ.10ರಷ್ಟು ಲೈಫ್ರೆಮ್ ಟ್ಯಾಕ್ಸ್.
  • ಬೆಂಗಳೂರು ಮೆಟ್ರೋ ಪ್ರಯಾಣ ದರ ಶೇ.71ರಷ್ಟು ಏರಿಕೆ.
  • ಹಾಲು, ಮೊಸರು, ಮಜ್ಜಿಗೆ ವರಗಳಲ್ಲಿ ರೂ.4ರಷ್ಟು ಏರಿಕೆ.
  • ಒಟಿಟಿ ಸೇವೆಗಳು, ಚಿತ್ರಮಂದಿರ ಟಿಕೆಟ್‌ಗಳಿಗೆ ಶೇ.2ರಷ್ಟು ಸೆಸ್.
  • ವಾಸಸ್ಥಳ ಮತ್ತು ವ್ಯಾಪಾರಿಕ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಏರಿಕೆ.
  • ಕ್ವಾರಿ ಚಾರ್ಜ್ ಹೆಚ್ಚಳದಿಂದ ಕಟ್ಟಡ ನಿರ್ಮಾಣದ ವೆಚ್ಚ ಗಗನಕ್ಕೆ.
  • ಬಾಡಿಗೆ ದಾಖಲೆಗಳ ಸ್ಟಾಂಪ್ ಡ್ಯೂಟಿ ಶೇ.200ರಿಂದ 500ರಷ್ಟು ಹೆಚ್ಚಳ.
  • ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆಯೊಂದಿಗೆ ತ್ಯಾಜ್ಯ ಶುಲ್ಕ ಸೇರ್ಪಡೆ.
  • ಹೊಸ ವಾಹನ ನೋಂದಣಿಗೆ ಹೆಚ್ಚುವರಿ ಶುಲ್ಕ
  • ಮದ್ಯದ ದರ ಹೆಚ್ಚಳ
  • ಆಹಾರ ಪದಾರ್ಥಗಳ ಬೆಲೆ ಏರಿಕೆ
  • ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ
  • ಆಸ್ಪತ್ರೆಗಳಲ್ಲಿ ಎಕ್ಸರೇ, ಔಟ್ ಪೇಸೆಂಟ್ ಶುಲ್ಕ ಶೇ.50ರಿಂದ 100ರಷ್ಟು ಹೆಚ್ಚಳ
  • ಗಿಗ್ ವರ್ಕರ್ಸ್ ನಿಧಿಗೆ ಕಂಪನಿಗಳಿಂದ ಶೇ.5ರಷ್ಟು ಸೆಸ್.

The post ರಾಜ್ಯದಲ್ಲಿ ದರ ಏರಿಕೆ ಸುಳಿವು ಕೊಟ್ಟ ಡಿ.ಕೆ.ಸುರೇಶ್ appeared first on Good News 24x7.

]]>