BiggBossKannadaseason12 Archives - Good News 24x7 https://www.goodnews24x7.com/tag/biggbosskannadaseason12/ Kannada Tue, 18 Nov 2025 07:20:19 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg BiggBossKannadaseason12 Archives - Good News 24x7 https://www.goodnews24x7.com/tag/biggbosskannadaseason12/ 32 32 ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ https://www.goodnews24x7.com/gilli-actor-files-complaint-with-womens-commission-for-touching-rishas-clothes-gillis-joke-has-now-become-a-joke/ Tue, 18 Nov 2025 07:20:19 +0000 https://www.goodnews24x7.com/?p=8201 ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ. ರಿಷಾ ಅವರ ಬಟ್ಟೆಗಳನ್ನು ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿಲಾಗಿದೆ. ಸದ್ಯ ಈ ಪ್ರಕರಣವನ್ನು ಮಹಿಳಾ ಆಯೋಗದ ಲೀಗಲ್…

The post ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ appeared first on Good News 24x7.

]]>

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ. ರಿಷಾ ಅವರ ಬಟ್ಟೆಗಳನ್ನು ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿಲಾಗಿದೆ. ಸದ್ಯ ಈ ಪ್ರಕರಣವನ್ನು ಮಹಿಳಾ ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಎಲ್ಲರ ಜೊತೆ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಾ ಇದ್ದಾರೆ. ಆದರೆ ಅವರು ಮಾಡುವ ಕೆಲವು ತಮಾಷೆಯಿಂದ ತೊಂದರೆ ಕೂಡ ಉಂಟಾಗುತ್ತದೆ. ಅಚ್ಚರಿ ಎಂದರೆ, ಈಗ ಬಿಗ್ ಬಾಸ್ ಮನೆ ಒಳಗಿನ ವಿಷಯ ಮಹಿಳಾ ಆಯೋಗದ (Women Commission) ತನಕ ತಲುಪಿದೆ! ಹೌದು, ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಅಷ್ಟಕ್ಕೂ ಗಿಲ್ಲಿ ಮಾಡಿದ ತಪ್ಪು ಏನು? ಸಹ ಸ್ಪರ್ಧಿ ರಿಷಾ (Risha) ಅವರ ಬಟ್ಟೆಗಳನ್ನು ಮುಟ್ಟಿದ್ದು. ಈ ವಿಚಾರವನ್ನು ಇಟ್ಟುಕೊಂಡು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ರಿಷಾ ಅವರು ಗಿಲ್ಲಿ ನಟನ ತಾಳ್ಮೆ ಕೆಡುವಂತೆ ನಡೆದುಕೊಂಡಿದ್ದರು. ಬಾತ್ ರೂಮ್ ಒಳಗೆ ಹೋಗಿದ್ದ ರಿಷಾ ಅವರು ದೀರ್ಘ ಸಮಯ ತೆಗೆದುಕೊಂಡರು. ತಮಗೆ ನೀರು ಬೇಕು ಎಂದು ಗಿಲ್ಲಿ ನಟ ಮನವಿ ಮಾಡಿದರೂ ಕೂಡ ರಿಷಾ ಅದಕ್ಕೆ ಸ್ಪಂದಿಸಲಿಲ್ಲ. ಅದರಿಂದಾಗಿ ಗಿಲ್ಲಿಗೆ ಕೋಪ ಬಂತು. ಆಗ ಗಿಲ್ಲಿ ನಡೆದುಕೊಂಡ ರೀತಿಯಿಂದ ಎಲ್ಲರಿಗೂ ಅಚ್ಚರಿ ಆಯಿತು.

ಗಿಲ್ಲಿ ಅವರು ರಿಷಾ ಅವರ ಬಟ್ಟೆಗಳನ್ನೆಲ್ಲ ತಂದು ಬಾತ್​ ರೂಮ್​ ಮುಂದೆ ಸುರಿದರು. ಆ ಬಳಿಕ ಗಿಲ್ಲಿ ಮತ್ತು ರಿಷಾ ನಡುವೆ ದೊಡ್ಡ ಜಗಳ ಆಯಿತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಈಗ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ಅಲ್ಲದೇ, ಗಿಲ್ಲಿ ನಟ ಅವರು ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಈ ದೂರಿನ ಅನ್ವಯ ಮಹಿಳಾ ಆಯೋಗವು ವಿಡಿಯೋ ಫೂಟೇಜ್ ಪರಿಶೀಲನೆ ಮಾಡುತ್ತಿದೆ. ಆದರೆ ಬಿಗ್ ಬಾಸ್ ಆಯೋಜಕರು ಯಾವುದೇ ವಿಡಿಯೋ ಫೂಟೇಜ್ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಸಿಗದ ಕಾರಣಕ್ಕೆ ಈ ಪ್ರಕರಣವನ್ನು ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.

ಜಗಳ ನಡೆದಾಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದರು. ಅದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಆದರೂ ಕೂಡ ಇನ್ನುಳಿದ ಸ್ಪರ್ಧಿಗಳು ಕೇವಲ ವಾರ್ನಿಂಗ್ ನೀಡಿ ರಿಷಾ ಅವರನ್ನು ಉಳಿಸಿಕೊಂಡರು. ವಾರಾಂತ್ಯದ ಸಂಚಿಕೆಯಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದರು. ಹೆಣ್ಮಕ್ಕಳ ಬಟ್ಟೆ, ಬ್ಯಾಗ್​​ಗಳಿಗೆ ಅನುಮತಿ ಇಲ್ಲದೇ ಕೈ ಹಾಕಬಾರದು ಎಂದು ಗಿಲ್ಲಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.

The post ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ appeared first on Good News 24x7.

]]>
‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’ ಎಂದ ಅಶ್ವಿನಿ ಗೌಡ https://www.goodnews24x7.com/ashwini-gowda-says-janvis-friendship-has-tarnished-my-name/ Mon, 27 Oct 2025 06:52:16 +0000 https://www.goodnews24x7.com/?p=7883   ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಸದಾ ಒಟ್ಟಿಗೆ ಇರುತ್ತಿದ್ದರು. ಆದರೆ, ಇವರು ಒಟ್ಟಾಗಿ ಇರೋದು ಯಾವ ರೀತಿ ಕಾಣಿಸುತ್ತಿದೆ ಎಂಬ ಸತ್ಯವನ್ನು ಸುದೀಪ್ ಹೇಳಿದ್ದರು. ಇದಾದ ಬಳಿಕ ಇಬ್ಬರೂ ಬದಲಾದಂತೆ ಕಾಣುತ್ತಿದೆ. ‘ಜಾನ್ವಿ…

The post ‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’ ಎಂದ ಅಶ್ವಿನಿ ಗೌಡ appeared first on Good News 24x7.

]]>

 

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಸದಾ ಒಟ್ಟಿಗೆ ಇರುತ್ತಿದ್ದರು. ಆದರೆ, ಇವರು ಒಟ್ಟಾಗಿ ಇರೋದು ಯಾವ ರೀತಿ ಕಾಣಿಸುತ್ತಿದೆ ಎಂಬ ಸತ್ಯವನ್ನು ಸುದೀಪ್ ಹೇಳಿದ್ದರು. ಇದಾದ ಬಳಿಕ ಇಬ್ಬರೂ ಬದಲಾದಂತೆ ಕಾಣುತ್ತಿದೆ. ‘ಜಾನ್ವಿ ಗೆಳೆತನದಿಂದ ನನ್ನ ಹೆಸರಿಗೆ ಕಳಂಕ ಬರುತ್ತಿದೆ’ ಎಂದು ಅಶ್ವಿನಿ ಹೇಳಿದ್ದಾರೆ. ಇದರಿಂದ ಜಾನ್ವಿಗೆ ಕೋಪ ಬಂದಿದೆ. ಇಬ್ಬರೂ ಫ್ರೆಂಡ್​ಶಿಪ್ ಮುರಿದುಕೊಳ್ಳುವ ಸೂಚನೆ ನೀಡಿದ್ದಾರೆ.

The post ‘ಜಾನ್ವಿ ಗೆಳೆತನದಿಂದ ನನಗೆ ಕಳಂಕ ಬಂದಿದೆ’ ಎಂದ ಅಶ್ವಿನಿ ಗೌಡ appeared first on Good News 24x7.

]]>
‘ನಾನು ನಿನ್ನ ಮಿಸ್ ಮಾಡಿಕೊಳ್ತೀನಿ’; ಬಿಗ್ ಬಾಸ್​ನಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್ https://www.goodnews24x7.com/i-miss-you-suraj-hugs-rashika-who-left-bigg-boss/ Mon, 27 Oct 2025 05:55:12 +0000 https://www.goodnews24x7.com/?p=7877 Bigg Boss Kannada Elimination: ಬಿಗ್ ಬಾಸ್ ಕನ್ನಡ ಸೀಸನ್ 12ರ ನಾಲ್ಕನೇ ವಾರ ದೀಪಾವಳಿ ಪ್ರಯುಕ್ತ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಯಿತು. ರಾಶಿಕಾ ಮತ್ತು ಸ್ಪಂದನಾ ಮನೆಯಿಂದ ಹೊರಹೋಗುವವರ ಲಿಸ್ಟ್‌ನಲ್ಲಿದ್ದರು. ಸೂರಜ್ ರಾಶಿಕಾರನ್ನು ಅಪ್ಪಿಕೊಂಡರು. ಕೊನೆಗೆ ಇದು ಪ್ರ್ಯಾಂಕ್ ಎಂದು ತಿಳಿದು…

The post ‘ನಾನು ನಿನ್ನ ಮಿಸ್ ಮಾಡಿಕೊಳ್ತೀನಿ’; ಬಿಗ್ ಬಾಸ್​ನಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್ appeared first on Good News 24x7.

]]>

Bigg Boss Kannada Elimination: ಬಿಗ್ ಬಾಸ್ ಕನ್ನಡ ಸೀಸನ್ 12ರ ನಾಲ್ಕನೇ ವಾರ ದೀಪಾವಳಿ ಪ್ರಯುಕ್ತ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಯಿತು. ರಾಶಿಕಾ ಮತ್ತು ಸ್ಪಂದನಾ ಮನೆಯಿಂದ ಹೊರಹೋಗುವವರ ಲಿಸ್ಟ್‌ನಲ್ಲಿದ್ದರು. ಸೂರಜ್ ರಾಶಿಕಾರನ್ನು ಅಪ್ಪಿಕೊಂಡರು. ಕೊನೆಗೆ ಇದು ಪ್ರ್ಯಾಂಕ್ ಎಂದು ತಿಳಿದು ಸ್ಪರ್ಧಿಗಳು ನಿಟ್ಟುಸಿರು ಬಿಟ್ಟರು.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ (BBk 12) ನಾಲ್ಕನೇ ವೀಕೆಂಡ್​ನಲ್ಲಿ ಪ್ರ್ಯಾಂಕ್ ಎಲಿಮಿನೇಷನ್ ಮಾಡಲಾಗಿದೆ. ದೀಪಾವಳಿ ಪ್ರಯುಕ್ತ ಯಾವುದೇ ಎಲಿಮಿನೇಷನ್ ಇರೋದಿಲ್ಲ ಎಂದು ವೀಕ್ಷಕರಿಗೆ ಮೊದಲೇ ತಿಳಿಸಲಾಗಿತ್ತು. ಆದರೆ, ಬಿಗ್ ಬಾಸ್​ನಲ್ಲಿ ಇದ್ದ ಸ್ಪರ್ಧಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಪ್ರ್ಯಾಂಕ್ ಎಲಿಮಿನೇಷನ್​ಗೆ ರಾಶಿಕಾ ಹಾಗೂ ಸ್ಪಂದನಾ ಸೋಮಣ್ಣ ಒಂದು ಕ್ಷಣ ಕಂಗಾಲಾದರು. ಮನೆಯಿಂದ ಹೊರ ಹೊರಟ ರಾಶಿಕಾನ ಸೂರಜ್ ತಬ್ಬಿದ್ದಾರೆ.

ಸೂರಜ್ ಹಾಗೂ ರಾಶಿಕಾ ಮಧ್ಯೆ ಪ್ರೀತಿ ಮೂಡುತ್ತಿರುವುದು ಸ್ಪಷ್ಟವಾಗುತ್ತಿದೆ. ಆದರೆ, ನೋಡುಗರಿಗೆ ಇದು ತುಂಬಾನೇ ನಾಟಕೀಯ ಎನಿಸುತ್ತಿದೆ. ಜನಪ್ರಿಯತೆ ಗಳಿಸಬೇಕು ಎಂಬ ಕಾರಣಕ್ಕೆ ರಾಶಿಕಾ ಅವರು ಈ ರೀತಿಯ ಪ್ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸುದೀಪ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹೀಗೆ ಮುಂದುವರಿದರೆ ಆಟ ಶೀಘ್ರವೇ ಕೊನೆ ಆಗುತ್ತದೆ ಎಂದು ರಾಶಿಕಾಗೆ ಸುದೀಪ್ ಬುದ್ಧಿಮಾತು ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಬಿಗ್ ಬಾಸ್ ರಾಶಿಕಾಗೆ ಚಮಕ್ ನೀಡಿದರು. ನಾಮಿನೇಟ್ ಆದವರ ಪೈಕಿ ಧ್ರುವಂತ್, ರಾಶಿಕಾ ಹಾಗೂ ಸ್ಪಂದನಾ ಅವರು ಅಂತಿಮವಾಗಿ ಉಳಿದುಕೊಂಡರು. ಈ ಪೈಕಿ ಧ್ರುವಂತ್ ಸೇವ್ ಆದರು. ಈ ಬೆನ್ನಲ್ಲೇ, ‘ರಾಶಿಕಾ ಹಾಗೂ ಸ್ಪಂದನಾ ನೀವಿನ್ನು ಮನೆಯಿಂದ ಹೊರಡಬಹುದು’ ಎಂದರು. ಇದರಿಂದ ರಾಶಿಕಾ ಹಾಗೂ ಸ್ಪಂದನಾ ಕಣ್ಣೀರು ಹಾಕಲು ಆರಂಭಿಸಿದರು.

ಓಡಿ ಬಂದ ಸೂರಜ್ ಅವರು ರಾಶಿಕಾನ ತಬ್ಬಿಕೊಂಡರು. ಸೂರಜ್​ಗೂ ಇದು ಸಾಕಷ್ಟು ಬೇಸರ ಮೂಡಿಸಿತು. ‘ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಸೂರಜ್ ಹೇಳಿದರು. ಆ ಬಳಿಕ ಮುಖ್ಯದ್ವಾರ ಓಪನ್ ಆದಾಗ, ‘ಎಲಿಮಿನೇಷನ್ ಇರೋದಿಲ್ಲ’ ಎಂಬ ಬೋರ್ಡ್ ಕಂಡು ರಾಶಿಕಾ ಹಾಗೂ ಸ್ಪಂದನಾ ಖುಷಿ ಆದರು. ಈ ವೇಳೆ ಮತ್ತೆ ಓಡೋಡಿ ಬಂದ ಸೂರಜ್ ರಾಶಿಕಾನ ಮತ್ತೆ ತಬ್ಬಿಕೊಂಡರು.

The post ‘ನಾನು ನಿನ್ನ ಮಿಸ್ ಮಾಡಿಕೊಳ್ತೀನಿ’; ಬಿಗ್ ಬಾಸ್​ನಿಂದ ಹೊರಟಿದ್ದ ರಾಶಿಕಾನ ತಬ್ಬಿ ಹೇಳಿದ ಸೂರಜ್ appeared first on Good News 24x7.

]]>
ಬಿಗ್​​ಬಾಸ್ ಮನೆಯಲ್ಲಿ ಅರಳುತ್ತಿದೆ ಹೊಸ ಪ್ರೇಮಕತೆ; ನಾ ಬಂದಿದ್ದು ನಿನಗಾಗಿಯೇ ? https://www.goodnews24x7.com/a-new-love-story-is-blossoming-in-the-bigg-boss-house-i-came-for-you/ Fri, 24 Oct 2025 09:56:00 +0000 https://www.goodnews24x7.com/?p=7806 Bigg Boss Kannada season 12: ಬಿಗ್​​ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣಗಳು ಸಾಮಾನ್ಯ. ಬಿಗ್​​ಬಾಸ್​​ನಲ್ಲಿ ಜೊತೆಯಾದವರು ಹೊರಗೂ ಒಟ್ಟಿಗೆ ಬಾಳಿದ ಉದಾಹರಣೆಗಳೂ ಸಹ ಇವೆ. ಈ ಸೀಸನ್​​ನಲ್ಲಿ ಗಿಲ್ಲಿ ಆರಂಭದಿಂದಲೂ ಕಾವ್ಯಾ ಹಿಂದೆ ಓಡಾಡುತ್ತಲೇ ಇದ್ದಾರೆ. ಕಾವ್ಯಾ, ಗಿಲ್ಲಿಗೆ ಸರಿಯಾಗಿ ಸೊಪ್ಪು…

The post ಬಿಗ್​​ಬಾಸ್ ಮನೆಯಲ್ಲಿ ಅರಳುತ್ತಿದೆ ಹೊಸ ಪ್ರೇಮಕತೆ; ನಾ ಬಂದಿದ್ದು ನಿನಗಾಗಿಯೇ ? appeared first on Good News 24x7.

]]>

Bigg Boss Kannada season 12: ಬಿಗ್​​ಬಾಸ್ ಮನೆಯಲ್ಲಿ ಪ್ರೇಮ ಪ್ರಕರಣಗಳು ಸಾಮಾನ್ಯ. ಬಿಗ್​​ಬಾಸ್​​ನಲ್ಲಿ ಜೊತೆಯಾದವರು ಹೊರಗೂ ಒಟ್ಟಿಗೆ ಬಾಳಿದ ಉದಾಹರಣೆಗಳೂ ಸಹ ಇವೆ. ಈ ಸೀಸನ್​​ನಲ್ಲಿ ಗಿಲ್ಲಿ ಆರಂಭದಿಂದಲೂ ಕಾವ್ಯಾ ಹಿಂದೆ ಓಡಾಡುತ್ತಲೇ ಇದ್ದಾರೆ. ಕಾವ್ಯಾ, ಗಿಲ್ಲಿಗೆ ಸರಿಯಾಗಿ ಸೊಪ್ಪು ಹಾಕುತ್ತಿಲ್ಲ. ಇದರ ಮಧ್ಯೆ ಇದೀಗ ಬಿಗ್​​ಬಾಸ್ ಮನೆಯಲ್ಲಿ ಹೊಸ ಪ್ರೇಮಕತೆಯೊಂದು ಶುರುವಾಗುವ ಲಕ್ಷಣ ಕಂಡು ಬಂದಿದೆ.

ಬಿಗ್​​ಬಾಸ್ (Bigg Boss) ಮನೆಯಲ್ಲಿ ಪ್ರೇಮ ಪ್ರಕರಣಗಳು ಸಾಮಾನ್ಯ. ಪ್ರತಿ ಸೀಸನ್​​ನಲ್ಲೂ ಒಂದಲ್ಲ ಒಂದು ಜೋಡಿಗಳು ಸಿಕ್ಕೇ ಸಿಗುತ್ತವೆ. ಬಿಗ್​​ಬಾಸ್​​ನಲ್ಲಿ ಜೊತೆಯಾದವರು ಹೊರಗೂ ಒಟ್ಟಿಗೆ ಬಾಳಿದ ಉದಾಹರಣೆಗಳೂ ಸಹ ಇವೆ. ಈ ಸೀಸನ್​​ನಲ್ಲಿ ಗಿಲ್ಲಿ ಆರಂಭದಿಂದಲೂ ಕಾವ್ಯಾ ಹಿಂದೆ ಓಡಾಡುತ್ತಲೇ ಇದ್ದಾರೆ. ಕಾವ್ಯಾ, ಗಿಲ್ಲಿಗೆ ಸರಿಯಾಗಿ ಸೊಪ್ಪು ಹಾಕುತ್ತಿಲ್ಲ. ಇದರ ಮಧ್ಯೆ ಇದೀಗ ಬಿಗ್​​ಬಾಸ್ ಮನೆಯಲ್ಲಿ ಹೊಸ ಪ್ರೇಮಕತೆಯೊಂದು ಶುರುವಾಗುವ ಲಕ್ಷಣ ಕಂಡು ಬಂದಿದೆ.

ವೈಲ್ಡ್ ಕಾರ್ಡ್ ಮೂಲಕ ಮೂವರು ಹೊಸ ಸ್ಪರ್ಧಿಗಳು ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಅವರಲ್ಲಿ ಸೂರಜ್ ಸಿಂಗ್ ಸಹ ಒಬ್ಬರು. ಕೆನಡಾನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್, ಇನ್​​ಸ್ಟಾಗ್ರಾಂನಲ್ಲಿ ಫ್ಯಾಷನ್ ಮತ್ತು ಫಿಟ್​​ನೆಸ್ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಶೆಫ್ ಸಹ ಆಗಿದ್ದಾರೆ. ಸಖತ್ ಫಿಟ್ ಆಗಿರುವ ಜೊತೆಗೆ ಅಷ್ಟೇ ಹ್ಯಾಂಡ್ಸಮ್ ಆಗಿಯೂ ಇರುವ ಸೂರಜ್ ಬಿಗ್​​ಬಾಸ್ ಮನೆಗೆ ಬಲು ಹಾಟ್ ಆಗಿಯೇ ಎಂಟ್ರಿ ಕೊಟ್ಟು, ಬಿಗ್​​ಬಾಸ್ ಮನೆಯ ಹೆಂಗೆಳೆಯರ ಮನಸ್ಸು ಕದ್ದಿದ್ದರು.

ಇದೀಗ ನಿನ್ನೆ ನಡೆದ ಟಾಸ್ಕ್​​ನಲ್ಲಿ ಇತರೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಸ್ವಾರ್ಥಿಗಳಾಗದೆ ತಮ್ಮ ತಂಡದ ಪರವಾಗಿ ನಿಂತು ಹೀರೋ ಎನಿಸಿಕೊಂಡಿದ್ದು, ಇದು ಇನ್ನಷ್ಟು ಸ್ಪರ್ಧಿಗಳ ಮನಸ್ಸು ಗೆದ್ದಿದೆ. ಅದರಲ್ಲೂ ರಾಶಿಕಾ ಅಂತೂ ಸೂರಜ್ ಬಗ್ಗೆ ಬಹಳ ಇಂಪ್ರೆಸ್ ಆಗಿದ್ದಾರೆ. ನಿನ್ನೆ ಸೂರಜ್, ತಮ್ಮ ಪರವಾಗಿ ಅಲ್ಲದೆ ತಂಡದ ಪರವಾಗಿ ತೆಗೆದುಕೊಂಡ ನಿರ್ಣಯದ ಬಗ್ಗೆ ರಾಶಿಕಾ, ಸೂರಜ್ ಜೊತೆಗೆ ಮಾತನಾಡುತ್ತಾ, ‘ನೀವು ನಿಮಗಾಗಿ ಆಡಲು ಬಂದಿದ್ದೀರ’ ಎಂದರು ಅದಕ್ಕೆ ಸೂರಜ್ ಫ್ಲರ್ಟ್ ಮಾಡುವ ರೀತಿ, ‘ನಾನು ನಿಮಗಾಗಿ ಬಂದಿದ್ದೀನಿ’ ಎಂದರು. ಸೂರಜ್ ಮಾತಿಗೆ ನಾಚಿ ನೀರಾದರು ರಾಶಿಕಾ.

ಸೂರಜ್, ಬಿಗ್​​ಬಾಸ್ ಮನೆಗೆ ಬಂದಾಗಲೇ ರಾಶಿಕಾ, ಸೂರಜ್ ಬಗ್ಗೆ ಆಸಕ್ತಿ ತೋರಿಸಿದ್ದರು. ಸೂರಜ್ ಅವರ ಇನ್​​ಸ್ಟಾಗ್ರಾಂ ವಿಡಿಯೋಗಳನ್ನು ನೋಡಿದ್ದೆ, ಹಾಟ್ ಆಗಿದ್ದಾನೆ ಎಂದುಕೊಂಡಿದ್ದೆ, ನೋಡಿದರೆ ಈಗ ಬಿಗ್​ಬಾಸ್ ಮನೆಗೆ ಬಂದಿದ್ದಾನೆ ಎಂದಿದ್ದರು. ರಾತ್ರಿ ಸಮಯ ಎಲ್ಲರೂ ಮಲಗಿರುವಾಗ ಅಶ್ವಿನಿ, ಜಾನ್ವಿ ಬಳಿ ಮಾತನಾಡುತ್ತಾ, ಸೂರಜ್ ಬಲು ಹಾಟ್ ಆಗಿದ್ದಾನೆ ಎಂದು ಹೇಳಿದ್ದರು.

ಸೂರಜ್ ಜೊತೆಗೆ ರಾಶಿಕಾ ಬಲು ಕ್ಲೋಸ್ ಆಗಿದ್ದಾರೆ. ಸೂರಜ್ ಸಹ ಆಗಾಗ್ಗೆ ರಾಶಿಕಾ ಜೊತೆಗೆ ಫ್ಲರ್ಟ್ ಮಾಡುತ್ತಿದ್ದಾರೆ. ನೋಡಬೇಕು ಇವರಿಬ್ಬರ ಪ್ರೇಮಕತೆ ಎಲ್ಲಿ ಹೋಗಿ ಮುಟ್ಟುತ್ತದೆ ಎಂದು.

The post ಬಿಗ್​​ಬಾಸ್ ಮನೆಯಲ್ಲಿ ಅರಳುತ್ತಿದೆ ಹೊಸ ಪ್ರೇಮಕತೆ; ನಾ ಬಂದಿದ್ದು ನಿನಗಾಗಿಯೇ ? appeared first on Good News 24x7.

]]>