BiggBosshouse Archives - Good News 24x7 https://www.goodnews24x7.com/tag/biggbosshouse/ Kannada Sun, 02 Nov 2025 12:46:31 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg BiggBosshouse Archives - Good News 24x7 https://www.goodnews24x7.com/tag/biggbosshouse/ 32 32 ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! https://www.goodnews24x7.com/bigg-boss-house-full-of-allegations-against-ghilli-actor/ Sun, 02 Nov 2025 12:46:31 +0000 https://www.goodnews24x7.com/?p=8017 ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಹವಾ ಸೃಷ್ಟಿಸಿದ್ದ ಗಿಲ್ಲಿ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಪಂದನಾ, ಅಶ್ವಿನಿ, ಹಾಗೂ ಜೋಡಿ ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸ್ವಾರ್ಥದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.…

The post ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! appeared first on Good News 24x7.

]]>

ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಹವಾ ಸೃಷ್ಟಿಸಿದ್ದ ಗಿಲ್ಲಿ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಪಂದನಾ, ಅಶ್ವಿನಿ, ಹಾಗೂ ಜೋಡಿ ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸ್ವಾರ್ಥದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

 

ಗಿಲ್ಲಿ ಹವಾ
ಬಿಗ್​ಬಾಸ್​ (Bigg Boss)ನಲ್ಲಿ ಸದ್ಯ ಗಿಲ್ಲಿ ನಟನ ಹವಾ ಜೋರಾಗಿಯೇ ನಡೆಯುತ್ತಿದೆ. ಇವರೇ ಈ ಬಾರಿಯ ವಿನ್ನರ್​ ಎನ್ನುವಷ್ಟರ ಮಟ್ಟಿಗೆ ಇವರು ಹವಾ ಸೃಷ್ಟಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಗಿಲ್ಲಿ ನಟನ ಬಗ್ಗೆ ದನಿ ಜೋರಾಗಿಯೇ ನಡೆಯುತ್ತಿದೆ.

ಹಾಸ್ಯದಿಂದ ತಿರುಗೇಟು
ತಮ್ಮ ಹಾಸ್ಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದವರು ಗಿಲ್ಲಿ ನಟ. ಕಾವ್ಯಾ ಜೊತೆ ರೊಮಾನ್ಸ್, ತಮ್ಮನ್ನು ಟೀಕಿಸಲು ಬರುವ ಅಶ್ವಿನಿ ಗೌಡ ಅವರಿಗೂ ಹಾಸ್ಯದಿಂದಲೇ ತಿರುಗೇಟು ನೀಡುವಲ್ಲಿ ಗಿಲ್ಲಿ ನಿಸ್ಸೀಮರು.

ಟಾರ್ಗೆಟ್​ ಆದ ಗಿಲ್ಲಿ
ಇಂತಿಪ್ಪ ಗಿಲ್ಲಿಯನ್ನು ಈಗ ಎಲ್ಲರೂ ಟಾರ್ಗೆಟ್​ ಮಾಡಿದ್ದಾರೆ. ಇವರ ವಿರುದ್ಧ ಆರೋಪಗಳ ಸುರಿಮಳೆಯೇ ಆಗುತ್ತಿದೆ. ಇವರು ನನ್ನ ಟಾರ್ಗೆಟ್​ ಎಂದು ಯಾರು ಹೇಳುತ್ತೀರಿ ಎನ್ನುವ ಪ್ರಶ್ನೆಯನ್ನು ಸುದೀಪ್​ ಎದುರಿಗಿಟ್ಟಿದ್ದಾರೆ.

ನಂಬಿಕೆ ಇಟ್ಟು ಮೋಸ
ಆಗ ಗಿಲ್ಲಿ ವಿರುದ್ಧ ಕೆಲವರು ಆರೋಪ ಮಾಡಿದ್ದಾರೆ. ಗಿಲ್ಲಿ ನಂಬಿಕೆ ಇಟ್ಟು ಮೋಸ ಮಾಡ್ತಾರೆ. ಇದರಲ್ಲಿ ಅವರದ್ದು ಎತ್ತಿದ ಕೈ ಎಂದು ಎಂದು ಸ್ಪಂದನಾ ಸೋಮಣ್ಣ ಹೇಳಿದರು.

ಧನುಷ್​ ಏನಂದ್ರು?
ಅವನು ಕಾಮಿಡಿ ಮಾಡ್ತಾನೆ. ವಾಪಸ್​ ನಾವು ಮಾಡಿದ್ರೆ ಸೀರಿಯಸ್​ ಆಗಿ ತೆಗೆದುಕೊಳ್ತಾನೆ ಎಂದು ಧನುಷ್​ ಅಭಿಪ್ರಾಯ ಪಟ್ಟರು.

ನಾನು ಪರ್ಸನಲ್​ ಆಗಿ ಟಾರ್ಗೆಟ್​
ಈ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ನನ್ನನ್ನು ಪರ್ಸನಲ್​ ಆಗಿ ಟಾರ್ಗೆಟ್​ ಮಾಡ್ತಾ ಇದ್ದಾರೆ ಎನ್ನಿಸ್ತಿದೆ, ಗೇಮ್​ ಅಂತ ಬಂದಾಗಲು ಕೂಡ ತುಂಬಾ ಸ್ವಾರ್ಥಿ ಎಂದು ಅಶ್ವಿನಿ ಗೌಡ ಕೋಪದಿಂದ ನುಡಿದರು.

ವಿಭಿನ್ನ ಪರ್ಸನ್ಯಾಲಿಟಿ
ಜಂಟಿಯಾಗಿ ಬಂದಾಗ ಎರಡು ವಿಭಿನ್ನ ಪರ್ಸನ್ಯಾಲಿಟಿ. ಅವರು ಸೂಪರ್​ ಆ್ಯಕ್ಟೀವ್​ ಇದ್ದಾರೆ, ಆದರೆ ನನ್ನ ಒಂದು ಸ್ಟ್ಯಾಂಡ್ ಕಾಣಿಸ್ತಾ ಇರಲಿಲ್ಲ, ಹಾಗಾಗಿ ನಾನು ಕೂಡ ಗಿಲ್ಲಿ ವಿರುದ್ಧ ಎಂದಿದ್ದಾರೆ ಕಾವ್ಯಾ ಶೈವ

The post ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! appeared first on Good News 24x7.

]]>
ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? https://www.goodnews24x7.com/bigg-boss-contestant-rakshita-is-facing-legal-trouble-did-rakshita-do-wrong-by-speaking-against-ashwini-gowda/ Sun, 02 Nov 2025 11:54:42 +0000 https://www.goodnews24x7.com/?p=8009 ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ…

The post ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? appeared first on Good News 24x7.

]]>

ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ.

ಬೆಂಗಳೂರು: ಬಿಗ್​ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ (Rakshita Shetty) ಕಾನೂನು ಸಂಕಷ್ಟ ಎದುರಾಗಿದೆ. ಕಲಾವಿದರಿಗೆ ಅವಮಾನ ಮಾಡಿದ ಆರೋಪವನ್ನು ಅಶ್ವಿನಿ ಗೌಡ ಮಾಡಿದ್ದು, ಈ ಸಂಬಂಧ ನಗರ ಪೊಲೀಸ್ ಕಮಿಷನರ್​​ಗೆ ದೂರು ಕೊಡಲು ನಿರ್ಧಾರ ಮಾಡಲಾಗಿದೆ. ಕುಶಲ ಕಲಾ ವೃಂದದಿಂದ ಕಂಪ್ಲೆಂಟ್ ಕೊಡಲು ನಿರ್ಧಾರ ಮಾಡಿದೆ. ಅಶ್ವಿನಿ ಗೌಡ ವಾರದ ಕಥೆಯಲ್ಲಿ ಸುದೀಪ್ ಎದುರು ಈ ವಿಚಾರವನ್ನು ಉಲ್ಲೇಖ ಮಾಡಿದ್ದಾರೆ. ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು.

ಅಶ್ವಿನಿ ಗೌಡ ಮತ್ತು ಕಾವ್ಯ ಶೈವ ಕಳೆದ ವಾರ ಬಿಗ್​ಬಾಸ್ ಮನೆಯಲ್ಲಿ ಜಗಳ ಆಡುತ್ತಿದ್ದರು. ಜೋರಾಗಿ ಕಿತ್ತಾಡುವಾಗ ಕಾವ್ಯ ಪರ ಬ್ಯಾಟ್ ಬೀಸಲು ರಕ್ಷಿತಾ ಶೆಟ್ಟಿ ಬಂದಿದ್ದಾರೆ. ಆಗ ರಕ್ಷಿತಾ ಶೆಟ್ಟಿ ನಿಮ್ಮ ಧಾರಾವಾಹಿಯನ್ನು ಹೊರಗೆ ಮಾಡಿ. ಬಿಗ್​ಬಾಸ್ ಮನೆಯಲ್ಲಿ ಅಲ್ಲ ಎಂದು ಕೂಗಿದ್ದಾರೆ. ಅದಕ್ಕೆ ಅಶ್ವಿನಿ ಗೌಡ, ಬೆಟ್ಟು ಮಾಡುತ್ತ ಕಲಾವಿದರಿಗೆ ಅವಮಾನ ಮಾಡಬೇಡ ಎಂದು ರಕ್ಷಿತಾ ಕಡೆ ತಿರುಗಿದ್ದಾರೆ. ನಿಂಗೆ ಅದ್ರಲ್ಲೇ ಹೊಡೀತಾರೆ ಹುಷಾರ್ ಎಂದಿದ್ದಾರೆ. ಅದಕ್ಕೆ ರಕ್ಷಿತಾ ಗೌಡ, ಮಾಡ್ತೀನಿ, ಮಾಡ್ತೀನಿ ಎಂದು ಜೋರಾಗಿ ಕೂಗಿದ್ದಾರೆ.

ಈ ವಿಚಾರದ ಬಗ್ಗೆ ಕಾವ್ಯ ಶೈವ ಸುದೀಪ್ ಎದುರು ಸ್ಪಷ್ಟನೆ ನೀಡಿದ್ದಾರೆ. ನಾನು ಜಗಳ ಆಡಬೇಕಾದರೆ ರಕ್ಷಿತಾ ಬಂದಿದ್ದು ನಿಜ. ಇದು ಸೀರಿಯಲ್ ಅಲ್ಲ, ನಾಟಕವಾಡಬೇಡಿ ಎಂಬ ಉದ್ದೇಶದಲ್ಲಿ ರಕ್ಷಿತಾ ಹೇಳಿದ್ದಾರೆ. ಆದರೆ ಅಶ್ವಿನಿ ಅವರು ಆ ಸ್ಟೇಟ್​ಮೆಂಟ್ ಅನ್ನು ತಿರುಚಿರೋದನ್ನು ಕಣ್ಣಾರೆ ನೋಡಿದೆ. ಕಲಾವಿದರ ಬಗ್ಗೆ ಕಮ್ಮಿ ಮಾತಾಡ್ತಾ ಇದ್ದೀಯಾ.. ಕಲಾವಿದರನ್ನ ಕೆಳಗೆ ಇಟ್ಟು ಮಾತಾಡ್ತೀಯಾ ಎಂದು ಹೇಳಿದರು. ಆದರೆ ರಕ್ಷಿತಾ ಮಾತಾಡಿದ್ದ ಉದ್ದೇಶವೇ ಬೇರೆ ಆಗಿತ್ತು ಎಂದು ಕಾವ್ಯ ಹೇಳಿದ್ದಾರೆ. ಇದೀಗ ಅಶ್ವಿನಿ ಗೌಡ ಮಾಡಿದ ಆರೋಪಕ್ಕೆ ಸಂಬಂಧಿಸಿ ಕುಶಲ ಕಲಾ ವೃಂದ ರಕ್ಷಿತಾ ಶೆಟ್ಟಿ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ.

The post ಬಿಗ್​ಬಾಸ್ ಸ್ಪರ್ಧಿ ರಕ್ಷಿತಾಗೆ ಕಾನೂನು ಸಂಕಷ್ಟ ಎದುರಾಗಿದೆ . ಅಶ್ವಿನಿ ಗೌಡ ವಿರುದ್ಧ ಮಾತಾಡಿದ್ದೇ ರಕ್ಷಿತಾಗೆ ತಪ್ಪಾಯ್ತಾ? appeared first on Good News 24x7.

]]>