Bihar Archives - Good News 24x7 https://www.goodnews24x7.com/tag/bihar/ Kannada Sat, 15 Nov 2025 12:01:17 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Bihar Archives - Good News 24x7 https://www.goodnews24x7.com/tag/bihar/ 32 32 25 ವರ್ಷದ ಕಿರಿಯ ಶಾಸಕಿ ಮೈಥಿಲಿ ಠಾಕೂರ್! ಇವರ ಹಿನ್ನೆಲೆ ಏನು? https://www.goodnews24x7.com/25-year-old-maithili-thakur-the-youngest-mla-what-is-her-background/ Sat, 15 Nov 2025 12:00:56 +0000 https://www.goodnews24x7.com/?p=8165 ಬಿಹಾರ :- 25 ವರ್ಷದ ಮೈಥಿಲಿ ಠಾಕೂರ್ ಎಂಬ ಹುಡುಗಿ ಬಿಹಾರ ಚುನಾವಣಾ ಫಲಿತಾಂಶ ಬೆನ್ನಲ್ಲೇದೇಶದಲ್ಲಿ ಭಾರೀ ಚರ್ಚೆಯಲ್ಲಿದ್ದಾಳೆ. ಬಿಹಾರ ರಾಜ್ಯದ ಅಂತ್ಯಂತ ಕಿರಿಯ ವಯಸ್ಸಿನ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.           ಮೈಥಿಲಿ ಠಾಕೂರ್.…

The post 25 ವರ್ಷದ ಕಿರಿಯ ಶಾಸಕಿ ಮೈಥಿಲಿ ಠಾಕೂರ್! ಇವರ ಹಿನ್ನೆಲೆ ಏನು? appeared first on Good News 24x7.

]]>

ಬಿಹಾರ :- 25 ವರ್ಷದ ಮೈಥಿಲಿ ಠಾಕೂರ್ ಎಂಬ ಹುಡುಗಿ ಬಿಹಾರ ಚುನಾವಣಾ ಫಲಿತಾಂಶ ಬೆನ್ನಲ್ಲೇದೇಶದಲ್ಲಿ ಭಾರೀ ಚರ್ಚೆಯಲ್ಲಿದ್ದಾಳೆ. ಬಿಹಾರ ರಾಜ್ಯದ ಅಂತ್ಯಂತ ಕಿರಿಯ ವಯಸ್ಸಿನ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

 

 

 

 

ಮೈಥಿಲಿ ಠಾಕೂರ್. ವಯಸ್ಸು 25. ಜಾನಪದ ಗಾಯಕಿಯಾಗಿ ಜನಪ್ರಿಯತೆ ಪಡೆದಿದ್ದ, ಇವರು ಇಂದು ದೇಶದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ! ಬಿಹಾರ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಮೈಥಿಲಿ ಠಾಕೂರ್​​ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ.
ಅಲಿನಗರ ವಿಧಾನಸಭಾ ಕ್ಷೆತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮೈಥಿಲಿ ಠಾಕೂರ್​, ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಆರ್​ಜೆಡಿ ಪಕ್ಷದ ಬಿನೋದ್ ಮಿಶ್ರಾ ಅವರನ್ನು 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಬಿಹಾರ್ ರಾಜ್ಯದ ಅಂತ್ಯರ ಕಿರಿಯ ವಯಸ್ಸಿನ ಶಾಸಕಿ ಹೊಗಳಿಕೆಗೆ ಕಾರಣರಾಗಿದ್ದಾರೆ.

ಮೈಥಿಲಿ ಠಾಕೂರ್ ಯಾರು..? 

 

 

 

 

 

 

ಮೈಥಿಲಿ ಜುಲೈ 25, 2000 ರಂದು ಬಿಹಾರದ ಮಧುಬನಿ ಜಿಲ್ಲೆಯ ಬೇಣಿಪಟ್ಟಿ ಎಂಬ ಸಣ್ಣ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ರಮೇಶ್ ಠಾಕೂರ್ ಆ ಪ್ರದೇಶದಲ್ಲಿ ಜನಪ್ರಿಯ ಸಂಗೀತಗಾರರು. ತಾಯಿ ಭಾರತಿ ಠಾಕೂರ್ ಗೃಹಿಣಿ. ಮೈಥಿಲಿಗೆ ಇಬ್ಬರು ಸಹೋದರರು. ಮೈಥಿಲಿಗೆ ಬಾಲ್ಯದಿಂದಲೂ ಸಂಗೀತದ ಕಡೆಗೆ ಹೆಚ್ಚು ಒಲವು ಹೊಂದಿರೋದ್ರಿಂದ ಸಂಗೀತವನ್ನೇ ಪ್ರಮುಖ ಆಯ್ಕೆಯನ್ನಾಗಿ ಮಾಡಿಕೊಂಡರು.
ತಂದೆಯಿಂದ ಸಂಗೀತ ಕಲಿತುಕೊಂಡ ಇವರು, ಅವಕಾಶ ಹುಡುಕುತ್ತ ಹೋಗುತ್ತಾರೆ. ಅಂತೆಯೇ, ಕುಟುಂಬದ ಜೊತೆಗೆ ದೆಹಲಿಯ ದ್ವಾರಕಕ್ಕೆ ಬಂದು ನೆಲೆಸುತ್ತಾರೆ. ಇಲ್ಲಿ ರಮೇಶ್ ಠಾಕೂರ್ ಅವರ ಮೂವರು ಮಕ್ಕಳು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹಾರ್ಮೋನಿಯಂ ಮತ್ತು ತಬಲಾದಲ್ಲಿ ತರಬೇತಿ ಪಡೆದುಕೊಳ್ಳುತ್ತಾರೆ.

ಮೈಥಿಲಿ ಠಾಕೂರ್ ಅವರ ಸರಾಸರಿ ತಿಂಗಳ ಗಳಿಕೆ ಎಷ್ಟು..? 
ಮೈಥಿಲಿ ಠಾಕೂರ್ ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವು ವರದಿಗಳ ಪ್ರಕಾರ, ತಿಂಗಳಿಗೆ 12 ರಿಂದ 15 ಲೈವ್ ಪ್ರದರ್ಶನ ನೀಡುತ್ತಾರೆ. ಒಂದು ಪ್ರದರ್ಶನಕ್ಕೆ  500,000 ರಿಂದ 700,000 ವರೆಗೆ ಚಾರ್ಜ್​ ಮಾಡುತ್ತಾರೆ. ಸರಾಸರಿ ಅವರು ತಿಂಗಳಿಗೆ 600,000 ರಿಂದ 800,000 ಗಳಿಸುತ್ತಾರೆ.

ಜೀ ವಾಹಿನಿ ಯಿಂದ ಬದುಕಿಗೆ ತಿರುವು

 

 

 

 

 

2011ರಲ್ಲಿ ಮೈಥಿಲಿ ಬದುಕಿಗೆ ಜೀ ವಾಹಿನಿ ಹೊಸ ತಿರುವು ನೀಡಿತು. ‘ಲಿಟಲ್ ಚಾಂಪ್ಸ್’ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದುಕೊಂಡರು. ಅದೇ ರಿಯಾಲಿಟಿ ಶೋ ಮೂಲಕವೇ ಹೆಚ್ಚು ಜನ ಮನ್ನಣೆ ಪಡೆದುಕೊಂಡರು. 4 ವರ್ಷಗಳ ನಂತರ ಸೋನಿ ಟಿವಿಯಲ್ಲಿ ಪ್ರಸಾರವಾದ ರಿಯಾಲಿಟಿ ಶೋ ‘Indian Idol Junior season’ನಲ್ಲಿ ಕಾಣಿಸಿಕೊಂಡರು. ಅದಾದ ಬಳಿಕ ‘ರೈಸಿಂಗ್ ಸ್ಟಾರ್’ ಎಂಬ ರಿಯಾಲಿಟಿ ಶೋ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದರು.  ಇದರಲ್ಲಿ ಅವರು ರನ್ನರ್-ಅಪ್ ಆಗಿ ಜರ್ನಿ ಮುಗಿಸಿದರು.

2017ರಲ್ಲಿ ರೈಸಿಂಗ್ ಸ್ಟಾರ್​ ಸೀಸನ್-1 ಮತ್ತಷ್ಟು ಹೆಚ್ಚು ಖ್ಯಾತಿ ತಂದುಕೊಟ್ಟಿತು. ಮೈಥಿಲಿ ಕಾರ್ಯಕ್ರಮದ ಮೊದಲ ಫೈನಲಿಸ್ಟ್ ಆಗಿ ಹೊರ ಹೊಮ್ಮಿದ್ದರು. ‘ಓಂ ನಮಃ ಶಿವಾಯ’ ಹಾಡುವ ಮೂಲಕ ಫೈನಲ್​ಗೆ ನೇರವಾಗಿ ಪ್ರವೇಶ ಪಡೆದರು. ಫೈನಲ್​​ನಲ್ಲಿ ಕೇವಲ 2 ವೋಟ್​ಗಳಿಂದ ಸೋತರು. ಈ ಕಾರ್ಯಕ್ರಮದ ನಂತರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಪಡೆದರು. ಅವರ ಒಂದೊಂದು ವೀಡಿಯೊಗಳು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ 70 ಸಾವಿರದಿಂದ 7 ಮಿಲಿಯನ್​ ವರೆಗೆ ವೀಕ್ಷಣೆಗಳನ್ನು ಪಡೆಯುತ್ತವೆ.

ಮೈಥಿಲಿ ಠಾಕೂರ್ ಶಾಸಕಿಯಾದ ಮೇಲೆ ಎಷ್ಟು ಸಂಪಾದಿಸಬಹುದು..?
ಬಿಹಾರದಲ್ಲಿ ಶಾಸಕರ ಮೂಲ ವೇತನ 50,000 ರೂಪಾಯಿ. ಜೊತೆಗೆ 55,000 ರೂಪಾಯಿ ಪ್ರಾದೇಶಿಕ ಭತ್ಯೆ, 3,000 ದೈನಂದಿನ ಸಭೆ ಭತ್ಯೆ, 40,000 ವೈಯಕ್ತಿಕ ಸಹಾಯಕ ಭತ್ಯೆ ಮತ್ತು 15,000 ಲೇಖನ ಸಾಮಗ್ರಿ ಭತ್ಯೆ ಸೇರಿದಂತೆ ವಿವಿಧ ಭತ್ಯೆಗಳನ್ನು ಪಡೆಯುತ್ತಾರೆ. ಇವುಗಳನ್ನು ಸೇರಿಸಿದರೆ, ಶಾಸಕರ ಮಾಸಿಕ ಆದಾಯ ₹1.43,000 ಮೀರುತ್ತದೆ. ಆದರೆ ನಿಜವಾದ ಆದಾಯ ಇದರಿಂದ ಮಾತ್ರ ಬರುವುದಿಲ್ಲ, ಬದಲಿಗೆ ಶಾಸಕರ ಹುದ್ದೆಯೊಂದಿಗೆ ಬರುವ ಸವಲತ್ತುಗಳಿಂದ ಬರುತ್ತದೆ.

ಶಾಸಕರಿಗೆ ಇರುವ ಸೌಲಭ್ಯಗಳು
ಬಿಹಾರ ಶಾಸಕರು ಆರ್ಥಿಕ ನೆರವಿಗಿಂತ ಹೆಚ್ಚು ಪ್ರಭಾವಶಾಲಿಯಾದ ಅನೇಕ ಸವಲತ್ತುಗಳನ್ನು ಪಡೆಯುತ್ತಾರೆ. ವಾರ್ಷಿಕವಾಗಿ 4 ಲಕ್ಷದವರೆಗಿನ ರೈಲು/ವಿಮಾನ ಪ್ರಯಾಣ ಕೂಪನ್‌ಗಳು, 25 ಲಕ್ಷದವರೆಗಿನ ವಾಹನ ಸಾಲ, ಮಾಜಿ ಶಾಸಕರಿಗೆ 45,000 ರೂಪಾಯಿ ಮಾಸಿಕ ಪಿಂಚಣಿ, 29,000 ಆತಿಥ್ಯ ಭತ್ಯೆ, ಭದ್ರತೆ, ಸರ್ಕಾರಿ ವಸತಿ, ಸಬ್ಸಿಡಿ ವಿದ್ಯುತ್, ನೀರು ಮತ್ತು ಫೋನ್ ಬಿಲ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ವಿಶೇಷ ಚಿಕಿತ್ಸೆ ಕೂಡ ಸಿಗುತ್ತದೆ.

The post 25 ವರ್ಷದ ಕಿರಿಯ ಶಾಸಕಿ ಮೈಥಿಲಿ ಠಾಕೂರ್! ಇವರ ಹಿನ್ನೆಲೆ ಏನು? appeared first on Good News 24x7.

]]>
ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! https://www.goodnews24x7.com/the-rain-is-pouring-non-stop-people-are-spending-their-days-with-their-lives-in-their-hands/ Sun, 24 Aug 2025 05:54:08 +0000 https://www.goodnews24x7.com/?p=6613 ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗುತ್ತಿವೆ. ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ…

The post ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! appeared first on Good News 24x7.

]]>

ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗುತ್ತಿವೆ. ಉತ್ತರ ಭಾರತದಲ್ಲಿ ಸದ್ಯ ಮಳೆರಾಯನ ಅಬ್ಬರ ಜೋರಾಗಿದೆ. ಮಳೆಯ ರೌದ್ರ ನರ್ತನಕ್ಕೆ ಅಕ್ಷರಶಃ ತತ್ತರಿಸಿರುವ ರಾಜಸ್ಥಾನ, ಬಿಹಾರ, ಒಡಿಶಾಗಳಲ್ಲಿ ಜನ ಜೀವ ಕೈಯಲ್ಲಿ ಹಿಡಿದು ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಬೆಳೆ, ರಸ್ತೆ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗ್ತಿವೆ. ಮಳೆ, ತನ್ನ ರೌದ್ರ ಪ್ರತಾಪದಿಂದ ಉತ್ತರ ಭಾರತವನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ವರುಣ ಅಬ್ಬರಕ್ಕೆ ಉತ್ತರ ಭಾರತ ನಲುಗಿ ಹೋಗ್ತಿದ್ದು, ರಾಜಸ್ತಾನ, ಒಡಿಶಾ ಹಾಗೂ ಬಿಹಾರದಲ್ಲಿ ಜನರ ಕಣ್ಣ ಮುಂದೆಯೇ ಆಸ್ತಿ-ಪಾಸ್ತಿಗಳು ನಾಶ ಆಗುತ್ತಿವೆ. ನಿರಂತರ ಮಳೆಯಿಂದಾಗಿ ರಾಜಸ್ಥಾನದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಟಾ, ಬುಂಡಿ, ಬರಾನ್ ಮತ್ತು ಸವಾಯಿ ಮಾಧೋಪುರ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸವಾಯಿ ಮಾಧೋಪುರ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲಿ ಬಸ್ ವಾಲಿಕೊಂಡು ನಿಂತಿದ್ದು, ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಮತ್ತೊಂದೆಡೆ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆ ತೆರಳಿದ್ದ ಎನ್​ಡಿಆರ್​ಎಫ್​ ಸಿಬ್ಬಂದಿ ಇದ್ದ ಟ್ರ್ಯಾಕ್ಟರ್​ ಪಲ್ಟಿಯಾಗಿದೆ.

 

ಇನ್ನು ಭಾರೀ ಮಳೆಗೆ ಬುಂಡಿ ಪ್ರದೇಶ ಜಲಾವೃತವಾಗಿದ್ದು, ಜೈಪುರದ ಅಮೇರ್ ಕೋಟೆಯಲ್ಲಿ 200 ಅಡಿ ಉದ್ದದ ಗೋಡೆ ಕುಸಿತವಾಗಿದೆ. ಬಿಹಾರದಲ್ಲೂ ವರುಣನ ಅಬ್ಬರ.. ಉಕ್ಕಿ ಹರಿದ ಲೋಕೈನ್ ರಿವರ್ ಮಳೆಯ ರೌದ್ರರೂಪಕ್ಕೆ ಬಿಹಾರದಲ್ಲಿ ಲೋಕೈನ್ ನದಿ ಉಕ್ಕಿ ಹರಿಯುತ್ತಿದೆ. ನದಿ ಉಕ್ಕಿ ಹರಿದ ಪರಿಣಾಮ, ನಳಂದದಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, ನೋಡ ನೋಡುತ್ತಲೇ ಮನೆಗಳು ಕುಸಿದು ಹೋಗ್ತಿವೆ. ನಗರದ ಪ್ರಮುಖ ರಸ್ತೆಗಳು ಕೊಚ್ಚಿಹೋಗಿ ಬೆಳೆಗಳು ನಾಶವಾಗಿವೆ. ಓಡಿಶಾದಲ್ಲೂ ವರುಣ ತನ್ನ ರೌದ್ರ ರೂಪ ಪ್ರದರ್ಶಿಸ್ತಿದ್ದಾನೆ. ಧಾರಾಕಾರ ಮಳೆಗೆ ಸಮಕೋಯ್​ ನದಿ ಪಾಯ ಮಟ್ಟ ಮೀರಿದೆ. ಇದ್ರಿಂದ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿದ್ದು, 13 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ಉತ್ತರ ಭಾರರತ ಅಕ್ಷರಶಃ ತತ್ತರಿಸಿ ಹೋಗಿದೆ. ಪ್ರವಾಹದ ಭೀತಿ ಮಧ್ಯೆಯೇ ಜನರು ಬದುಕು ನಡೆಸುವಂತಾಗಿದೆ. ಇನ್ನೂ ಮಳೆ ಮುಂದುವರಿದ್ರೆ ಉತ್ತರ ಭಾರತದಲ್ಲಿ ಪ್ರವಾಹ ಅಪ್ಪಳಿಸಿದ್ರೂ ಅಚ್ಚರಿಯೇನಿಲ್ಲ.

The post ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆ.. ಜೀವ ಕೈಯಲ್ಲಿಡಿದು ದಿನ ಕಳೆಯುತ್ತಿರೋ ಜನ! appeared first on Good News 24x7.

]]>
ಜನಿಸಿದ 1 ಗಂಟೆಯಲ್ಲಿ ಮಗುವಿಗೆ ‘ಸಿಂಧೂರಿ’ ಎಂದು ನಾಮಕರಣ ಮಾಡಿದ ದಂಪತಿ. https://www.goodnews24x7.com/couple-names-baby-sindhuri-within-1-hour-of-birth/ Thu, 08 May 2025 12:25:21 +0000 https://www.goodnews24x7.com/?p=3740 ಪಾಟ್ನಾ: ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡ ಬೆನ್ನಲ್ಲೇ ಬಿಹಾರದ ದಂಪತಿ ತಮ್ಮ ನವಜಾತ ಶಿಶುವಿಗೆ ಸಿಂಧೂರಿ ಎಂದು ನಾಮಕರಣ ಮಾಡಿದ್ದಾರೆ. ಬಿಹಾರದ ಆಸ್ಪತ್ರೆಯೊಂದರಲ್ಲಿ ಕುಂದನ್ಕುಮಾರ್ ದಂಪತಿಗೆ ಹೆಣ್ಣುಮಗು ಜನಿಸಿತ್ತು. ಮಗುವನ್ನು ಕೈಗೆತ್ತಿಕೊಂಡ ಕೂಡಲೇ ಅದಕ್ಕೆ ಸಿಂಧೂರಿ ಎಂದು…

The post ಜನಿಸಿದ 1 ಗಂಟೆಯಲ್ಲಿ ಮಗುವಿಗೆ ‘ಸಿಂಧೂರಿ’ ಎಂದು ನಾಮಕರಣ ಮಾಡಿದ ದಂಪತಿ. appeared first on Good News 24x7.

]]>

ಪಾಟ್ನಾ: ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡ ಬೆನ್ನಲ್ಲೇ ಬಿಹಾರದ ದಂಪತಿ ತಮ್ಮ ನವಜಾತ ಶಿಶುವಿಗೆ ಸಿಂಧೂರಿ ಎಂದು ನಾಮಕರಣ ಮಾಡಿದ್ದಾರೆ.

ಬಿಹಾರದ ಆಸ್ಪತ್ರೆಯೊಂದರಲ್ಲಿ ಕುಂದನ್ಕುಮಾರ್ ದಂಪತಿಗೆ ಹೆಣ್ಣುಮಗು ಜನಿಸಿತ್ತು. ಮಗುವನ್ನು ಕೈಗೆತ್ತಿಕೊಂಡ ಕೂಡಲೇ ಅದಕ್ಕೆ ಸಿಂಧೂರಿ ಎಂದು ನಾಮಕರಣ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧದ ಪ್ರತೀಕಾರದ ದಾಳಿಯನ್ನು ಶ್ಲಾಘಿಸಿ , ಮಗು ಹುಟ್ಟಿ ಒಂದು ಗಂಟೆಯ ಒಳಗೆ ನಾಮಕರಣ ಮಾಡಲಾಗಿದೆ.

ಕುಂದನ್ಕುಮಾರ್ ದಂಪತಿ ಮಾತನಾಡಿ ಭಾರತೀಯ ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಇದು ಮುಗ್ಧ ಜೀವಗಳ ನಷ್ಟಕ್ಕೆ ಪ್ರತೀಕಾರ ತೀರಿಸಿಕೊಂಡಿತು ಮತ್ತು ರಾಷ್ಟ್ರಕ್ಕೆ ಹಾನಿ ಮಾಡಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡಿತು. ಭಾರತವು ಆಪರೇಷನ್ ಸಿಂಧೂರ ಅಡಿಯಲ್ಲಿ ಈ ದಾಳಿ ನಡೆಸಿದ್ದು, ಇದೇ ಕಾರಣಕ್ಕೆ ಮಗಳಿಗೆ ಸಿಂಧೂರಿ ಎಂದು ನಾಮಕರಣ ಮಾಡಲಾಗಿದೆ ಎಂದರು.

ಸಿಂಧೂರಿ ಅವರ ಚಿಕ್ಕಮ್ಮ ಮಾತನಾಡಿ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗೆ ಭಾರತ ನೀಡಿರುವ ಹೆಸರನ್ನು ಮಗುವಿಗೆ ಇಟ್ಟಿದ್ದಕ್ಕೆ ಹೆಮ್ಮೆ ಇದೆ ಎಂದರು. ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಸಹ ಶ್ಲಾಘಿಸಿದರು, ಇದು ಇತರ ಪೋಷಕರು ಅನುಸರಿಸಬೇಕಾದ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಹೇಳಿದರು.ಸಿಂಧೂರಿ ತನ್ನ ಹೆಸರಿನ ಮಹತ್ವವನ್ನು ಗ್ರಹಿಸಲು ಇನ್ನೂ ಚಿಕ್ಕವಳಾಗಿದ್ದರೂ, ಅವಳು ದೊಡ್ಡವಳಾದಾಗ ಅದರ ಪೂರ್ಣ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಾಳೆ ಎಂದು ಅವಳ ಕುಟುಂಬ ಆಶಿಸುತ್ತದೆ.

 

The post ಜನಿಸಿದ 1 ಗಂಟೆಯಲ್ಲಿ ಮಗುವಿಗೆ ‘ಸಿಂಧೂರಿ’ ಎಂದು ನಾಮಕರಣ ಮಾಡಿದ ದಂಪತಿ. appeared first on Good News 24x7.

]]>