Brahmastra Archives - Good News 24x7 https://www.goodnews24x7.com/tag/brahmastra/ Kannada Fri, 06 Jun 2025 07:38:59 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Brahmastra Archives - Good News 24x7 https://www.goodnews24x7.com/tag/brahmastra/ 32 32 ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? https://www.goodnews24x7.com/intelligence-department-hanging-over-is-the-government-bowing-to-opposition-pressure/ Fri, 06 Jun 2025 07:38:52 +0000 https://www.goodnews24x7.com/?p=4257 ಮೈಸೂರು : ಆರ್ ಸಿಬಿ ಸಂಭ್ರಮಾಚರಣೆಯ ದುರಂತ ಘಟನೆಗೆ ಇಂಟಲಿಜೆನ್ಸ್ ವೈಫಲ್ಯವೇ ಕಾರಣ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಅಮಾನತುಗೊಳಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ…

The post ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? appeared first on Good News 24x7.

]]>

ಮೈಸೂರು : ಆರ್ ಸಿಬಿ ಸಂಭ್ರಮಾಚರಣೆಯ ದುರಂತ ಘಟನೆಗೆ ಇಂಟಲಿಜೆನ್ಸ್ ವೈಫಲ್ಯವೇ ಕಾರಣ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಅಮಾನತುಗೊಳಿಸಿ ಎಂದು ವಿಪಕ್ಷಗಳು ಆಗ್ರಹಿಸಿವೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್ ಈ ಒತ್ತಾಯ ಮಾಡಿದ್ದಾರೆ.


ಇದು ಉದ್ದೇಶಪೂರ್ವಕವಾಗಿ ನಡೆದ ಘಟನೆಯಲ್ಲ, ಆದರೆ, ಬೇಜವಬ್ದಾರಿತನ ಎದ್ದು ಕಾಣುತ್ತಿದೆ. ಈ ಪರಿಸ್ಥಿತಿಯಲ್ಲಿ ರಾಜಕೀಯ ಕೆಸರೆರಚಾಟ ಸರಿಯಲ್ಲ. ಈ ಕಾರಣಕ್ಕೆ ನಾವು ಯಾರು ನೆನ್ನೆ ಚರ್ಚಸಿರಲಿಲ್ಲ. ಆದರೆ, ನೆನ್ನೆ ನಡೆದ ಬೆಳವಣಿಗೆಗಳ ಬಗ್ಗೆ ಬೇಸರವಿದೆ. ಕಪ್ ಗೆದ್ದ ಬಳಿಕ ರಾತ್ರಿಯಿಡೀ ವಿಜಯೋತ್ಸವ ನಡೆದಿದೆ. ಮರುದಿನ ಕೂಡ ವಿಜಯೋತ್ಸವ ನಡೆದು ದುರಂತ ನಡೆದಿದೆ. ಹಲವು ಅಮೂಲ್ಯ ಜೀವಗಳನ್ನ ಕಳೆದುಕೊಂಡಿದ್ದೇವೆ. ಆ ಘಟನೆ ಕುರಿತು ಚಿಂತನೆ ನಡೆಸುವ ಅಗತ್ಯವಿದೆ.

ನೆನ್ನೆ ಐದು ಮಂದಿ ಪೊಲೀಸರನ್ನ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದೀರಿ, ಇದು ನಿಮ್ಮ ಮನಃಸಾಕ್ಷಿ ಒಪ್ಪಿತ್ತದೆಯೆ? ಇದು ಉದ್ದೇಶ ಪೂರ್ವಕ ಘಟನೆಯಲ್ಲ, ಇದು ನೆಗ್ಲಿಜೆನ್ಸಿಯಿಂದ ನಡೆದಿದೆ . ರಾಜ್ಯದ ಜನರ ಕಣ್ಣೊರೆಸುವ ತಂತ್ರ ಇದು. ಮೊದಲು ಇಂಟೆಲಿಜೆನ್ಸ್ ಐಜಿ ಏನ್ ಮಾಡ್ತಿದ್ರು? ಅವರು ನಿಮಗೆ ರಿಪೋರ್ಟ್ ಕೊಡಲಿಲ್ಲವೇ? ಗೃಹ ಇಲಾಖೆ ಕಾರ್ಯದರ್ಶಿ‌ಏನ್ ಮಾಡುತ್ತಿದ್ದರು? ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮಾಡುವ ತಂತ್ರ ಯಾಕೆ?

ಅಮಾನತ್ತು ಆದೇಶ ವಾಪಸ್ ಪಡೆಯಿರಿ, ಕಮಿಷನರ್ ದಯಾನಂದ್, ಡಿಸಿಪಿ ಶೇಖರ್ ಏನ್ ತಪ್ಪು ಮಾಡಿದ್ದಾರೆ? ನೀವು ಕ್ರಮ ತೆಗೆದುಕೊಳ್ಳುವುದಾದರೆ ಇಂಟೆಲಿಜೆನ್ಸ್ ಐಜಿ ವಿರುದ್ಧ ತೆಗೆದುಕೊಳ್ಳಿ. ಕಾಂಗ್ರೆಸ್ ಪಕ್ಷದ ಸೋತ ಅಭ್ಯರ್ಥಿ ಗಂಡ ಎಂಬ ಕಾರಣಕ್ಕೆ ಬಿಟ್ಟಿದ್ದೀರಾ? ಈ ಘಟನೆಗೆ ಅವರೇ ನೇರ ಹೊಣೆ ಎಂದು ದೂಷಿಸಿದರು.

ಬೆಂಗಳೂರಿನ್ಲಲಿ ಮಾತನಾಡಿದ ವಿಜಯೇಂದ್ರ :- ಕಾಲ್ತುಳಿತ ಪ್ರಕರಣದಲ್ಲಿ ೧೧ ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಈ ಘಟನೆಗೆ ರಾಜ್ಯ ಸರಕಾರ ಹೊಣೆ, ಆದರೆ ಕೋರ್ಟ್ ಚಾಟಿ ಬೀಸಿದ ಮೇಲೆ ಕೆಎಸ್ಸಿಎ , ಆರ್ಸಿಬಿ ಹಾಗೂ ಡಿಎನ್ ಎ ಸಂಸ್ಥೆಯವರ ವಿರುದ್ಧ ಎಫ್. ಐ. ಆರ್ ದಾಖಲಿಸಲಾಗಿದೆ. ಜತೆಗೆ ತುರ್ತು ಪತ್ರಿಕಾಗೋಷ್ಠಿ ಕರೆದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಐವರನ್ನು ಅಮಾನತುಗೊಳಿಸಿದ್ದೀರಿ..? ಇದು ಸರಿನಾ..? ಈ ಪೊಲೀಸರನ್ನು ಯಾಕೆ ಹರಕೆಯ ಕುರಿಯನ್ನಾಗಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಈ ದುರ್ಘಟನೆಗೆ ಪ್ರಮುಖ ಕಾರಣ ಗುಪ್ತಚರ ಇಲಾಖೆ ವೈಫಲ್ಯ . ಈ ಸತ್ಯ ತಿಳಿದಿದ್ದರು ಈ ತನಕ ಯಾಕೆ ಇಂಟಲಿಜೆನ್ಸ್ ವಿಂಗ್ ಮುಖ್ಯಸ್ಥರನ್ನು ಅಮಾನತುಗೊಳಿಸಿಲ್ಲ. ಯಾಕೆ ಅವರನ್ನು ಅಮಾನತು ಮಾಡಿದರೆ ತಮ್ಮ ಬುಡಕ್ಕೆ ಬರುತ್ತೆ ಅಂಥ ಭಯನಾ ಸಿಎಂ ಸಿದ್ದರಾಮಯ್ಯ ಅವರೇ ಎಂದು ವಿಜಯೇಂದ್ರ ವ್ಯಂಗ್ಯವಾಡಿದರು.

The post ಗುಪ್ತಚಾರ ಇಲಾಖೆ ಮೇಲೆ ತೂಗುಗತ್ತಿ: ವಿಪಕ್ಷಗಳ ಒತ್ತಡಕ್ಕೆ ಮಣಿಯುತ್ತ ಸರಕಾರ? appeared first on Good News 24x7.

]]>