Bollywood Archives - Good News 24x7 https://www.goodnews24x7.com/tag/bollywood/ Kannada Tue, 26 May 2026 12:10:10 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Bollywood Archives - Good News 24x7 https://www.goodnews24x7.com/tag/bollywood/ 32 32 ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್! https://www.goodnews24x7.com/bollywood-star-ranveer-singh-apologizes-to-his-mother-chamundi/ Tue, 26 May 2026 12:10:10 +0000 https://www.goodnews24x7.com/?p=9540 ಮೈಸೂರು : ʻಕಾಂತಾರʼ ಸಿನಿಮಾದಲ್ಲಿರುವ ಚಾಮುಂಡಿ ದೈವದ ಪಾತ್ರಕ್ಕೆ ಅಪಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್ ಸಿಂಗ್ ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿಯೆದುರು ಕ್ಷಮೆಯಾಚಿಸಿದ್ದಾರೆ. ರಣವೀರ್‌ ಸಿಂಗ್‌ ಯಾರಿಗೂ ತಿಳಿಯದಂತೆ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ,…

The post ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್! appeared first on Good News 24x7.

]]>

ಮೈಸೂರು : ʻಕಾಂತಾರʼ ಸಿನಿಮಾದಲ್ಲಿರುವ ಚಾಮುಂಡಿ ದೈವದ ಪಾತ್ರಕ್ಕೆ ಅಪಮಾನ ಮಾಡಿದ್ದ ಬಾಲಿವುಡ್‌ ನಟ ರಣವೀರ್ ಸಿಂಗ್ ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ತಾಯಿಯೆದುರು ಕ್ಷಮೆಯಾಚಿಸಿದ್ದಾರೆ.
ರಣವೀರ್‌ ಸಿಂಗ್‌ ಯಾರಿಗೂ ತಿಳಿಯದಂತೆ ಮೈಸೂರು ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ, ಕ್ಷಮೆಯಾಚಿಸಿದ್ದಾರೆ. ತಾಯಿ ಎದುರು ಕುಳಿತು ತಲೆಬಾಗಿ ಕ್ಷಮೆ ಕೇಳಿರುವ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪ್ರಕರಣ ಸಂಬಂಧ ಹೈಕೋರ್ಟ್ ವಿಚಾರಣೆ ನಡೆಸುತ್ತಿದ್ದಾಗ, ರಣವೀರ್ ಸಿಂಗ್ ಸ್ವತಃ ಎಕ್ಸ್‌ನಲ್ಲಿ ಕ್ಷಮೆ ಕೇಳಿದ್ದರು. ಜೊತೆಗೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ಕ್ಷಮೆ ಕೇಳುವುದಾಗಿ ತಿಳಿಸಿದ್ದರು. ಅದರಂತೆ ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಕ್ಷಮೆಯಾಚಿಸಿದ್ದಾರೆ.
ʼಗೋವಾ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ರಣವೀರ್‌ ಸಿಂಗ್‌ ನಟ ರಿಷಬ್‌ ಶೆಟ್ಟಿ ಮುಂದೆಯೇ ಮಾತನಾಡಿದ್ದರು. ರಿಷಬ್ ಅವರ ಕಾಂತಾರ ಸಿನಿಮಾವನ್ನ ಥಿಯೇಟರ್‌ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್‌ ಸಿಂಗ್‌ ಅನುಕರಣೆ ಮಾಡಿದ್ದರು. ರಣವೀರ್‌ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು.

The post ಚಾಮುಂಡಿ ತಾಯಿ ಮುಂದೆ ಕಡೆಗೂ ಕ್ಷಮೆ ಕೇಳಿದ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್! appeared first on Good News 24x7.

]]>
ಅಮೆರಿಕ-ಇರಾನ್ ಸಂಘರ್ಷದ ನಡುವೆ ಸಂಕಷ್ಟಕ್ಕೆ ಸಿಲುಕಿದವರಿಗೆ ಸೋನು ಸೂದ್ ಕಡೆಯಿಂದ ವಸತಿ ಸೌಲಭ್ಯ https://www.goodnews24x7.com/sonu-sood-offers-accommodation-to-those-stranded-in-dubai-amid-us-iran-conflict/ Thu, 05 Mar 2026 12:10:38 +0000 https://www.goodnews24x7.com/?p=8667 ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ವಿದೇಶದ ಹಲವು ಪ್ರವಾಸಿಗರಿಗೆ ತೊಂದರೆ ಆಗಿದೆ. ದುಬೈನಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದಾರೆ. ತಾಯ್ನಾಡಿಗೆ ವಾಪಸ್ ಬರಲು ಆಗದೇ ಪರಡಾಡುತ್ತಿದ್ದಾರೆ. ಭಾರತೀಯರು ಮಾತ್ರವಲ್ಲದೇ ಬೇರೆ ದೇಶದ ಜನರಿಗೂ ನೆರವು ನೀಡಲು ನಟ ಸೋನು ಸೂದ್ ಮುಂದಾಗಿದ್ದಾರೆ.…

The post ಅಮೆರಿಕ-ಇರಾನ್ ಸಂಘರ್ಷದ ನಡುವೆ ಸಂಕಷ್ಟಕ್ಕೆ ಸಿಲುಕಿದವರಿಗೆ ಸೋನು ಸೂದ್ ಕಡೆಯಿಂದ ವಸತಿ ಸೌಲಭ್ಯ appeared first on Good News 24x7.

]]>

ಅಮೆರಿಕಾ ಮತ್ತು ಇರಾನ್ ನಡುವಿನ ಯುದ್ಧದಿಂದಾಗಿ ವಿದೇಶದ ಹಲವು ಪ್ರವಾಸಿಗರಿಗೆ ತೊಂದರೆ ಆಗಿದೆ. ದುಬೈನಲ್ಲಿ ಅನೇಕ ಭಾರತೀಯರು ಸಿಲುಕಿಕೊಂಡಿದ್ದಾರೆ. ತಾಯ್ನಾಡಿಗೆ ವಾಪಸ್ ಬರಲು ಆಗದೇ ಪರಡಾಡುತ್ತಿದ್ದಾರೆ. ಭಾರತೀಯರು ಮಾತ್ರವಲ್ಲದೇ ಬೇರೆ ದೇಶದ ಜನರಿಗೂ ನೆರವು ನೀಡಲು ನಟ ಸೋನು ಸೂದ್ ಮುಂದಾಗಿದ್ದಾರೆ.
ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸೋನು ಸೂದ್ ಕಡೆಯಿಂದ ಉಚಿತ ವಸತಿ ಸೌಲಭ್ಯ

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಅಮೆರಿಕ-ಇರಾನ್ ಸಂಘರ್ಷದ ನಡುವೆ, ವಿಮಾನಯಾನ ರದ್ದತಿಯಿಂದಾಗಿ ದುಬೈನಲ್ಲಿ ಸಿಲುಕಿರುವ ನೂರಾರು ಪ್ರವಾಸಿಗರ ನೆರವಿಗೆ ಬಾಲಿವುಡ್ ನಟ ಸೋನು ಸೂದ್ (Sonu Sood) ಧಾವಿಸಿದ್ದಾರೆ. ಸಂಕಷ್ಟದಲ್ಲಿ ಇರುವವರಿಗೆ ಉಚಿತವಾಗಿ ವಸತಿ ಸೌಲಭ್ಯ ಕಲ್ಪಿಸುವುದಾಗಿ ಘೋಷಿಸುವ ಮೂಲಕ ಅವರು ಮತ್ತೊಮ್ಮೆ ತಮ್ಮ ದೊಡ್ಡ ಗುಣವನ್ನು ಪ್ರದರ್ಶಿಸಿದ್ದಾರೆ. ಈ ಹಿಂದೆ 2020-21ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸುವ ಮೂಲಕ ಸೋನು ಸೂದ್ ದೇಶಾದ್ಯಂತ ಅಪಾರ ಪ್ರೀತಿ ಗಳಿಸಿದ್ದರು. ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲೂ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಅವರು ಸುದ್ದಿಯಲ್ಲಿದ್ದಾರೆ.

ಇತ್ತೀಚಿನ ಜಾಗತಿಕ ಮಟ್ಟದ ರಾಜಕೀಯ ಉದ್ವಿಗ್ನತೆಯಿಂದಾಗಿ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ ಹಾರಾಟವನ್ನು ರದ್ದುಗೊಳಿಸಿವೆ. ಇದರಿಂದಾಗಿ ಪ್ರವಾಸಿಗರು ತಾಯ್ನಾಡಿಗೆ ಮರಳಲಾಗದೆ ದುಬೈನಲ್ಲಿ ಪರದಾಡುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಗಮನಿಸಿದ ಸೋನು ಸೂದ್, ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

‘ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಯಾರೆಲ್ಲಾ ದುಬೈನಲ್ಲಿ ಸಿಲುಕಿಕೊಂಡಿದ್ದಾರೋ, ಅವರಿಗೆ ನಾವು ನೆರವಾಗಲು ಸಿದ್ಧರಿದ್ದೇವೆ. ನೀವು ಉಳಿದುಕೊಳ್ಳಲು ನಾವು ಉಚಿತ ವ್ಯವಸ್ಥೆ ಮಾಡುತ್ತೇವೆ’ ಎಂದು ಅವರು ಭರವಸೆ ನೀಡಿದ್ದಾರೆ. ಕೇವಲ ಭಾರತೀಯರಿಗೆ ಮಾತ್ರವಲ್ಲದೆ, ಯಾವುದೇ ದೇಶದವರಾಗಿದ್ದರೂ ಅವರಿಗೆ ಆಶ್ರಯ ನೀಡುವುದಾಗಿ ಸೋನು ಸೂದ್ ತಿಳಿಸಿದ್ದಾರೆ.

‘ನಮ್ಮ ಭಾರತೀಯ ಸಹೋದರರು ಇರಲಿ ಅಥವಾ ಬೇರೆ ಯಾವುದೇ ರಾಷ್ಟ್ರದವರೇ ಇರಲಿ, ನೀವು ದುಬೈನಲ್ಲಿ ಸಂಕಷ್ಟದಲ್ಲಿದ್ದರೆ ದಯವಿಟ್ಟು ನಮಗೆ ಅಥವಾ ದುಗಾಸ್ತ ಪ್ರಾಪರ್ಟೀಸ್ ಸಂಸ್ಥೆಗೆ ನೇರವಾಗಿ ಸಂದೇಶ ಕಳುಹಿಸಿ. ನೀವು ಸುರಕ್ಷಿತವಾಗಿ ನಿಮ್ಮ ದೇಶಕ್ಕೆ ಮರಳುವವರೆಗೆ ನಿಮ್ಮ ವಾಸ್ತವ್ಯದ ಜವಾಬ್ದಾರಿ ನಮ್ಮದು’ ಎಂದು ಸೋನು ಸೂದ್ ಹೇಳಿದ್ದಾರೆ.

ಸೋನು ಸೂದ್ ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ಬಾಲಿವುಡ್‌ನ ಏಕೈಕ ರಿಯಲ್ ಹೀರೋ ಎಂದರೆ ನೀವೇ’, ‘ಮಾನವೀಯತೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ’ ಎಂಬಿತ್ಯಾದಿ ಕಮೆಂಟ್​ಗಳ ಮೂಲಕ ಸೋನು ಸೂದ್ ಅವರನ್ನು ಹೊಗಳಲಾಗಿದೆ.

The post ಅಮೆರಿಕ-ಇರಾನ್ ಸಂಘರ್ಷದ ನಡುವೆ ಸಂಕಷ್ಟಕ್ಕೆ ಸಿಲುಕಿದವರಿಗೆ ಸೋನು ಸೂದ್ ಕಡೆಯಿಂದ ವಸತಿ ಸೌಲಭ್ಯ appeared first on Good News 24x7.

]]>
ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. https://www.goodnews24x7.com/current-tower-climber-man-forced-to-marry-wifes-sister/ Sat, 30 Aug 2025 07:54:00 +0000 https://www.goodnews24x7.com/?p=7009 ಕನೌಜ್:ವಿಚಿತ್ರ ಘಟನೆ ಕನೌಜ್‌ನಿಂದ ವರದಿಯಾಗಿದೆ, ರಾಜ್ ಸಕ್ಸೇನಾ ಎಂಬ ವ್ಯಕ್ತಿ ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಕಾರಣ – ಪತ್ನಿಯ ಇನ್ನೊಬ್ಬ ತಂಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಅವನ ಬೇಡಿಕೆ. ಘಟನೆ ಹೀಗಿದೆ: 2021ರಲ್ಲಿ ರಾಜ್ ಸಕ್ಸೇನಾ ತನ್ನ…

The post ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. appeared first on Good News 24x7.

]]>

ಕನೌಜ್:ವಿಚಿತ್ರ ಘಟನೆ ಕನೌಜ್‌ನಿಂದ ವರದಿಯಾಗಿದೆ, ರಾಜ್ ಸಕ್ಸೇನಾ ಎಂಬ ವ್ಯಕ್ತಿ ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಕಾರಣ – ಪತ್ನಿಯ ಇನ್ನೊಬ್ಬ ತಂಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಅವನ ಬೇಡಿಕೆ.

ಘಟನೆ ಹೀಗಿದೆ: 2021ರಲ್ಲಿ ರಾಜ್ ಸಕ್ಸೇನಾ ತನ್ನ ಮೊದಲ ಪತ್ನಿಯನ್ನು ಮದುವೆಯಾಗಿದ್ದ. ಆದರೆ ಮದುವೆಯಾಗಿ ಒಂದು ವರ್ಷವಲ್ಲದೆ ಆಕೆ ಅನಾರೋಗ್ಯದಿಂದ ಸಾವನ್ನಪ್ಪಿದಳು. ಪತ್ನಿಯ ನಿಧನದ ನಂತರ, ಅವನು ಆಕೆಯ ತಂಗಿಯ ಜೊತೆ ಮದುವೆಯಾಗಿದನು. ಈ ದಂಪತಿಗೆ ಈಗ ಎರಡು ವರ್ಷ.

ಆದರೆ ಇತ್ತೀಚೆಗೆ ರಾಜ್ ತನ್ನ ಮುದ್ದಾದ ಪತ್ನಿಯ ಮತ್ತೊಬ್ಬ ತಂಗಿಯನ್ನು ಮದುವೆಯಾಗಬೇಕು ಎಂದು ಹೇಳಿದ್ದು, ಮನೆಯವರ ವಿರೋಧ ಎದುರಾಗಿದೆ. ಈ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ ಗುರುವಾರ ಬೆಳಿಗ್ಗೆ ಒಂದು ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಧಮಕಿ ನೀಡಿದ್ದಾನೆ.

‘ನಾದಿನಿಯನ್ನು ಮದುವೆ ಮಾಡಿಸುತ್ತೀರಾ ಇಲ್ಲವೇ ನಾನು ಜಂಪ್ ಮಾಡ್ತೀನಿ’ ಎಂದು ಬೆದರಿಕೆ:

ಬಾಲಿವುಡ್ ಶೋಲೆ ಸಿನಿಮಾ ಶೈಲಿಯಲ್ಲಿ ರಾಜ್ ಟವರ್ ಮೇಲಿಂದಲೇ ಬೊಬ್ಬೆ ಹಾಕುತ್ತಾ “ನಾದಿನಿಯನ್ನು ನನ್ನಿಗೆ ಮದುವೆ ಮಾಡಿಸಿ” ಎಂದು ಕೂಗಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸತತ 7 ಗಂಟೆಗಳ ಸಾಹಸ ನಂತರ ಅವನನ್ನು ಟವರ್‌ನಿಂದ ಕೆಳಗೆ ಇಳಿಸಲು ಯಶಸ್ವಿಯಾದರು. ಕೊನೆಗೆ ನಾದಿನಿಯೊಂದಿಗೆ ಮದುವೆ ಮಾಡಿಸುತ್ತೇವೆ ಎಂಬ ಭರವಸೆ ನೀಡಿದ ನಂತರ ಮಾತ್ರ ಆತ ಕೆಳಗಿಳಿದ.

ಪ್ರೀತಿಯ ನಾಟಕವೇ ಪಕ್ಕಾ ಸಾಂಡಲ್‌ವುಡ್ ಸೀನ್!

ಟವರ್ ಮೇಲಿನ ಈ ಹೈಡ್ರಾಮಾ ಸ್ಥಳೀಯ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಜ್ ಸಕ್ಸೇನಾ ತನ್ನ ಮೇಲಿಂದಲೇ ನಾದಿನಿಯೂ ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಿದ್ದಾನೆ.

The post ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. appeared first on Good News 24x7.

]]>
ಕೊಹ್ಲಿ ಲೈಕ್ ಕೊಟ್ಟಿದ್ದೆ ಈ ನಟಿಗೆ ಅದೃಷ್ಟವೋ ಅದೃಷ್ಟ…! https://www.goodnews24x7.com/this-actress-was-lucky-to-have-liked-kohli/ Thu, 28 Aug 2025 07:59:42 +0000 https://www.goodnews24x7.com/?p=6891  ಕೊಹ್ಲಿಯ ಉಡುಗೆ ತೊಡುಗೆ, ಫಿಟ್​ನೆಸ್​​​ ರೂಟಿನ್​, ಸ್ಟೈಲ್​ ಎಲ್ಲವನ್ನೂ ಅನುಕರಿಸೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲೂ ಅಷ್ಟೇ.. ಕೊಹ್ಲಿ ಹಾಕೋ ಪೋಸ್ಟ್​ಗಳು, ಲೈಕ್ಸ್​, ಕಮೆಂಟ್ಸ್​ ಎಲ್ಲವನ್ನ ಫ್ಯಾನ್ಸ್​​ ಗಮನಿಸ್ತಾರೆ. ಸಾಮಾನ್ಯವಾಗಿ ಕೊಹ್ಲಿ ಯಾರ ಪೋಸ್ಟ್​ ಅನ್ನೋ ಲೈಕ್​ ಮಾಡಲ್ಲ. ಅವತ್ತು ಏನಾಗಿತ್ತೋ ಏನೋ,…

The post ಕೊಹ್ಲಿ ಲೈಕ್ ಕೊಟ್ಟಿದ್ದೆ ಈ ನಟಿಗೆ ಅದೃಷ್ಟವೋ ಅದೃಷ್ಟ…! appeared first on Good News 24x7.

]]>

 ಕೊಹ್ಲಿಯ ಉಡುಗೆ ತೊಡುಗೆ, ಫಿಟ್​ನೆಸ್​​​ ರೂಟಿನ್​, ಸ್ಟೈಲ್​ ಎಲ್ಲವನ್ನೂ ಅನುಕರಿಸೋ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಇನ್ಸ್​​ಸ್ಟಾಗ್ರಾಂನಲ್ಲೂ ಅಷ್ಟೇ.. ಕೊಹ್ಲಿ ಹಾಕೋ ಪೋಸ್ಟ್​ಗಳು, ಲೈಕ್ಸ್​, ಕಮೆಂಟ್ಸ್​ ಎಲ್ಲವನ್ನ ಫ್ಯಾನ್ಸ್​​ ಗಮನಿಸ್ತಾರೆ. ಸಾಮಾನ್ಯವಾಗಿ ಕೊಹ್ಲಿ ಯಾರ ಪೋಸ್ಟ್​ ಅನ್ನೋ ಲೈಕ್​ ಮಾಡಲ್ಲ. ಅವತ್ತು ಏನಾಗಿತ್ತೋ ಏನೋ, ಬಾಲಿವುಡ್​ ಬ್ಯೂಟಿಯ ಬೋಲ್ಡ್​ ಫೋಟೋಗೆ ಕೊಹ್ಲಿ ಲೈಕ್​​ ಮಾಡಿದ್ರು.

ಕೊಹ್ಲಿ ಬೈ ಮಿಸ್ಟೇಕ್​ನಿಂದ ಮಾಡಿದ ಆ ಒಂದು ಲೈಕ್​ ಬೆಲೆ ಎಷ್ಟಿರಬಹುದು ಅಂತಾ ನೀವು ನಿಜಕ್ಕೂ ಊಹಿಸೋಕೂ ಆಗಲ್ಲ. ಅಂತಾ ಅದೃಷ್ಟ ಅವನೀತ್​ ಕೌರ್​​ಗೆ ಖುಲಾಯಿಸಿದೆ. ಕೊಹ್ಲಿ ಲೈಕ್​ ಮಾಡಿದ ಬೆನ್ನಲ್ಲೇ ಈ ಬಾಲಿವುಡ್​ ನಟಿಯ ಫಾಲೋವರ್ಸ್​ ಸಂಖ್ಯೆ ಸರ್​ ಅಂತ ಏರಿದೆ. ನೀವು ನಂಬ್ತಿರೋ ಇಲ್ವೋ.. ತಮನ್ನಾ ಬಾಟಿಯಾ, ಜಾಹ್ನವಿ ಕಪೂರ್​, ಅನನ್ಯಾ ಪಾಂಡೆ, ಪೂಜಾ ಹೆಗ್ಡೆ.. ಸಿನಿ ಅಂಗಳದಲ್ಲಿ ಸೌಂಡ್​ ಮಾಡ್ತಿರೋ ಈ ಸ್ಟಾರ್​​ಗಳಿಗಿಂತ ಹೆಚ್ಚು ಫಾಲೋವರ್ಸ್​ ಈಗ ಅವನೀತ್​ ಕೌರ್​ಗಿದ್ದಾರೆ. ಇನ್ಸ್​​ಸ್ಟಾ ಫಾಲೋವರ್​ಗಳ ಸಂಖ್ಯೆ ಸದ್ಯ 31.6 ಮಿಲಿಯನ್​ಗೇರಿದೆ. 1 ಮಿಲಿಯನ್​​ಗೂ ಅಧಿಕ ಫಾಲೋವರ್ಸ್​ ಸಿಕ್ಕಿದ್ದಾರೆ.

12 ಬ್ರಾಂಡ್​​ಗಳ ಜೊತೆ ಅವನೀತ್​ ಕೌರ್​ ಡೀಲ್…!
ಕೊಹ್ಲಿಯ ಲೈಕ್​​-ಡಿಸ್​ಲೈಕ್​​ ಕಾರಣಕ್ಕೆ ಸುದ್ದಿಯಾದ ಬಳಿಕ ಅವನೀತ್ ಕೌರ್​ ಹಿಂದೆ ಜಾಹೀರಾತು ಕಂಪನಿಗಳು ಮುಗಿಬಿದ್ದಿವೆ. 12 ವಿವಿಧ ಜಾಹೀರಾತುಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರ್ಯಾಂಡ್​​ವ್ಯಾಲ್ಯೂನಲ್ಲಿ ಗಣನೀಯ ಏರಿಕೆಯಾಗಿದೆ. ಶೇಖಡ 30ರಷ್ಟು ಬ್ರ್ಯಾಂಡ್​ ವಾಲ್ಯೂ ಹೆಚ್ಚಾಗಿದೆ. ಈ ಹೊಸ ಒಪ್ಪಂದ, ಜಾಹೀರಾತುಗಳಿಂದ ಆದಾಯವೂ ದುಪ್ಪಾಟ್ಟಾಗಿದೆ.

ಕೌರ್​ ಫುಲ್​ ಕಾಸ್ಟ್ಲಿ..!
ಕೊಹ್ಲಿಯ ಲೈಕ್​ ಕಾಂಟ್ರವರ್ಸಿಯಿಂದ ಅವನೀತ್ ಕೌರ್​​ಗೆ ಜನಪ್ರಿಯತೆ ಮಾತ್ರ ಸಿಕ್ಕಿಲ್ಲ. ಫಾಲೋವರ್​ಗಳ ಸಂಖ್ಯೆ ಮಾತ್ರವೇ ಹೆಚ್ಚಾಗಿಲ್ಲ. ಆದಾಯವೂ ಹೆಚ್ಚಾಗಿದೆ. ಡಿಜಿಟಲ್ ಫ್ಲಾಟ್​ಫಾರ್ಮ್​ನಲ್ಲಿ ಮಾಡೋ ಜಾಹೀರಾತಿಗಳ ಪೋಸ್ಟ್​ ಬೆಲೆಯೂ ಹೆಚ್ಚಾಗಿದೆ. ಒಂದು ಕಮರ್ಷಿಯಲ್​ ಪೋಸ್ಟ್​ಗೆ ಈಗ ಈಕೆ 2.6 ಲಕ್ಷ ಚಾರ್ಜ್​ ಮಾಡ್ತಿದ್ದಾರಂತೆ. ಸಿನಿಮಾ ಕ್ಷೇತ್ರದಲ್ಲಿ ಮತ್ತಷ್ಟು ಅವಕಾಶಗಳ ಬಾಗಿಲು ತೆರೆಯುವ ಮುನ್ಸೂಚನೆ ಸಿಕ್ಕಿದೆಯಂತೆ.

ಕೊಹ್ಲಿ ಹೆಸರಿನಿಂದ ಸಿನಿಮಾಗೆ ಬಿಟ್ಟಿ ಪ್ರಮೋಷನ್
ಅವನೀತ್ ಕೌರ್​ ನಟನೆಯ ಲವ್ ಇನ್ ವಿಯೆಟ್ನಾಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಹೊತ್ತಿನಲ್ಲೇ ಟ್ರೈಲರ್ ಬಿಡುಗಡೆಯನ್ನು ಗೊಳಿಸಿದ್ದಾರೆ. ಟ್ರೈಲರ್ ಕಾರ್ಯಕ್ರಮದಲ್ಲಿ ವಿರಾಟ್​ ಕೊಹ್ಲಿಯ ಲೈಕ್​​ ಬಗ್ಗೆ ಅವನೀತ್​ ಕೌರ್​, ಮೊದಲ ಬಾರಿ ತುಟಿಬಿಚ್ಚಿದ್ದಾರೆ. ಇದು ಲವ್ ಇನ್ ವಿಯೆಟ್ನಾಂ ಸಿನಿಮಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್​ ಆಗುವಂತೆ ಮಾಡಿದೆ. ಕೊಹ್ಲಿ ಹೆಸರಲ್ಲಿ ಬಿಟ್ಟಿ ಪ್ರಮೋಷನ್ ಸಿಕ್ಕಂತಾಗಿರುವುದು ಸುಳ್ಳಲ್ಲ.

The post ಕೊಹ್ಲಿ ಲೈಕ್ ಕೊಟ್ಟಿದ್ದೆ ಈ ನಟಿಗೆ ಅದೃಷ್ಟವೋ ಅದೃಷ್ಟ…! appeared first on Good News 24x7.

]]>
ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ https://www.goodnews24x7.com/bollywood-actor-govinda-files-for-divorce-from-wife/ Sat, 23 Aug 2025 06:34:57 +0000 https://www.goodnews24x7.com/?p=6508 ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ…

The post ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ appeared first on Good News 24x7.

]]>

ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರೀತಿ ಮತ್ತು ವಿವಾಹದಲ್ಲಿ ಮೋಸ ಹಾಗೂ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಅಂತ ಕಾರಣ ಕೊಟ್ಟು ಸುನೀತಾ ಅವರು ವಿಚ್ಛೇದನ ಕೋರಿದ್ದಾರೆ. ಹಿಂದೂ ವಿವಾಹ ಕಾಯ್ದೆ 1955ರ ಸೆಕ್ಷನ್ 13 (1), (i), (ia), (ib) ಅಡಿಯಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ
ಬಾಲಿವುಡ್‌ ಹಿರಿಯ ನಟ ಗೋವಿಂದ ಅವರ ಸಂಸಾರದಲ್ಲಿ ಬಿರುಕು ಮೂಡಿದೆ. ಗೋವಿಂದ ಅವರ ಪತ್ನಿ ಸುನೀತಾ ಅಹುಜಾಅವರು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ಹಿಂದೆಯೇ ಅಹುಜಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ತಿಳಿದುಬಂದಿತ್ತು. ಮೇ 25ರಂದು ನ್ಯಾಯಾಲಯವು ಗೋವಿಂದ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಜೂನ್‌ನಿಂದ ಇಬ್ಬರೂ ವಿಚ್ಛೇದನ ಕುರಿತಂತೆ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ವಿಚಾರಣೆ ಸಮಯದಲ್ಲಿ ಗೋವಿಂದ ಅವರು ಹಾಜರಾಗುತ್ತಿರಲಿಲ್ಲ. ಸುನೀತಾ ಅವರು ಹಾಜರಾಗುತ್ತಿದ್ದರು. ಇಬ್ಬರೂ ಮತ್ತೆ ಒಂದಾಗುತ್ತಿದ್ದಾರೆ ಎಂದೇ ಹೇಳಲಾಗಿತ್ತು.

ಈ ಜೋಡಿ 37 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಸುನೀತಾ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ ಕೆಲವು ವಾರಗಳ ನಂತರ ಈ ವರದಿ ಬಂದಿದೆ. ಸುನೀತಾ ಬಾಂದ್ರಾ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ

The post ಬಾಲಿವುಡ್‌ ನಟ ಗೋವಿಂದ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ appeared first on Good News 24x7.

]]>
ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ. https://www.goodnews24x7.com/shock-in-leh-shooting-of-dhurandhar-halted-more-than-100-crew-members-fall-ill/ Tue, 19 Aug 2025 04:38:46 +0000 https://www.goodnews24x7.com/?p=6370 ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರ ‘ಧುರಂಧರ್’ ಲೇಹ್‌ನ ಸುಂದರ ಪ್ರದೆಶಗಳಲ್ಲಿ ಚಿತ್ರೀಕರಣದ ಹಂತದಲ್ಲಿತ್ತು. ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ, ಎಲ್ಲವೂ ಸಜ್ಜಾಗಿದ್ದರೂ, ಅನಾಹುತದ ಸನ್ನಿವೇಶ ಎದುರಾಗಿದೆ. ಶೂಟಿಂಗ್ ವೇಳೆ ಚಿತ್ರತಂಡದ 100ಕ್ಕೂ ಅಧಿಕ ಸದಸ್ಯರು ಏಕಾಏಕಿ ಅಸ್ವಸ್ಥರಾಗಿದ್ದು,…

The post ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ. appeared first on Good News 24x7.

]]>

ಬಾಲಿವುಡ್‌ನ ಬಹು ನಿರೀಕ್ಷಿತ ಚಲನಚಿತ್ರ ‘ಧುರಂಧರ್’ ಲೇಹ್‌ನ ಸುಂದರ ಪ್ರದೆಶಗಳಲ್ಲಿ ಚಿತ್ರೀಕರಣದ ಹಂತದಲ್ಲಿತ್ತು. ರಣ್‌ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ, ಎಲ್ಲವೂ ಸಜ್ಜಾಗಿದ್ದರೂ, ಅನಾಹುತದ ಸನ್ನಿವೇಶ ಎದುರಾಗಿದೆ. ಶೂಟಿಂಗ್ ವೇಳೆ ಚಿತ್ರತಂಡದ 100ಕ್ಕೂ ಅಧಿಕ ಸದಸ್ಯರು ಏಕಾಏಕಿ ಅಸ್ವಸ್ಥರಾಗಿದ್ದು, ತುರ್ತು ಚಿಕಿತ್ಸೆಗೆ ಒಳಗಾಗಿದ್ದಾರೆ.

ಏನು ನಡೆದಿದೆ?
ಆಗಸ್ಟ್ 17, ಭಾನುವಾರ ಸಂಜೆ ವೇಳೆ ಈ ಅಸ್ವಸ್ಥತೆ ಪ್ರಾರಂಭವಾಯಿತು. ಚಿತ್ರತಂಡದ ಸದಸ್ಯರಿಗೆ ತೀವ್ರ ಹೊಟ್ಟೆನೋವು, ವಾಂತಿ ಮತ್ತು ತಲೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಲೇಹ್‌ನ ಎಸ್‌ಎನ್‌ಎಂ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಇದು “ಮಾಸ್ ಫುಡ್ ಪಾಯ್ಸನಿಂಗ್” ಪ್ರಕರಣವಾಗಿದೆ ಎಂದು ಘೋಷಿಸಿದ್ದಾರೆ.

ವೈದ್ಯರ ಹೇಳಿಕೆ:
ಎಸ್‌ಎನ್‌ಎಂ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದು:
“ಇದು ಗುಂಪು ಆಹಾರ ವಿಷಕಾರಿತನದ ಪ್ರಕರಣ. ಎಲ್ಲರಿಗೂ ತ್ವರಿತ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ತುಂಬಿಬಿಟ್ಟಿದ್ದರೂ, ನಾವು ಪರಿಸ್ಥಿತಿಯನ್ನು ನಿಭಾಯಿಸಲು ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಸಹ ಕಾರ್ಯ ನಿರ್ವಹಿಸಿದರು.”

ಚಿತ್ರೀಕರಣ ಸ್ಥಗಿತ:
ಚಿತ್ರದ ಶೂಟಿಂಗ್ ಸ್ಥಳದಲ್ಲಿ ಎಚ್ಚರಿಕೆಯ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅನಾಹುತವಾಗದಂತೆ ತಕ್ಷಣ ಚಿತ್ರೀಕರಣ ಸ್ಥಗಿತಗೊಳಿಸಲಾಗಿದೆ. ಅನಾರೋಗ್ಯದ ಕಾರಣದಿಂದಾಗಿ ಆಪತ್ತಿನ ಪರಿಸ್ಥಿತಿಯಲ್ಲಿ ವೈದ್ಯರು ಹಾಗೂ ಪೊಲೀಸರು ‘ಧುರಂಧರ್’ ತಂಡದ ಸಹಾಯಕ್ಕೆ ಧಾವಿಸಿದ್ದಾರೆ. ಯಾವುದೇ ಜೀವಹಾನಿ ಸಂಭವಿಸದಿರುವುದು ನೆಮ್ಮದಿಯ ವಿಚಾರ.

ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇಲ್ಲ:
ದಿಗ್ದರ್ಶಕ ಆದಿತ್ಯ ಧರ್ ನಿರ್ದೇಶನ ಮಾಡುತ್ತಿರುವ ಈ ಚಿತ್ರ ಡಿಸೆಂಬರ್ 5, 2025 ರಂದು ಬಿಡುಗಡೆಗೆ ನಿಗದಿಯಾಗಿದೆ. ರಣ್‌ವೀರ್ ಸಿಂಗ್ ಜೊತೆ ಆರ್. ಮಾಧವನ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

The post ಲೇಹ್‌ನಲ್ಲಿ ಶಾಕ್! ‘ಧುರಂಧರ್’ ಚಿತ್ರದ ಶೂಟಿಂಗ್ ಸ್ಥಗಿತ – 100ಕ್ಕೂ ಹೆಚ್ಚು ಸಿಬ್ಬಂದಿ ಏಕಾಏಕಿ ಅಸ್ವಸ್ಥ. appeared first on Good News 24x7.

]]>
‘ರಾವಣ ಪಾತ್ರಧಾರಿ ಯಶ್ ನಟನೆಯ ರಾಮಾಯಣ’ದ ಬಗ್ಗೆ ಹರಡಿರುವ ವದಂತಿಗೆ ನಟಿ ಫುಲ್ ಸ್ಟಾಪ್ . https://www.goodnews24x7.com/actress-puts-full-stop-to-rumours-about-yash-playing-ravana-in-ramayana/ Wed, 30 Apr 2025 11:43:46 +0000 https://www.goodnews24x7.com/?p=3504 ಕೆಜಿಎಫ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ‘ರಾಮಾಯಣ’ ಸಿನಿಮಾದ ಸೀತಾ ಪಾತ್ರದ ಆಫರ್ ಕೆಜಿಎಫ್ ಸಹನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕಿತ್ತು. ಈ ಬಗ್ಗೆ ಹರಡಿರುವ ವದಂತಿಗಳಿಗೀಗ ನಟಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ…

The post ‘ರಾವಣ ಪಾತ್ರಧಾರಿ ಯಶ್ ನಟನೆಯ ರಾಮಾಯಣ’ದ ಬಗ್ಗೆ ಹರಡಿರುವ ವದಂತಿಗೆ ನಟಿ ಫುಲ್ ಸ್ಟಾಪ್ . appeared first on Good News 24x7.

]]>

ಕೆಜಿಎಫ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ‘ರಾಮಾಯಣ’ ಸಿನಿಮಾದ ಸೀತಾ ಪಾತ್ರದ ಆಫರ್ ಕೆಜಿಎಫ್ ಸಹನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಸಿಕ್ಕಿತ್ತು. ಈ ಬಗ್ಗೆ ಹರಡಿರುವ ವದಂತಿಗಳಿಗೀಗ ನಟಿ ಫುಲ್ ಸ್ಟಾಪ್ ಇಟ್ಟಿದ್ದಾರೆ.


ಬಾಲಿವುಡ್ ನಿರ್ದೇಶಕ ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಪ್ರಾಜೆಕ್ಟ್ನಲ್ಲಿ ಸೀತಾದೇವಿ ಪಾತ್ರವನ್ನು ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ನೀಡಲಾಗಿತ್ತು. ಈ ಅಧಿಕೃತ ಮಾಹಿತಿಯನ್ನು ಇತ್ತೀಚೆಗೆ ಸ್ವತಃ ನಟಿ ಬಹಿರಂಗಪಡಿಸಿದ್ದರು. ಆದ್ರೆ ತಮ್ಮ ಹೇಳಿಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ರಾವಣ ಪಾತ್ರಧಾರಿ ಯಶ್ ಕಾರಣದಿಂದಾಗಿ ನಾನು ಆ ಸಿನಿಮಾ ಬಿಡಲಿಲ್ಲ. ಅಂತಿಮವಾಗಿ, ಆ ಪಾತ್ರಕ್ಕೆ ಸಾಯಿ ಪಲ್ಲವಿ ಅವರು ಆಯ್ಕೆ ಆದ್ರು ಎಂದು ಸ್ಪಷ್ಟನೆ ನೀಡಿದ್ದಾರೆ.


”ದೊಡ್ಡ ಗೊಂದಲ ಆಗಿದೆ. ನಾನು ಯಾಕಾದರೂ ಆ ಬಗ್ಗೆ ಮಾತನಾಡಿದೆ ಎಂದೆನಿಸಿದೆ. ರಾಮಾಯಣ ಸಿನಿಮಾದ ಆಡಿಷನ್ಗೆ ನನ್ನನ್ನು ಕರೆದಿದ್ದರು. ಹೊಸ ಪ್ರತಿಭೆಯನ್ನು ಅಷ್ಟು ದೊಡ್ಡ ಪಾತ್ರಕ್ಕೆ ಪರಿಗಣಿಸಿರೋದೇ ದೊಡ್ಡ ವಿಷಯ. ನಾನು ಬಹಳ ಖುಷಿಯಿಂದಲೇ ಹೋಗಿದ್ದೆ. ಆಡಿಷನ್ ಕೂಡಾ ಕೊಟ್ಟೆ. ಅದಕ್ಕೂ ಮುನ್ನ ಸಾಕಷ್ಟು ನಟಿಯರು ಆಡಿಷನ್ ಕೊಟ್ಟಿದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ಫೈನಲಿ, ನಟಿ ಸಾಯಿ ಪಲ್ಲವಿ ಅವರು ಸೆಲೆಕ್ಟ್ ಆಗಿದ್ದಾರೆ.

ಅದು ನನಗೆ ಬಹಳ ಖುಷಿ ಕೊಟ್ಟಿದೆ. ಬ್ರಿಲಿಯಂಟ್ ಛಾಯ್ಸ್. ನನಗೂ ಅವರೆಂದರೆ ಬಹಳ ಇಷ್ಟ. ಅವರು ಸ್ಫೂರ್ತಿ. ಈ ಉದ್ಯಮದಲ್ಲಿ ಮಹಿಳೆಯರು ಎಷ್ಟು ಚೆನ್ನಾಗಿದ್ದಾರೆ, ಎಷ್ಟು ಎಲಿಗೆಂಟ್ ಆಗಿದ್ದಾರೆ ಎಂಬುದನ್ನು ಅವರನ್ನು ನೋಡಿ ಕಲಿಯಬೇಕು. ಅವರ ಪ್ರತಿಭೆ, ನಟನೆ ಬಗ್ಗೆ ಹೇಳೋ ಹಾಗೇ ಇಲ್ಲ. ಗ್ರೇಟ್ ಚಾಯ್ಸ್” – ಶ್ರೀನಿಧಿ ಶೆಟ್ಟಿ.


ಆಡಿಷನ್ ಕೊಟ್ಟಿದ್ದು ನಿಜ, ಆದ್ರೆ ಸೆಲೆಕ್ಟ್ ಆಗ್ಲಿಲ್ಲ: ಮಾತು ಮುಂದುವರಿಸಿದ ನಟಿ, ಯಶ್ ಕಾರಣದಿಂದ ನಾನು ಈ ಸಿನಿಮಾ ಬಿಟ್ಟೆ ಎಂದು ನನ್ನ ಹೇಳಿಕೆಗಳನ್ನು ತಿರುಚಲಾಗಿದೆ. ಸೀತಾ ಪಾತ್ರ ನನಗೆ ಮೊದಲು ಬಂದಿದ್ದು, ಆದ್ರೆ ನಾನು ರಿಜೆಕ್ಟ್ ಮಾಡಿದ್ದೇನೆ ಎಂದೆಲ್ಲಾ ವೈರಲ್ ಆಗಿದೆ. ಆ ಸಂದರ್ಶನದಲ್ಲಿ ಕ್ಯಾಶುವಲ್ ಆಗಿ ನನ್ನ ಅನಿಸಿಕೆ ಹಂಚಿಕೊಂಡಿದ್ದೆ. ಕೆಜಿಎಫ್ ಸಿನಿಮಾ ಆಗಷ್ಟೇ ತೆರೆಕಂಡು ಸೂಪರ್ ಹಿಟ್ ಆಗಿತ್ತು.

ರಾಕಿ ರೀನಾ ಪಾತ್ರಗಳು ಎಲ್ಲರಿಗೂ ಇಷ್ಟ ಆಗಿದ್ದವು. ರಾಮಾಯಣದಲ್ಲಿ ರಾವಣ ಪಾತ್ರವನ್ನು ಯಶ್ ನಿರ್ವಹಿಸಲಿದ್ದಾರೆ ಎಂಬ ಮಾತೂ ಕೂಡಾ ಕೇಳಿಬಂತು. ಹಾಗಾಗಿ, ನಾನು ಕ್ಯಾಶುವಲ್ ಆಗಿ ರಾವಣ ಸೀತೆ ವಿರುದ್ಧ ಪಾತ್ರಗಳಲ್ಲವೇ? ಎಂದು ಅನಿಸಿಕೆ ಹಂಚಿಕೊಂಡಿದ್ದೆಯಷ್ಟೇ. ಆದ್ರೆ ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಯಶ್ ರಾವಣ ರೋಲ್ ನಿರ್ವಹಿಸುತ್ತಿರೋದ್ರಿಂದ ಶ್ರೀನಿಧಿ ಸೀತಾ ಪಾತ್ರ ಬಿಟ್ಟರು ಎಂದೆಲ್ಲಾ ಹಬ್ಬಿಸಲಾಗಿದೆ. ನಾನ್ಯಾರು ಸೀತಾ ಪಾತ್ರವನ್ನು ತಿರಸ್ಕರಿಸಲು? ಸೀತೆ ಬಹಳ ದೊಡ್ಡ ಪಾತ್ರ. ನಾನದನ್ನು ತಿರಸ್ಕರಿಸಿಲ್ಲ. ಆಡಿಷನ್ ಕೊಟ್ಟಿದ್ದು ನಿಜ. ಆದ್ರೆ ಸೆಲೆಕ್ಟ್ ಆಗ್ಲಿಲ್ಲ. ಕೊನೆಗೆ ಸಾಯಿ ಪಲ್ಲವಿ ಅವರು ಸೆಲೆಕ್ಟ್ ಆದ್ರು. ಗೊಂದಲ ಹರಡಿಸಬೇಡಿ ಎಂದು ನೆಟ್ಟಿಗರಲ್ಲಿ ಮನವಿ ಮಾಡಿಕೊಂಡರು.

ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ರಾಮ ಸೀತೆಯಾಗಿ, ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ.

The post ‘ರಾವಣ ಪಾತ್ರಧಾರಿ ಯಶ್ ನಟನೆಯ ರಾಮಾಯಣ’ದ ಬಗ್ಗೆ ಹರಡಿರುವ ವದಂತಿಗೆ ನಟಿ ಫುಲ್ ಸ್ಟಾಪ್ . appeared first on Good News 24x7.

]]>
ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ: ಜಾನ್ವಿ ಕಪೂರ್. https://www.goodnews24x7.com/%e0%b2%ae%e0%b2%a6%e0%b3%81%e0%b2%b5%e0%b3%86%e0%b2%af-%e0%b2%ac%e0%b2%b3%e0%b2%bf%e0%b2%95-3-%e0%b2%ae%e0%b2%95%e0%b3%8d%e0%b2%95%e0%b2%b3%e0%b3%8a%e0%b2%82%e0%b2%a6%e0%b2%bf%e0%b2%97%e0%b3%86/ Fri, 24 Jan 2025 10:22:46 +0000 https://www.goodnews24x7.com/?p=1912 ಜಾನ್ವಿ ಕಪೂರ್ :- ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ತಿರುಮಲದಲ್ಲಿ ಮದುವೆಯಾಗುವ (Wedding) ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ ಎಂದು…

The post ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ: ಜಾನ್ವಿ ಕಪೂರ್. appeared first on Good News 24x7.

]]>

ಜಾನ್ವಿ ಕಪೂರ್ :- ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ತಿರುಮಲದಲ್ಲಿ ಮದುವೆಯಾಗುವ (Wedding) ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ ಎಂದು ಮಾತನಾಡಿದ್ದಾರೆ.

ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ಕೂಡ ತಿರುಮಲ ತಿಮ್ಮಪ್ಪನ ಭಕ್ತೆಯಾಗಿದ್ದಾರೆ. ತಿಮ್ಮಪ್ಪ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗ ನಟಿ ತಿರುಪತಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಜಾನ್ವಿ ಮದುವೆಯಾಗಿ ತಿರುಪತಿಯಲ್ಲೇ ನೆಲೆಸುವ ಆಸೆಯಿದೆ ಎಂದಿದ್ದಾರೆ.

ಕರಣ್ ಜೋಹರ್ ಶೋನಲ್ಲಿ ಮಾತಾಡಿದ ಜಾನ್ವಿ, ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ ಎಂದಿದ್ದಾರೆ. ಮದುವೆ ಬಳಿಕ 3 ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುವಾಸೆ ಇದೆ. ತಿರುಪತಿ ತಿರುಮಲದಲ್ಲಿ ಸೆಟಲ್ ಆಗಿ ದಿನವೂ ಬಾಳೆ ಎಲೆ ಊಟ ಮಾಡಬೇಕು ಎಂದು ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಗೋವಿಂದಾ ಗೋವಿಂದಾ ಎಂದು ಸ್ಮರಿಸಬೇಕು. ಮಣಿರತ್ನಂ ಅವರ ಸಿನಿಮಾಗಳ ಸಂಗೀತವನ್ನ ಕೇಳುತ್ತಾ ದಿನ ಕಳೆಯುವೆ ಎಂದು ನಟಿ ಹೇಳಿದ್ದಾರೆ. ಶಿಖರ್ ಪಹಾರಿಯಾ ಜೊತೆ ಜಾನ್ವಿ ಡೇಟಿಂಗ್ ವಿಚಾರ ಸಾಕಷ್ಟು ಭಾರೀ ಕೇಳಿ ಬಂದಿದೆ. ಇಬ್ಬರೂ ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮದುವೆ ಬಳಿಕ ಜಾನ್ವಿ ನಟನೆಗೆ ಗುಡ್ ಬೈ ಹೇಳ್ತಾರಾ? ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

The post ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ: ಜಾನ್ವಿ ಕಪೂರ್. appeared first on Good News 24x7.

]]>