Bengaluru Archives - Good News 24x7 https://www.goodnews24x7.com/tag/bengaluru/ Kannada Tue, 14 Jul 2026 06:11:54 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Bengaluru Archives - Good News 24x7 https://www.goodnews24x7.com/tag/bengaluru/ 32 32 KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! https://www.goodnews24x7.com/9836-2huge-drop-in-krs-inflow-farmers-and-bengaluruans-worried/ Tue, 14 Jul 2026 06:11:54 +0000 https://www.goodnews24x7.com/?p=9836 ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಕೃಷಿಯನ್ನೇ ನಂಬಿದ ಅನ್ನದಾತರ ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ…

The post KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! appeared first on Good News 24x7.

]]>

ಜಲಾನಯನ ಪ್ರದೇಶದಲ್ಲಿ ವರುಣನ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಜೀವನಾಡಿಯಾದ ಕೆ.ಆರ್.ಎಸ್ (KRS) ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಇದು ಕೇವಲ ಕೃಷಿಯನ್ನೇ ನಂಬಿದ ಅನ್ನದಾತರ ನಿದ್ದೆಗೆಡಿಸಿರುವುದು ಮಾತ್ರವಲ್ಲದೆ, ಕಾವೇರಿ ನೀರನ್ನೇ ಅವಲಂಬಿಸಿರುವ ಸಿಲಿಕಾನ್ ಸಿಟಿ ಬೆಂಗಳೂರಿಗೂ ಕುಡಿಯುವ ನೀರಿನ ಸಂಕಷ್ಟದ ಮುನ್ಸೂಚನೆ ನೀಡಿದೆ. ಒಳಹರಿವಿನಲ್ಲಿ ದಿಢೀರ್ ಕುಸಿತಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂಗೆ ಬರುವ ನೀರಿನ ಪ್ರಮಾಣ 12 ಸಾವಿರ ಕ್ಯೂಸೆಕ್ ದಾಟಿತ್ತು. ಆದರೆ ಈಗ ಮಳೆ ಬಿಡುವು ನೀಡಿರುವುದರಿಂದ ಒಳಹರಿವು ಗಣನೀಯವಾಗಿ ಕುಸಿದಿದೆ.ನಿನ್ನೆಯ ಒಳಹರಿವು: 7,500 ಕ್ಯೂಸೆಕ್ಇಂದಿನ ಒಳಹರಿವು: ಕೇವಲ 3,685 ಕ್ಯೂಸೆಕ್ಮುಂಗಾರು ಆರಂಭದ ಮಳೆ ನೋಡಿ ಕೃಷಿ ಚಟುವಟಿಕೆಗಳಿಗೆ ಸಜ್ಜಾಗಿದ್ದ ಮಂಡ್ಯ ಭಾಗದ ರೈತರು, ಈಗ ಬೆಳೆಗಳಿಗೆ ನೀರು ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿದ್ದಾರೆ. ಬೆಂಗಳೂರಿಗರಿಗೂ ಕಾದಿದೆಯೇ ನೀರಿನ ಕ್ಷಾಮ?ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಕುಸಿಯುತ್ತಿರುವುದು ಬೆಂಗಳೂರು ನಗರದ ಪಾಲಿಗೆ ಆತಂಕದ ಸಂಗತಿಯಾಗಿದೆ. ಬೆಂಗಳೂರಿನ ಬಹುತೇಕ ಭಾಗಗಳಿಗೆ ಕುಡಿಯುವ ನೀರು ಪೂರೈಕೆಯಾಗುವುದು ಇದೇ ಕಾವೇರಿ ನದಿಯಿಂದ. ಸದ್ಯ ಕುಡಿಯುವ ಉದ್ದೇಶಕ್ಕಾಗಿ ಜಲಾಶಯದಿಂದ 623 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಂದು ವೇಳೆ ಮಳೆ ಮತ್ತೆ ಚುರುಕುಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.ಜಲಾಶಯದ ಇಂದಿನ ಸ್ಥಿತಿಗತಿ (KRS Today’s Status)ವಿವರಗಳುಮಾಹಿತಿಗರಿಷ್ಠ ಮಟ್ಟ124.80 ಅಡಿಇಂದಿನ ಮಟ್ಟ92.54 ಅಡಿಗರಿಷ್ಠ ಸಾಮರ್ಥ್ಯ49.452 ಟಿಎಂಸಿಸದ್ಯದ ನೀರಿನ ಸಂಗ್ರಹ17.509 ಟಿಎಂಸಿಇಂದಿನ ಒಳಹರಿವು3,685 ಕ್ಯೂಸೆಕ್ಇಂದಿನ ಹೊರಹರಿವು623 ಕ್ಯೂಸೆಕ್ಮುಖ್ಯ
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದು ರೈತರಿಗೂ ಮತ್ತು ಜನಸಾಮಾನ್ಯರಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮುಂಬರುವ ದಿನಗಳಲ್ಲಿ ಮಳೆ ಮತ್ತೆ ಚುರುಕಾಗದಿದ್ದರೆ ನೀರಿನ ಸಂಕಷ್ಟ ಎದುರಾಗುವುದು ಅನಿವಾರ್ಯ ಎಂಬಂತಾಗಿದೆ.

The post KRS ಒಳಹರಿವಿನಲ್ಲಿ ಭಾರೀ ಇಳಿಕೆ: ರೈತರು ಮತ್ತು ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ! appeared first on Good News 24x7.

]]>
ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ https://www.goodnews24x7.com/%e0%b2%b2%e0%b2%82%e0%b2%9a-kas-officer-caught-in-lokayukta-trap-while-accepting-bribe%e0%b2%b8%e0%b3%8d%e0%b2%b5%e0%b3%80%e0%b2%95%e0%b2%b0%e0%b2%bf%e0%b2%b8%e0%b3%81%e0%b2%b5%e0%b2%be%e0%b2%97/ Wed, 29 Apr 2026 11:15:42 +0000 https://www.goodnews24x7.com/?p=9488 ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ…

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>

ಬೆಂಗಳೂರಿನ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ ಅಧಿಕಾರಿ ನಾಗಪ್ರಶಾಂತ್, ಬಾಕಿ ಇರುವ ಕಂದಾಯ ಪ್ರಕರಣವೊಂದರಲ್ಲಿ ಅನುಕೂಲಕರ ಆದೇಶ ನೀಡಲು 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಪೈಕಿ ಮೊದಲ ಕಂತಿನ 15 ಲಕ್ಷ ರೂಪಾಯಿಗಳನ್ನು ಈಗಾಗಲೇ ಪಡೆದಿದ್ದ ಅವರು, ಇಂದು ದೂರುದಾರ ರವಿಕುಮಾರ್ ಅವರಿಂದ ಎರಡನೇ ಕಂತಿನ 15 ಲಕ್ಷ ರೂಪಾಯಿಗಳನ್ನು ತಮ್ಮ ಹೊರಗುತ್ತಿಗೆ ಚಾಲಕ ಕುಮಾರ್ ಮೂಲಕ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ರೆಡ್‌ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

The post ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕೆಎಎಸ್‌ ಅಧಿಕಾರಿ appeared first on Good News 24x7.

]]>
ಜಿಬಿಎ ಚುನಾವಣೆ ವಿಳಂಬ: ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಸತೀಶ್‌ ಉರಾಳ್‌ ಕಿಡಿ. https://www.goodnews24x7.com/gba-election-delay-bjp-leader-satish-ural-lashes-out-at-government/ Mon, 27 Apr 2026 10:11:05 +0000 https://www.goodnews24x7.com/?p=9412 ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ರದ್ದುಗೊಳಿಸಿ ರಚಿಸಲಾಗಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಹಣದ ಕೊರತೆಯಿದೆ ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ಬಿಜೆಪಿ ಮುಖಂಡ ಸತೀಶ್‌ ಉರಾಳ್‌ ತೀವ್ರವಾಗಿ ಟೀಕಿಸಿದ್ದಾರೆ. ಚುನಾವಣೆ ನಡೆಸಲು ಸರ್ಕಾರದ ಬಳಿ…

The post ಜಿಬಿಎ ಚುನಾವಣೆ ವಿಳಂಬ: ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಸತೀಶ್‌ ಉರಾಳ್‌ ಕಿಡಿ. appeared first on Good News 24x7.

]]>

ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ರದ್ದುಗೊಳಿಸಿ ರಚಿಸಲಾಗಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ (ಜಿಬಿಎ) ಐದು ಪಾಲಿಕೆಗಳಿಗೆ ಚುನಾವಣೆ ನಡೆಸಲು ಹಣದ ಕೊರತೆಯಿದೆ ಎಂಬ ಚುನಾವಣಾ ಆಯೋಗದ ಹೇಳಿಕೆಯನ್ನು ಬಿಜೆಪಿ ಮುಖಂಡ ಸತೀಶ್‌ ಉರಾಳ್‌ ತೀವ್ರವಾಗಿ ಟೀಕಿಸಿದ್ದಾರೆ. ಚುನಾವಣೆ ನಡೆಸಲು ಸರ್ಕಾರದ ಬಳಿ ಹಣವಿಲ್ಲದಿರುವುದು ರಾಜ್ಯದ ಇಂದಿನ ಹದಗೆಟ್ಟ ಆರ್ಥಿಕ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ. ಅತಿ ಹೆಚ್ಚು ಆದಾಯ ತರುವ ಬೆಂಗಳೂರು ನಗರದ ಪಾಲಿಕೆಗಳ ಚುನಾವಣೆಗೆ ಹಣವಿಲ್ಲ ಎಂದು ಸಬೂಬು ನೀಡುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಕುಂಠಿತ ಹಾಗೂ ಆಡಳಿತಾಧಿಕಾರಿಗಳ ಆಡಳಿತ:

ಬೆಂಗಳೂರಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡು ಸುಮಾರು 5 ವರ್ಷ 7 ತಿಂಗಳುಗಳೇ ಕಳೆದಿವೆ. ಕಾನೂನಿನ ಪ್ರಕಾರ ಆಡಳಿತಾಧಿಕಾರಿಗಳ ಅವಧಿ ಕೇವಲ ಆರು ತಿಂಗಳು ಮಾತ್ರ ಇರಬೇಕಿತ್ತು, ಆದರೆ ಈಗ ಆರು ವರ್ಷಗಳಾಗುತ್ತಾ ಬಂದರೂ ಚುನಾವಣೆ ನಡೆಸುತ್ತಿಲ್ಲ ಎಂದು ಅವರು ದೂರಿದ್ದಾರೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ನಗರದ ಅಭಿವೃದ್ಧಿ ವೇಗ ಕುಂಠಿತಗೊಂಡಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಕೂಡ ಎಚ್ಚರಿಕೆ ನೀಡಿದ್ದರೂ ಸಹ, ಸರ್ಕಾರವು ಸಿಬ್ಬಂದಿ ಕೊರತೆ ಮತ್ತು ಗಣತಿ ಕಾರ್ಯದ ನೆಪ ಹೇಳಿ ಸಮಯ ಕಳೆಯುತ್ತಿದೆ ಎಂದು ಸತೀಶ್ ಉರಾಳ್ ಗಂಭೀರವಾಗಿ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ:

ಉಪಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿಯ ಉಸ್ತುವಾರಿ ಹೊತ್ತಿದ್ದರೂ, ಜಿಬಿಎ ಆರ್ಥಿಕವಾಗಿ ಸಬಲವಾಗಿದೆ ಎಂದು ಜಂಭ ಕೊಚ್ಚಿಕೊಳ್ಳುತ್ತಲೇ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ನಾಗರಿಕರು ಇದನ್ನು ಒಂದು ನಾಟಕದಂತೆ ನೋಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾತ್ರ ಮುಖ್ಯವಾಗಿದೆ. ಆದರೆ, ರಾಜ್ಯ ಸರ್ಕಾರವು ಚುನಾವಣಾ ಆಯೋಗದ ಜೊತೆ ಸೇರಿ ಕಣ್ಣ ಮುಚ್ಚಾಲೆ ಆಟವಾಡುತ್ತಿದ್ದು, ಚುನಾವಣೆ ನಡೆಸದೆ ಜನರಿಗೆ ಮೋಸ ಮಾಡುತ್ತಿದೆ ಎಂದು ಸತೀಶ್ ಉರಾಳ್ ವಾಗ್ದಾಳಿ ನಡೆಸಿದ್ದಾರೆ.


The post ಜಿಬಿಎ ಚುನಾವಣೆ ವಿಳಂಬ: ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಸತೀಶ್‌ ಉರಾಳ್‌ ಕಿಡಿ. appeared first on Good News 24x7.

]]>
ಬೆಂಗಳೂರು ಜನಗಣತಿ-2027: ನಾಳೆ ಟೌನ್ ಹಾಲ್‌ನಲ್ಲಿ ನೇರ ಸಂದರ್ಶನ; 1,000 ಗಣತಿದಾರರ ನೇಮಕ. https://www.goodnews24x7.com/bengaluru-census-2027-live-interview-at-town-hall-tomorrow-1000-enumerators-to-be-hired/ Tue, 21 Apr 2026 11:06:36 +0000 https://www.goodnews24x7.com/?p=9353 ಬೆಂಗಳೂರು: ದೇಶದ ಮಹತ್ವದ ಕಾರ್ಯವಾದ ‘ಭಾರತದ ಜನಗಣತಿ-2027’ ಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಚಾಲನೆ ನೀಡಿದ್ದು, ಗಣತಿದಾರರಾಗಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ವಿದ್ಯಾವಂತ ಯುವಕರಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತು ನಾಳೆ, ಏಪ್ರಿಲ್ 22 ರಂದು ಬೆಳಿಗ್ಗೆ 9 ಗಂಟೆಗೆ ನಗರದ…

The post ಬೆಂಗಳೂರು ಜನಗಣತಿ-2027: ನಾಳೆ ಟೌನ್ ಹಾಲ್‌ನಲ್ಲಿ ನೇರ ಸಂದರ್ಶನ; 1,000 ಗಣತಿದಾರರ ನೇಮಕ. appeared first on Good News 24x7.

]]>

ಬೆಂಗಳೂರು: ದೇಶದ ಮಹತ್ವದ ಕಾರ್ಯವಾದ ‘ಭಾರತದ ಜನಗಣತಿ-2027’ ಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯು ಚಾಲನೆ ನೀಡಿದ್ದು, ಗಣತಿದಾರರಾಗಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ವಿದ್ಯಾವಂತ ಯುವಕರಿಂದ ಅರ್ಜಿ ಆಹ್ವಾನಿಸಿದೆ. ಈ ಕುರಿತು ನಾಳೆ, ಏಪ್ರಿಲ್ 22 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ (ಟೌನ್ ಹಾಲ್) ವಾಕ್-ಇನ್ ಇಂಟರ್ವ್ಯೂ ಆಯೋಜಿಸಲಾಗಿದೆ.

ನೇಮಕಾತಿಯ ಪ್ರಮುಖ ಮಾಹಿತಿ:
ಒಟ್ಟು ಹುದ್ದೆಗಳು: ಅಂದಾಜು 1,000 ಗಣತಿದಾರರು.

ವಿದ್ಯಾರ್ಹತೆ: ಕನಿಷ್ಠ ದ್ವಿತೀಯ ಪಿಯುಸಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣ.

ಅಗತ್ಯತೆ: ಆ್ಯಂಡ್ರಾಯ್ಡ್‌-12 ಆವೃತ್ತಿ ಮತ್ತು 4GB RAM ಹೊಂದಿರುವ ಸ್ಮಾರ್ಟ್‌ಫೋನ್ ಇರುವುದು ಕಡ್ಡಾಯ.

ಗೌರವಧನ: * ಮೊದಲ ಹಂತದ ಮನೆ ಗಣತಿ ಕಾರ್ಯಕ್ಕೆ: ₹9,000

ಎರಡನೇ ಹಂತದ ಗಣತಿಗೆ (ಫೆಬ್ರವರಿ 2027): ₹16,000

ಆದ್ಯತೆ ಯಾರಿಗೆ?
ಸಿ.ವಿ.ರಾಮನ್ ನಗರ, ಶಾಂತಿನಗರ, ಶಿವಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ನಿವಾಸಿಗಳಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಮೇ 15ರವರೆಗೆ ರಜಾ ದಿನಗಳನ್ನೂ ಒಳಗೊಂಡಂತೆ ನಿರಂತರವಾಗಿ ಕೆಲಸ ಮಾಡಲು ಸಿದ್ಧರಿರಬೇಕು.

ತರಬೇತಿ ಮತ್ತು ಜವಾಬ್ದಾರಿ:
ಆಯ್ಕೆಯಾದವರಿಗೆ ಜನಗಣತಿ ಮೊಬೈಲ್ ಅಪ್ಲಿಕೇಶನ್ ಬಳಕೆಯ ಬಗ್ಗೆ ಮಾಸ್ಟರ್ ಟ್ರೈನರ್‌ಗಳಿಂದ ವಿಶೇಷ ತರಬೇತಿ ನೀಡಲಾಗುತ್ತದೆ. ಪ್ರತಿ ಗಣತಿದಾರರು ಸರಾಸರಿ 150 ರಿಂದ 200 ಮನೆಗಳ ಗಣತಿ ಕಾರ್ಯವನ್ನು ಪೂರ್ಣಗೊಳಿಸಬೇಕಾಗುತ್ತದೆ. ರಾಷ್ಟ್ರದ ಅಭಿವೃದ್ಧಿಯ ಈ ಕೆಲಸದಲ್ಲಿ ಪಾಲ್ಗೊಳ್ಳಲು ಆಸಕ್ತಿಯಿರುವ ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

The post ಬೆಂಗಳೂರು ಜನಗಣತಿ-2027: ನಾಳೆ ಟೌನ್ ಹಾಲ್‌ನಲ್ಲಿ ನೇರ ಸಂದರ್ಶನ; 1,000 ಗಣತಿದಾರರ ನೇಮಕ. appeared first on Good News 24x7.

]]>
ಬಿಟ್‌ಕಾಯಿನ್ ಹಗರಣ: ಶಾಸಕ ಎನ್.ಎ. ಹ್ಯಾರಿಸ್ ನಿವಾಸ ಸೇರಿ 17 ಕಡೆ ಇಡಿ ದಾಳಿ. https://www.goodnews24x7.com/bitcoin-scam-ed-raids-17-places-including-mla-n-a-harriss-residence/ Mon, 20 Apr 2026 09:29:07 +0000 https://www.goodnews24x7.com/?p=9320 ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಬಿಡಿಎ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರಿಗೆ ಶಾಕ್ ನೀಡಿದ್ದಾರೆ. ಶಾಸಕರ ನಿವಾಸ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ…

The post ಬಿಟ್‌ಕಾಯಿನ್ ಹಗರಣ: ಶಾಸಕ ಎನ್.ಎ. ಹ್ಯಾರಿಸ್ ನಿವಾಸ ಸೇರಿ 17 ಕಡೆ ಇಡಿ ದಾಳಿ. appeared first on Good News 24x7.

]]>

ಬೆಂಗಳೂರು: ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಬಿಡಿಎ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರಿಗೆ ಶಾಕ್ ನೀಡಿದ್ದಾರೆ. ಶಾಸಕರ ನಿವಾಸ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿಯ ಪ್ರಮುಖ ವಿವರಗಳು:
ಸ್ಥಳ: ಅಶೋಕನಗರದಲ್ಲಿರುವ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ ಮನೆಗಳ ಮೇಲೆ ಬೆಳಿಗ್ಗೆ 6 ಗಂಟೆಗೆ ದಾಳಿ ನಡೆದಿದೆ.

ತಂಡ: ಸುಮಾರು 12 ಮಂದಿ ಇಡಿ ಅಧಿಕಾರಿಗಳ ತಂಡ, ಸಿಆರ್‌ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.

ಕಾರಣ: ಬಿಟ್‌ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜೊತೆಗಿನ ನಂಟು ಮತ್ತು ಹಣಕಾಸಿನ ವಹಿವಾಟಿನ ಶಂಕೆ.

ತನಿಖೆಯ ಹಿನ್ನೆಲೆ:
₹4.5 ಕೋಟಿ ವಹಿವಾಟು: ಆರು ವರ್ಷಗಳ ಹಿಂದೆ ಶ್ರೀಕಿ ಮತ್ತು ಮೊಹಮ್ಮದ್ ನಲಪಾಡ್ ನಡುವೆ ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ ಹಣಕಾಸು ವ್ಯವಹಾರ ನಡೆದಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ.

ಹ್ಯಾಕಿಂಗ್ ಮತ್ತು ಅಕ್ರಮ ವರ್ಗಾವಣೆ: ಅಂತರರಾಷ್ಟ್ರೀಯ ವೆಬ್‌ಸೈಟ್ ಹಾಗೂ ಡಿಜಿಟಲ್ ವಾಲೆಟ್‌ಗಳನ್ನು ಹ್ಯಾಕ್ ಮಾಡಿ ಕ್ರಿಪ್ಟೋಕರೆನ್ಸಿ ಕಳವು ಮಾಡಿದ ಆರೋಪ ಶ್ರೀಕಿ ಮೇಲಿದೆ. ಈ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಿ ವೈಯಕ್ತಿಕ ಲಾಭಕ್ಕೆ ಬಳಸಲಾಗಿತ್ತು ಎನ್ನಲಾಗಿದೆ.

SIT ವಿಚಾರಣೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಜೂನ್‌ನಲ್ಲಿ ಸಿಐಡಿ ವಿಶೇಷ ತನಿಖಾ ದಳ (SIT) ಈಗಾಗಲೇ ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿತ್ತು.

ಕಾನೂನು ಕ್ರಮ:
ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA 2002) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಬೆಂಗಳೂರು ಇಡಿ ಘಟಕವು ಈ ದಾಳಿಯನ್ನು ನಡೆಸಿದೆ. ಬಿಟ್‌ಕಾಯಿನ್ ಹಗರಣದ ಆಳ-ಅಗಲವನ್ನು ಜಾಲಾಡುತ್ತಿರುವ ಅಧಿಕಾರಿಗಳು, ಇಂದಿನ ದಾಳಿಯಲ್ಲಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆಯಿದೆ.

The post ಬಿಟ್‌ಕಾಯಿನ್ ಹಗರಣ: ಶಾಸಕ ಎನ್.ಎ. ಹ್ಯಾರಿಸ್ ನಿವಾಸ ಸೇರಿ 17 ಕಡೆ ಇಡಿ ದಾಳಿ. appeared first on Good News 24x7.

]]>
ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! https://www.goodnews24x7.com/phlai-91-vimanadalli-ata%e1%b9%85kada-k%e1%b9%a3a%e1%b9%87a-praya%e1%b9%87ikara-ka%e1%b9%87%e1%b9%87iru-sibbandiya-uddha%e1%b9%adatana-crewbengalurupassengershyderabadairportfamilieshubbal/ Mon, 20 Apr 2026 09:16:24 +0000 https://www.goodnews24x7.com/?p=9314 ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ…

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>

ಬೆಂಗಳೂರು: ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹೊರಟಿದ್ದ ಫ್ಲೈ ೯೧ (Fly91) ವಿಮಾನವೊಂದು ಭೀಕರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದ ಏರುಪೇರು) ಸಿಲುಕಿ ಪ್ರಯಾಣಿಕರು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಘಟನೆ ನಿನ್ನೆ ನಡೆದಿದೆ. ಸಂಕಷ್ಟದ ಸಮಯದಲ್ಲಿ ಪೈಲಟ್ ಸಮಯಪ್ರಜ್ಞೆ ಮೆರೆದರೆ, ವಿಮಾನ ನಿಲ್ದಾಣದ ಸಿಬ್ಬಂದಿಯ ಅಮಾನವೀಯ ವರ್ತನೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆ ೧೫ ನಿಮಿಷಗಳ ಕಾಲ ಮೃತ್ಯು ಕಣ್ಣೆದುರಿಗಿತ್ತು:
ನಿನ್ನೆ ಮಧ್ಯಾಹ್ನ ೩ ಗಂಟೆಗೆ ಹೊರಟ ವಿಮಾನವು ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಸುಮಾರು ೧೫ ನಿಮಿಷಗಳ ಕಾಲ ತೀವ್ರವಾಗಿ ಅಲುಗಾಡತೊಡಗಿತು. ಟರ್ಬುಲೆನ್ಸ್ ಎಷ್ಟಿತ್ತೆಂದರೆ, ಪ್ರಯಾಣಿಕರು ಬದುಕುವ ಭರವಸೆಯನ್ನೇ ಕೈಬಿಟ್ಟಿದ್ದರು. ಕೆಲವರು ತಮ್ಮ ಕುಟುಂಬದವರಿಗೆ ‘ಕೊನೆಯ ಸಂದೇಶ’ ಕಳುಹಿಸಲು ವಿಡಿಯೋ ರೆಕಾರ್ಡ್ ಮಾಡತೊಡಗಿದರೆ, ಇನ್ನು ಕೆಲವರು ಕಿರುಚಾಡುತ್ತಿದ್ದರು. ಅಲುಗಾಟದ ತೀವ್ರತೆಗೆ ಮಗುವೊಂದು ಕೈಯಿಂದ ಕೆಳಗೆ ಬಿದ್ದ ಘಟನೆಯೂ ನಡೆಯಿತು. ಈ ವೇಳೆ ಗಗನಸಖಿಯರೂ ಕೂಡ ಭಯದಿಂದ ಕಣ್ಣೀರಿಟ್ಟಿದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿತ್ತು.

೪ ಗಂಟೆಗಳ ಕಾಲ ಆಕಾಶದಲ್ಲೇ ಅಲೆದಾಟ:
ಹುಬ್ಬಳ್ಳಿಯಲ್ಲಿ ಇಳಿಯಲು ಸಾಧ್ಯವಾಗದ ಕಾರಣ ಪೈಲಟ್ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತಿರುಗಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಾಡಿದ ವಿಮಾನವು ಕೊನೆಗೆ ರಾತ್ರಿ ೭ ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಜೀವ ಉಳಿಸಿದ ಪೈಲಟ್‌ಗೆ ಪ್ರಯಾಣಿಕರು ಚಪ್ಪಾಳೆ ತಟ್ಟಿ ಕೃತಜ್ಞತೆ ಸಲ್ಲಿಸಿದರು.

ಫ್ಲೈ ೯೧ ಸಿಬ್ಬಂದಿಯ ಅಸಭ್ಯ ವರ್ತನೆ:
ವಿಮಾನ ಸುರಕ್ಷಿತವಾಗಿ ಇಳಿದ ನಂತರ ಪ್ರಯಾಣಿಕರಿಗೆ ಸಮಾಧಾನ ಹೇಳಬೇಕಿದ್ದ ಫ್ಲೈ ೯೧ ಏರ್‌ಲೈನ್ಸ್‌ನ ನೆಲದ ಸಿಬ್ಬಂದಿ (Ground Staff) ಅತ್ಯಂತ ಉದ್ಧಟತನದಿಂದ ವರ್ತಿಸಿದ್ದಾರೆ. “ಇದೇ ವಿಮಾನ ಮತ್ತೆ ಹುಬ್ಬಳ್ಳಿಗೆ ಹೋಗುತ್ತದೆ, ಹತ್ತುವವರು ಹತ್ತಿ ಇಲ್ಲದಿದ್ದರೆ ಇಳಿದು ಹೋಗಿ” ಎಂದು ಅಹಂಕಾರದ ಧಾಟಿಯಲ್ಲಿ ಮಾತನಾಡಿದ್ದಾರೆ. ಸಾವಿನ ದವಡೆಯಿಂದ ಬಂದಿದ್ದ ಪ್ರಯಾಣಿಕರಿಗೆ ಕನಿಷ್ಠ ಸೌಜನ್ಯವನ್ನೂ ತೋರಿಸದ ಸಿಬ್ಬಂದಿಯ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಮಾನವೀಯತೆ ಇಲ್ಲದ ಇಂತಹ ಏರ್‌ಲೈನ್ಸ್‌ನಲ್ಲಿ ನಾವು ಮತ್ತೆ ಹೇಗೆ ಧೈರ್ಯವಾಗಿ ಪ್ರಯಾಣಿಸಲಿ?” ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

The post ಫ್ಲೈ ೯೧ ವಿಮಾನದಲ್ಲಿ ಆತಂಕದ ಕ್ಷಣ: ಪ್ರಯಾಣಿಕರ ಕಣ್ಣೀರು, ಸಿಬ್ಬಂದಿಯ ಉದ್ಧಟತನ! appeared first on Good News 24x7.

]]>
ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! https://www.goodnews24x7.com/public-interest-litigation-high-court-imposes-rs-1-lakh-fine-on-petitioners-in-sslc-hindi-language-dispute/ Sat, 11 Apr 2026 09:21:27 +0000 https://www.goodnews24x7.com/?p=9197 ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ,…

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಭಾರಿ ಮೊತ್ತದ ದಂಡ ವಿಧಿಸಿದೆ. ಕೇವಲ ಮಾಧ್ಯಮಗಳ ವರದಿಯನ್ನು ಆಧರಿಸಿ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಅವರಿಗೆ ನ್ಯಾಯಪೀಠವು ಒಟ್ಟು 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ನ್ಯಾಯಪೀಠದ ಕಠಿಣ ವಿನಾಶ ಮತ್ತು ಅಸಮಾಧಾನ:
ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. “ಕೇವಲ ಪತ್ರಿಕಾ ಹೇಳಿಕೆಗಳನ್ನು ಆಧರಿಸಿ ಅವುಗಳನ್ನು ರದ್ದುಗೊಳಿಸಲು ನ್ಯಾಯಾಲಯದ ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಬಳಸಲು ಸಾಧ್ಯವಿಲ್ಲ. ಅರ್ಜಿದಾರರು ಸರ್ಕಾರದ ಯಾವುದೇ ಅಧಿಕೃತ ಆದೇಶದ ಪ್ರತಿಗಳನ್ನು ಒದಗಿಸಿಲ್ಲ. ಇದು ನ್ಯಾಯಾಲಯದ ಸಮಯ ವ್ಯರ್ಥ ಮಾಡುವ ಮತ್ತು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ,” ಎಂದು ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ದಂಡದ ಮೊತ್ತ ಏರಿಕೆಗೆ ಕಾರಣವೇನು?:
ಆರಂಭದಲ್ಲಿ ನ್ಯಾಯಾಲಯವು ಅರ್ಜಿದಾರರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಿತ್ತು. ಆದರೆ, ವಿಚಾರಣೆ ವೇಳೆ ಅರ್ಜಿದಾರರು ವಾದ ಮುಂದುವರಿಸಿ, “ಹಿಂದಿ ಭಾಷೆಯನ್ನೇ ತೆಗೆದುಹಾಕಲಾಗುತ್ತಿದೆ” ಎಂದು ಸುಳ್ಳು ಅಂಶವನ್ನು ಉಲ್ಲೇಖಿಸಿದರು. ಪತ್ರಿಕಾ ವರದಿಗಳಲ್ಲಿ ಅಂತಹ ಯಾವುದೇ ಅಂಶವಿಲ್ಲದಿದ್ದರೂ, ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠವು ದಂಡದ ಮೊತ್ತವನ್ನು 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿತು.

ದಂಡ ಪಾವತಿಗೆ ಸೂಚನೆ:
ವಿಧಿಸಲಾದ ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು ಎಂದು ಕೋರ್ಟ್ ಸೂಚಿಸಿದೆ. ಒಂದು ವೇಳೆ ಅರ್ಜಿದಾರರು ನಿಗದಿತ ಅವಧಿಯಲ್ಲಿ ದಂಡ ಪಾವತಿಸದಿದ್ದರೆ, ಅದನ್ನು ಭೂ ಕಂದಾಯ ಬಾಕಿ ಎಂದು ಪರಿಗಣಿಸಿ ಅರ್ಜಿದಾರರ ಆಸ್ತಿಯಿಂದ ವಸೂಲಿ ಮಾಡಲು ಕಂದಾಯ ಅಧಿಕಾರಿಗಳಿಗೆ ಅವಕಾಶ ನೀಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

The post ಪ್ರಚಾರಕ್ಕಾಗಿ ಹಿತಾಸಕ್ತಿ ಅರ್ಜಿ: SSLC ಹಿಂದಿ ಭಾಷೆ ವಿವಾದದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್! appeared first on Good News 24x7.

]]>
ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! https://www.goodnews24x7.com/good-news-for-bengaluru-mumbai-passengers-vande-bharat-sleeper-train-to-run-on-tracks-soon/ Sat, 11 Apr 2026 08:33:04 +0000 https://www.goodnews24x7.com/?p=9183 ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಎರಡು ಪ್ರಮುಖ ನಗರಗಳ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು,…

The post ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! appeared first on Good News 24x7.

]]>

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಎರಡು ಪ್ರಮುಖ ನಗರಗಳ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಅಧಿಕೃತ ಅನುಮೋದನೆ ದೊರೆತಿದ್ದು, ಇನ್ನು ಮುಂದೆ ಕೇವಲ ಹಗಲು ಮಾತ್ರವಲ್ಲದೆ ರಾತ್ರಿ ಪ್ರಯಾಣವೂ ಅತ್ಯಂತ ವೇಗವಾಗಿ ಮತ್ತು ಆರಾಮದಾಯಕವಾಗಿರಲಿದೆ. ಈ ಹೊಸ ರೈಲು ಕೆಎಸ್ಆರ್ ಬೆಂಗಳೂರು (KSR Bengaluru) ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಸಂಪರ್ಕ ಕಲ್ಪಿಸಲಿದೆ.

ಸಂಸದ ಪಿಸಿ ಮೋಹನ್ ಪ್ರಯತ್ನಕ್ಕೆ ಫಲ:
ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರು ಈ ಮಾರ್ಗದಲ್ಲಿ ಸ್ಲೀಪರ್ ರೈಲು ಆರಂಭಿಸುವಂತೆ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಈಗ ದೊಡ್ಡ ಯಶಸ್ಸು ಸಿಕ್ಕಿದೆ. ಕಳೆದ ಡಿಸೆಂಬರ್‌ನಲ್ಲಿ ನೈಋತ್ಯ ರೈಲ್ವೆ ಸ್ಥಾಯಿ ಸಮಿತಿಯ ಭೇಟಿಯ ವೇಳೆ ಅವರು ಈ ಬೇಡಿಕೆಯನ್ನು ಪ್ರಬಲವಾಗಿ ಮಂಡಿಸಿದ್ದರು. ಅಲ್ಲದೆ, ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಅನ್ನು ರೈಲಿನ ಆರಂಭಿಕ ಅಥವಾ ಅಂತ್ಯದ ನಿಲ್ದಾಣವನ್ನಾಗಿ ಮಾಡುವಂತೆ ಅವರು ಸಲಹೆ ನೀಡಿದ್ದಾರೆ.

ಪ್ರಯಾಣದ ಸಮಯ ಗಣನೀಯ ಇಳಿಕೆ:
ಪ್ರಸ್ತುತ ಬೆಂಗಳೂರಿನಿಂದ ಮುಂಬೈಗೆ ಸುಮಾರು 1,136 ಕಿಲೋಮೀಟರ್ ದೂರವಿದ್ದು, ಉದ್ಯಾನ್ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಈ ದೂರವನ್ನು ಕ್ರಮಿಸಲು ಸುಮಾರು 23 ರಿಂದ 24 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ವಂದೇ ಭಾರತ್ ಸ್ಲೀಪರ್ ರೈಲು ಚಾಲನೆಗೆ ಬಂದರೆ ಈ ಸುದೀರ್ಘ ಪ್ರಯಾಣದ ಅವಧಿಯಲ್ಲಿ ಭಾರಿ ಕಡಿತವಾಗಲಿದೆ. ಅತ್ಯಾಧುನಿಕ ಸೌಲಭ್ಯಗಳು, ಹೆಚ್ಚಿನ ವೇಗ ಮತ್ತು ವಿಶ್ವದರ್ಜೆಯ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿರುವ ಈ ರೈಲು, ಉದ್ಯಮಿಗಳು ಹಾಗೂ ಪ್ರವಾಸಿಗರಿಗೆ ಅತ್ಯುತ್ತಮ ಆಯ್ಕೆಯಾಗಲಿದೆ.

The post ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಹಳಿ ಮೇಲೆ ಓಡಲಿದೆ ‘ವಂದೇ ಭಾರತ್ ಸ್ಲೀಪರ್’ ರೈಲು! appeared first on Good News 24x7.

]]>
ಏ. 8ರಂದು ಬಸ್ ಸಂಚಾರ ಡೌಟ್!. https://www.goodnews24x7.com/bus-service-on-april-8th-in-doubt/ Tue, 07 Apr 2026 11:10:29 +0000 https://www.goodnews24x7.com/?p=9148 38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ…

The post ಏ. 8ರಂದು ಬಸ್ ಸಂಚಾರ ಡೌಟ್!. appeared first on Good News 24x7.

]]>

38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ ಒಪ್ಪದ ಸಾರಿಗೆ ನೌಕರರ ಕೂಟ ಮತ್ತೆ ಹೋರಾಟಕ್ಕೆ ಮುಂದಾಗಿದೆ.

ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ
ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದ್ದ 38 ವೇತನ ಹಿಂಬಾಕಿ 2024ರಿಂದ ಆಗಬೇಕಿದ್ದ, ಹೊಸ ವೇತನ ಒಪ್ಪಂದಕ್ಕಾಗಿ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ರಾಜ್ಯ ಸರ್ಕಾರ 38 ತಿಂಗಳು ವೇತನ ಹಿಂಬಾಕಿ ಬದಲಿಗೆ 26 ತಿಂಗಳು ವೇತನ ಹಿಂಬಾಕಿ, 2024 ಜನವರಿ ಬದಲಿಗೆ 2025ರ ಏಪ್ರಿಲ್​ನಿಂದ ಹೊಸ ವೇತನ ಒಪ್ಪಂದ ಮಾಡುವುದಾಗಿ ಈಗಾಗಲೇ ಆದೇಶ ಮಾಡಿದೆ. ಆದರೆ ಇದಕ್ಕೆ ಒಪ್ಪದ ಸಾರಿಗೆ ನೌಕರರ ಒಕ್ಕೂಟ ಇಂದು ಸುದ್ದಿಗೋಷ್ಠಿ ನಡೆಸಿ ಯಾವುದೇ ‌ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪುವುದಿಲ್ಲ. ಏಪ್ರಿಲ್​ 8ರಿಂದ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ

ಇನ್ನು ಸಾರಿಗೆ ನೌಕರರ ಒಕ್ಕೂಟ 38 ತಿಂಗಳ ವೇತನ ಹಿಂಬಾಕಿ ಮತ್ತು 2024 ಜನವರಿಯಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 38 ತಿಂಗಳ ವೇತನ ಹಿಂಬಾಕಿಯಲ್ಲಿ 26 ತಿಂಗಳ ವೇತನ ಹಿ‌ಂಬಾಕಿ 1272 ಕೋಟಿ ರೂ ನೀಡುತ್ತಿದೆ. 2024 ಜನವರಿಯಿಂದ ಆಗಬೇಕಿದ್ದ ಹೊಸ ವೇತನ ಒಪ್ಪಂದವನ್ನು 2025 ಏಪ್ರಿಲ್​ನಿಂದ ಮಾಡಲು ಮುಂದಾಗಿದೆ.

1970 ಕೋಟಿ ರೂ ಹಿಂಬಾಕಿ ಬಿಡುಗಡೆಗೆ ಪಟ್ಟು
ಸರ್ಕಾರದ ಈ ನಿರ್ಧಾರಕ್ಕೆ ಒಪ್ಪದ ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು 38 ತಿಂಗಳ ವೇತನ ಹಿಂಬಾಕಿ 1970 ಕೋಟಿ ರೂ ಬಿಡುಗಡೆ ಮಾಡಲೇಬೇಕು ಮತ್ತು 2024 ಜನವರಿಯಿಂದಲೇ ಹೊಸ ವೇತನ ಒಪ್ಪಂದ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಫ್ರೀಡಂ ಪಾರ್ಕ್​ಗೆ ಬಂದು, ಅಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಂತರ ಮುಷ್ಕರಕ್ಕೆ ಹೋಗಬೇಕೆಂದು ಸಾರಿಗೆ ನೌಕರರ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದು ಬಸ್​​ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ.

ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಬೇಕಿದ್ದ 38 ತಿಂಗಳ ಬದಲಿಗೆ 26 ತಿಂಗಳಿನ ವೇತನ ಮತ್ತು 2024 ಜನವರಿ ಬದಲಿಗೆ ‌25 ಏಪ್ರಿಲ್​ನಿಂದ ಹೊಸ ವೇತನ ಪರಿಷ್ಕರಣೆ ಮಾಡುತ್ತೇವೆ ಅಂತಿದ್ದಾರೆ. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪದೆ ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ‌ಕಾದು ನೋಡಬೇಕಿದೆ.

The post ಏ. 8ರಂದು ಬಸ್ ಸಂಚಾರ ಡೌಟ್!. appeared first on Good News 24x7.

]]>
ಕಬ್ಬನ್ ಪಾರ್ಕ್​​ನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ *ತ್ಮಹತ್ಯೆ! https://www.goodnews24x7.com/9106-2a-man-from-west-bengal-committed-suicide-in-cubbon-park/ Fri, 03 Apr 2026 06:50:49 +0000 https://www.goodnews24x7.com/?p=9106   ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ಗುರುವಾರದಿಂದ ಕಾಣೆಯಾಗಿದ್ದ ಸುರೇಶ್ ಕುರಿತು ಹೆಚ್‌ಎಸ್‌ಆರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಎನ್ನಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ…

The post ಕಬ್ಬನ್ ಪಾರ್ಕ್​​ನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ *ತ್ಮಹತ್ಯೆ! appeared first on Good News 24x7.

]]>

 

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ಗುರುವಾರದಿಂದ ಕಾಣೆಯಾಗಿದ್ದ ಸುರೇಶ್ ಕುರಿತು ಹೆಚ್‌ಎಸ್‌ಆರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಎನ್ನಲಾಗಿದೆ.

ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲವಾದ್ದರಿಂದ ತನಿಖೆ ಮುಂದುವರೆಸಿದ್ದಾರೆ.
ನಗರದ ಕಬ್ಬನ್ ಪಾರ್ಕ್​ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂದು ತಿಳಿದು ಬಂದಿಲ್ಲ. ಸಧ್ಯಕ್ಕೆ ಕಬ್ಬನ್ ಪಾರ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಹಿಂದಿನ ದಿನವೇ ಕಾಣೆಯಾಗಿದ್ದ ವ್ಯಕ್ತಿ ಗುರುವಾರದಿಂದಲೇ ಕಾಣೆಯಾಗಿದ್ದ ಕಬ್ಬನ್ ಪೇಟೆ ಸುರೇಶ್, ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಹೆಚ್​ಎಸ್ಆರ್ ಪೊಲೀಸ್ ಠಾಣೆಗೆ ಆತನ ಕುಟುಂಬಸ್ಥರು ದೂರು ನೀಡಿದ್ದರು. ಇಂದು ಬೆಳಗ್ಗೆ ಪಾರ್ಕ್‌ನ ಮರೊಂದಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಕಬ್ಬನ್ ಪಾರ್ಕ್​ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತನ ಜೇಬಿನಲ್ಲಿ ಐಡಿ ಕಾರ್ಡ್​ ಲಭಿಸಿದ್ದು, ಆತ ಬೆಂಗಳೂರಿನ ಎಸ್​ಪಿ ರೋಡ್​ನಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಡೆತ್​ನೋಟ್ ಸಿಕ್ಕಿಲ್ಲ,ಐಡಿ ಕಾರ್ಡ್​ ಹೊರತುಪಡಿಸಿ ಮೃತನ ಬಳಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಡೆತ್​ನೋಟ್ ಲಭಿಸಿಲ್ಲವೆಂದು ಪೊಲೀಸರು ಹೇಳಿದ್ದಾರೆ. ನಂತರ ಆತನ ಕುಟುಂಬಕ್ಕೆ ಮಾಹಿತಿ ತಿಳಿಸಿದ ಅಧಿಕಾರಿಗಳು, ಘಟನೆ ಸಂಬಂಧ ಕಬ್ಬನ್ ಪಾರ್ಕ್ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

 

The post ಕಬ್ಬನ್ ಪಾರ್ಕ್​​ನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ *ತ್ಮಹತ್ಯೆ! appeared first on Good News 24x7.

]]>