BMTC Archives - Good News 24x7 https://www.goodnews24x7.com/tag/bmtc/ Kannada Tue, 30 Jun 2026 09:01:18 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg BMTC Archives - Good News 24x7 https://www.goodnews24x7.com/tag/bmtc/ 32 32 ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ! https://www.goodnews24x7.com/mp-tejaswi-suryas-anger-against-the-state-government/ Tue, 30 Jun 2026 09:01:18 +0000 https://www.goodnews24x7.com/?p=9709 ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕೊರತೆ ಹಾಗೂ ಪ್ರಯಾಣಿಕರ ನಿತ್ಯದ ಪರದಾಟದ ಕುರಿತು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಐಟಿ ನಗರಿಯಲ್ಲಿ ಹೊಸ ಸರ್ಕಾರ ಮತ್ತು ಹೊಸ ಸಾರಿಗೆ ಸಚಿವರು ಬಂದರೂ ಪರಿಸ್ಥಿತಿ ಬದಲಾಗಿಲ್ಲ, ಬಸ್‌ಗಾಗಿ…

The post ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ! appeared first on Good News 24x7.

]]>

ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕೊರತೆ ಹಾಗೂ ಪ್ರಯಾಣಿಕರ ನಿತ್ಯದ ಪರದಾಟದ ಕುರಿತು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಐಟಿ ನಗರಿಯಲ್ಲಿ ಹೊಸ ಸರ್ಕಾರ ಮತ್ತು ಹೊಸ ಸಾರಿಗೆ ಸಚಿವರು ಬಂದರೂ ಪರಿಸ್ಥಿತಿ ಬದಲಾಗಿಲ್ಲ, ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸಾಗಿದೆ ಎಂದು ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲೇ ಕಾಯಬೇಕೋ ಎಂದು ಸಿಎಂಗೆ ಪ್ರಶ್ನಿಸಿದ್ದಾರೆ.

ಬಿಎಂಟಿಸಿ ಬಸ್‌ಗಾಗಿ ಕಾಯುವುದು ಒಂದು ದೊಡ್ಡ ತಪಸ್ಸು! ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ

ಬಿಎಂಟಿಸಿ ಬಸ್‌ಗಳ ಕೊರತೆ ಕುರಿತು ಸಂಸದ ತೇಜಸ್ವಿ ಸೂರ್ಯ ಅಸಮಾಧಾನ.
ಪ್ರಯಾಣಿಕರು ಗಂಟೆಗಟ್ಟಲೆ ಬಸ್‌ಗಾಗಿ ರಸ್ತೆಯಲ್ಲೇ ಕಾಯುವಂತಾಗಿದೆ ಎಂದು ಟೀಕೆ.
ಜನರು ಕೆಲಸ ಮಾಡಬೇಕೋ ಅಥವಾ ರಸ್ತೆಯಲ್ಲೇ ನಿಲ್ಲಬೇಕೋ ಎಂದು ಪ್ರಶ್ನೆ.
ಜೂನ್ 30,ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejaswi Surya) ಸೋಮವಾರ ಖುದ್ದು ಬಿಎಂಟಿಸಿ ಬಸ್ಸಿನಲ್ಲಿ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಪ್ರಯಾಣಿಸುವ ಸಂದರ್ಭದಲ್ಲಿ ಪ್ರಯಾಣಿಕರ ಅಳಲು ಆಲಿಸಿದ್ದರು. ಇದೀಗ ಬಿಎಂಟಿಸಿ ಬಸ್​ ಸ್ಟ್ಯಾಂಡ್​ ಒಂದರಲ್ಲಿ ಪ್ರಯಾಣಿಕರೊಂದಿಗೆ ಮಾತನಾಡಿ ಅಲ್ಲಿನ ದುಸ್ಥಿತಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಎಂಟಿಸಿ ಪ್ರಯಾಣಿಕರ ದೈನಂದಿನ ಪರದಾಟವನ್ನು ತಪಸ್ಸಿಗೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ.

ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ!

ಉತ್ತಮ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿಲ್ಲದೆ ಯಾವುದೇ ಸಾರಿಗೆ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಬಸ್‌ಗಳ ಸಂಖ್ಯೆಯನ್ನು ಕನಿಷ್ಠ 15,000 ಕ್ಕೆ ಹೆಚ್ಚಿಸಬೇಕು. ನಗರದ ಯಾವುದೇ ಭಾಗದಲ್ಲಾದರೂ ಸರಿ, ಪ್ರತಿ ಪ್ರಜೆಗೆ ಐದು ನಿಮಿಷಗಳಲ್ಲಿ ಬಸ್ ಸಿಗುವಂತಾಗಲು ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಬೇಕು ಎಂದು ತೇಜಸ್ವಿ ಸೂರ್ಯ ಅವರು ಈ ಹಿಂದೆ ಮಾಡಿದ್ದ ಹಳೆಯ ಪೋಸ್ಟ್ ಅನ್ನು ನೆನಪಿಸಿಕೊಂಡಿದ್ದಾರೆ. ಆ ಪೋಸ್ಟ್ ಮಾಡಿ ಎಂಟು ತಿಂಗಳು ಕಳೆದಿದ್ದು, ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ, ಹೊಸ ಉಪಮುಖ್ಯಮಂತ್ರಿ ಹಾಗೂ ಹೊಸ ಸಾರಿಗೆ ಸಚಿವರು ಅಧಿಕಾರಕ್ಕೆ ಬಂದಿದ್ದರೂ ಬೆಂಗಳೂರಿನ ಬಿಎಂಟಿಸಿ ಸ್ಥಿತಿ ಮಾತ್ರ ಹಳೇ ಕಥೆಯನ್ನೇ ಮುಂದುವರಿಸಿದೆ ಎಂದು ಅವರು ಟೀಕಿಸಿದ್ದಾರೆ.

The post ಹೊಸ ಸರ್ಕಾರ ಬಂದರೂ ಬದಲಾಗದ ಬೆಂಗಳೂರಿನ ಸ್ಥಿತಿ! appeared first on Good News 24x7.

]]>
ಐದು ರೂಪಾಯಿಗಾಗಿ ಪ್ರಯಾಣಿಕ ನಿಗೆ ಕಪಾಳ ಮೋಕ್ಷ ಮಾಡಿದ ಕಂಡಕ್ಟರ್ …! https://www.goodnews24x7.com/conductor-slaps-passenger-for-five-rupees/ Fri, 29 Aug 2025 06:50:08 +0000 https://www.goodnews24x7.com/?p=6946 ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಬಿಎಂಟಿಸಿ ಬಸ್​ ಕಂಡಕ್ಟರ್ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. KA-57 F-4029 ಸಂಖ್ಯೆಯ ಬಿಎಂಟಿಸಿ ಬಸ್​ನಲ್ಲಿ ಈ ಹಲ್ಲೆ ನಡೆದಿದೆ. ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಬಿಎಂಟಿಸಿ ಬಸ್​ ಕಂಡಕ್ಟರ್ ಹಲ್ಲೆ…

The post ಐದು ರೂಪಾಯಿಗಾಗಿ ಪ್ರಯಾಣಿಕ ನಿಗೆ ಕಪಾಳ ಮೋಕ್ಷ ಮಾಡಿದ ಕಂಡಕ್ಟರ್ …! appeared first on Good News 24x7.

]]>

ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಬಿಎಂಟಿಸಿ ಬಸ್​ ಕಂಡಕ್ಟರ್ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. KA-57 F-4029 ಸಂಖ್ಯೆಯ ಬಿಎಂಟಿಸಿ ಬಸ್​ನಲ್ಲಿ ಈ ಹಲ್ಲೆ ನಡೆದಿದೆ.
ಟಿಕೆಟ್ ಪಡೆದಿಲ್ಲ ಅಂತ ಪ್ರಯಾಣಿಕನ ಮೇಲೆ ಬಿಎಂಟಿಸಿ ಬಸ್​ ಕಂಡಕ್ಟರ್ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. KA-57 F-4029 ಸಂಖ್ಯೆಯ ಬಿಎಂಟಿಸಿ ಬಸ್​ನಲ್ಲಿ ಈ ಹಲ್ಲೆ ನಡೆದಿದೆ.

ಪ್ರಯಾಣಿಕರು ಟಿಕೆಟ್​ ಕೇಳಿ ಪಡೆಬೇಕು. ಇಲ್ಲವಾದರೇ ಚೆಕ್ಕಿಂಗ್​ ವೇಳೆ ಸಿಕ್ಕಿಬಿದ್ದರೆ ದಂಡ ವಿಧಿಸಲಾಗುತ್ತಿದೆ. ಹೀಗೆ ಅನ್ಯಭಾಷಿಕ ಪ್ರಯಾಣಿಕ‌ನೊಬ್ಬ ದೇವನಹಳ್ಳಿಯಿಂದ ಮೆಜೆಸ್ಟಿಕ್ ಪ್ರಯಾಣ ಮಾಡುತ್ತಿದ್ದ. ಆದ್ರೆ, ಆ ಪ್ರಯಾಣಿಕ ಟಿಕೆಟ್ ಕೇಳಿ ಪಡೆಯೋದು ಮರೆತಿದ್ದನಂತೆ. ಇದೇ ವೇಳೆ ಚೆಕ್ಕಿಂಗ್ ಅಧಿಕಾರಿಗಳು ಬಂದಿದ್ದಾರೆ. ಆಗ ಪ್ರಯಾಣಿಕ ಟಿಕೆಟ್ ಪಡೆಯದ ವಿಚಾರ ಗೊತ್ತಾಗಿದೆ. ಹೀಗಾಗಿ ಕಂಡಕ್ಟರ್ ಹಾಗೂ ಪ್ರಯಾಣಿಕ ಇಬ್ಬರಿಗೂ ದಂಡ ವಿಧಿಸಲಾಗಿದೆ.

ಇದರಿಂದ ಕೋಪಿತಗೊಂಡ ಕಂಡಕ್ಟರ್ ಪ್ರಯಾಣಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಕಪಾಳಕ್ಕೆ ಹೊಡೆದಿದ್ದಾರಂತೆ. ಇನ್ನು, ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಂಡಕ್ಟರ್ ವಿರುದ್ಧ ಸಹ ಪ್ರಯಾಣಿಕರ ಆಕ್ರೋಶ ಹೊರ ಹಾಕಿದ್ದಾರೆ. ಐದು ರೂಪಾಯಿಗೆ ಓರ್ವ ಪ್ರಯಾಣಿಕನ ಮೇಲೆ ಹಲ್ಲೆ ಮಾಡಿದ್ದು ಸರಿಯಿಲ್ಲ ಅಂತ ಆಕ್ರೋಶ ಹೊರ ಹಾಕಿದ್ದಾರೆ.

 

The post ಐದು ರೂಪಾಯಿಗಾಗಿ ಪ್ರಯಾಣಿಕ ನಿಗೆ ಕಪಾಳ ಮೋಕ್ಷ ಮಾಡಿದ ಕಂಡಕ್ಟರ್ …! appeared first on Good News 24x7.

]]>
ಚಾಲಕನ ಯಡವಟ್ಟಿಗೆ ವ್ಯಕ್ತಿ ಬಲಿ https://www.goodnews24x7.com/6404-2drivers-rashness-kills-man/ Wed, 20 Aug 2025 10:33:27 +0000 https://www.goodnews24x7.com/?p=6404 ಬಿಎಂಟಿಸಿ ಬಸ್ ಚಕ್ರ ಹರಿದು ಪ್ರಯಾಣಿಕನೊಬ್ಬ ಸ್ಥಳದಲ್ಲೇ ಪ್ರಾಣ ಬಿಟ್ಟಿರೋ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಸಂಪಂಗಿ ಮೃತ ವ್ಯಕ್ತಿ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಜಯನಗರ 4th ಬ್ಲಾಕ್​​​ನಲ್ಲಿ ವಾಸವಾಗಿದ್ದ ಸಂಪಂಗಿ ಎಂಬಾತ ಮಾರ್ಕೆಟ್​​​ನಲ್ಲಿ…

The post ಚಾಲಕನ ಯಡವಟ್ಟಿಗೆ ವ್ಯಕ್ತಿ ಬಲಿ appeared first on Good News 24x7.

]]>

ಬಿಎಂಟಿಸಿ ಬಸ್ ಚಕ್ರ ಹರಿದು ಪ್ರಯಾಣಿಕನೊಬ್ಬ ಸ್ಥಳದಲ್ಲೇ ಪ್ರಾಣ ಬಿಟ್ಟಿರೋ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಸಂಪಂಗಿ ಮೃತ ವ್ಯಕ್ತಿ.
ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಜಯನಗರ 4th ಬ್ಲಾಕ್​​​ನಲ್ಲಿ ವಾಸವಾಗಿದ್ದ ಸಂಪಂಗಿ ಎಂಬಾತ ಮಾರ್ಕೆಟ್​​​ನಲ್ಲಿ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಮಾರ್ಕೆಟ್​​ಗೆ ಹೋಗಲು ಎಂದಿನಂತೆ ಬಸ್ ನಿಲ್ದಾಣಕ್ಕೆ ಬಂದಿದ್ದ.

ಆದ್ರೆ, ಬಸ್ ಹತ್ತುವಾಗಲೇ​ ರೂಟ್ ನಂಬರ್ 25 A ಚಾಲಕ ಹಿಂಬದಿಯ ಡೋರ್ ಹಾಕಿದ್ದಾನಂತೆ. ಪರಿಣಾಮ ಸಂಪಂಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಸಂಪಂಗಿ ತಲೆ ಮೇಲೆ ಚಕ್ರ ಹರಿದು ಹೋಗಿದೆ. ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಜೀವಬಿಟ್ಟಿದ್ದಾನೆ. ಪತಿಯನ್ನು ಕಳೆದುಕೊಂಡ ಪತ್ನಿ, ಹಾಗೂ ಮಗಳು ಕಣ್ಣೀರು ಹಾಕಿತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆ ಪೀಣ್ಯ 2ನೇ ಹಂತದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ಮಾರ್ಗಮಧ್ಯೆಯಲ್ಲಿ ಚಾಲಕನ ಬೇಜಬ್ದಾರಿಯಿಂದ ಅಪಘಾತ ಸಂಭವಿಸಿತ್ತು. ಚಾಲಕ ಬಸ್ ಚಾಲನೆ ಮಾಡಲು ಹೋಗಿ ರಸ್ತೆ ಪಕ್ಕದಲ್ಲೇ ಇದ್ದ ಪೆಟ್ಟಿ ಅಂಗಡಿಗೆ ಗುದಿದ್ದ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದು ಅಷ್ಟೇ ಅಲ್ಲದೇ ಬಿಎಂಟಿಸಿ ಚಾಲಕ ಎಡವಟ್ಟಿನಿಂದ ಇನ್ನೆಷ್ಟು ಜೀವಗಳು ಬಲಿಯಾಗುತ್ತವೆಯೋ ಗೊತ್ತಿಲ್ಲ.

The post ಚಾಲಕನ ಯಡವಟ್ಟಿಗೆ ವ್ಯಕ್ತಿ ಬಲಿ appeared first on Good News 24x7.

]]>
ರಸ್ತೆಗಿಳಿಯದ ಸರ್ಕಾರಿ ಬಸ್ ಗಳು : ಕೊಪ್ಪಳ ವಿವಿಯ ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ. https://www.goodnews24x7.com/government-buses-not-on-the-road-koppal-university-postgraduate-exams-postponed/ Tue, 05 Aug 2025 06:40:30 +0000 https://www.goodnews24x7.com/?p=5343 38 ತಿಂಗಳ ಬಾಕಿ ಮತ್ತು ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು ಹಲವೆಡೆ ಸರ್ಕಾರಿ ಬಸ್ ಗಳ ಸಂಚಾರ ಬಂದ್ ಆಗಿದೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್‌ ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಸಾರ್ವಜನಿಕರು…

The post ರಸ್ತೆಗಿಳಿಯದ ಸರ್ಕಾರಿ ಬಸ್ ಗಳು : ಕೊಪ್ಪಳ ವಿವಿಯ ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ. appeared first on Good News 24x7.

]]>

38 ತಿಂಗಳ ಬಾಕಿ ಮತ್ತು ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು ಹಲವೆಡೆ ಸರ್ಕಾರಿ ಬಸ್ ಗಳ ಸಂಚಾರ ಬಂದ್ ಆಗಿದೆ.

ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್‌ ಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರದಾಟ ನಡೆಸುತ್ತಿದ್ದಾರೆ. ಬೆಳಿಗ್ಗೆಯಿಂದಲೂ ಬಸ್ ಇಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ ಭಾಗಶಃ ತಟ್ಟಿದೆ. ಹಲವೆಡೆ ಬಸ್ ​​ಗಳು ಸಂಚರಿಸುತ್ತಿವೆ. ಏರ್​​ಪೋರ್ಟ್ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಯಶವಂತಪುರ ಬಸ್​ ನಿಲ್ದಾಣಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭವಾಗಿಲ್ಲ.

ರಾಜ್ಯ ಸರ್ಕಾರದ ಈ ಸೂಚನೆ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ಮಾಡಿಕೊಂಡಿವೆ. ಈ ಮಧ್ಯೆ, ಸರ್ಕಾರದ ಸೂಚನೆ ದೊರೆಯುತ್ತಿದ್ದಂತೆಯೇ ಜಿಲ್ಲೆಗಳ ಸಾರಿಗೆ ನಿಗಮದ ಮುಖ್ಯಸ್ಥರು ಪ್ರತ್ಯೇಕ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ.

ಪರೀಕ್ಷೆಗಳು ಮುಂದೂಡಿಕೆ

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ತುಮಕೂರು ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ತುಮಕೂರು ವಿವಿಯ ಸ್ನಾತಕಪೂರ್ವ ಹಾಗೂ ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆಯಾಗಿದೆ.

ಹಾಗೆಯೇ ಕೊಪ್ಪಳ ವಿವಿಯ ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಪರೀಕ್ಷೆ ಮುಂದೂಡಲಾಗಿದೆ .ಶೀಘ್ರವೇ ಪರೀಕ್ಷೆಯ ಹೊಸ ದಿನಾಂಕ ಪ್ರಕಟಿಸಲಾಗುವುದು ಎಂದು ಕೊಪ್ಪಳ ವಿವಿ ಕುಲಪತಿ ಬಿಕೆ ರವಿ ತಿಳಿಸಿದ್ದಾರೆ.

The post ರಸ್ತೆಗಿಳಿಯದ ಸರ್ಕಾರಿ ಬಸ್ ಗಳು : ಕೊಪ್ಪಳ ವಿವಿಯ ಸ್ನಾತಕೋತ್ತರ ಪರೀಕ್ಷೆ ಮುಂದೂಡಿಕೆ. appeared first on Good News 24x7.

]]>